ಭಾರತ ದಾಳಿ ಮಾಡಿದರೆ ಪಾಕಿಸ್ತಾನ ಖತೆ ಮುಗಿಯಲಿದೆ. ಆದರೆ ನಾವು ಉಳಿಯಬೇಕು. ಇದಕ್ಕಾಗಿ ಜಗತ್ತನ್ನೇ ಸರ್ವನಾಶ ಮಾಡುತ್ತೇವೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ನ್ಯೂಕ್ಲಿಯರ್ ಬೆದರಿಕೆ ಹಾಕಿದ್ದಾನೆ. 

ನವದೆಹಲಿ(ಮೇ.06) ಪೆಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ಮೇಲೆ ಪ್ರತೀಕಾರಕ್ಕೆ ಸಜ್ಜಾಗಿದೆ. ಇದು ಪಾಕಿಸ್ತಾನ ಆತಂಕ ಹೆಚ್ಚಿಸಿದೆ. ಇದೀಗ ಪಾಕಿಸ್ತಾನ ರಕ್ಷಣಾ ಸಚಿವ ಖವಜಾ ಆಸೀಫ್ ಮತ್ತೆ ಬೆದರಿಕೆ ರಣತಂತ್ರ ಪ್ರಯೋಗಿಸಿದ್ದಾರೆ. ಭಾರತ ದಾಳಿ ಮಾಡಿದರೆ ಸಂಪೂರ್ಣ ಪಾಕಿಸ್ತಾನ ಇಲ್ಲವಾಗಲಿದೆ. ಆದರೆ ನಾವು ಉಳಿಯಬೇಕು. ಇದಕ್ಕಾಗಿ ಜಗತ್ತನ್ನೇ ಸರ್ವನಾಶ ಮಾಡುತ್ತೇವೆ ಎಂದು ಖವಾಜ ಆಸಿಫ್ ನ್ಯೂಕ್ಲಿಯರ್ ಬೆದರಿಕೆ ಹಾಕಿದ್ದಾರೆ. ಭಾರತದ ವಿರುದ್ದ ಹೋರಾಡಲು ನ್ಯೂಕ್ಲಿಯರ್ ಪ್ರಯೋಗಿಸುತ್ತೇವೆ ಎಂದು ಖವಾಜಾ ಎಚ್ಚರಿಸಿದ್ದಾರೆ.

ಭಾರತ ದಾಳಿ ಮಾಡಿದರೆ ಪಾಕಿಸ್ತಾನ ಸರ್ವನಾಶ
ಒಂದು ವೇಳೆ ಭಾರತ ದಾಳಿಗೆ ಮುಂದಾದರೆ ಪಾಕಿಸ್ತಾನದ ಅಸ್ತಿತ್ವದ ಪ್ರಶ್ನೆ ಉದ್ಭವವಾಗುತ್ತದೆ. ಪಾಕಿಸ್ತಾನದ ಅಳಿವು ಉಳಿವಿನ ಪ್ರಶ್ನೆ ಬಂದರೆ ನಾವು ಹಿಂದೂ ಮುಂದೂ ಯೋಚಿಸಲ್ಲ. ಜಗತ್ತನ್ನೇ ಸರ್ವನಾಶ ಮಾಡುತ್ತೇವೆ ಎಂದು ರಕ್ಷಣಾ ಸಚಿವ ಖವಾಜ ಹೇಳಿದ್ದಾರೆ. ಒಂದಾ ನಾವು ಉಳಿಯಬೇಕು, ಇಲ್ಲಾ ಜಗತ್ತೇ ಸರ್ವನಾಶವಾಗಬೇಕು ಎಂದಿದ್ದಾರೆ. 

ಯುದ್ಧದ ಮಾಕ್‌ ಡ್ರಿಲ್‌ನಿಂದ ನಾಳೆ ಶಾಲಾ ಕಾಲೇಜು, ಕಚೇರಿಗಳಿಗೆ ರಜೆ ಇದೆಯಾ?

ಗಾಜಾದ ಮೇಲೆ ಇಸ್ರೇಲ್ ದಾಳಿ ಮಾಡುತ್ತಿದೆ. ಗಾಜಾವನ್ನು ಸರ್ವನಾಶ ಮಾಡುತ್ತಿದೆ. ಇಸ್ರೇಲ್ ಜೊತೆ ಉತ್ತಮ ಸಂಬಂಧ ಹೊಂದಿರುವ ಕೆಲ ರಾಷ್ಟ್ರಗಳು ಇದೇ ಮನಸ್ಥಿತಿ ಹೊಂದಿದ ಎಂದು ಭಾರತ ವಿರುದ್ದ ಪರೋಕ್ಷ ಕಿಡಿ ಕಾರಿದ್ದಾರೆ. ಪಾಕಿಸ್ತಾನದ ಅಸ್ತಿತ್ವ ಪ್ರಶ್ನೆ ಬಂದಾಗ ನಮಗೆ ಯೋಚನೆ ಮಾಡುವ ಅವಶ್ಯತೆ ಇಲ್ಲ. ಕಾರಣ ನಾವು ಉಳಿಯಬೇಕು ಎಂದರೆ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ. ಈ ಮೂಲಕ ಭಾರತ ದಾಳಿ ಮಾಡಿದರೆ ಪಾಕಿಸ್ತಾನ ಖೇಲ್ ಖತಂ ಅನ್ನೋದು ಒಪ್ಪಿಕೊಂಡಿದ್ದಾರೆ. ಹೀಗಾಿ ನ್ಯೂಕ್ಲಿಯರ್ ಅಸ್ತ್ರ ಪ್ರಯೋಗಿಸುವು ಎಚ್ಚರಿಕೆಯನ್ನು ಭಾರತಕ್ಕೆ ನೀಡುತ್ತಿದೆ.

ಇತ್ತೀಚೆಗೆ ಭಾರತ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಮೇಲೆ ದಾಳಿ ಮಾಡಲಿದೆ ಎಂದು ರಕ್ಷಣಾ ಸಚಿವ ಹೇಳಿಕೆ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಭಾರತ ದಾಳಿ ಆರಂಭಿಸಲಿದೆ ಎಂದು ಎಚ್ಚರಿಸಿದ್ದರು. ಹೀಗೆ ದಾಳಿಗೆ ಮುಂದಾದರೆ ಭಾರತಕ್ಕೆ ತಕ್ಕ ಉತ್ತರ ನೀಡಲಾಗುತ್ತದೆ ಎಂದಿದ್ದರು. ಅಂತಾರಾಷ್ಟ್ರೀಯ ತಟಸ್ಥ ತನಿಖಾ ಸಂಸ್ಥೆ ಪೆಹಲ್ಗಾಂ ಉಗ್ರ ದಾಳಿಯ ತನಿಖೆ ಮಾಡಲಿ ಎಂದು ಪಾಕಿಸ್ತಾನ ಪ್ರಧನಿ ಶೆಹಬಾದ್ ಷರೀಫ್ ಆಗ್ರಹಿಸಿದ್ದಾರೆ. ಈ ರೀತಿ ತಟಸ್ಥ ತನಿಖಾ ಸಂಸ್ಥೆ ತನಿಖೆ ಮಾಡಿದರೆ ಭಾರತದ ಕುತಂತ್ರ ಬಯಲಾಗಲಿದೆ ಎಂದು ಖವಜಾ ಆಸೀಫ್ ಹೇಳಿದ್ದಾರೆ.