ನಾವ್ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಿದ ಪಾಕ್‌ಗೆ ಮುಖಭಂಗ, ಲಂಕಾಗೆ ಅವಧಿ ಮುಗಿದ ಆಹಾರ ವಿತರಣೆ, ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾಗೆ ಭಾರಿ ಫೋಸ್ ಕೊಟ್ಟು ಆಹಾರ ವಿತರಿಸಿ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸಿದೆ.
ಕೊಲೊಂಬೊ (ಡಿ.02) ಪಾಕಿಸ್ತಾನ ಭಯೋತ್ಪಾದನೆ ಪೋಷಣೆ, ಸುಳ್ಳು ಹೇಳುವುದು, ಅರಾಜಕತೆ ಸೃಷ್ಟಿಸುವುದನ್ನು ಬಿಟ್ಟು ಇನ್ಯಾವುದನ್ನು ಸಮರ್ಪಕವಾಗಿ ಮಾಡಲು ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಶ್ರೀಲಂಕಾದಲ್ಲಿ ಧಿತ್ವಾ ಚಂಡಮಾರುತ ಭಾರಿ ಅನಾಹುತ ಸೃಷ್ಟಿಸಿದೆ. ಭಾರಿ ಮಳೆ, ಪ್ರವಾಹ, ಭೂಕುಸಿತ ಸೇರಿದಂತೆ ಹಲವು ಅನಾಹುತ ಸಂಭವಿಸಿದೆ. ಈ ಚಂಡಮಾರುತಕ್ಕೆ ಲಂಕಾದಲ್ಲಿ 1,200 ಮಂದಿ ಬಲಿಯಾಗಿದ್ದಾರೆ. ಹಲವು ದೇಶಗಳು ಶ್ರೀಲಂಕಾಗೆ ನೆರವಿನ ಹಸ್ತ ಚಾಚಿದೆ. ಪರಿಹಾರ ಸಾಮಾಗ್ರಿಗಳನ್ನು ವಿತರಿಸಿದೆ. ನಾವು ಯಾರಿಗೂ ಕಡಿಮೆ ಇಲ್ಲ ಎಂದು ಪಾಕಿಸ್ತಾನ ಕೂಡ ಆಹಾರ ಸೇರಿದಂತೆ ಕೆಲ ಪರಿಹಾರ ಸಾಮಾಗ್ರಿಗಳನ್ನು ವಿತರಿಸಿದೆ. ಆದರೆ ಪಾಕಿಸ್ತಾನದ ವಿತರಿಸಿದ ಆಹಾರ ಸಾಮಾಗ್ರಿ ಅವಧಿ ಮುಗಿದಿದೆ ಎಂದು ಶ್ರೀಲಂಕಾ ಆಕ್ರೋಶ ಹೊರಹಾಕಿದೆ.
ಫೋಟೋ ಪೋಸ್ಟ್ ಮಾಡಿದ ಪಾಕಿಸ್ತಾನಕ್ಕೆ ಮುಖಭಂಗ
ಶ್ರೀಲಂಕಾಗೆ ನರೆವಿನ ಹಸ್ತಚಾಚಲು ಪಾಕಿಸ್ತಾನ ಸರ್ಕಾರ ಆಹಾರ ಪೊಟ್ಟಣ, ಔಷಧಿಗಳು ಸೇರಿದಂತೆ ಹಲವು ಪರಿಹಾರ ಸಾಮಾಗ್ರಿ ವಿತರಿಸಿತ್ತು. ಈ ಪರಿಹಾರ ಸಾಮಾಗ್ರಿ ಮೇಲೆ ಪಾಕಿಸ್ತಾನ ಹಾಗೂ ಶ್ರೀಲಂಕಾ ಲೋಗೋ, ಲಂಕಾದ ಸೈಕ್ಲೋನ್ ಪರಿಣಾಮಕ್ಕಾಗಿ ಕಳುಹಿಸುವ ಪರಿಹಾರ ಸಾಮಾಗ್ರಿ ಅನ್ನೋ ವಾಕ್ಯ ಸೇರಿದಂತೆ ಇಡೀ ಜಾತಕವನ್ನೇ ಮುದ್ರಿಸಿದೆ. ಬಳಿಕ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಶ್ರೀಲಂಕಾ ಜನರ ಮುಂದೆ ಪಾಕಿಸ್ತಾನ ಕೂಡ ಸಹಾಯಹಸ್ತ ನೀಡಲಿದೆ ಎಂದು ಬಿಂಬಿಸುವ ಪ್ಲಾನ್ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಪಾಕಿಸ್ತಾನ ಭಾರಿ ಜನಮೆಚ್ಚುಗೆ ಪಡೆಯಲು ಮುಂದಾಗಿತ್ತು. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪಾಕಿಸ್ತಾನ ಟ್ರೋಲ್ ಆಗಿದೆ.
ಪಾಕಿಸ್ತಾನ ವಿತರಿಸಿದ ಎಲ್ಲಾ ಆಹಾರಗಳು ಔಟ್ ಡೇಟೆಡ್
ಪಾಕಿಸ್ತಾನ ವಿತರಿಸಿದ ಆಹಾರ ಪೊಟ್ಟಣಗಳು ಅವಧಿ ಮುಗಿದೆ. ಪಾಕಿಸ್ತಾನದಲ್ಲಿ ಉತ್ಪಾದನೆಗೊಂಡ ಈ ಆಹಾರ ಪೊಟ್ಟಣಗಳ ಪ್ಯಾಕೆಟ್ ಮೇಲೆ ಎಕ್ಸ್‌ಪೈರಿ ಡೇಟ್ ನಮೂದಿಸಲಾಗಿದೆ. ಹಲವು ತಿಂಗಳು, ಕೆಲ ವರ್ಷಗಳೇ ಮುಗಿದ ಆಹಾರ ಪೊಟ್ಟಣ, ಔಷಧಿಗಳನ್ನು ಶ್ರೀಲಂಕಾಗೆ ನೀಡಿದೆ. ಪಾಕಿಸ್ತಾನ ನೀಡಿದ ಆಹಾರ ಸಾಮಾಗ್ರಿಗಳನ್ನು ಅಧಿಕಾರಿಗಳು ವಿತರಣೆ ಮಾಡುವಾಗ ಅವಧಿ ಮುಗಿದಿರುವು ಪತ್ತೆಯಾಗಿದೆ. ಹೀಗಾಗಿ ಪಾಕಿಸ್ತಾನ ನೀಡಿರುವ ಎಲ್ಲಾ ಆಹಾರ ಪೊಟ್ಟಣಗಳು, ಪರಿಹಾರ ಸಾಮಾಗ್ರಿಗಳ ವಿತರಣೆ ಸ್ಥಗಿತಗೊಳಿಸಿದೆ. ಇತ್ತ ಆಹಾರ ಪೊಟ್ಟಣ ಸ್ವೀಕರಿಸಿದ ಲಂಕಾ ನಾಗರೀಕರು ಆಕ್ರೋಶ ಹೊರಹಾಕಿದ್ದಾರೆ.
ಪರಿಹಾರ ಸಾಮಾಗ್ರಿಯಲ್ಲಿ ಮುಖಭಂಗ ಪಾಕಿಸ್ತಾನಕ್ಕೆ ಹೊಸದಲ್ಲ
ಪಾಕಿಸ್ತಾನ ಪ್ರಮುಖವಾಗಿ ಶ್ರೀಲಂಕಾ ಸೇರಿಂತೆ ಕೆಲ ಏಷ್ಯಾ ದೇಶಗಳಲ್ಲಿ ತನ್ನ ಇರುವಿಕೆ ಹಾಗೂ ತನ್ನ ಭಯೋತ್ಪಾದಕ ರಾಷ್ಟ್ರ ಅನ್ನೋ ಹಣೆಪಟ್ಟಿ ಹೊರಬರಲು ಹಲವು ಬಾರಿ ಪ್ರಯತ್ನಗಳನ್ನು ಮಾಡಿ ಕೈಸುಟ್ಟಿಕೊಂಡಿದೆ. ಪಾಕಿಸ್ತಾನ ಈ ರೀತಿ ಪರಿಹಾರ ಸಾಮಾಗ್ರಿ ವಿತರಣೆ ಮಾಡಿ ಮುಖಭಂಗ, ಆಕ್ರೋಶಕ್ಕೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಬಾರಿ ಶ್ರೀಲಂಕಾಗೆ ಅವಧಿ ಮುಗಿದ ಆಹಾರ ಸಾಮಾಗ್ರಿ ವಿತರಣೆ ಮಾಡಿ ಆಕ್ರೋಶಕ್ಕೆ ಗುರಿಯಾದರೆ, 2015ರಲ್ಲಿ ನೇಪಾಳದ ಸಂಭವಿಸಿದ ಭೀಕರ ಭೂಕಂಪ ಸಂದರ್ಭದಲ್ಲೂ ಪರಿಹಾರ ಸಾಮಾಗ್ರಿ ವಿತರಣೆ ಮಾಡಿತ್ತು. ಈ ವೇಳೆ ದನದ ಮಾಂಸದ ರೆಡಿ ಟು ಈಟ್ ಪ್ಯಾಕೆಟ್ ಫುಟ್ ವಿತರಣೆ ಮಾಡಿತ್ತು. ಹಿಂದೂಗಳಿರುವ ನೇಪಾಳಕ್ಕೆ ದನದ ಮಾಂಸದ ಆಹಾರ ವಿತರಿಸಿ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು. ನೇಪಾಳಿಗರು ಪಾಕಿಸ್ತಾನ ನೀಡಿದ ಆಹಾರ ಪೊಟ್ಟಣಗಳನ್ನು ಚರಂಡಿಗೆ ಎಸೆದಿದ್ದರು.


