
ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
ಮರುಭೂಮಿ ರಾಷ್ಟ್ರಗಳಾದ ಯುಎಇ, ಕತಾರ್, ಮತ್ತು ಸೌದಿ ಅರೇಬಿಯಾದಲ್ಲಿ ಅನಿರೀಕ್ಷಿತ ಹವಾಮಾನ ಬದಲಾವಣೆಗಳು ಕಂಡುಬಂದಿವೆ. ದುಬೈನಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದ್ದರೆ, ಸೌದಿಯಲ್ಲಿ ಹಿಮಪಾತವಾಗಿದೆ. ಈ ವಿಪರೀತ ಹವಾಮಾನ ವೈಪರೀತ್ಯದ ಹಿಂದಿನ ಕಾರಣಗಳ ಬಗ್ಗೆ ಈಗ ಚರ್ಚೆಯಾಗ್ತಿದೆ.
ಅವು ಮಳೆಯೇ ಕಾಣದ ರಾಷ್ಟ್ರಗಳು.. ಮರುಭೂಮಿ ನಡುವೆ ಎದ್ದು ನಿಂತಿರುವ ನಗರಗಳು.. ಅಲ್ಲಿ ಪೆಟ್ರೋಲ್ಗಿಂತ ನೀರಿನ ಬೆಲೆ ದುಬಾರಿ.. ಅಂಥಾ ಮರಳುಗಾಡಿನಲ್ಲಿ ಈಗ ರಣ ರಣ ಮಳೆ ಸುರೀತಾ ಇದೆ. ಸೌದಿ ಅರೇಬಿಯಾದಲ್ಲಂತೂ ಹಿಮಪಾತವಾಗಿದೆ. ಯುಎಐ, ಕತಾರ್ ಗಳಲ್ಲಿ ಸತತ ಮಳೆಯಿಂದ ಪ್ರವಾಹ ಎದುರಾಗಿದೆ. ಮರುಭೂಮಿ ದೇಶಗಳ ಮೇಲೆ ವರುಣ ಯುದ್ಧ ಸಾರಿರೋದೇಕೆ..? ಏನೀ ವೈಪರಿತ್ಯದ ಹಿಂದಿನ ಕಾರಣ..? ಇದು ವಿಶ್ವವಿನಾಶದ ಮುನ್ಸೂಚನೆನಾ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.
ಸಾಮಾನ್ಯವಾಗಿ ಯುಎಇ ದಶಕಗಳಿಂದ ಮಳೆಗಾಗಿ ಮೋಡ ಬಿತ್ತನೆ ಮಾಡ್ತಾ ಬಂದಿತ್ತು. ಆದ್ರೆ ಇತ್ತೀಚಿಗೆ ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಮೇಘಸ್ಫೋಟ ಸಂಭವಿಸ್ತಾ ಇವೆ. ಕಳೆದ ವರ್ಷ ಏಪ್ರಿಲ್ ತಿಂಗಳ ಮಹಾಮಳೆಗೆ ತತ್ತರಿಸಿದ್ದ ಗಲ್ಫ್ ದೇಶಗಳಿಗೆ ಈ ಸಾರಿ ವರ್ಷಾಂತ್ಯದ ಮಳೆ ಆಘಾತ ತಂದಿದೆ. ಹೆಚ್ಚುತ್ತಿರೋ ಜಾಗತಿಕ ತಾಪಮಾನ ಈ ವೈರುಧ್ಯಗಳಿಗೆ ಕಾರಣ ಅಂತಾರೆ ಹವಾಮಾನ ತಜ್ಞರು. ಹಾಗಾದ್ರೆ ಮರಳುಗಾಡಿನ ಪ್ರವಾಹ ವಿಶ್ವವಿನಾಶದ ಸೂಚನೆನಾ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.