ಜಗತ್ತಿನೆಲ್ಲೆಡೆ ಹಲವು ವಿಚಿತ್ರ ಸಂಪ್ರದಾಯಗಳಿಗೆ ಕೆಲವು ಸ್ಥಳಗಳಲ್ಲಿ ನಡೆಯುವ ಸಂಪ್ರದಾಯವನ್ನು ನೋಡಿದರೆ ಎಷ್ಟೊಂದು ವಿಚಿತ್ರ ಅನಿಸುವುದು. ಅದೇ ರೀತಿ ಇಲ್ಲೊಂದು ಕಡೆ ಮದುವೆಗೂ ಮುನ್ನ ನಡೆಯುವ ವಿಚಿತ್ರ ಸಂಪ್ರದಾಯ ನೋಡಿದರೆ ನೀವು ಹುಡುಗಿಯಾಗಿದ್ದರೆ ಮದುವೆಗೂ ಮೊದಲು ನೀವು ಎಸ್ಕೇಪ್ ಆಗೋದು ಗ್ಯಾರಂಟಿ.

ಕೆಲವು ಜನಾಂಗದ ಮದುವೆಯಲ್ಲಿ ಹಲವು ವಿಚಿತ್ರ ಸಂಪ್ರದಾಯಗಳು ನಡೆಯುತ್ತವೆ.. ಒಂದು ಸಮುದಾಯದಿಂದ ಇನ್ನೊಂದು ಸಮುದಾಯಕ್ಕೆ ಒಂದು ಊರಿನಿಂದ ಮತ್ತೊಂದು ಊರಿಗೆ ಒಂದು ಜನಾಂಗದಿಂದ ಇನ್ನೊಂದು ಜನಾಂಗದ ಮಧ್ಯೆ ಹಲವು ವ್ಯತ್ಯಾಸಗಳು ಹಲವು ವಿಚಿತ್ರ ಸಂಪ್ರದಾಯಗಳಿವೆ. ನೂರಾರು ಜಾತಿಗಳು, ಬುಡಕಟ್ಟು ಸಮುದಾಯಗಳು, ವಿವಿಧ ಧರ್ಮಗಳನ್ನು ಹೊಂದಿರುವ ಭಾರತದಲ್ಲೇ ಮದುವೆಯಲ್ಲಿ ವಿಭಿನ್ನ ಎನಿಸುವ ನೂರಾರು ಸಂಪ್ರದಾಯಗಳಿರುತ್ತವೆ. ಹಾಗೆಯೇ ಇಲ್ಲೊಂದು ಕಡೆ ನಡೆಯುವ ವಿಚಿತ್ರ ಸಂಪ್ರದಾಯ ನೋಡಿದರೆ, ನೀವು ಹುಡುಗಿಯಾಗಿದ್ದಲ್ಲಿ, ಇಲ್ಲಿ ಮದುವೆಯಾಗುವುದಕ್ಕೆ ಹೆದರುತ್ತೀರಿ.

ಇದನ್ನೂ ಓದಿ: ಭಾರತೀಯ ಸ್ಲೀಪರ್ ಕೋಚ್‌ ಬಸ್‌ನ ಐಷಾರಾಮಿ ಸವಲತ್ತಿಗೆ ಫಿದಾ ಆದ ವಿದೇಶಿಗ: ವೀಡಿಯೋ ವೈರಲ್

ಹೌದು ಚೀನಾದ ಜನಾಂಗವೊಂದರಲ್ಲಿ ಮದುವೆಗೂ ಮೊದಲು ವಧುವಿನ ಹಲ್ಲುಗಳನ್ನು ಸುತ್ತಿಗೆಯಿಂದ ಗುದ್ದಿ ಉದುರಿಸಲಾಗುತ್ತದೆ. ಮದುವೆಗೆ ಮೊದಲು ವಧುವಿನ ಒಂದು ಅಥವಾ ಎರಡು ಹಲ್ಲುಗಳನ್ನು ಸುತ್ತಿಗೆಯಿಂದ ಕುಟ್ಟಿ ಉದುರಿಸಲಾಗುತ್ತದೆ. ಇದು ಚೀನಾದ ಗೆಲವೋ ಎಂಬ ಜನಾಂಗದಲ್ಲಿರುವ ಮದುವೆಯ ವಿಚಿತ್ರ ಆಚರಣೆಯಾಗಿದೆ. ವಧುವಿನ ಹಲ್ಲು ಉದುರಿಸುವುದಷ್ಟಕ್ಕೆ ಈ ವಿಚಿತ್ರ ಸಂಪ್ರದಾಯ ನಿಲ್ಲುವುದಿಲ್ಲ, ಉದುರಿಸಿದ ಹಲ್ಲಿನ ಜಾಗದಲ್ಲಿ ಶ್ವಾನಗಳ ಹಲ್ಲುಗಳನ್ನು ಕೂರಿಸಲಾಗುತ್ತದೆ. ಈ ಸಂಪ್ರದಾಯವನ್ನು ಮಾಡದೇ ಹೋದರೆ ವರನ ಕುಟುಂಬಕ್ಕೆ ಹಾನಿಯಾಗುತ್ತದೆ. ಕೆಲವೊಮ್ಮೆ ಈ ದಂಪತಿಗೆ ಮಕ್ಕಳು ಕೂಡ ಆಗುವುದಿಲ್ಲ ಎಂದು ಈ ಗೆಲವೋ ಸಮುದಾಯದ ಜನರು ನಂಬುತ್ತಾರೆ. ಹೀಗಾಗಿ ಮದುವೆಗೂ ಮೊದಲು ಸುತ್ತಿಗೆ ತಂದು ವಧುವಿನ ಹಲ್ಲುಗಳನ್ನು ಕುಟ್ಟಿ ತೆಗೆಯಲಾಗುತ್ತದೆ.

ಈ ಸಂಪ್ರದಾಯ ಹೇಗೆ ನಡೆಯುತ್ತದೆ?

ಮೊದಲಿಗೆ ಒಂದು ಪಾತ್ರದಲ್ಲಿ ಮದ್ಯ(ಸರಾಯಿ) ಸಿದ್ಧಪಡಿಸಲಾಗುತ್ತದೆ. ನಂತರ ಹುಡುಗಿಯ ತಾಯಿ ಕಡೆಯ ಸೋದರ ಅಂದರೆ ಹುಡುಗಿಯ ಸೋದರ ಮಾವನನ್ನು ಬಹಳ ಅದ್ದೂರಿಯಿಂದ ಬರ ಮಾಡಿಕೊಳ್ಳಲಾಗುತ್ತದೆ. ನಂತರ ಈ ಸೋದರ ಮಾವ ಹುಡುಗಿಯ ಒಂದು ಅಥವಾ ಎರಡು ಹಲ್ಲುಗಳನ್ನು ಸಣ್ಣ ಸುತ್ತಿಗೆಯಿಂದ ಕುಟ್ಟಿ ತೆಗೆದು ಬಿಡುತ್ತಾರೆ. ನಂತರ ಹಲ್ಲನ್ನು ಕಿತ್ತು ತೆಗೆದಿರುವುದರಿಂದ ಆಗಿರುವ ಗಾಯ ಒಣಗುವುದಕ್ಕೆ ವಿಶೇಷವಾದ ಔಷಧಿಯನ್ನು ಸಿಂಪಡಿಸಲಾಗುತ್ತದೆ. ಒಂದು ವೇಳೆ ಈ ಸಂಪ್ರದಾಯವನ್ನು ಆ ಗೆಲವೋ ಸಂಪ್ರದಾಯದ ಹೆಣ್ಣೊಬ್ಬಳು ಪಾಲಿಸುವುದಕ್ಕೆ ಒಪ್ಪದೇ ಹೋದರೆ ಅಕೆಯನ್ನು ಸಮುದಾಯದಲ್ಲಿ ಅವಹೇಳನ ಮಾಡಲಾಗುತ್ತದೆ. ಅಲ್ಲದೇ ಕುಟುಂಬದ ಹಾಗೂ ಸಮುದಾಯದ ಜನರ ವ್ಯಾಪಕ ಟೀಕೆಗೆ ಗುರಿಯಾಗಬೇಕಾಗುತ್ತದೆ. ಆದರೂ ಕೂಡ ಇತ್ತೀಚೆಗೆ ಈ ವಿಚಿತ್ರ ಸಂಪ್ರದಾಯ ಕಡಿಮೆಯಾಗಿದೆ. ಆದರೂ ಕೆಲವು ಕಡೆಗಳಲ್ಲಿ ಇದು ಇನ್ನೂ ಆಚರಣೆಯಲ್ಲಿದೆ.

ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಬಸ್ 3 ಕಾರುಗಳ ಮಧ್ಯೆ ಸರಣಿ ಅಪಘಾತ : ನಾಲ್ವರು ಬೆಂಕಿಗಾಹುತಿ

ಈ ಗೆಲವೋ ಸಮುದಾಯವೂ ಚೀನಾ ಹಾಗೂ ವಿಯೆಟ್ನಾಂನಲ್ಲಿರುವ ಜನಾಂಗೀಯ ಸಮುದಾಯವಾಗಿದೆ. 2021ರಲ್ಲಿ ಚೀನಾದಲ್ಲಿ ಈ ಸಮುದಾಯದ ಜನಸಂಖ್ಯೆಯೂ 6,77,000ಕ್ಕಿಂತಲೂ ಹೆಚ್ಚಿತ್ತು.