ಚಂದ್ರನ ಮೇಲೆ ಪ್ರಗ್ಯಾನ್‌ ರೋವರ್‌ 14 ದಿನ ಅಧ್ಯಯನ: ಸಂಶೋಧನಾ ವರದಿಯತ್ತ ವಿಶ್ವದ ಚಿತ್ತ !

ಚಂದ್ರಯಾನ 3 ಯಶಸ್ಸಿನಿಂದ ಭಾರತಕ್ಕೆ ಬಾಹುಬಲ ಸಿಕ್ಕಿದೆ. ಪ್ರಗ್ಯಾನ್ ರೋವರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ 14 ದಿನ ಅಧ್ಯಯನ ನಡೆಸಲಿದೆ. 
 

Share this Video
  • FB
  • Linkdin
  • Whatsapp

ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡಿಂಗ್‌ ಸಕ್ಸಸ್‌ ಆಗಿದೆ. ಇನ್ನೂ 14 ದಿನ ಪ್ರಗ್ಯಾನ್ ರೋವರ್‌(Pragyan rover) ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ನಡೆಸಲಿದೆ. ನಾಸಾದ ಪ್ರಕಾರ ಚಂದ್ರನ ದಕ್ಷಿಣ ಧ್ರುವವು(South pole) ನಿಗೂಢತೆ, ವಿಜ್ಞಾನ ಮತ್ತು ಸಂಕೀರ್ಣತೆಗಳಿಂದ ಕೂಡಿದೆ ಎಂದು ತಿಳಿದುಬಂದಿದೆ. ಸದ್ಯ ಈ ಸಂಶೋಧನಾ ವರದಿಯತ್ತ ಇಡೀ ವಿಶ್ವದ ಚಿತ್ತ ಇದೆ. ರಷ್ಯಾ ವಿರುದ್ಧ ಭಾರತ ಗೆದ್ದಿದ್ದು, ಯಾವ ದೇಶವೂ ಮಾಡದ ಸಾಧನೆಯನ್ನು ಮಾಡಿದೆ. ಪ್ರಗ್ಯಾನ್‌ ರೋವರ್‌ ಯಶಸ್ವಿಯಾಗಿ ವಿಕ್ರಮ್‌ ಲ್ಯಾಂಡರ್‌ನಿಂದ ಹೊರಬರುವುದರೊಂದಿಗೆ ಚಂದ್ರಯಾನ-3ಯ(Chandrayaan-3) ದೊಡ್ಡ ಮಟ್ಟದ ಕೆಲಸ ಪೂರ್ಣಗೊಂಡಂತಾಗಿದೆ.ಅಲ್ಲದೇ ವಿಕ್ರಮ್‌ ಲ್ಯಾಂಡಂರ್‌ ಮತ್ತು ಪ್ರಗ್ಯಾನ್‌ ಪರಸ್ಪರ ಸೆಲ್ಫಿ ಕ್ಲಿಕ್ಕಿಸಿಕೊಂಡಿವೆ. ಚಂದ್ರನಲ್ಲಿನ ವಾತಾವರಣ, ಕಂಪನ, ಉಷ್ಣ ಹಾಗೂ ಉಷ್ಣವಾಹಕಗಳ ಮಾಹಿತಿ ಕಲೆ ಹಾಕಲಿದೆ. 

ಇದನ್ನೂ ವೀಕ್ಷಿಸಿ: ಚಂದ್ರನ ಅಂಗಳದಲ್ಲಿ ಭಾರತ ಹೊಸ ಇತಿಹಾಸ: ಭಾರತದ ಸಾಧನೆಗೆ ಇಡೀ ವಿಶ್ವವೇ ಮೆಚ್ಚುಗೆ..!

Related Video