ಮಹಿಳೆಯರು ಗೂಗಲ್‌ನಲ್ಲಿ ಏನೆಲ್ಲಾ ಹುಡುಕುತ್ತಾರೆ? ಅನೇಕ ಮಹಿಳೆಯರು ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳು, ಆರೋಗ್ಯ ಸಲಹೆಗಳು, ಬ್ಯೂಟಿ ಟಿಪ್ಸ್, ಅಡುಗೆ ಮುಂತಾದವುಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ಆದರೆ ಕೆಲವರು ಇದನ್ನು ಮೀರಿ ಬೇರೆನನ್ನೋ ಹುಡುಕುತ್ತಾರೆ. ಅದೇನು ನೋಡಿ..
ಮಹಿಳೆಯರು ಮತ್ತು ಗೂಗಲ್; ಇಂಟರೆಸ್ಟಿಂಗ್ ಮ್ಯಾಟರ್ ರಿವೀಲ್!
ಇಂದಿನ ಇಂಟರ್ನೆಟ್ ಯುಗದಲ್ಲಿ, ಝೆನ್ ಜಿ ಕಾಲದಲ್ಲಿ ಮಹಿಳೆಯರ ಆನ್‌ಲೈನ್ ನಡವಳಿಕೆಗಳು ಮತ್ತು ಹುಡುಕಾಟದ ವಿಷಯಗಳು ಸಮಾಜದ ಅನೇಕ ಆಯಾಮಗಳನ್ನು ಅನಾವರಣಗೊಳಿಸುತ್ತವೆ. ಇತ್ತೀಚಿನ ವರದಿಯೊಂದು ಭಾರತೀಯ ಮಹಿಳೆಯರ ಇಂಟರ್ನೆಟ್ ಬಳಕೆಯ ಕುರಿತು ಹಲವು ಆಸಕ್ತಿದಾಯಕ ಸಂಗತಿಗಳನ್ನು ಬಹಿರಂಗಪಡಿಸಿದೆ.
ದೇಶದಲ್ಲಿ ಒಟ್ಟು 15 ಕೋಟಿ ಇಂಟರ್ನೆಟ್ ಬಳಕೆದಾರರಿದ್ದು, ಅವರಲ್ಲಿ ಸುಮಾರು 6 ಕೋಟಿ ಮಹಿಳೆಯರು ಈಗ ಸಕ್ರಿಯವಾಗಿ ಆನ್‌ಲೈನ್‌ನಲ್ಲಿದ್ದಾರೆ. ಈ ಮಹಿಳೆಯರು ತಮ್ಮ ದೈನಂದಿನ ಜೀವನವನ್ನು ಇನ್ನಷ್ಟು ಉತ್ತಮಗೊಳಿಸಲು ಇಂಟರ್ನೆಟ್ ಅನ್ನು ಒಂದು ಪ್ರಮುಖ ಸಾಧನವಾಗಿ ಬಳಸುತ್ತಿದ್ದಾರೆ. ಆದರೆ, ಅವರು ಅಂತರ್ಜಾಲದಲ್ಲಿ ಏನನ್ನು ಹುಡುಕುತ್ತಾರೆ? ಇಂಟರೆಸ್ಟಿಂಗ್ ಫಾಕ್ಸ್ ಇಲ್ಲಿದೆ ನೋಡಿ..
ಮಹಿಳೆಯರು ಗೂಗಲ್‌ನಲ್ಲಿ ಏನನ್ನು ಹುಡುಕುತ್ತಾರೆ? ಕುತೂಹಲಕಾರಿ ವರದಿ!
ಗೂಗಲ್ ತನ್ನ ಹುಡುಕಾಟ ಫಲಿತಾಂಶಗಳ ಕುರಿತು ಪ್ರಸ್ತುತಪಡಿಸಿದ ವರದಿಯು ಮಹಿಳೆಯರ ಇಂಟರ್ನೆಟ್ ಬಳಕೆಯ ಕುರಿತು ಹಲವು ಕುತೂಹಲಕಾರಿ ವಿಷಯಗಳನ್ನು ಬೆಳಕಿಗೆ ತಂದಿದೆ. ವರದಿಯ ಪ್ರಕಾರ, ದೇಶದಲ್ಲಿರುವ 15 ಕೋಟಿ ಇಂಟರ್ನೆಟ್ ಬಳಕೆದಾರರಲ್ಲಿ, ಸರಿಸುಮಾರು 6 ಕೋಟಿ ಮಹಿಳೆಯರು ಆನ್‌ಲೈನ್‌ನಲ್ಲಿದ್ದು, ತಮ್ಮ ದೈನಂದಿನ ಜೀವನವನ್ನು ಸುಧಾರಿಸಲು ಇಂಟರ್ನೆಟ್ ಅನ್ನು ಬಳಸುತ್ತಿದ್ದಾರೆ. 2022 ರ ದತ್ತಾಂಶದ ಪ್ರಕಾರ, ಇಂಟರ್ನೆಟ್ ಬಳಸುವ ಮಹಿಳೆಯರಲ್ಲಿ ಶೇಕಡಾ 75 ರಷ್ಟು ಮಂದಿ 15-34 ವಯೋಮಾನದವರಾಗಿದ್ದಾರೆ. ಇದು ಯುವ ಪೀಳಿಗೆಯ ಮಹಿಳೆಯರು ಡಿಜಿಟಲ್ ಲೋಕದಲ್ಲಿ ಸಕ್ರಿಯವಾಗಿರುವುದನ್ನು ಸೂಚಿಸುತ್ತದೆ.
ಮಹಿಳೆಯರು ಗೂಗಲ್‌ನಲ್ಲಿ ಏನೆಲ್ಲಾ ಹುಡುಕುತ್ತಾರೆ ಎಂಬುದು ನಿಜಕ್ಕೂ ಆಸಕ್ತಿದಾಯಕ ಸಂಗತಿ. ಅನೇಕ ಮಹಿಳೆಯರು ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳು, ಆರೋಗ್ಯ ಸಲಹೆಗಳು, ಬ್ಯೂಟಿ ಟಿಪ್ಸ್, ಅಡುಗೆ ಪಾಕವಿಧಾನಗಳು, ಫ್ಯಾಷನ್ ಟ್ರೆಂಡ್‌ಗಳು, ಉದ್ಯೋಗಾವಕಾಶಗಳು, ಶಿಕ್ಷಣ ಮಾಹಿತಿ, ಮಕ್ಕಳ ಪೋಷಣೆ ಮತ್ತು ಕುಟುಂಬ ನಿರ್ವಹಣೆಯ ಕುರಿತು ಹುಡುಕಾಟ ನಡೆಸುತ್ತಾರೆ. ಅಲ್ಲದೆ, ಸಮಾಜದಲ್ಲಿನ ಪ್ರಸ್ತುತ ವಿದ್ಯಮಾನಗಳು, ಕಲೆ, ಸಾಹಿತ್ಯ ಮತ್ತು ಮನರಂಜನೆಯ ವಿಷಯಗಳ ಬಗ್ಗೆಯೂ ಅವರು ಮಾಹಿತಿ ಪಡೆಯುತ್ತಾರೆ.
ಸೂಕ್ಷ್ಮ ಸಂಗತಿಗಳು?
ಹೌದು, ದೈನಂದಿನ ಕೆಲವು ಸಂಗತಿಗಳ ಹೊರತಾಗಿಯೂ ಮಹಿಳೆಯರು ಕೆಲವು ಸೂಕ್ಷ್ಮ ವಿಷಯಗಳು ಅಥವಾ ವೈಯಕ್ತಿಕ ಸಮಸ್ಯೆಗಳ ಕುರಿತು ಅವರು ಖಾಸಗಿಯಾಗಿ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಹುಡುಕಿ ಉತ್ತರಗಳನ್ನು ಕಂಡುಕೊಳ್ಳುತ್ತಾರೆ. ಹೆಣ್ಣುಮಕ್ಕಳು ತಮ್ಮ ತೀರಾ ಖಾಸಗಿಯಾದ ಸಂಗತಿಗಳನ್ನು ಕೂಡ ಮೊಬೈಲ್ ಇಂಟರ್ನೆಟ್ ಮೂಲಕ ಹುಡುಕುತ್ತಾರೆ. ಈ ಮೂಲಕ, ಇಂಟರ್ನೆಟ್ ಮಹಿಳೆಯರ ಜೀವನದಲ್ಲಿ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ, ಅವರ ಜ್ಞಾನವನ್ನು ವಿಸ್ತರಿಸಲು ಮತ್ತು ದೈನಂದಿನ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಇನ್ನೂ ಕೆಲವು ಸಂಗತಿಗಳನ್ನು ಅವರು ಸರ್ಚ್ ಮಾಡುತ್ತಾರಾದರೂ ಅವುಗಳನ್ನೆಲ್ಲಾ ಅವರು ಬಹಿರಂಗಪಡಿಸುವುದಿಲ್ಲ.. ನಾವೂ ಹೇಳಲಾಗದು!


