Viral Biryani Video: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ಜನರು ಬೆಚ್ಚಿಬಿದ್ದಿದ್ದಾರೆ. ವಿಶೇಷವಾಗಿ ಬಿರಿಯಾನಿ ಪ್ರಿಯರು ತಮ್ಮ ಸಿಟ್ಟನ್ನ ಹೊರಹಾಕಿದ್ದಾರೆ. ನಿಜ ಸಂಗತಿ ಏನೆಂದರೆ ವೈರಲ್ ಆಗಿರುವ ವಿಡಿಯೋದಲ್ಲಿ,.. 

ಹೊರಗೆ ತಿನ್ನುವುದು ಒಂದೇ.. ಸ್ಲೋ ಪಾಯಿಸನ್‌ ತೆಗೆದುಕೊಳ್ಳುವುದು ಒಂದೇ.. ಸ್ಟ್ರೀಟ್‌ ಫುಡ್‌ ಆರೋಗ್ಯಕ್ಕೆ ಹಾನಿಕಾರಕ ಎಂಬುದು ನಮಗೆಲ್ಲರಿಗೂ ತಿಳಿದಿರುವುದೇ. ಹೊರಗೆ ತಯಾರಿಸುವ ಯಾವುದೇ ಆಹಾರದಲ್ಲೂ ಯಾವಾಗಲೂ ಶುಚಿತ್ವದ ಕೊರತೆ ಇರುತ್ತದೆ. ವಿಶೇಷವಾಗಿ ಬೀದಿ ಬದಿ ತಯಾರಿಸುವ ಆಹಾರದ ಬಗ್ಗೆ ಮಾತನಾಡುವಾಗ ಶುಚಿತ್ವವನ್ನು ನಿರೀಕ್ಷಿಸುವುದಕ್ಕೆ ಆಗಲ್ಲ. ಆದರೆ ಅನೇಕ ಜನರು ಇನ್ನೂ ಅಂತಹ ಸ್ಟ್ರೀಟ್‌ ಫುಡ್‌ ಅನ್ನೇ ಇಷ್ಟಪಡ್ತಾರೆ. ಬಹುಶಃ ಇದಕ್ಕೆ ಕಾರಣ ನಮ್ಮ ಮುಂದೆ ಆಹಾರವನ್ನು ತಯಾರಿಸದಿರುವುದು. ಆದರೆ ಅಂತಹ ಹೊರಗಿನ ಆಹಾರಗಳನ್ನು ಹೇಗೆ ತಯಾರಿಸಲಾಗುತ್ತದೆ ಎಂದು ನೋಡಿದರೆ ನಾವು ನಮ್ಮ ಜೀವನದಲ್ಲಿ ಆ ಆಹಾರವನ್ನು ತಿನ್ನುವುದನ್ನು ನಿಲ್ಲಿಸುತ್ತೇವೆ. ಸದ್ಯ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಶೇಷವಾಗಿ ಬಿರಿಯಾನಿ ಪ್ರಿಯರು ಈ ವಿಡಿಯೋ ನೋಡಲೇಬೇಕು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ಜನರು ಬೆಚ್ಚಿಬಿದ್ದಿದ್ದಾರೆ. ವಿಶೇಷವಾಗಿ ಬಿರಿಯಾನಿ ಪ್ರಿಯರು ತಮ್ಮ ಸಿಟ್ಟನ್ನ ಹೊರಹಾಕಿದ್ದಾರೆ. ನಿಜ ಸಂಗತಿ ಏನೆಂದರೆ ವೈರಲ್ ಆಗಿರುವ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಚರಂಡಿಯ ಪಕ್ಕದಲ್ಲಿ ನಿಂತು ಬಿರಿಯಾನಿ ಮಾರಾಟ ಮಾಡುತ್ತಿದ್ದಾನೆ. ಇದಲ್ಲದೆ ಅವನು ಆ ಕೊಳಚೆ ನೀರನ್ನು ತೆಗೆದುಕೊಂಡು ಬಿರಿಯಾನಿಯಲ್ಲಿ ಬೆರೆಸಿ ತಿರುಗಿಸುತ್ತಿದ್ದಾನೆ. ಅದನ್ನು ಗಮನಿಸಿದ ಮತ್ತೊಬ್ಬ ವ್ಯಕ್ತಿ ಅವನಿಗೆ "ಹೇ ಸಹೋದರ, ನೀನು ಆಹಾರದ ಮೇಲೆ ಕೊಳಚೆ ನೀರನ್ನು ಸುರಿಯುತ್ತಿದ್ದೀಯಾ" ಎಂದು ಎಚ್ಚರಿಸುತ್ತಾನೆ. ಇದೆಲ್ಲವೂ ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಬರುತ್ತಿದೆ. ಇದನ್ನು ನೋಡಿದ ನಂತರ ಬಿರಿಯಾನಿಯನ್ನು ಮುಟ್ಟಲು ಸಹ ನೀವು ನಿಜವಾಗಿಯೂ ಮುಜುಗರಪಡುತ್ತೀರಿ.

ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ @Mailah1712 ಎಂಬ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಇದನ್ನು ಡಿಸೆಂಬರ್ 20 ರಂದು ಶೇರ್ ಮಾಡಲಾಗಿದ್ದು, ಈ ವಿಡಿಯೋವನ್ನು ಈಗಾಗಲೇ ಸುಮಾರು 3,00,000 ಜನರು ವೀಕ್ಷಿಸಿದ್ದಾರೆ. ವಿಡಿಯೋಗೆ ಪ್ರತಿಕ್ರಿಯಿಸುತ್ತಾ ಅನೇಕರು ಬಿರಿಯಾನಿ ತಿನ್ನುವುದನ್ನು ನಿಲ್ಲಿಸಲು ನಿರ್ಧರಿಸುತ್ತಿದ್ದಾರೆ. ಕೆಲವರು ಹೊರಗೆ ಚಿಕನ್ ತಿನ್ನುವುದನ್ನು ನಿಲ್ಲಿಸುವಂತೆಯೂ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಸ್ವಚ್ಛವಾದ, ಮನೆಯಲ್ಲಿ ಬೇಯಿಸಿದ ಆಹಾರವನ್ನು ಮಾತ್ರ ತಿನ್ನಲು ಸೂಚಿಸುತ್ತಿದ್ದಾರೆ. ಏತನ್ಮಧ್ಯೆ ಕೆಲವರು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ AI ವಿಡಿಯೋ ಎಂದು ವಿವರಿಸುತ್ತಿದ್ದಾರೆ. ಆದರೆ ಹೊರಗೆ ಏನನ್ನೇ ತಿನ್ನುವಾಗ ಜಾಗರೂಕರಾಗಿರುವುದು ಒಳ್ಳೆಯದು. ಏಕೆಂದರೆ ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ, ಇದೇ ಕೊನೆಯೂ ಅಲ್ಲ.

ಇಲ್ಲಿದೆ ನೋಡಿ ವಿಡಿಯೋ 

Scroll to load tweet…

ಈ ವಿಡಿಯೋ ಸತ್ಯಾಸತ್ಯತೆ ಏನು?

ಕೆಲವು ವಿಡಿಯೋಗಳನ್ನ ನೋಡಿದಾಗ ಸತ್ಯಾಸತ್ಯತೆ ಏನೆಂದು ತಕ್ಷಣಕ್ಕೆ ತಿಳಿಯುವುದಿಲ್ಲ. ಈ ಹಿಂದೆ ಒಂದು ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ ಯುವತಿ ಬಂಗೀ ಜಂಪಿಂಗ್ ಮಾಡುವ ಮೊದಲು ತುಂಬಾ ಹೆದರುತ್ತಿದ್ದಳು. ಆದರೂ ಅವಳು ರೋಮಾಂಚನವನ್ನು ಆನಂದಿಸಲು ಸಿದ್ಧಳಾಗಿದ್ದಳು. ಎತ್ತರದಿಂದ ಜಿಗಿಯುತ್ತಿದ್ದಂತೆ ಜೋರಾಗಿ ಕಿರುಚಿದಳು. ಕೆಲವು ಕ್ಷಣಗಳ ನಂತರ ಅವಳ ಧ್ವನಿ ಶಾಂತವಾಯಿತು. ದೇಹವು ಸಡಿಲಗೊಳ್ಳಲು ಪ್ರಾರಂಭಿಸಿತು. ಇದು ಅಲ್ಲಿದ್ದ ಎಲ್ಲರಿಗೂ ಆಘಾತವನ್ನುಂಟು ಮಾಡಿತು. ಇದನ್ನು ನೋಡಿ ಹತ್ತಿರದ ಸಿಬ್ಬಂದಿ ಮತ್ತು ಸ್ನೇಹಿತರು ಭಯಭೀತರಾಗಿ ಹುಡುಗಿಯನ್ನು ಕೆಳಗೆ ಕರೆತಂದರು. ಆದರೆ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಹುಡುಗಿಯನ್ನು ಮತ್ತು ಅವಳ ನಿರ್ಜೀವ ದೇಹವನ್ನು ನೋಡಿ ಎಲ್ಲರೂ ಗಾಬರಿಗೊಂಡರು. ಸಂಪೂರ್ಣ ವಿಡಿಯೋ ಅಪ್‌ಲೋಡ್ ಮಾಡಿಲ್ಲ. ಆದರೆ ಅದರ ಕೆಲವು ಸೆಕೆಂಡುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಯಿತು.

ಸಂಪೂರ್ಣ ವಿಡಿಯೋ ಇಲ್ಲಿದೆ

ಅನೇಕ ನೆಟಿಜನ್‌ಗಳು ಈ ವಿಡಿಯೋವನ್ನು X (ಹಿಂದೆ ಟ್ವಿಟರ್) ನಲ್ಲಿ ಶೇರ್ ಮಾಡಿದ್ದಾರೆ. ಹುಡುಗಿ ಭಯದಿಂದ ಗಾಳಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಈ ವೈರಲ್ ಹೇಳಿಕೆಯ ಹಿಂದಿನ ಸತ್ಯ ಬೇರೆಯೇ ಆಗಿದೆ. ಹುಡುಗಿ ಸಂಪೂರ್ಣವಾಗಿ ಸುರಕ್ಷಿತಳಾಗಿದ್ದಾಳೆ. ಅಂತಿಮವಾಗಿ ಹುಡುಗಿಯ ಸಂಪೂರ್ಣ ವಿಡಿಯೋ ಇಲ್ಲಿದೆ. 

YouTube video player