ಕಮಲಾ ಹ್ಯಾರಿಸ್‌ ಅವರೇನಾದರೂ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದರೆ 3ಮೇ ವಿಶ್ವಸಮರ ಸಂಭವಿಸಲಿದೆ. ಅಮೆರಿಕದ ಸಾವು ಖಚಿತ  ಎಂದು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಭವಿಷ್ಯ ನುಡಿದಿದ್ದಾರೆ.

ವಾಷಿಂಗ್ಟನ್‌: ’ತೀವ್ರ ಉದಾರವಾದಿಯಾಗಿರುವ ಡೆಮಾಕ್ರೆಟ್‌ ಪಕ್ಷದ ಸಂಭವನೀಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರೇನಾದರೂ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದರೆ 3ಮೇ ವಿಶ್ವಸಮರ ಸಂಭವಿಸಲಿದೆ. ದೇಶದಲ್ಲಿ ಅಪರಾಧ, ಅವ್ಯವಸ್ಥೆ, ಅಪಾಯಕಾರಿ ಸಂಗತಿಗಳು ತಾರಕಕ್ಕೇರಿ ಅಮೆರಿಕದ ಸಾವು ಖಚಿತ’ ಎಂದು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಭವಿಷ್ಯ ನುಡಿದಿದ್ದಾರೆ.

ಶನಿವಾರ ಮಿನ್ನೆಸೋಟಾದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಟ್ರಂಪ್‌, ‘ನಾನು ಅಧಿಕಾರಕ್ಕೆ ಏರಿದ ಮೊದಲ ದಿನವೇ ಅಕ್ರಮ ವಲಸಿಗರ ಪ್ರವೇಶಕ್ಕೆ ನೆರವಾಗುತ್ತಿರುವ ಎಲ್ಲಾ ಮುಕ್ತ ಗಡಿ ಪ್ರದೇಶಗಳನ್ನೂ ಮುಚ್ಚುತ್ತೇನೆ. ದೇಶದಲ್ಲಿ ಕಾನೂನು, ಸುವ್ಯವಸ್ಥೆ ಮತ್ತು ನ್ಯಾಯವನ್ನು ಪುನರ್‌ಸ್ಥಾಪಿಸುತ್ತೇನೆ’ ಎಂದು ಭರವಸೆ ನೀಡಿದರು. ಇದೇ ವೇಳೆ ಕೌಂಟಿ ಡಿಸ್ಟ್ರಿಕ್ಟ್‌ ಅಟಾರ್ನಿಯಾಗಿ ಕಮಲಾ ಸ್ಯಾನ್‌ಫ್ರಾನ್ಸಿಸ್ಕೋವನ್ನು ನಾಶಮಾಡಿದರು. ಅಧ್ಯಕ್ಷರಾಗಿ ಆಯ್ಕೆಯಾದರೆ ಅವರು ಅಮೆರಿಕವನ್ನೂ ನಾಶ ಮಾಡುತ್ತಾರೆ’ ಎಂದು ಟ್ರಂಪ್‌ ಎಚ್ಚರಿಸಿದರು.

ನೇತಾಜಿ ದೇಹದ ಅವಶೇಷ ಜಪಾನ್‌ನಿಂದ ತರಿಸಿ, ಸತ್ಯ ಕಡತಗಳಿಂದ ಬಹಿರಂಗ: ಮೋದಿಗೆ ಮೊಮ್ಮಗ ಆಗ್ರಹ

‘ಮಾಧ್ಯಮಗಳು ಕಮಲಾರನ್ನು ಬ್ರಿಟನ್‌ನ ಮಾಜಿ ಪ್ರಧಾನಿ ಮಾರ್ಗರೆಟ್‌ ಥ್ಯಾಚರ್ ರೀತಿ ಬಿಂಬಿಸಲು ಯತ್ನಿಸುತ್ತಿವೆ. ಆದರೆ ಅಂಥದ್ದೆಲ್ಲಾ ಆಗುವುದಿಲ್ಲ. ಒಂದು ವೇಳೆ ಕಮಲಾ ಆಯ್ಕೆಯಾದರೆ ದೇಶದಲ್ಲಿ ಇನ್ನೂ ನಾಲ್ಕು ವರ್ಷ ತೀವ್ರಗಾಮಿತನ, ದುರ್ಬಲ ಆಡಳಿತ, ವೈಪಲ್ಯ ಮತ್ತು ಸಂಭವನೀಯ ಮೂರನೇ ವಿಶ್ವಯುದ್ಧ ಸಂಭವಿಸಲಿದೆ’ ಎಂದು ಟ್ರಂಪ್ ಎಚ್ಚರಿಸಿದರು.

ಟ್ರಂಪ್‌ ಜಯ ಖಚಿತ: ಮಹಿಳಾ ಜ್ಯೋತಿಷಿ ಭವಿಷ್ಯ
ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡೆನ್‌, ಅಧ್ಯಕ್ಷೀಯ ರೇಸ್‌ನಿಂದ ಹಿಂದೆ ಸರಿಯುತ್ತಾರೆ ಎಂದು ಖಚಿತವಾಗಿ ಭವಿಷ್ಯ ನುಡಿದಿದ್ದ ಆ್ಯಮಿ ಟ್ರಿಪ್‌, ದೇಶದ ಮುಂದಿನ ಅಧ್ಯಕ್ಷರಾಗಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಆಯ್ಕೆ ಖಚಿತ ಎಂದು ಹೇಳಿದ್ದಾರೆ.

ಅಯೋಧ್ಯೆ ಮಸೀದಿ ಜಮೀನು ನನ್ನದು ಎಂದು ಮಹಿಳೆ ದೂರು, ಸುಪ್ರೀಂ ಕೋರ್ಟಿಗೆ ಹೋಗಲು ನಿರ್ಧಾರ

ಟ್ರಂಪ್‌ ವೃತ್ತಿಯಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಮುಂದಿನ ಚುನಾವಣಾ ಪ್ರಚಾರದ ಸಮಯದಲ್ಲಿ ಅವರು ಇನ್ನಷ್ಟು ವಿಶೇಷ ಘಟನೆಗಳಿಗೆ ಸಾಕ್ಷಿಯಾಗಬಹುದು ಎನ್ನುವ ಮೂಲಕ, ಇತ್ತೀಚೆಗೆ ನಡೆದು ಗುಂಡಿನ ದಾಳಿಯ ರೀತಿಯ ಘಟನೆಗಳು ನಡೆಯುವ ಸಾಧ್ಯತೆ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ.

ಜು.21ರಂದು ಬೈಡನ್‌ ಅಧ್ಯಕ್ಷೀಯ ಹುದ್ದೆ ರೇಸ್‌ನಿಂದ ಹಿಂದೆ ಸರಿಯಲಿದ್ದಾರೆ ಎಂದು ಆ್ಯಮಿ ಖಚಿತವಾಗಿ ಹೇಳಿದ್ದರು. ಅಲ್ಲದೆ ಕಮಲಾ ಹ್ಯಾರಿಸ್‌ ಅವರೇ ಡೆಮಾಕ್ರೆಟ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗುವುದೂ ಖಚಿತ ಎಂದಿದ್ದರು.