ಅರೆ ಆಯಸ್ಸಿನಲ್ಲಿ ಅಥವಾ ಆತ್ಮಹತ್ಯೆ, ಅಪಘಾತದಲ್ಲಿ ಸಾವನ್ನಪ್ಪಿದವರು ದೆವ್ವವಾಗ್ತಾರೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಕೆಲ ಘಟನೆಗಳು ಇದಕ್ಕೆ ಸಾಕ್ಷ್ಯವಾಗ್ತವೆ. ನಾರ್ವೆ ರಾಜಕುಮಾರಿ ಕೂಡ ಇದನ್ನು ಹೌದು ಎನ್ನುತ್ತಿದ್ದಾಳೆ. ತನ್ನ ಅನುಭವ ಹಂಚಿಕೊಂಡಿದ್ದಾಳೆ. 

ಕಗ್ಗತ್ತಲೆಯಲ್ಲಿ ವಿಚಿತ್ರ ಆಕಾರ ನಿಮ್ಮ ಮುಂದೆ ಬಂದ್ರೆ ಮೈ ನಡುಗುತ್ತೆ. ಒಂದಲ್ಲ ಎರಡಲ್ಲ ಪ್ರತಿ ದಿನ ಅದು ನಿಮಗೆ ಮಾತ್ರ ಕಾಣಿಸಿಕೊಂಡು, ಮತ್ತ್ಯಾರ ಕಣ್ಣಿಗೂ ಬೀಳ್ತಿಲ್ಲ ಅಂದ್ರೆ ಏನರ್ಥ. ಇದನ್ನು ಅನೇಕರು ಭ್ರಮೆ ಅಂದ್ರೆ ಮತ್ತೆ ಕೆಲವರು ಭೂತ, ದೆವ್ವ ಎನ್ನುತ್ತಾರೆ. ಈ ಭೂತದ ಕಾಟ ಬಡವ, ಶ್ರೀಮಂತ ಅಂತ ನೋಡೋದಿಲ್ಲ. ಮಹಲಿನಲ್ಲಿರುವ ರಾಜಕುಮಾರಿಯನ್ನೂ ಕಾಡಿದೆ ಅಂದ್ರೆ ನೀವು ನಂಬ್ಲೇಬೇಕು. 

ಪಿಶಾಚಿ (Devil), ಆತ್ಮಗಳ ಬಗ್ಗೆ ಭಾರತೀಯರು ಮಾತ್ರವಲ್ಲ ವಿದೇಶದಲ್ಲೂ ಜನರು ಮಾತನಾಡ್ತಾರೆ. ಈಗ ನಾರ್ವೆ (Norway) ಯ ರಾಜ ಹೆರಾಲ್ಡ್‌ನ ಮಗಳು ರಾಜಕುಮಾರಿ ಮಾರ್ಥಾ ಲೂಯಿಸ್ (Martha Louise) ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾಳೆ. ಅರೆ ವಯಸ್ಸಿನಲ್ಲಿ ಸಾವನ್ನಪ್ಪಿದ ವ್ಯಕ್ತಿ ಭೂತವಾಗಿ ಕಾಡ್ತಾನೆ ಎಂಬುದನ್ನು ನೀವು ಕೇಳಿರಬೇಕು. ಅದನ್ನು ರಾಜಕುಮಾರಿ ಮಾರ್ಥಾ ಲೂಯಿಸ್ ಸತ್ಯ ಎನ್ನುತ್ತಿದ್ದಾಳೆ. ತನ್ನ ಅನುಭವವನ್ನು ಹಂಚಿಕೊಂಡ ಆಕೆ, ದೀರ್ಘ ಸಮಯ ಈ ಭೂತದ ಕಾಟದಿಂದ ನಾನು ಭಯಗೊಂಡಿದ್ದೆ. ನನ್ನ ಮುಂದೆ ಕಾಣಿಸಿಕೊಳ್ತಿರೋದು ಏನು ಎಂಬುದು ನನಗೆ ಆರಂಭದಲ್ಲಿ ಗೊತ್ತಿರಲಿಲ್ಲ. ಕೊನೆಯಲ್ಲಿ ನಮ್ಮ ಅಜ್ಜ ವಿಷ್ಯ ಹೇಳಿದಾಗ್ಲೇ ನನಗೆ ಭೂತ ಕಾಡ್ತಿದೆ ಎಂಬುದು ಗೊತ್ತಾಯ್ತು ಎಂದು ಮಾರ್ಥಾ ಲೂಯಿಸ್ ಹೇಳಿದ್ದಾರೆ.

ಮಾದಕದ್ರವ್ಯದ ಸುನಾಮಿಗೆ ನಲುಗಿತೇ ಈಶಾನ್ಯ ಭಾರತವೆಂಬ ಸ್ವರ್ಗ?

ಮಾರ್ಥಾ ಲೂಯಿಸ್ ಗೆ ಈಗ 52 ವರ್ಷ ವಯಸ್ಸು. ಅವರು 14ನೇ ವಯಸ್ಸಿನಲ್ಲಿದ್ದಾಗ ಅವರಿಗೆ ಈ ಭಯಾನಕ ಅನುಭವ ಆಗಿದೆ. ಮಾಡರ್ನ್ ರಾಯಲ್ಟಿ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಮಾರ್ಥಾ ಲೂಯಿಸ್, ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಮಾರ್ಥಾ ಲೂಯಿಸ್ ಚಿಕ್ಕವಳಿರುವಾಗ ಆಕೆ ರೂಮಿಗೆ ದೆವ್ವವೊಂದು ಬರ್ತಿತ್ತಂತೆ. ಪ್ರತಿ ದಿನ ರಾತ್ರಿ ಆಕೆ ಕೋಣೆಯಲ್ಲಿ ದೆವ್ವ ಕಾಣಿಸಿಕೊಳ್ತಿತ್ತಂತೆ. ಈ ಬಗ್ಗೆ ಮಾರ್ಥಾ ಲೂಯಿಸ್ ಮನೆಯವರಿಗೆ ಹೇಳಿದ್ದಳಂತೆ. ಆದ್ರೆ ಅವರ ಕಣ್ಣಿಗೆ ಆ ದೆವ್ವ ಬೀಳ್ತಿರಲಿಲ್ಲ ಎನ್ನುತ್ತಾಳೆ ಮಾರ್ಥಾ. ರೂಮಿನಲ್ಲಿ ಕತ್ತಲೆ ಇರುತ್ತಿತ್ತು, ವ್ಯಕ್ತಿಯೊಬ್ಬ ನನ್ನನ್ನೇ ನೋಡ್ತಿದ್ದ. ಪ್ರತಿ ದಿನ ನನ್ನ ರೂಮಿಗೆ ಬರ್ತಿದ್ದ ಅಜ್ಜ, ಅಜ್ಜಿ ಅಥವಾ ಪಾಲಕರು, ಪರದೆ ತೆಗೆದು, ನೋಡು ಇಲ್ಲಿ ಏನೂ ಇಲ್ಲ ಎನ್ನುತ್ತಿದ್ದರು. ಅವರ ಕಣ್ಣಿಗೆ ಯಾವುದೇ ವ್ಯಕ್ತಿ ಕಾಣಿಸುತ್ತಿರಲಿಲ್ಲ ಎಂದು ಮಾರ್ಥಾ ಲೂಯಿಸ್ ಹೇಳಿದ್ದಾರೆ. 

ಆ ಸಮಯದಲ್ಲಿ ಮಾರ್ಥಾಗೆ ಭೂತ, ಪ್ರೇತಗಳ ಬಗ್ಗೆ ಹೆಚ್ಚಾಗಿ ತಿಳಿದಿರಲಿಲ್ಲ. ತನ್ನ ಅಲೌಕಿಕ ಅನುಭವದ ಬಗ್ಗೆ ತಂದೆಗೆ ಮಾರ್ಥಾ ಕೇಳಿದ್ದರು. ದಶಕಗಳ ನಂತರ ಮಾರ್ಥಾ ತಂದೆ, ಈಗ ಕಿಂಗ್ ಹೆರಾಲ್ಡ್ V ಕೋಣೆಯಲ್ಲಿ ಏನು ಕಾಣಿಸಿಕೊಳ್ತಾ ಇತ್ತು ಎಂಬುದನ್ನು ಹೇಳಿದರು.

ಮಾರ್ಥಾ ಲೂಯಿಸ್ ಕಣ್ಣಿಗೆ ಬೀಳ್ತಿದ್ದ ಭೂತ ಯಾವುದು? : ಮಾರ್ಥಾ ಕಣ್ಣಿಗೆ ಬೀಳ್ತಿದ್ದ ಭೂತ ಹಿಟ್ಲರನ ಬಲಗೈ ಬಂಟ ರಾಡಿಸ್. 1940ರ ಆಕ್ರಮಣದ ನಂತರ ನಾರ್ವೆಯಲ್ಲಿ ಐಷಾರಾಮಿ ಜೀವನ ನಡೆಸಿದ ರಾಡಿಸ್, ನಂತರ ಜನರಲ್ ಹುದ್ದೆಗೆ ಏರಿದ್ದ. ಮೇ 8, 1945 ರಂದು ನಾರ್ವೆ ನಾಜಿಗಳ ವಶವಾದ ನಂತರ, ರಾಡಿಸ್, ಆತ್ಮಹತ್ಯೆ ಮಾಡಿಕೊಂಡಿದ್ದ. ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದ. ಆತ ಸೋಫಾ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ. 

ಹತ್ಯೆ ಯತ್ನದಿಂದ ಚುನಾವಣೆಯಲ್ಲಿ ಟ್ರಂಪ್‌ ಪರ ಅನುಕಂಪದ ಅಲೆ? ಮಸ್ಕ್‌, ಬೆಜೋಸ್‌ ಬೆಂಬಲ

ಆತನ ಸಾವಿನ ಕೋಣೆಯನ್ನೇ ಮಾರ್ಥಾ ಲೂಯಿಸ್ ಗೆ ನೀಡಲಾಗಿತ್ತು. ಮಾರ್ಥಾ ತನ್ನ 14ನೇ ವಯಸ್ಸಿನಲ್ಲಿ ಆ ಕೋಣೆ ಸೇರಿದ್ದಳು. ಪ್ರತಿ ದಿನ ರಾತ್ರಿ ಈ ವಿಚಿತ್ರ ಅನುಭವ ಆಕೆಗೆ ಆಗ್ತಿತ್ತು. ಅನೇಕ ಬಾರಿ ರಾಡಿಸ್ ಕತ್ತು ಹಿಸುಕುವ ಪ್ರಯತ್ನ ನಡೆಸಿದ್ದ ಎಂದು ಮಾರ್ಥಾ ಹೇಳಿದ್ದಾರೆ.