ಆರ್‌ಸಿಬಿ ಕಾಲ್ತುಳಿತ ಪ್ರಕರಣ, ಎಲ್ಲಿಗೆ ಬಂತು ಮೂರು ತನಿಖೆ? ಹೊಣೆಗಾರರು ಯಾರು?

ಆರ್‌ಸಿಬಿ ಟ್ರೋಫಿ ಗೆದ್ದ ಸಂಭ್ರಮದಲ್ಲಿ ನಡೆಸಿದ ಆಚರಣೆ ದುರಂತಕ್ಕೆ ಕಾರಣವಾಗಿತ್ತು. ಈ ಘಟನೆ ನಡೆದು ತಿಂಗಳು ಕಳೆದಿದೆ. ಆದರೆ ನೋವು, ಕಣ್ಣೀರು ಮಾಸಿಲ್ಲ. ತನಿಖೆ ಚುರುಕಾಗಿ ನಡೆಯುತ್ತಿದೆ. ಆದರೆ ಸರ್ಕಾರ, ಆರ್‌ಸಿಬಿ ಹಾಗೂ ಪೊಲೀಸರು ಇದರಲ್ಲಿ ತಪ್ಪು ಯಾರದ್ದು? 

Share this Video
  • FB
  • Linkdin
  • Whatsapp

ಬೆಂಗಳೂರು (ಜು.04) ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಅಮಾಯಕ 11 ಜೀವಗಳು ಬಲಿಯಾಗಿದೆ. ಹಲವರು ಗಾಯಗೊಂಡಿದ್ದಾರೆ. ಘಟನೆ ನಡೆದು ತಿಂಗಳು ಉರುಳಿದರೂ ಆರೋಪ ಪ್ರತ್ಯಾರೋಪಗಳೇ ಹೆಚ್ಚಾಗುತ್ತಿದೆ ಹೊರತು ಹೊಣೆಗಾರರು ಯಾರು ಅನ್ನೋದು ಸ್ಪಷ್ಟವಾಗಿಲ್ಲ. ಆದರೆ ತನಿಖೆ ಹಂತದಲ್ಲೇ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳೊಕೆ ಪ್ರಯತ್ನಗಳು ನಡೆಯುತ್ತಿವೆಯಾ ಅನ್ನೋ ಅನುಮಾನ ಸಹಜವಾಗಿಯೇ ರಾಜ್ಯದ ಜನತೆಯನ್ನ ಕಾಡ್ತಿವೆ.

Related Video