ಇರಾನ್ ನೂತನ ನಾಯಕ ಮೊಜ್ತಬಾ ಸಾವು? ಅಲಿ ಖಮೇನಿ ಸೇರಿ ಹುತಾತ್ಮರ ಭಿತ್ತಿಚಿತ್ರ ನೀಡಿದ ಸುಳಿವು, ಅಲ್ ಖಮೇನಿ ಬೆನ್ನಲ್ಲೇ ಮೊಜ್ತಬಾ ಖಮೇನಿ ಹತ್ಯೆಯಾಗಿದ್ದಾರೆ ಎಂದು ಅಮೆರಿಕ ಹೇಳಿತ್ತು. ಇದೀಗ ಕೆಲ ಸುಳಿವು ಈ ಮಾತುಗಳನ್ನು ಖಚಿತಪಡಿಸುವಂತಿದೆ.
ಟೆಹ್ರಾನ್ (ಏ.26) ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ದಾಳಿಯಿಂದ ಇರಾನ್ ಸಾಕಷ್ಟು ನಷ್ಟ ಅನುಭವಿಸಿದೆ. ಸದ್ಯ ಒಂದು ಹಂತದ ಕದನ ವಿರಾಮ ಮುಂದುವರಿದಿದ್ದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತಿದೆ. ಯುದ್ಧದ ಆರಂಭದಲ್ಲೇ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಲ್ ಖಮೇನಿ ಹತ್ಯೆಯಾಗಿದ್ದರು. ಇದೇ ದಾಳಿಯಲ್ಲಿ ಖಮೇನಿ ಕುಟುಂಬಸ್ಥರು ಹತ್ಯೆಯಾಗಿದ್ದರು. ಈ ಹತ್ಯೆ ಬೆನ್ನಲ್ಲೇ ಮೊಜ್ತಬಾ ಖಮೇನಿ ಇರಾನ್ ನೂತನ ಸರ್ವೋಚ್ಚ ನಾಯಕ ಎಂದು ಘೋಷಿಸಲಾಗಿತ್ತು. ಆದರೆ ಮೊಜ್ತಬಾ ಖಮೇನಿ ತೀವ್ರವಾಗಿ ಗಾಯಗೊಂಡಿದ್ದಾರೆ, ಸಾವು ಕಂಡಿರುವ ಸಾಧ್ಯತೆ ಇದೆ ಎಂದಿತ್ತು. ಈ ವರದಿಗಳನ್ನು ನಿರಾಕರಿಸುತ್ತಲೇ ಬಂದ ಇರಾನ್ ಇದೀಗ ಹುತಾತ್ಮರ ಭಿತ್ತಿ ಚಿತ್ರ ಹಾಗೂ ಪ್ರಾರ್ಥನಾ ಕಾರ್ಯಕ್ರಮ ಮೊಜ್ತಬಾ ಖಮೇನಿ ಮೃತಪಟ್ಟ ಸಾಧ್ಯತೆಯನ್ನು ಖಚಿತಪಡಿಸುವಂತಿದೆ.
ಹುತಾತ್ಮರ ಭಿತ್ತಿ ಫೋಟೋದಲ್ಲಿ ಮೊಜ್ತಾಬ ಖಮೇನಿ ಫೋಟೋ
ಇರಾನ್ನ ಮುಷಾದ್ ನಗರದಲ್ಲಿ ಹುತಾತ್ಮರ ಸ್ಮರಣ ಭಿತ್ತಿಯಲ್ಲಿ ಇತ್ತೀಚೆಗೆ ಯುದ್ಧದಲ್ಲಿ ಹುತಾತ್ಮರಾದ ನಾಯಕರ ಫೋಟೋಗಳನ್ನು ಹಾಕಲಾಗಿದೆ. ಅಲ್ ಖಮೇನಿ ದೊಡ್ಡ ಫೋಟೋ ಜೊತೆಗೆ ಐಆರ್ಜಿಸಿ ಸೇನೆ, ಕಮಾಂಡರ್, ಯೋಧರು ಸೇರಿದಂತೆ ಹುತಾತ್ಮರ ಫೋಟೋಗಳನ್ನು ಭಿತ್ತಿಮೇಲೆ ಅನಾವರಣ ಮಾಡಲಾಗಿದೆ. ಈ ಹುತಾತ್ಮರ ಫೋಟೋಗಳಲ್ಲಿ ಮೊಜ್ತಬಾ ಖಮೇನಿ ಫೋಟೋ ಕೂಡ ಇದೆ.
ಇರಾನ್ ಅಧಿಕಾರಿಗಳು ಸೇರಿದಂತೆ ಪ್ರಮುಖ ನಾಯಕರು ಈ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಇಸ್ರೇಲ್ ಹಾಗೂ ಅಮೆರಿಕ ಯುದ್ಧದಲ್ಲಿ ಹುತಾತ್ಮರಾದ ನಾಯಕರು, ಅಧಿಕಾರಿಗಳು, ಸೈನಿಕರ ಫೋಟೋಗಳನ್ನು ಬಿತ್ತಿ ಮೇಲೆ ಅನಾವರಣ ಮಾಡಲಾಗಿದೆ. ಬಳಿಕ ಎಲ್ಲರೂ ಪ್ರಾರ್ಥನೆ ಸಲ್ಲಿಸಿದ್ದಾರೆ. ಭಿತ್ತಿಮೇಲೆ ಅತೀದೊಡ್ಡ ಗಾತ್ರದಲ್ಲಿ ಈ ಫೋಟೋಗಳಿರುವ ಫ್ಲೆಕ್ಸ್ ಹಾಕಲಾಗಿದೆ. ಇದೇ ಭಿತ್ತಿಚಿತ್ರ ಇದೀಗ ಇರಾನ್ ನೂತನ ನಾಯಕ ಮೊಜ್ತಬಾ ಖಮೇನಿ ಸಾವು ಸುದ್ದಿಯನ್ನು ಒತ್ತಿ ಹೇಳುತ್ತಿದೆ.
ಸಾರ್ವಜನಿಕವಾಗಿ ಸ್ಪಷ್ಟ ಸಂದೇಶ ರವಾನಿಸಲು ಹಾಗೂ ಇರಾನ್ ಮೇಲೆ ಯಾವುದೇ ದಾಳಿಯಾದರೂ ಪ್ರತಿದಾಳಿ ನಡೆಸಿ ತೀರುತ್ತೇವೆ. ಯಾವದಕ್ಕೂ ಜಗ್ಗುದಿಲ್ಲ ಅನ್ನೋ ಸಂದೇಶವನ್ನು ಇದೇ ಕಾರ್ಯಕ್ರಮದಲ್ಲಿ ಸಾರಲಾಗಿದೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹುತಾತ್ಮ ನಾಯಕರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ಹುತಾತ್ಮರ ಫೋಟೋ ಚಿತ್ರಗಳ ವಿಡಿಯೋ ಲಭ್ಯವಿದೆ. ಇದೀಗ ಮೊಜ್ತಬಾ ಖಮೇನಿ ಹತ್ಯೆಯಾಗಿದ್ದಾರೆ ಅನ್ನೋ ಮಾತುಗಳಿಗೆ ಈ ಕಾರ್ಯಕ್ರಮ, ಭಿತ್ತಿ ಚಿತ್ರ ಪುಷ್ಠಿ ನೀಡುತ್ತಿದೆ.


