
ಲಂಡನ್‌ಗೆ ಹಾರಿದ Rocking Star Yash; 'ಟಾಕ್ಸಿಕ್' ಕಥೆ ಏನಾಯ್ತು?
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಮೂವಿ ಇನ್ನೇನು ಕೊನೆಯ ಹಂತಕ್ಕೆ ಬಂದಿದೆ. ಮುಂಬೈನಲ್ಲಿ 45 ದಿನಗಳ ಶೂಟಿಂಗ್ ಶೆಡ್ಯೂಲ್ ಮುಗಿಸಿರೋ ಯಶ್, ಲಂಡನ್‌ಗೆ ಹಾರಿದ್ದಾರೆ. ರಾಕಿಯ ಲಂಡನ್ ವಿಸಿಟ್ ಹಿಂದಿನ ಸೀಕ್ರೆಟ್ ಏನು..? ಏನದು ಗ್ಲೋಬಲ್ ಮ್ಯಾಟರ್ ಅಂತೀರಾ..? ಈ ಸ್ಟೋರಿ ನೋಡಿ.
ಕೆಜಿಎಫ್ ಗ್ಲೋಬಲ್ ಸಕ್ಸಸ್ ನಂತರ ರಾಕಿಂಗ್ ಸ್ಟಾರ್ ಯಶ್ ತುಂಬಾನೇ ಸಮಯ, ಶ್ರಮ ಹಾಕಿ ರೆಡಿ ಮಾಡ್ತಾ ಇರೋ ಗ್ಲೋಬಲ್ ಪ್ರಾಜೆಕ್ಟ್ ಟಾಕ್ಸಿಕ್. ಸ್ಯಾಂಡಲ್ವುಡ್ನಿಂದ ಹಿಡಿದು ಹಾಲಿವುಡ್ ತನಕ ಅದ್ಭುತ ಕಲಾವಿದರು ಮತ್ತು ತಂತ್ರಜ್ಞರು ಸೇರಿ ರೆಡಿ ಮಾಡ್ತಾ ಇರೋ ಈ ಸಿನಿಮಾ ಇನ್ನೇನು ಅಂತಿಮ ಹಂತಕ್ಕೆ ಬಂದಿದೆ. ಸದ್ಯ ಲಂಡನ್ನಲ್ಲಿ ಬರೊಬ್ಬರಿ 45 ದಿನಗಳ ಶೆಡ್ಯೂಲ್ ಮುಕ್ತಾಯಗೊಂಡಿದೆ.