ಪಾಕಿಸ್ತಾನದಲ್ಲಿ ಸತತ ಭೂಕಂಪಗಳು ಸಂಭವಿಸುತ್ತಿರುವುದು ಅಣ್ವಸ್ತ್ರ ಪರೀಕ್ಷೆಯ ಅನುಮಾನಗಳನ್ನು ಹುಟ್ಟುಹಾಕಿದೆ. ಮೂರು ದಿನಗಳಲ್ಲಿ ಮೂರು ಭೂಕಂಪಗಳು ಸಂಭವಿಸಿದ್ದು, ಪರಮಾಣು ವಿಕಿರಣ ಸೋರಿಕೆಯ ಸುದ್ದಿಯೂ ಹರಿದಾಡುತ್ತಿದೆ. ವಿಕಿರಣ ಸೋರಿಕೆಯಿಂದಾಗಿ ಜನರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂಬ ವರದಿಗಳಿವೆ.

 ಭಾರತದ ಸೇನೆ ನಿನ್ನೆ ನೂರ್ ಖಾನ್ ವಾಯುನೆಲೆ ಮೇಲೆ ದಾಳಿ ನಡೆಸಿತ್ತು. ಭಾರತೀಯ ಸಶಸ್ತ್ರ ಪಡೆಗಳು ರಫೀಕಿ, ಮುರಿದ್, ನೂರ್ ಖಾನ್, ಪಂಜಾಬ್‌ನ ಚುನಿಯನ್ ಮತ್ತು ಸುಕ್ಕೂರ್‌ನಲ್ಲಿರುವ ಪಾಕಿಸ್ತಾನದ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಸಂದರ್ಭದಲ್ಲಿ ಉಗ್ರರ ನೆಲೆ ಛಿದ್ರವಾಗುವುದರ ಜೊತೆಗೆ, ಭೂಕಂಪವೂ ಸಂಭವಿಸಿತ್ತು. ಇದು ಭಾರತಕ್ಕೆ ಪ್ರಕೃತಿ ನೀಡ್ತಿರುವ ಕೊಡುಗೆ ಎಂದೇ ಬಣ್ಣಿಸಲಾಗುತ್ತಿದೆ. ಇದಾದ ಬಳಿಕವೂ ಮತ್ತೆ ಭೂಕಂಪನ ಸಂಭವಿಸಿತ್ತು. ಇದೀಗ ಇಂದು ಪಾಕಿಸ್ತಾನದ ಕೆಲವು ಭಾಗಗಳಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಪಾಕಿಸ್ತಾನ ತನ್ನ ಬಳಿ ಅಣ್ವಸ್ತ್ರ ಇದೆ ಎಂದು ಹೇಳುತ್ತಲೇ ಬಂದಿದೆ. ಆದರೆ ಸದ್ಯ ಅದನ್ನು ಭಾರತದ ಮೇಲೆ ಪ್ರಯೋಗ ಮಾಡುವುದಿಲ್ಲ ಎಂದು ಈಚೆಗಷ್ಟೇ ಪ್ರಧಾನಿ ಹೇಳಿದ್ದರು. ಆದರೆ, ಇದೀಗ ಪದೇ ಪದೇ ಭೂಕಂಪನ ಆಗುತ್ತಿರುವುದಕ್ಕೂ, ಈ ಅಣ್ವಸ್ತ್ರಕ್ಕೂ ಸಂಬಂಧ ಇದೆಯೇ ಎನ್ನುವ ಗುಮಾನಿ ಶುರುವಾಗಿದೆ. ಭೂಕಂಪದ ಪರಿಣಾಮವಾಗಿ, ಪಾಕಿಸ್ತಾನ ಪರಮಾಣು ಪರೀಕ್ಷೆ ನಡೆಸಿದೆ ಎಂದು ಹಲವಾರು ಮಾಧ್ಯಮ ವರದಿಗಳಾಗುತ್ತಿವೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪಿರ್ ಜೊಂಗಲ್ ಬಳಿ ಭಾರತೀಯ ಕಾಲಮಾನ ಮಧ್ಯಾಹ್ನ 1:26 ಕ್ಕೆ ಭೂಕಂಪ ಸಂಭವಿಸಿದೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (ಎನ್‌ಸಿಎಸ್) ನಿರ್ದೇಶಕರು ತಿಳಿಸಿದ್ದಾರೆ. ಇದಾದ ಬಳಿಕ, ಪದೇ ಪದೇ ಭೂಕಂಪ ಸಂಭವಿಸುತ್ತಿರುವುದರ ಹಿಂದೆ ಇರುವುದೇ ಬೇರೆ ಎನ್ನುವ ಗುಮಾನಿ ಶುರುವಾಗಿದೆ. 

ಪಾಕ್​ನಲ್ಲಿ ವಿಕಿರಣ ಸೋರಿಕೆ- ವೈದ್ಯಕೀಯ ಎಮರ್ಜೆನ್ಸಿ? ಕದನ ವಿರಾಮದ ಘನಘೋರ ಸತ್ಯ ಬಯಲು?

 ಮೂರು ದಿನಗಳ ಅವಧಿಯಲ್ಲಿ ಪಾಕಿಸ್ತಾನವನ್ನು ಅಪ್ಪಳಿಸಿದ ಮೂರನೇ ಭೂಕಂಪವಾಗಿದ್ದು, ಭಾರತದೊಂದಿಗೆ ಸಶಸ್ತ್ರ ಸಂಘರ್ಷದಲ್ಲಿ ತೊಡಗಿರುವ ನೆರೆಯ ದೇಶದಲ್ಲಿ ಕೆಲವು "ಅಸಾಮಾನ್ಯ ಚಟುವಟಿಕೆ" ನಡೆಯುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿದ್ದರೂ, ಇದು ಸತ್ಯಕ್ಕೆ ದೂರವಾದದ್ದು ಎನ್ನುತ್ತಿದ್ದಾರೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ನಿರ್ದೇಶಕರು. ಭೂಕಂಪದ ಕೇಂದ್ರ ಬಿಂದುವು ಭೂಕಂಪನ ಚಟುವಟಿಕೆಗೆ ಗುರಿಯಾಗುವ ಭೂವೈಜ್ಞಾನಿಕ ದೋಷ ರೇಖೆಯಾದ ಮೇನ್ ಸೆಂಟ್ರಲ್ ಥ್ರಸ್ಟ್‌ಗೆ ಹತ್ತಿರದಲ್ಲಿದೆ. ಮೇ 10 ರಂದು ಪಾಕಿಸ್ತಾನವು ಸತತ ಎರಡು ಭೂಕಂಪಗಳನ್ನು ಅನುಭವಿಸಿತು - ಬೆಳಿಗ್ಗೆ 4.7 ತೀವ್ರತೆಯ ಭೂಕಂಪದ ನಂತರ 4.0 ತೀವ್ರತೆಯ ಭೂಕಂಪ ಸಂಭವಿಸಿತು. ಇದಕ್ಕೂ, ಪರಮಾಣು ಪರೀಕ್ಷೆಗೂ ಸಂಬಂಧವಿಲ್ಲ ಎಂದಿದ್ದಾರೆ. ಆದರೆ, ಅಸಲಿಯತ್ತು ಏನು ಎನ್ನುವುದು ಇನ್ನಷ್ಟೇ ಬಯಲಾಗಬೇಕಿದೆ. 

 ಅದೇ ಇನ್ನೊಂದೆಡೆ, ಪಾಕಿಸ್ತಾನದಲ್ಲಿ ಪರಮಾಣು ವಿಕಿರಣ ಸೋರಿಕೆಯಾಗಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ವಿಕಿರಣ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನಿಗಳಿಗೆ ವಾಂತಿ, ತಲೆನೋವು ಮುಂತಾದ ಲಕ್ಷಣಗಳು ಕಂಡುಬಂದಿವೆ ಎನ್ನಲಾಗುತ್ತಿದೆ. ರೇಡಿಯೋಲಾಜಿಕಲ್ ಸೇಫ್ಟಿ ಬುಲೆಟಿನ್ ಎನ್ನುವ ನೋಟಿಸ್​ ಒಂದು ಪಾಕಿಸ್ತಾನದಿಂದ ಹೊರಕ್ಕೆ ಬಂದಂತೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಅದರಲ್ಲಿ ಸದ್ಯ ಪಾಕಿಸ್ತಾನದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಿಸಲಾಗಿದೆ ಎಂದು ತಿಳಿಸಲಾಗಿದೆ. ಉತ್ತರ ಪಾಕಿಸ್ತಾನದಲ್ಲಿ ವಿಕಿರಣ ಸೋರಿಕೆಯಾಗಿದೆ. ವಿನಾಶಕಾರಿಯಲ್ಲದ ಪರೀಕ್ಷೆಗೆ (NDT) ಬಳಸುವ ಇಂಡಿಯಮ್-192 ಕ್ಯಾಪ್ಸುಲ್ ವರ್ಗಾವಣೆಯ ಸಮಯದಲ್ಲಿ ಸಂಭವಿಸಿದ ಯಾಂತ್ರಿಕ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಇದರಲ್ಲಿ ತಿಳಿಸಲಾಗಿದೆ. 

ಪಾಕಿಗಳ ಮೇಲೆ ಪ್ರಕೃತಿಗೂ ಮುನಿಸು! ಉಗ್ರರ ನೆಲೆ ಛಿದ್ರಗೊಳ್ತಿದ್ದಂತೆಯೇ ಹಲವೆಡೆ ಭೂಕಂಪ...