ರೆಸ್ಟೋರೆಂಟ್‌ನಲ್ಲಿ ಊಟ ಮಾಡುವಾಗ ಯೂಟ್ಯೂಬರ್ ಜೋಡಿಗೆ ಭಯಾನಕ ಅನುಭವ ಎದುರಾಯಿತು. ಕೂದಲೆಳೆ ಅಂತರದಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಅವರ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೆಲವೊಂದು ಬದುಕಿನಲ್ಲಿ ಸಂಭವಿಸುವ ಘಟನೆಗಳನ್ನು ನೋಡಿದಾಗ ಈ ಕ್ಷಣ ಮಾತ್ರ ನಮ್ಮದು ನಾಳೆ ಹೇಗೋ ಯಾರಿಗೂ ತಿಳಿಯದು ಎಂಬ ಭಾವನೆ ಮೂಡುತ್ತದೆ. ನಾವು ಮಾಡದೇ ಇದ್ದ ತಪ್ಪಿಗೆ ಕೆಲವೊಮ್ಮೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಸಂಚಾರಿ ನಿಯಮವೆಲ್ಲವನ್ನೂ ಪಾಲಿಸಿ ತಲೆಗೆ ಹೆಲ್ಮೆಟ್ ಹಾಕಿ ಎಲ್ಲವೂ ಚೆನ್ನಾಗಿಯೇ ಇದ್ದರೂ ಕೆಲವೊಮ್ಮೆ ಯಾರದೋ ತಪ್ಪಿನಿಂದ ಅಪಘಾತ ಸಂಭವಿಸಿದಾಗ ಇನ್ಯಾರೋ ಸಾಯುವಂತಾಗುತ್ತದೆ. ಅಪಘಾತಗಳ ಹೆಚ್ಚಳದಿಂದಾಗಿ ಮನೆಯಿಂದ ಹೊರಟು ಹೊದ ವ್ಯಕ್ತಿ ವಾಪಸ್ ಮನೆಗೆ ಸುರಕ್ಷಿತವಾಗಿ ತಲುಪುತ್ತಾನೆ ಎಂಬ ಭರವಸೆ ಇರುವುದಿಲ್ಲ. ಆದರೂ ಈ ಕ್ಷಣ ನಮ್ಮದು ಎಂಬ ಭರವಸೆಯಲ್ಲಿ ನಾವು ಜೀವಿಸುತ್ತೇವೆ. ಅದೇ ರೀತಿ ಇಲ್ಲಿಬ್ಬರು ಯೂಟ್ಯೂಬರ್‌ಗಳಿಗೆ ಕರಾಳ ಅನುಭವ ಆಗಿದೆ.
ಆಹಾರ ಸೇವಿಸುತ್ತಿದ್ದಾಗಲೇ ನುಗ್ಗಿ ಬಂತು ಕಾರು:
ಹೊಟೇಲ್‌ನಲ್ಲಿ ಆಹಾರ ಸೇವಿಸುತ್ತಿದ್ದಾಗಲೇ ಅವರು ಕುಳಿತಿದ್ದ ಕಡೆ ಕಾರೊಂದು ನುಗ್ಗಿ ಬಂದಿದ್ದು, ಕೂದಲೆಳೆ ಅಂತರದಿಂದ ಈ ಯೂಟ್ಯೂಬರ್ ಜೋಡಿ ಬಚವಾಗಿದ್ದಾರೆ. ರೆಸ್ಟೋರೆಂಟ್‌ವೊಂದರಲ್ಲಿ ಖುಷಿಯಾಗಿ ಕುಳಿತು ಭೋಜನದ ರುಚಿ ನೋಡುತ್ತಿದ್ದ ಅವರು ಆ ಆಹಾರದ ಬಗ್ಗೆ ಫೀಡ್‌ಬ್ಯಾಕ್ (ಅಭಿಪ್ರಾಯ) ಕೊಡುವುದಕ್ಕಾಗಿ ಅಲ್ಲಿ ಸೇರಿದ್ದರು. ಹೀಗಾಗಿ ಈ ದುರಂತಮಯ ಕ್ಷಣ ಅವರ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು ಭಯ ಹುಟ್ಟಿಸುವಂತಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಅಮೆರಿಕಾದ ಟೆಕ್ಸಾಸ್‌ನ ಟೈಲರ್‌ನಲ್ಲಿ.
ಅಲ್ಲಿನ ಫೇಮಸ್ ಯೂಟ್ಯೂಬರ್‌ಗಳಾದ ನೀನಾ ಅನ್ರೇಟೆಡ್ ಮತ್ತು ಪ್ಯಾಟ್ರಿಕ್ ಬ್ಲಾಕ್‌ವುಡ್ ತಮ್ಮ ಆಹಾರವನ್ನು ಆ ತಿನ್ನುತ್ತಾ ಖುಷಿ ಪಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಟೆಕ್ಸಾಸ್‌ನ ಟೈಲರ್‌ನಲ್ಲಿರುವ ಪಿಯಾಡಾ ಇಟಾಲಿಯನ್ ಸ್ಟ್ರೀಟ್ ಫುಡ್ ಎಂಬ ರೆಸ್ಟೋರೆಂಟ್‌ನಲ್ಲಿ ಇಬ್ಬರು ಆಹಾರದ ಬಗ್ಗೆ ವಿಮರ್ಶೆ ಮಾಡುವುದಕ್ಕಾಗಿ ಅಲ್ಲಿಗೆ ಬಂದಿದ್ದರು. ಯೂಟ್ಯೂಬ್‌ನಲ್ಲಿ ಇವರು ಕೆಲವು ಸ್ಥಳಗಳು ಪ್ರದೇಶಗಳಲ್ಲಿ ಸಿಗುವ ಆಹಾರದ ರುಚಿಯ ಬಗ್ಗೆ ವಿವರವಾದ ವಿಶ್ಲೇಷಣೆ ನೀಡ್ತಾರೆ. ಇದು ಅನೇಕ ಹೊಸಬರಿಗೆ ಅಥವಾ ಆ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಗೈಡ್ ರೀತಿ ಇರುತ್ತದೆ.
ಸಣ್ಣಪುಟ್ಟ ಗಾಯಗಳಿಂದ ಯೂಟ್ಯೂಬರ್ ಜೋಡಿ ಪಾರು:
ಕಾರು ರೆಸ್ಟೋರೆಂಟ್‌ನ ಗಾಜಿನ ಡೋರ್‌ಗೆ ಡಿಕ್ಕಿ ಹೊಡೆದು ಇವರು ಕುಳಿತಲ್ಲಿಗೆ ಬಂದಿದ್ದರಿಂದ ಈ ದಂಪತಿಗೆ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ಪ್ಯಾಟ್ರಿಕ್ ಬ್ಲಾಕ್‌ವುಡ್ ಕಿಟಕಿ ಪಕ್ಕ ಕುಳಿತಿದ್ದರಿಂದ ಅವರಿಗೆ ಅಪಘಾತದಿಂದಾಗಿ ಗಾಜು ತಾಗಿ ಸಾಕಷ್ಟು ಗಾಯಗಳಾಗಿವೆ ಎಂದು ವರದಿಯಾಗಿದೆ. ಘಟನೆಯ ದೃಶ್ಯವನ್ನು ಈ ಜೋಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ನಾಳೆ ಇದೆ ಎಂಬ ಭರವಸೆ ಇಲ್ಲ ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಈ ಜೋಡಿ ಆಹಾರದ ವಿಮರ್ಶೆ ಮಾಡುತ್ತಿದ್ದಾಗಲೇ ಕಾರೊಂದು ಅವರತ್ತ ನುಗ್ಗಿ ಬರುವುದನ್ನು ವೀಡಿಯೋದಲ್ಲಿ ನೋಡಬಹುದು. ಟೆಕ್ಸಾಸ್‌ನ ಹೂಸ್ಟನ್‌ನಲ್ಲಿರುವ ಕ್ಯೂವೀ ಪಾಕಶಾಲೆಯ ಕ್ರಿಯೇಷನ್ಸ್‌ನಲ್ಲಿ ಗಾಜಿನ ಗೋಡೆಗೆ ಕಾರೊಂದು ಡಿಕ್ಕಿ ಹೊಡೆದು, ಪ್ಯಾಟ್ರಿಕ್ ಬ್ಲ್ಯಾಕ್‌ವುಡ್ ಮತ್ತು ನಾನು ತಿನ್ನುವ ಕಾರ್ಯಕ್ರಮವನ್ನು ರೆಕಾರ್ಡ್ ಮಾಡುತ್ತಿದ್ದಾಗ ಎಲ್ಲವನ್ನೂ ಧ್ವಂಸಗೊಳಿಸಿದ ನಂತರ ನಾನು ಜೀವಂತವಾಗಿರುವುದಕ್ಕೆ ತುಂಬಾ ಕೃತಜ್ಞನಾಗಿದ್ದೇನೆ" ಎಂದು ನೀನಾ ಅನ್ರೇಟೆಡ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ನಾನು ರುಚಿಕರವಾದ ಸಾಲ್ಮನ್ ಸ್ಲೈಡರ್ ಅನ್ನು ತಿನ್ನುತ್ತಿದ್ದಾಗ ಅದು ನೇರವಾಗಿ ಬಂದು ನಮಗೆ ಡಿಕ್ಕಿ ಹೊಡೆಯಿತು. ಆದರೆ ನಾವು ಬದುಕುಳಿದೆವು. ಸಣ್ಣ ವಿಷಯಗಳಿಂದ ದೂರ ಸರಿದು ದೊಡ್ಡ ಉದ್ದೇಶದಿಂದ ನಡೆದು ಬಂದಿರುವ ಇನ್ನೊಂದು ದಿನವನ್ನು ನೋಡಲು ಕೃತಜ್ಞನಾಗಿದ್ದೇನೆ ಎಂದು ಟಿಕ್‌ಟಾಕ್‌ನಲ್ಲಿ ಬ್ಲ್ಯಾಕ್‌ವುಡ್ ಪೋಸ್ಟ್ ಮಾಡಿದ್ದಾರೆ.
ಈ ಘಟನೆ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಇದನ್ನೂ ಓದಿ: ಅಪಘಾತದ ನಂತರ ರಸ್ತೆಯಲ್ಲೇ ಒಂದಕ್ಕೊಂದು ಅಂಟಿಕೊಂಡು ನೆಲಚಕ್ರದಂತೆ ತಿರುಗಿದ ಸ್ಕೂಟಿ ಬೈಕ್
ಇದನ್ನೂ ಓದಿ: ಪೂಜಾ ನ ಪ್ರೀತಿಸ್ತಿದ್ದವ ಪೂಜಾರಿ ಆದ: ಬ್ರೇಕಪ್ ಮೊದಲು ನಂತರದ ಫೋಟೋ ಭಾರಿ ವೈರಲ್
