ಲಡಾಖ್‌ನ ೧೯,೦೨೪ ಅಡಿ ಎತ್ತರದ ಉಮ್ಲಿಂಗ್ ಲಾ, ವಿಶ್ವದ ಅತಿ ಎತ್ತರದ ವಾಹನ ಚಾಲನಾ ರಸ್ತೆಯಾಗಿದೆ. ಚಿಸುಮ್ಲೆ-ಡೆಮ್‌ಚೋಕ್ ಸಂಪರ್ಕಿಸುವ ಈ ೫೨ ಕಿ.ಮೀ. ರಸ್ತೆ, ಪಾಕಿಸ್ತಾನದ ಖುಂಜೆರಾಬ್ ಪಾಸ್ ದಾಖಲೆ ಮುರಿದಿದೆ. ಕಠಿಣ ಹವಾಮಾನದ ನಡುವೆಯೂ ೨೦೨೧ರಲ್ಲಿ ನಿರ್ಮಾಣ ಪೂರ್ಣಗೊಂಡ ಈ ರಸ್ತೆ, ಭಾರತದ ಸಾಧನೆಯಾಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ, ಇಷ್ಟು ದಶಕಗಳ ಕಾಲ ಪಾಕಿಸ್ತಾನದ ಹೆಸರಿನಲ್ಲಿದ್ದ ದಾಖಲೆಯನ್ನು ಭಾರತ ಮುರಿದಿರುವ ವಿಷಯವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ವಿಶ್ವದ ಅತಿ ಎತ್ತರದ ವಾಹನ ಚಲಾಯಿಸಬಹುದಾದ ರಸ್ತೆಯ ಕಿರೀಟವನ್ನು ಈಗ ಭಾರತ ಹೊತ್ತುಕೊಂಡಿದೆ. ಪಾಕಿಸ್ತಾನದ ಖುಂಜೆರಾಬ್ ಪಾಸ್ ರಸ್ತೆ 15,397 ಅಡಿ ಎತ್ತರಕ್ಕೆ ಹೆಸರುವಾಸಿಯಾಗಿತ್ತು. ಇದು ವಿಶ್ವದ ನಂಬರ್ 1 ಅತಿ ಎತ್ತರದ ವಾಹನ ಚಲಾಯಿಸಬಹುದಾದ ರಸ್ತೆ ಎನ್ನಿಸಿಕೊಂಡಿತ್ತು. ಅದನ್ನೀಗ ಭಾರತ ಮುರಿದಿದೆ. ಭಾರತದ ಚಿಸುಮ್ಲೆ-ಡೆಮ್‌ಚೋಕ್ ರಸ್ತೆ ಈಗ ಅದನ್ನು ಮತ್ತು ಬೊಲಿವಿಯಾದ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ಸದ್ಯ, ವಿಶ್ವದ ಅತಿ ಎತ್ತರದ ವಾಹನ ಚಲಾಯಿಸಬಹುದಾದ ರಸ್ತೆಯ ಕಿರೀಟವು ಭಾರತದಲ್ಲಿದೆ. ಲಡಾಖ್‌ನಲ್ಲಿರುವ ಉಮ್ಲಿಂಗ್ ಲಾ 19,024 ಅಡಿ ಎತ್ತರದಲ್ಲಿದೆ. ಇದು ಚಿಶುಮ್ಲೆಯನ್ನು ಡೆಮ್‌ಚೋಕ್‌ಗೆ ಸಂಪರ್ಕಿಸುವ 52 ಕಿ.ಮೀ ರಸ್ತೆಯಾಗಿದ್ದು, ಭಾರತ ಮತ್ತು ಚೀನಾ ನಡುವಿನ ವಿವಾದಾತ್ಮಕ ಪ್ರದೇಶವಾದ ವಾಸ್ತವಿಕ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ನಿಖರವಾಗಿ ಸಂಪರ್ಕ ಹೊಂದಿದೆ. ರಸ್ತೆ ಪ್ರವಾಸ ಉತ್ಸಾಹಿಗಳಿಗೆ ಅದ್ಭುತ ಅನುಭವವಾಗಿದೆ ಮತ್ತು ಇದನ್ನು ನೋಡಲು ದೇಶ-ವಿದೇಶಗಳಿಂದ ಜನರು ಆಗಮಿಸುತ್ತಿದ್ದಾರೆ.
ನಾನು ವಾಪಸ್ ಬರ್ತೇನೋ ಗೊತ್ತಿಲ್ಲ, ಆದರೆ... ಯೋಧನ ಮಾತಿಗೆ ಜನರ ಕಂಬನಿ
ಈ ರಸ್ತೆಯ ನಿರ್ಮಾಣವು ಆಗಸ್ಟ್ 2021 ರಲ್ಲಿ ಪೂರ್ಣಗೊಂಡಿತು ಮತ್ತು ಡಿಸೆಂಬರ್ 29, 2021 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಉದ್ಘಾಟಿಸಲ್ಪಟ್ಟಿತು. ಈ ರಸ್ತೆ ಈಗ ವಿಶ್ವದ ಅತಿ ಎತ್ತರದ ವಾಹನ ಚಲಾಯಿಸಬಹುದಾದ ರಸ್ತೆಯಾಗಿದೆ ಮತ್ತು ಗಿನ್ನೆಸ್ ವಿಶ್ವ ದಾಖಲೆಗೆ ಸೇರಿದೆ. ಈ ಹಿಂದೆ, ಪಾಕಿಸ್ತಾನದ ಖುಂಜೆರಾಬ್ ಪಾಸ್ ರಸ್ತೆ 15,397 ಅಡಿ ಎತ್ತರಕ್ಕೆ ಹೆಸರುವಾಸಿಯಾಗಿತ್ತು. ಭಾರತದ ಚಿಸುಮ್ಲೆ-ಡೆಮ್‌ಚೋಕ್ ರಸ್ತೆ ಈಗ ಅದನ್ನು ಮತ್ತು ಬೊಲಿವಿಯಾದ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ಇನ್ನು ಅಷ್ಟು ಎತ್ತರಕ್ಕೆ ಅಗತ್ಯ ಸಾಧನಸಲಕರಣೆಗಳು, ಯಂತ್ರಗಳನ್ನು ಕೊಂಡೊಯ್ಯುವುದೇ ದೊಡ್ಡ ಸವಾಲಾಗಿದ್ದರೂ ಅದನ್ನು ನೆರವೇರಿಸಿರುವುದು ಭಾರತದ ಹೆಗ್ಗಳಿಕೆ. ಈ ಕುರಿತು ಯೋಜನೆಯ ಮುಖ್ಯ ಎಂಜಿನಿಯರ್ ಬ್ರಿಗೇಡಿಯರ್ ಡಿ.ಎಂ. ಪೂರ್ವಿಮತ್ ಅವರು, 'ಈ ಪ್ರದೇಶದಲ್ಲಿ ಬೇಸಿಗೆಯಲ್ಲಿ ಮೈನಸ್ 10-20 ತಾಪಮಾನವಿದ್ದರೆ, ಚಳಿಗಾಲದಲ್ಲಿ ಮೈನಸ್ 40ಕ್ಕಿಳಿಯುತ್ತದೆ. ಆಮ್ಲಜನಕದ ಪ್ರಮಾಣ ಕೂಡಾ ಸಾಮಾನ್ಯ ಪ್ರದೇಶಗಳಿಗಿಂತ ಶೇ.50ರಷ್ಟು ಕಡಿಮೆ ಇರುತ್ತದೆ. ಈ ವಾತಾವರಣದಿಂದಾಗಿ ಯಂತ್ರಗಳು ಹಾಗೂ ಮನುಷ್ಯರ ಶಕ್ತಿಯು ಅರ್ಧದಷ್ಟು ಕುಸಿಯುತ್ತದೆ. ಜೊತೆಗೆ ಯಂತ್ರ ಬಳಸುವವರೂ 10 ನಿಮಿಷಕ್ಕೊಮ್ಮೆ ಆಮ್ಲಜನಕ್ಕಾಗಿ ಕೆಳಗಿಳಿಯಬೇಕಿತ್ತು,' ಎಂದು ವಿವರಿಸಿದ್ದರು.
ಹದ್ದುಗಳಿಂದ ವೈರಿ ದೇಶದ ಡ್ರೋನ್ಗಳ ಬೇಟೆ- ಆಕಾಶದಲ್ಲೇ ಉಡೀಸ್: ರೋಚಕ ವಿಡಿಯೋ ವೈರಲ್


