
ಏಷ್ಯಾನೆಟ್ ಸುವರ್ಣ ನ್ಯೂಸ್ ಕನ್ನಡ ಪ್ರಭದಿಂದ ಬಾಲಿ ಇಂಡಿಯಾ ಇಂಟರ್ ನ್ಯಾಷನಲ್ ಅವಾರ್ಡ್
ಸಾಗರದಾಚೆಗೂ ಕನ್ನಡ ಡಿಂಡಿಮ ಮೊಳಗಿಸಿದ ಮೊಟ್ಟ ಮೊದಲ ಮಾಧ್ಯಮ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಇದೀಗ ಸಾಧಕರಿಗೆ ಬಾಲಿ ಇಂಡಿಯಾ ಇಂಟರ್ ನ್ಯಾಷನಲ್ ಐಕಾನಿಕ್ ಅವಾರ್ಡ್ ನೀಡಿ ಗೌರವಿಸಿದೆ.
ವ್ಯವಸ್ಥೆಯಲ್ಲಿ ದೋಷಗಳಾದಾಗ ಅದನ್ನು ಎತ್ತಿ ತೋರಿಸುವುದು, ಶಿಕ್ಷೆ ಕೊಡಿಸುವುದು, ಜಾಗೃತಿ ಮೂಡಿಸುವುದು ಮಾಧ್ಯಮದ ಕರ್ತವ್ಯ. ಅದೇ ರೀತಿ ವ್ಯವಸ್ಥೆಯನ್ನು ಉತ್ತಮಗೊಳಿಸೋದಕ್ಕೆ ಶ್ರಮಿಸುವ ವಿವಿಧ ವೃತ್ತಿಬಾಂಧವನ ಉತ್ತಮ ಕಾರ್ಯಗಳನ್ನು ಮೆಚ್ಚಿ ಜನರಿಗೆ ಪರಿಚಯಿಸುವುದೂ ಕೂಡ ಮಾಧ್ಯಮಗಳ ಜವಾಬ್ದಾರಿ. ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ. ಇದೀಗ ನಾವು ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಬಾಲಿ ಇಂಡಿಯಾ ಇಂಟರ್ ನ್ಯಾಷನಲ್ ಐಕಾನಿಕ್ ಅವಾರ್ಡನ್ನು ನೀಡ್ತಾ ಇದ್ದೇವೆ. ಈ ಪ್ರಶಸ್ತಿ ಮತ್ತಷ್ಟು ಸಾಧಕರಿಗೆ ಪ್ರೇರಣೆಯಾಗಲಿ, ಪ್ರಶಸ್ತಿ ಸ್ವೀಕರಿಸಿದವರ ಉತ್ಸಾಹ ಮತ್ತು ಶಕ್ತಿ ಇಮ್ಮಡಿಯಾಗಲಿ ಎಂಬುದೇ ನಮ್ಮ ಆಶಯ.