Asim Munir: ಪಹಲ್ಗಾಮ್ ದಾಳಿ ಬಳಿಕ ಭಾರತದ ಕಠಿಣ ಕ್ರಮಗಳಿಂದ ಪಾಕಿಸ್ತಾನದಲ್ಲಿ ಆತಂಕ ಮನೆಮಾಡಿದೆ. ವರದಿಗಳ ಪ್ರಕಾರ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಕುಟುಂಬ ಸಮೇತ ನಾಪತ್ತೆಯಾಗಿದ್ದಾರೆ.

ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೇ ಭಾರತ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಇತ್ತ ಭಾರತದ ನಿರ್ಧಾರಗಳಿಂದ ಕಂಗಾಲು ಆಗಿರುವ ಭಿಕ್ಷುಕ ಪಾಕಿಸ್ತಾನ ತಮ್ಮ ಮೊಂಡಾಟವನ್ನು ಮುಂದುವರಿಸಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಕುಟುಂಬ ಸಮೇತ ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ. ಕೆಲ ವರದಿಗಳ ಪ್ರಕಾರ, ಅಸಿಮ್ ಮುನೀರ್ ತನ್ನ ಕುಟುಂಬವನ್ನು ಪ್ರೈವೇಟ್ ಏರ್‌ಕ್ರಾಫ್ಟ್ ಮೂಲಕ ಬ್ರಿಟನ್ ಅಥವಾ ನ್ಯೂ ಜರ್ಸಿಗೆ ಕಳುಹಿರುವ ಬಗ್ಗೆ ವರದಿಯಾಗಿದೆ. 

ಪಹಲ್ಗಾಮ್ ದಾಳಿ ನಡೆದ 48 ಗಂಟೆಯಲ್ಲಿಯೇ ಭಾರತ ಯುದ್ಧನೌಕೆ ಐಎನ್‌ಎಸ್ ಸೂರತ್‌ನಿಂದ ಕ್ಷಿಪಣಿ ಪರೀಕ್ಷೆಯನ್ನು ನಡೆಸುವ ಮೂಲಕ ಅರೇಬಿಯನ್ ಸಮುದ್ರದಲ್ಲಿರುವ ಶತ್ರುಗಳಿಗೆ ಖಡಕ್ ಸಂದೇಶವನ್ನು ರವಾನಿಸಿತ್ತು. ಭಾರತೀಯ ನೌಕಾಪಡೆಯ ಯುದ್ಧನೌಕೆಯು ಕ್ಷಿಪಣಿಯ ಮೂಲಕ ಸಮುದ್ರದಲ್ಲಿನ ಗುರಿಯನ್ನು ನಾಶಪಡಿಸಿತ್ತು. ಇದೀಗ ಆಸಿಪ್ ಮುನೀರ್ ನಾಪತ್ತೆಯಾಗಿರುವ ಬಗ್ಗೆ ವರದಿಗಳು ಬರುತ್ತಿವೆ.

ಪಹಲ್ಗಾಮ್ ಉಗ್ರರ ದಾಳಿ ಬಳಿಕ ಪಾಕಿಸ್ತಾನ ಅರೇಬಿಯನ್ ಸಮುದ್ರದಲ್ಲಿ ಗುಂಡಿನ ಕವಾಯತು ಪ್ರಾರಂಭಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತದ ನೌಕಾಪಡೆ ಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಅನ್ನು ಸಮುದ್ರದಲ್ಲಿ ಇಳಿಸಿತ್ತು. ಐಎನ್ಎಸ್ ವಿಕ್ರಾಂತ್‌ನಲ್ಲಿ ಮಿಗ್ 29ಕೆ ಮತ್ತು ಯುದ್ಧವಿಮಾನಗಳು ಹಾರಾಟ ಆರಂಭಿಸಿವೆ. ಈ ಮೂಲಕ ಸಮುದ್ರದ ಗಡಿಯಲ್ಲಿಯೂ ಭಾರತದ ವಾಯುಸೇನೆ ಅಲರ್ಟ್ ಆಗಿದೆ. ಇನ್ನು ಶುಕ್ರವಾರ (ಏಪ್ರಿಲ್ 25) ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಕಾಶ್ಮೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಲೆಫ್ಟಿನೆಂಟ್ ಜನರಲ್ ಎಂ.ವಿ. ಸುಚೀಂದ್ರ ಕುಮಾರ್ ಕೂಡ ಸೇನಾ ಮುಖ್ಯಸ್ಥರೊಂದಿಗೆ ಉಪಸ್ಥಿತರಿದ್ದರು.

ಸೇನಾ ಕಾರ್ಯಾಚರಣೆ ನೇರಪ್ರಸಾರ ಬೇಡ
ಪಹಲ್ಗಾಂ ದಾಳಿಯ ಉಗ್ರಗಾಮಿಗಳನ್ನು ಸೆರೆ ಹಿಡಿಯಲು ಭಾರತೀಯ ಸೇನೆ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಸೇನಾ ಕಾರ್ಯಾಚರಣೆ ಮತ್ತು ಚಲನವಲನಗಳನ್ನು ನೇರ ಪ್ರಸಾರ ಮಾಡಬೇಡಿ ಎಂದು ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ಸಲಹೆ ನೀಡಿದೆ. ‘ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಸುದ್ದಿ ಮಾಧ್ಯಮಗಳು, ಸಾಮಾಜಿಕ ಜಾಲತಾಣ ಬಳಕೆದಾರರು ನಿಮ್ಮ ಹೊಣೆಗಾರಿಕೆಯನ್ನು ಅರಿತುಕೊಳ್ಳಿ. ಸೂಕ್ಷ್ಮ ಮಾಹಿತಿಗಳನ್ನು ಬಹಿರಂಗಗೊಳಿಸಿದರೆ ಶತ್ರುಗಳು ಎಚ್ಚೆತ್ತುಕೊಳ್ಳುತ್ತಾರೆ. 

ಇದನ್ನೂ ಓದಿ: ಖಾಸಗಿ ಅಂಗ ಪರೀಕ್ಷಿಸಿ 20 ಹಿಂದೂಗಳ ಮೇಲೆ ಗುಂಡು: ಕಾಶ್ಮೀರ ತನಿಖಾಧಿಕಾರಿಗಳ ಶಾಕಿಂಗ್​ ಮಾಹಿತಿ!

ಇದರಿಂದ ಕಾರ್ಯಾಚರಣೆಗೆ ನಿರೀಕ್ಷಿತ ಫಲ ದೊರಕದು. ಭದ್ರತಾ ಸಿಬ್ಬಂದಿಗಳಿಗೂ ತೊಂದರೆಯಾಗಬಹುದು. ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ತಿದ್ದುಪಡಿ) ನಿಯಮಗಳು-2021ರ ಪ್ರಕಾರ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ನೇರ ಪ್ರಸಾರ ಶಿಕ್ಷಾರ್ಹ ಅಪರಾಧ’ ಎಂದು ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆ ತಿಳಿಸಿದೆ.

ವಿದ್ಯಾರ್ಥಿಯಾಗಿ ಪಾಕಿಸ್ತಾನಕ್ಕೆ ತೆರಳಿ ಉಗ್ರನಾಗಿ ಮರಳಿದ್ದ
26 ಪ್ರವಾಸಿಗರ ನರಮೇಧಕ್ಕೆ ಕಾರಣವಾದ ಪಹಲ್ಗಾಂ ದಾಳಿಯ ಮಾಸ್ಟರ್‌ಮೈಂಡ್‌ ಆದಿಲ್‌ ಅಹ್ಮದ್‌ ಥೋಕರ್‌ ಮುಲತಃ ಕಾಶ್ಮೀರದ ಅನಂತನಾಗ್‌ ಜಿಲ್ಲೆಯವ. ವಿದ್ಯಾಭ್ಯಾಸದ ಹೆಸರಲ್ಲಿ ಪಾಕಿಸ್ತಾನಕ್ಕೆ ತೆರಳಿ, ಉಗ್ರನಾಗಿ ಮರಳಿದ್ದ ಎಂದು ತಿಳಿದುಬಂದಿದೆ. ವಿದ್ಯಾರ್ಥಿ ವೀಸಾ ಪಡೆದು 2018ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ ಆದಿಲ್‌ನ ಮನಃಸ್ಥಿತಿ, ಅದಕ್ಕೂ ಮೊದಲೇ ಉಗ್ರವಾದದ ಹಾದಿಯನ್ನು ಹಿಡಿಯುವ ಸೂಚನೆ ನೀಡುವಂತಿತ್ತು. ಅದಕ್ಕೆ ಪೂರಕವಾಗಿ ಆತ ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಭಾರತ-ಪಾಕಿಸ್ತಾನ ಯುದ್ಧ ಕುರಿತ ಹೇಳಿಕೆ ಬಗ್ಗೆ ನಾನೀಗಲೂ ಬದ್ಧ; ಸಿದ್ದರಾಮಯ್ಯ ಸ್ಪಷ್ಟನೆ