ಪ್ರದರ್ಶನವೊಂದರ ವೇಳೆ ಕರಡಿಯೊಂದು ತನ್ನ ಪಾಲಕನ ಮೇಲೆಯೇ ದಾಳಿ ಮಾಡಿದೆ. ಇತರ ಸಿಬ್ಬಂದಿ ಪಾಲಕನನ್ನು ರಕ್ಷಿಸಿದ್ದು, ಈ ಘಟನೆಯ ವೀಡಿಯೋ ವೈರಲ್ ಆಗಿ ಪ್ರಾಣಿಗಳನ್ನು ಪ್ರದರ್ಶನಕ್ಕೆ ಬಳಸುವ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
ಚೀನಾದ ಮೃಗಾಲಯವೊಂದರಲ್ಲಿ ತಾನ ಪಾಲನೆ ಮಾಡ್ತಿದ್ದ ಸಾಕಿದವನ ಮೇಲೆಯೇ ಕರಡಿಯೊಂದು ದಾಳಿ ಮಾಡಿದಂತಹ ಘಟನೆ ನಡೆದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಚೀನಾದ ಹ್ಯಾಂಗ್‌ಝೌ ಸಫಾರಿ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ನಿನ್ನೆ ಇಲ್ಲಿ ಪ್ರದರ್ಶನವೊಂದರ ವೇಳೆ ಕರಡಿ ಅದರ ಕೇರ್ ಟೇಕರ್ ಮೇಲೆ ದಾಳಿ ಮಾಡಿದೆ. ನಂತರ ಪಾರ್ಕ್ ಸಿಬ್ಬಂದಿ ಕರಡಿಯನ್ನು ಪ್ರದರ್ಶನದಿಂದ ಹೊರಗೆ ತೆಗೆದಿದ್ದಾರೆ.
Volcaholic(@volcaholic1)ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು 21 ಸೆಕೆಂಡ್‌ಗಳ ವೀಡಿಯೋದಲ್ಲಿ ಕಪ್ಪು ಬಣ್ಣದ ಬೃಹತ್ ಕರಡಿಯನ್ನು ಮೃಗಾಲಯದ ಸಿಬ್ಬಂದಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುವುದನ್ನು ನೋಡಬಹುದಾಗಿದೆ. ವೈರಲ್ ಆದ ವೀಡಿಯೋದಲ್ಲಿ ಮೊದಲಿಗೆ ಕರಡಿ ತನ್ನ ಪಾಲನೆ ಮಾಡುವವನ ಮೇಲೆ ಮುಗಿಬಿದ್ದಿದೆ. ಈ ವೇಳೆ ಕೈಯಲ್ಲಿ ಕೋಲು ದೊಣ್ಣೆ ಹಾಗೂ ಕುರ್ಚಿಯನ್ನು ಹಿಡಿದುಕೊಂಡು ಕರಡಿಯ ಬಾಯಿಯಿಂದ ತಮ್ಮ ಸಹೋದ್ಯೋಗಿಯನ್ನು ಬಿಡಿಸಿಕೊಳ್ಳುವುದಕ್ಕೆ ಯತ್ನಿಸುವುದನ್ನು ಕಾಣಬಹುದಾಗಿದೆ. ಕಡೆಗೂ ಅಲ್ಲಿದ್ದ ಸಿಬ್ಬಂದಿ ಕರಡಿಯ ಬಿಗಿತದಿಂದ ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ ಕರಡಿ ಅಲ್ಲಿದ್ದ ಮತ್ತೊಬ್ಬರ ಮೇಲೆ ಮುಗಿಬೀಳಲು ಮುಂದಾಗಿದ್ದು, ಆಗ ಅದರ ಪಾಲಕ ಮತ್ತೊಮ್ಮೆ ಹೋಗಿ ಅದನ್ನು ಹಿಡಿದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಆತನ ಮೇಲೆ ಕರಡಿ ಮತ್ತೆ ಅಟ್ಯಾಕ್ ಮಾಡಿದೆ. ನೀಲಿ ಬಣ್ಣದ ಗಿಳಿಯೂ ಕೂಡ ಒಬ್ಬ ಸಿಬ್ಬಂದಿಯ ಕೈಯಲ್ಲಿ ಕುಳಿತುಕೊಂಡು ಅತ್ತಿತ್ತ ಹಾರುವುದಕ್ಕೆ ನೋಡುವುದನ್ನು ಕಾಣಬಹುದಾಗಿದೆ.
ಇದನ್ನೂ ಓದಿ: ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ನೈಟ್ ಕ್ಲಬ್ ಮುಂದೆ ಕುಡಿದ ಮತ್ತಿನಲ್ಲಿ ರಾಪಿಡೋ ಗಾಡಿಯಿಂದ ಕೆಳಗೆ ಬಿದ್ದ ಹುಡುಗಿ
ಘಟನೆಯಲ್ಲಿ ಕರಡಿಯ ಪಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ವರದಿಯಾಗಿದೆ. ಮೃಗಾಲಯದ ಕೀಪರ್ ಕರಡಿಗೆ ತಿನ್ನುವುದಕ್ಕೆಂದು ತೆಗೆದುಕೊಂಡು ಹೋದ ಆಹಾರದ ಸುವಾಸನೆಗೆ ಟ್ರಿಗರ ಆಗಿ ಕರಡಿ ಹೀಗೆ ಮಾಡಿರಬಹುದು ಎಂದು ತಜ್ಞರು ಹೇಳಿದ್ದಾರೆ. ಘಟನೆಯ ವೀಡಿಯೋ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗ್ತಿದ್ದು, 92 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಹಲವರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಅನೇಕರು ಈ ಜಗಳ ಮಧ್ಯೆ ಬಂದ ಗಿಳಿಯ ಬಗ್ಗೆ ಹಲವು ಕಾಮೆಂಟ್ ಮಾಡಿದ್ದಾರೆ. ಈ ಗಿಳಿ ಲೆಟ್ಸ್ ಗೂ ಲೆಟ್ಸ್ ಗೋ ಎಂದು ಹೇಳುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಈ ಪ್ರಾಣಿಗಳು ಪ್ರದರ್ಶನಕ್ಕೆ ಇರುವಂಹ ಪ್ರಾಣಿಗಳಲ್ಲ, ಅದು ಪುಟ್ಟ ಮರಿ ಅದನ್ನೇಕೆ ಮೃಗಾಲಯದಲ್ಲಿ ಪ್ರದರ್ಶನ ಮಾಡುವುದಕ್ಕೆ ಇಟ್ಟಿದ್ದೀರಾ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಮೃಗಾಲಯದ ಸಿಬ್ಬಂದಿಯ ಕ್ರೌರ್ಯದ ವರ್ತನೆಯೇ ಅದು ಆ ರೀತಿ ವರ್ತಿಸುವುದಕ್ಕೆ ಕಾರಣವಿರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಬ್ಯಾಗಲ್ಲಿ ಹೃದಯ ಇಟ್ಕೊಂಡು ಬದುಕುಳಿದಿರುವ ಜಗತ್ತಿನ ಏಕೈಕ ಮಹಿಳೆ ಈಕೆ
ಕರಡಿಯನ್ನು ಹಿಮ್ಮೆಟ್ಟಿಸುವುದಕ್ಕೆ ಮತ್ತೆ ಬರುವ ಮೃಗಾಲಯದ ಕೀಪರ್ ಪ್ರಾಣಿಗಳೊಂದಿಗೆ ಕೆಲಸ ಮಾಡುವುದಕ್ಕೆ ಯೋಗ್ಯನಲ್ಲ,. ಕೀಪರ್ ಸಮೀಪಿಸುತ್ತಿದ್ದಂತೆಯೇ ಕರಡಿಯ ದೇಹದ ಭಾಷೆ ಬದಲಾಗುತ್ತದೆ. ಅದು ಭಯ ಹಾಗೂ ರಕ್ಷಣೆಣಾತ್ಮಕವಾಗಿದೆ. ಮೊದಲ ದಾಳಿಯೂ ರಕ್ಷಣಾತ್ಮಕವಾಗಿತ್ತೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕರಡಿ ದಾಳಿ ಮಾಡಿದ ನಂತರ ಅವರು ಅದನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ನೋಡಿದರೆ ಕರಡಿ ದಾಳಿ ಮಾಡಿರುವುದರಲ್ಲಿ ಆಶ್ಚರ್ಯವಿಲ್ಲ. ಅದು ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.


