ಭೀಮಾತೀರದ ಹಂತಕ ಬಾಗಪ್ಪನ ಬೆನ್ನಲ್ಲೇ, ಶಿಷ್ಯ ಸುಶೀಲ್ ಕಾಳೆಯೂ ಬರ್ಬರ ಹತ್ಯೆ!

ವಿಜಯಪುರದಲ್ಲಿ ರೌಡಿಶೀಟರ್ ಸುಶೀಲ್ ಕಾಳೆ ಹತ್ಯೆ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಬಾಗಪ್ಪ ಹರಿಜನ್ ಸಹಚರನಾಗಿದ್ದ ಸುಶೀಲ್ ಹತ್ಯೆಯ ಹಿಂದಿನ ಉದ್ದೇಶ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Share this Video
  • FB
  • Linkdin
  • Whatsapp

ವಿಜಯಪುರ (ಜು.15): ವಿಜಯಪುರದ ರೌಡಿಶೀಟರ್ ಸುಶೀಲ್ ಕಾಳೆ ಹತ್ಯೆ ಪ್ರಕರಣ ಹಲವು ಅನುಮಾನಗಳನ್ನ ಹುಟ್ಟುಹಾಕಿದೆ. ಭೀಮಾತೀರದ ಹಂತಕ ಬಾಗಪ್ಪ ಹರಿಜನ್ ಸಹಚರನಾಗಿದ್ದ. ಕಳೆದ ಫೆಬ್ರವರಿ 12 ರಂದು ಬಾಗಪ್ಪ ಹತ್ಯೆ ನಡೆದಿತ್ತು. ಈ ಹತ್ಯೆ 5 ತಿಂಗಳ ಅಂತರದಲ್ಲಿಯೇ ಸುಶೀಲ್ ಹತ್ಯೆಯಾಗಿರೋದು ಹಲವು ಅನುಮಾನಗಳನ್ನ ಹುಟ್ಟುಹಾಕಿದೆ. ಇದೊಂದು ಟಾರ್ಗೆಟ್ ಮರ್ಡರ್? ಅಥವಾ ಹಣಕಾಸಿಗಾಗಿ ನಡೆದ ಮರ್ಡರ್ ಆಗಿದೆಯಾ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಬಾಗಪ್ಪನ ಬಳಿಕ ಸುಶೀಲ್ ಹತ್ಯೆಯಾಗಿರೋದು ಜನರಲ್ಲಿ ಆತಂಕ ಉಂಟು ಮಾಡಿದೆ..

ಭೀಕರ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸುವ ವೇಳೆ ತಮ್ಮ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಅವರನ್ನು ವಶಕ್ಕೆ ಪಡೆದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಈ ಘಟನೆ ತಡರಾತ್ರಿ ನಡೆದಿದ್ದು, ನಗರದಲ್ಲಿ ಹುಬ್ಬೇರಿಸುವಂತಾಗಿದೆ. ಇತ್ತೀಚೆಗಷ್ಟೆ ನಡೆದ ಸುಶೀಲ್ ಕಾಳೆ ಹತ್ಯೆ ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದ ವಿಜಯಪುರ ಪೊಲೀಸರು, ತಡರಾತ್ರಿ ಆರೋಪಿಗಳಿಗಾಗಿ ಕಾರ್ಯಾಚರಣೆ ನಡೆಸಿದ ವೇಳೆ ಗಾಂಧಿ ಚೌಕ ಠಾಣೆ ಸಿಪಿಐ ಪ್ರದೀಪ್ ತಳಕೇರಿ ಫೈರಿಂಗ್ ನಡೆಸಿದ್ದಾರೆ. ಈ ವೇಳೆ ಮೂರು ಸುತ್ತು ಗುಂಡು ಹಾರಿಸಲಾಯಿತೆಂಬ ಮಾಹಿತಿ ಲಭ್ಯವಾಗಿದೆ.

ಆರೋಪಿಗಳ ಪತ್ತೆ, ಫೈರಿಂಗ್ ವಿವರಣೆ:
ಸುಶೀಲ್ ಕಾಳೆ ಹತ್ಯೆ ಪ್ರಕರಣದಲ್ಲಿ ಶಂಕಿತ ಆರೋಪಿಗಳಾದ ಆಕಾಶ ಕಲ್ಲವ್ವಗೋಳ ಮತ್ತು ಸುದೀಪ್ ಅಲಿಯಾಸ್ ಸುಭಾಷ ಬಗಲಿ ಎಂಬವರನ್ನು ಪೊಲೀಸರು ಹಿಡಿಯಲು ಮುಂದಾದಾಗ, ಆರೋಪಿಗಳು ಎಸ್ಕೇಪ್ ಆಗಲು ಪೊಲೀಸರ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾರೆ. ತಕ್ಷಣ ಪ್ರತಿಕ್ರಿಯಿಸಿದ ಸಿಪಿಐ ತಳಕೇರಿ ಇಬ್ಬರ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಇಬ್ಬರಿಗೂ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ನಂತರ ಅವರನ್ನು ಅಧಿಕಾರಿಗಳ ನಿಯಂತ್ರಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಹಂತಕ ಬಾಗಪ್ಪನ ಹಳೆ ಶಿಷ್ಯ ಸುಶೀಲ್ ಹತ್ಯೆ ಹಿನ್ನೆಲೆ:
ಹಂತಕನಾಗಿ ಪ್ರಸಿದ್ಧಿ ಪಡೆದಿದ್ದ ಬಾಗಪ್ಪನ ಹಳೆ ಆಪ್ತ ಸುಶೀಲ್ ಕಾಳೆ ನಿನ್ನೆ ಹಾಡುಹಗಲೆ ಭೀಕರವಾಗಿ ಹತ್ಯೆಗೀಡಾಗಿದ್ದನು. ಈ ಹತ್ಯೆ ಆರೋಪಿಗಳ ಪೈಕಿ ಈ ಇಬ್ಬರು ಪ್ರಮುಖ ಶಂಕಿತರಾಗಿದ್ದರು. ಹತ್ಯೆ ವೇಳೆ ಸುಶೀಲ್‌ಗೆ ನೇರವಾಗಿ ಗುಂಡು ಹಾರಿಸಿ ಪರಾರಿಯಾದ ಆರೋಪಿಗಳ ಮೇಲೆ ಪೊಲೀಸರು ಶೋಧ ನಡೆಸಿ ತಡರಾತ್ರಿ ಬಂಧಿಸಲು ಮುಂದಾಗಿದ್ದರು. ಆರೋಪಿ ಆಕಾಶ ವಿರುದ್ಧ ಈಗಾಗಲೇ ಎಂಟು ಪ್ರಕರಣಗಳು ದಾಖಲಾಗಿದ್ದವು. ಬಹುಪಾಲು ಪ್ರಕರಣಗಳು ಕೊಲೆ, ದಾಳಿ, ದಂದೆ, ಹಾಗೂ ಆಸ್ತಿ ದಂದೆ ಸಂಬಂಧವಾಗಿದ್ದವು. ಈತನ ವಿರುದ್ಧ ಪೊಲೀಸರು ಹದಿರಿತನದಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಆತನ ಸಹಚರ ಸುಭಾಷ ಬಗಲಿ ಕೂಡಾ ಕಿಡಿಗೇಡಿಗಳ ಪಟ್ಟಿ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Related Video