ತನ್ನ ಚರ್ಮದ ಬಣ್ಣ ಕಪ್ಪಾಗಿದೆ ಎಂದು ಸಹಪಾಠಿಗಳು ಆಡಿಕೊಂಡಿದ್ದಕ್ಕೆ 5 ವರ್ಷದ ಬಾಲಕಿಯೊಬ್ಬಳು ತಾನು ಕುರೂಪಿ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಈ ಘಟನೆಯ ವಿಡಿಯೋವನ್ನು ತಾಯಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶಾಲೆಗಳಲ್ಲಿನ ವರ್ಣತಾರತಮ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಮೊದಲನೇಯದಾಗಿ ಈ ಜಗತ್ತಿನಲ್ಲಿ ಪ್ರತಿಸೃಷ್ಟಿಯೂ ಚೆಂದವೇ, ದೇವರ ಸೃಷ್ಟಿಯಲ್ಲಿ ಲೋಪವಿಲ್ಲ. ಹಾಗೆಯೇ ಮನುಷ್ಯನ ನಾಲಗೆಗೆ ಎಲುಬಿಲ್ಲ. ಹಾಗಾಗಿ ನಿಜವಾದ ಸೌಂದರ್ಯ ಕೆಲವೊಮ್ಮೆ ಮನುಷ್ಯನ ಕಣ್ಣಿಗೆ ಕಾಣದೇ ಹೋಗಬಹುದು. ಇದೆಲ್ಲಾ ಪೀಠಿಕೆ ಏಕೆ ಅಂತೀರಾ ಇಲ್ಲೊಬ್ಬಳು ಪುಟಾಣಿ ಎಲ್ಲರ ಕರುಳು ಚುರುಕ್ ಎನ್ನುವಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಆಕೆಯ ಅಳುವಿಗೆ ಕಾರಣವಾಗಿರುವುದು ಆಕೆಯ ಜೊತೆಯಲ್ಲಿ ಓದುವವರ ಮಾತು. ಹಾಗೂ ಕೀಳರಿಮೆ ಹಾಗಿದ್ದಾರೆ ಆಕೆ ಅಳುತ್ತಿರೋದು ಯಾಕೆ ಇಲ್ಲಿದೆ ನೋಡಿ ಡಿಟೇಲ್ ಸ್ಟೋರಿ...

ಆಕೆ ಮುದ್ದಾದ ಪುಟ್ಟ ಹುಡುಗಿ, ಸಾಧಾರಣ ಭಾರತೀಯ ಗೌರವರ್ಣ ಆಕೆಯದ್ದು, ಆದರೆ ಕುರೂಪಿ ಎಂದು ಹೀಗಳೆಯುವಷ್ಟು ಕುರೂಪಿ ಆಕೆಯಲ್ಲ, ಆದರೆ ಪಾಶ್ಚಿಮಾತ್ಯರಂತೆ ಹಾಲಿನಂತಹ ಬಣ್ಣ ಆಕೆಯದ್ದಲ್ಲ. ಆದರೆ ಆಕೆಯ ಜೊತೆಗಾರರ ಮಾತು ಆಕೆಗೆ ತಾನು ಕುರೂಪಿ ಎನ್ನುವ ಕೀಳರಿಮೆ ಉಂಟು ಮಾಡಿದೆ. ಹೌದು 5 ವರ್ಷದ ಪುಟಾಣಿ ಬಾಲಕಿಯೊಬ್ಬಳು ತನ್ನ ಚರ್ಮದ ಬಣ್ಣ ಚೆನ್ನಾಗಿಲ್ಲ, ನಾನು ಕುರೂಪಿಯಾಗಿದ್ದೇನೆ ಎಂದು ಪೋಷಕರ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ನನ್ನ ಸಹಪಾಠಿಗಳು ಸೊಗಸಾದ ಬಿಳಿ ಬಣ್ಣವನ್ನು ಹೊಂದಿದ್ದಾರೆ ನಾನು ಆ ರೀತಿಯ ಬಣ್ಣ ಹೊಂದಿಲ್ಲ, ನನ್ನ ಚರ್ಮದ ಬಣ್ಣ ಕಪ್ಪಾಗಿದೆ ಎಂದು ಆಕೆ ತನ್ನ ತಾಯಿಯ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.

ಇದನ್ನೂ ಓದಿ: ವಾರ್ಷಿಕೋತ್ಸವದ ವೇಳೆ ಮಕ್ಕಳು ಡಾನ್ಸ್ ಸ್ಟೆಪ್ ತಪ್ಪಿಸಬಾರದು ಎಂದು ಟೀಚರ್‌ ಏನ್ ಮಾಡಿದ್ರು ನೋಡಿ

ಆ ಬಾಲಕಿಯ ತಾಯಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ವೀಡಿಯೋ ಶಾಲೆಗಳಲ್ಲಿ ಪುಟ್ಟ ಮಕ್ಕಳು ಹೇಗೆ ವರ್ಣತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬುದನ್ನು ತೋರಿಸುತ್ತಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ವೀಡಿಯೋ ನೋಡಿದ ಅನೇಕರು ಆಕೆ ತುಂಬಾ ಮುದ್ದಾಗಿದ್ದಾಳೆ ಅಳುವುದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ. ವೀಡಿಯೋದಲ್ಲಿ ಕಾಣುವಂತೆ ಹೀಗೆ ತನ್ನ ಚರ್ಮದ ಬಣ್ಣದ ಬಗ್ಗೆ ಕೀಳರಿಮೆ ಹೊಂದಿದ್ದ ಮಗಳನ್ನು ಸಮಾಧಾನಿಸಲು ಪ್ರಯತ್ನಿಸಿದ್ದಾರೆ. ಈ ಜಗತ್ತಿನಲ್ಲಿ ಜನಿಸಿದ ಪ್ರತಿಯೊಬ್ಬರು ವಿಭಿನ್ನರಾಗಿರುತ್ತಾರೆ. ಎಲ್ಲರೂ ಒಬ್ಬರಿಗಿಂತ ಒಬ್ಬರು ಭಿನ್ನ ಇದರಲ್ಲಿ ಅಳುವುದು ಏಕೆ ಎಂದು ಅವರು ಹೇಳುತ್ತಾರೆ.

angel_hope333 ಎಂಬುವವರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಹೀಗೆ ಬರೆದುಕೊಂಡಿದ್ದಾರೆ. ಏಂಜೆಲ್‌ಗೆ ಕೇವಲ 5 ವರ್ಷ, ಕಳೆದ ಎರಡು ವರ್ಷಗಳಲ್ಲಿ ನನ್ನ ಮಗಳು, ತಾನು ಚೆನ್ನಾಗಿಲ್ಲ ತಾನು ಕುರೂಪಿ ಎಂದು ಇತರ ಮಕ್ಕಳು ಹೇಳುತ್ತಾರೆ. ನಾನು ನನ್ನನ್ನು ದ್ವೇಷಿಸುತ್ತೇನೆ ಎಂದು 5ನೇ ಬಾರಿ ಹೇಳುತ್ತಿದ್ದು, ಇದು ನನ್ನ ಹೃದಯವನ್ನು ಭಾರವಾಗುವಂತೆ ಮಾಡಿದೆ. ನಾನು ಆಕೆಯತ್ತ ನನ್ನ ಕ್ಯಾಮರಾವನ್ನು ತಿರುಗಿಸುವುದಕ್ಕೂ ಮೊದಲು ನಾನು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಆಕೆಯನ್ನು ಸಮಾಧಾನಪಡಿಸುವುದಕ್ಕೆ ಮುಂದಾದೆ. ಆದರೆ ಆಕೆ ಸಮಾಧಾನಗೊಳ್ಳಲಿಲ್ಲ, ಆಕೆ ಆಳವಾಗಿ ಗಾಯಗೊಂಡಿದ್ದಳು. ಆಕೆ ತಾನು ಬೆಳ್ಳಗೆ ಕಾಣಬೇಕು ಎಂದು ಕೆ-ಪಾಪ್‌ನ ರಾಕ್ಷಸ ಬೇಟೆಗಾರನ ಪಾತ್ರಧಾರಿ ರೂಮಿ ರೀತಿ ಬಟ್ಟೆ ಧರಿಸುವುದಕ್ಕೆ ಬಯಸಿದ್ದಳು. ನಾನು ಆಕೆಗೆ ಬೇರೆ ಬಟ್ಟೆ ಖರೀದಿಸುವೆ ಎಂದಾಗ ಆಕೆ ಅಳುವುದಕ್ಕೆ ಶುರು ಮಾಡಿದಳು.

ಇದನ್ನೂ ಓದಿ: ಸುಳಿವು ಬಿಡದೇ ಎಲ್ಲವನ್ನೂ ಸರಿಯಾಗಿ ಮಾಡಿದ್ದ ಹಂತಕ ಮಾಡಿದ್ದು ಒಂದೇ ಒಂದು ತಪ್ಪು

ತಾನು ತನ್ನ ಬಣ್ಣವನ್ನು ಬದಲಿಸಿಕೊಳ್ಳುವವರೆಗೂ ತಾನು ಈ ರೀತಿ ಬಟ್ಟೆ ಧರಿಸುವುದಿಲ್ಲ ಎಂದು ಅಳುವುದಕ್ಕೆ ಶುರು ಮಾಡಿದಳು. ನಾನು ಆಕೆಯ ಪ್ರಾಂಶುಪಾಲರಿಗೆ ತೋರಿಸುವುದಕ್ಕಾಗಿ ಈ ವಿಡಿಯೋ ಮಾಡಿದೆ. ಆದರೆ ಪ್ರಾಂಶುಪಾಲರು ರಜಾದಲ್ಲಿ ಇದ್ದಿದ್ದರಿಂದ ಆಕೆಯ ಶಿಕ್ಷಕಿಗೆ ತೋರಿಸಿದೆ ಅವರು ಆಕೆಗಾಗಿ ಬೇರೆ ಯೋಜನೆ ರೂಪಿಸುವುದಾಗಿ ಹೇಳಿದರು. ನಾನು ಆಕೆಯನ್ನು ಎರಡು ಖಾಸಗಿ ಶಾಲೆಗಳಿಗೆ ಸೇರಿಸುವ ಪ್ರಯತ್ನ ಮಾಡಿದೆ. ಆದರ ಅಲ್ಲಿ ಭಾರಿ ಬೇಡಿಕೆ ಇದ್ದ ಕಾರಣ ಆಕೆಯನ್ನು ವೇಟಿಂಗ್ ಲಿಸ್ಟ್‌ನಲ್ಲಿ ಇಟ್ಟರು. ನಾನು ಬೇರೆ ಹೊಸ ಶಾಲೆಯಲ್ಲೂ ಬೇಡಿದೆ ಆದರೆ ಅದೃಷ್ಟ ಜೊತೆಗಿರಲಿಲ್ಲ, ಆಕೆಗೆ ಸೀಟು ಸಿಗಲಿಲ್ಲ. ಆಕೆ ತೀವ್ರ ಆಘಾತಕ್ಕೊಳಗಾಗಿದ್ದಳು.

ನಾನು ಅಷ್ಟೊಂದು ತಾಳ್ಮೆ ಇರಲಿಲ್ಲ, ನಾನು ಇದನ್ನು ಇಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಏಕೆಂದರೆ ಆಕೆ ಎಷ್ಟು ಚೆನ್ನಾಗಿದ್ದಾಳೆ ಎಂಬುದನ್ನು ಇಲ್ಲಿನ ಜನರ ಕಾಮೆಂಟ್‌ಗಳ ಮೂಲಕ ಆಕೆಗೆ ತೋರಿಸುವುದಕ್ಕೆ ಮನವರಿಕೆ ಮಾಡುವುದಕ್ಕೆ ಬಯಸುತ್ತೇನೆ. ಆದರೆ ಆಕೆ ಇಷ್ಟೊಂದು ಪ್ರೀತಿ ಗಳಿಸುತ್ತಾಳೆ ಎಂದು ನಾನು ನಿರೀಕ್ಷೆ ಮಾಡಲಿಲ್ಲ. ತಮ್ಮ ಮಕ್ಕಳಿಗೆ ಒಳ್ಳೆಯ ಅನುಭವ ಆತ್ಮವಿಶ್ವಾಸ ಮೂಡಿಸುವುದಕ್ಕೆ ಪೋಷಕರು ತಂತ್ರಜ್ಞಾನವನ್ನು ಬಳಸಬೇಕು ಎಂದು ನಾನು ಬಯಸುತ್ತೇನೆ. ಕೆಲವು ಮಾತುಗಳು ಕೆಲವರ ಬದುಕನ್ನು ಹಾಳು ಮಾಡಬಹುದು. ಇದು ಸರಿಯಲ್ಲ, ನಾನು 5ರ ಹರೆಯದಲ್ಲಿದ್ದಾಗ ನಾನು ಇದೇ ರೀತಿಯ ಸಮಸ್ಯೆ ಎದುರಿಸಿದ್ದೆ. ಇದು ಬಹಳ ನೋವಿನಿಂದ ಕೂಡಿರುತ್ತದೆ. ನನ್ನ ಮಗಳಿಗೂ ಕೂಡ ಇದೇ ರೀತಿ ಆಗೋದು ನನಗೆ ಇಷ್ಟವಿಲ್ಲ. ಆಕೆಗೆ ಏನು ಹೇಳಬೇಕು ಎಂದು ನನಗೆ ತಿಳಿಯುತ್ತಿಲ್ಲ. ಈ ಘಟನೆಯಿಂದ ನಾನು ಮಾನಸಿಕವಾಗಿ ಕುಗ್ಗಿ ಹೋದೆ. ಹೀಗಾಗಿ ಆಕೆಗೆ ಇಲ್ಲಿ ನೀವು ಕಾಮೆಂಟ್ ಮಾಡಿ, ಅವುಗಳನ್ನು ನಾನು ಆಕೆಗೆ ತೋರಿಸಬಹುದು ಎಂದು ಆ ತಾಯಿ ಬಹಳ ಭಾವುಕವಾಗಿ ಸೋಶಿಯಲ್ ಮೀಡಿಯಾ ಮೂಲಕ ನೆಟ್ಟಿಗರಿಗೆ ಮನವಿ ಮಾಡಿದ್ದಾರೆ.

ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದು, ಮಗುವಿಗೆ ಸಮಾಧಾನ ಮಾಡಿದ್ದಾರೆ. ಹಲವು ಕಾಮೆಂಟ್‌ಗಳನ್ನು ಮಾಡಿ ಮಗು ನೀನು ತುಂಬಾ ಸುಂದರವಾಗಿದ್ದೀಯಾ ಎಂದು ಹೇಳಿದ್ದಾರೆ. ಅಲ್ಲದೇ ಅನೇಕರು ವೀಡಿಯೋ ನೋಡಿ ಭಾವುಕರಾಗಿದ್ದಾರೆ. ಈ ವೀಡಿಯೋದ ಬಗ್ಗೆ ನಿಮಗೇನನಿಸುತ್ತಿದೆ ಕಾಮೆಂಟ್ ಮಾಡಿ.

View post on Instagram