'ಮದಗಜ' ಖ್ಯಾತಿಯ ನಟಿ ಜೋಶಿತಾ ಮತ್ತು ಅವರ ಕುಟುಂಬದ ಮೇಲೆ ಪತಿ ಸುರೇಶ್ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮದುವೆಗೂ ಮುನ್ನ ಅ*ತ್ಯಾಚಾರ ಮಾಡಿ, ವಿಡಿಯೋ ಮೂಲಕ ಬೆದರಿಸಿ ಮದುವೆಯಾಗಿದ್ದಲ್ಲದೆ, ಮದುವೆಯ ನಂತರವೂ ಚಿತ್ರಹಿಂಸೆ ನೀಡುತ್ತಿದ್ದ ಎಂದು ನಟಿ ಮತ್ತು ಅವರ ತಾಯಿ ಆರೋಪಿಸಿದ್ದಾರೆ.
ಬೆಂಗಳೂರು (ಡಿ.17): ಶ್ರೀಮರಳಿ ನಟಿಸಿದ್ದ ಮದಗಜ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ನಟಿ ಜೋಶಿತಾ ಅವರ ಸಂಸಾರ ಬೀದಿಗೆ ಬಂದಿದೆ. ಜೋಶಿತಾ ಹಾಗೂ ಅವರ ತಂದೆ-ತಾಯಿಯ ಮೇಲೆ ಆಕೆಯ ಗಂಡ ಸುರೇಶ್ ನಡು ರಸ್ತೆಯಲ್ಲಿಯೇ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮದಗಜ ಸಿನಿಮಾ ಅಲ್ಲದೆ, ರೈತ, ಸ್ವಯಂವರ ಎನ್ನುವ ಶಾರ್ಟ್ ಮೂವಿ, ಶ್ರೀದೇವಿ ಮಹಾತ್ಮೆ ಅನ್ನೋ ಸೀರಿಯಲ್‌ನಲ್ಲೂ ಕೂಡ ಜೋಶಿತಾ ನಟಿಸಿದ್ದರು ಹಲ್ಲೆ ಒಳಗಾಗಿರುವ ಜೋಶಿತಾ ಸಿನಿಮಾ ಹಾಗೂ ಸೀರಿಯಲ್ ನಟಿ ಮಾತ್ರವಲ್ಲದೆ, ಚೈಲ್ಡ್ ಆರ್ಟಿಸ್ಟ್ ಹಾಗೂ ಡಬ್ಬಿಂಗ್ ಕಲಾವಿದೆ ಕೂಡ ಆಗಿದ್ದಾರೆ.
ಹಲ್ಲೆಗೆ ಒಳಗಾಗಿರುವ ಜೋಶಿತಾ ಅವರ ತಾಯಿ ನಯನಾ ಮಾತನಾಡಿದ್ದು, ಆತ ನನಗೆ ತುಂಬ ಹಳೆಯ ಪರಿಚಯ. ನನ್ನ ಮಗಳು ನಿರೂಪಕಿ ಆಗಿದ್ದಳು. ಸ್ಟೇಜ್ ಕಾರ್ಯಕ್ರಮಗಳಿಗೆ ಆಂಕರಿಂಗ್ ಮಾಡುತ್ತಿದ್ದಳು. ಆತ ನನ್ನ ಮಗಳನ್ನ ನೋಡಿ ಮದುವೆಯಾಗೋದಾಗಿ ಹೇಳಿದ್ದ. ನಂತರ ನಿಶ್ಚಿತಾರ್ಥ ಮಾಡಿದ್ದೆವು. ನಿಶ್ಚಿತಾರ್ಥದ ನಂತರ ನಮಗೆ ಆತ ಸರಿಯಿಲ್ಲ ಎಂಬುವ ವಿಚಾರ ಗೊತ್ತಾಗಿತ್ತು. ನಮಗೆ ಕೆಲವರು ಆತ ಸರಿಯಿಲ್ಲ ಅಂತ ಹೇಳೋಕೆ ಶುರು ಮಾಡಿದ್ದರು ಎಂದು ಹೇಳಿದ್ದಾರೆ.
ಮದುವೆ ಬೇಡ ಅಂದಾಗ ಮಗಳನ್ನ ದೇವಸ್ಥಾನಕ್ಕೆ ಅಂತ ಕರೆದುಕೊಂಡು ಹೋಗಿದ್ದಾನೆ. ಗೊರವನಹಳ್ಳಿ ಬಳಿ ಜ್ಯೂಸ್ ಗೆ ಮತ್ತು ಬರುವ ಮಾತ್ರೆ ಹಾಕಿ ಅ*ತ್ಯಾಚಾರ ಮಾಡಿದ್ದಾನೆ. ಗೊರವನಹಳ್ಳಿ ಬಳಿಯ ಒಂದು ಹೋಟೆಲ್ ಕರೆದೊಯ್ದು ಅ*ತ್ಯಾಚಾರ ಮಾಡಿದ್ದಾನೆ. ವಿಧಿಯಿಲ್ಲದೆ ಮಗಳು ಈ ವಿಚಾರ ಹೇಳಿಯೇ ಮದುವೆ ಮಾಡಬೇಕಾಯ್ತು ಎಂದಿದ್ದಾರೆ.
3 ತಿಂಗಳ ಬಾಣಂತಿಯನ್ನ ಪಬ್, ಕ್ಲಬ್ ಗೆ ಕರೆಯುತ್ತಿದ್ದ. ಇನ್ಸ್‌ಟಾಗ್ರಾಮ್‌ನಲ್ಲಿ ಹುಡುಗಿಯರನ್ನ ಪರಿಚಯ ಮಾಡಿಕೊಂಡು ಅವರನ್ನ ನನ್ನ ಹತ್ರ ಕರೆದುಕೊಂಡು ಬಾ ಎಂದು ಮಗಳಿಗೆ ಹೇಳುತ್ತಾನೆ. ಹೀಗಾಗಿ ನನ್ನ ಮಗಳು ಅವನ್ನ ಬಿಟ್ಟು ಮನೆಗೆ ಬಂದಿದ್ದಳು. ಈಗ ಡಿವೋರ್ಸ್ ಕೊಡು ಅಂದರೂ ಏನು ಕೊಡದೆ ಮ್ಯೂಚುವಲ್ ಆಗಿ ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ದಯವಿಟ್ಟು ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.
ಮದುವೆ ಸಮಯದಲ್ಲಿ ವಿಡಿಯೋ ಮಾಡಿಟ್ಟುಕೊಂಡು ಬೆದರಿಸಿದ. ಮದುವೆ ಆಗಿಲ್ಲ ಅಂದರೆ ವಿಡಿಯೋ ವೈರಲ್ ಮಾಡೋದಾಗಿ ಹೆದರಿಸಿದ್ದ. ಹೀಗಾಗಿ ಆತನಿಗೆ ಮದುವೆ ಮಾಡುವ ಪರಿಸ್ಥಿತಿ ಬಂತು. ಮದುವೆ ಆದಮೇಲು ಎಲ್ಲೂ ಕರೆದುಕೊಂಡು ಹೋಗಿಲ್ಲ. ಕೆಲಸದವಳ ರೀತಿ ಮಗಳನ್ನ ನೋಡುತ್ತಿದ್ದ. ಜಗಳ ಅದಾಗೆಲ್ಲ ಮಗಳು ಮನೆಗೆ ಬರುತ್ತಿದ್ದಳು. ಮಸಾಜ್ ಪಾರ್ಲರ್‌ಗೆ ಕರೆದೊಯ್ದು ಹುಡುಗರ ಜೊತೆ ಮಸಾಜ್ ಮಾಡಿಸಿಕೋ ಎನ್ನುತ್ತಾನೆ. ಹೆದರಿ ನನ್ನ ಮಗಳು ಮನೆಗೆ ಬಂದಿದ್ದಳು. ಶಿವಾಜಿನಗರ ಸ್ಟೇಷನ್‌ನಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು ಎಂದು ನಯನಾ ಹೇಳಿದ್ದಾರೆ.
ಮಗಳ ಬಾಳು ಹಾಳಾಗೋದು ಬೇಡ ಅಂತ FIR ಮಾಡಿಸಿಲ್ಲ NCR ದಾಖಲಾಗಿತ್ತು. ಮಗು ಸಹ ನಮ್ಮ ಬಳಿ ಇತ್ತು ಜಗಳ ಅದಾಗ ಅವರ ಮನೆಯಲ್ಲಿ ಬಿಟ್ಟು ಬಂದಿದ್ದೀವಿ. ಆತ ಕಾರ್ಯಕ್ರಮ ಮಾಡ್ತೀನಿ ಅಂತ ದೊಡ್ಡ ವ್ಯಕ್ತಿಗಳ ಬಳಿ ಚಂದ ವಸೂಲಿ ಮಾಡುತ್ತಾನೆ. ಕಾರ್ಯಕ್ರಮ ಮಾಡದೇ ಮನೆಯಲ್ಲೇ ಇರುತ್ತಾನೆ. ಬರೀ ಸೆಟಲ್‌ಮೆಂಟ್ ಮಾಡೋದೇ ಕೆಲಸ. ರೌಡಿಗಳ ಹೆಸರು ಹೇಳಿ ಹೆದರಿಸುತ್ತಾನೆ. ಅವರ ತಾಯಿ ಬೇರೆ ನಾನು ಬೇರೇನೇ . ನನ್ನ ರಸ್ತೆಯಲ್ಲಿ ಹಿಡಿದುಕೊಂಡು ಹೊಡೆದಿದ್ದಾನೆ. ಮಹಿಳಾ ಆಯೋಗಕ್ಕೆ ಬೇಡಿಕೊಳ್ಳುತ್ತೇನೆ. ನನ್ನ ಮಗಳ ಜೀವನ ಹಾಳುಮಾಡಿದ್ದಾನೆ ನಮಗೆ ಸೂಕ್ತ ಪರಿಹಾರ ಕೊಡಿಸಿ ಎಂದು ಕಣ್ಣೀರಿಟ್ಟಿದ್ದಾರೆ.
ಅ*ತ್ಯಾಚಾರ ಮಾಡಿ, ಬೆದರಿಸಿ ಮದುವೆಯಾಗಿದ್ದ ಎಂದ ಜೋಶಿತಾ
ಹಲ್ಲೆಗೊಳಗಾದ ಸುರೇಶ್ ಪತ್ನಿ ನಟಿ ಜೋಶಿತ ಮಾತನಾಡಿದ್ದು, ಮದುವೆಯಾದ ಪ್ರಾರಂಭದಲ್ಲಿ ನನಗೆ ಇಂತವನು ಅಂತ ಗೊತ್ತಾಗಿಲ್ಲ. ಮೂರು ತಿಂಗಳಿಗೆ ಬಾಣಂತನ ದಿಂದ ಕರೆದುಕೊಂಡು ಬಂದುಬಿಟ್ಟು, ಪಬ್, ಕ್ಲಬ್ ಹೋಗೋಣ ಅಂತಿದ್ದ. ಇಷ್ಟ ಇಲ್ಲದೆ ತಾಯಿ ಮನೆಗೆ ಬಂದೆ. ಮದುವೆಗೆ ಮುಂಚೆ ದೇವಸ್ಥಾನಕ್ಕೆ ಕರೆದೊಯ್ಯುತ್ತೇನೆ ಎಂದು ಅ*ತ್ಯಾಚಾರ ಮಾಡಿದ್ದಾನೆ. ಜ್ಯೂಸ್‌ಗೆ ಮತ್ತು ಬರುವ ಏನೂ ಹಾಕಿ ರೂಮ್ ಗೆ ಕರೆದೊಯ್ದು ಅ*ತ್ಯಾಚಾರ ಮಾಡಿದ್ದಾನೆ ಎಂದು ಹೇಳಿದ್ದಾರೆ.
ಫೇಸ್‌ಬುಕ್ ಮೂಲಕ ತಾಯಿಗೆ ಪರಿಚಯ
ಸುರೇಶ್ ನಮ್ಮ ತಾಯಿಗೆ ಆತ ಫೇಸ್‌ಬುಕ್ ಮೂಲಕ ಪರಿಚಯ. ನನ್ನನ್ನ ಆಂಕರ್ ಗಾಗಿ ತಾಯಿಯನ್ನ ಕೇಳಿದ್ದ. ನಾನು ಸ್ಟೇಜ್ ಕಾರ್ಯಕ್ರಮ ಮಾಡ್ತೀನಿ. ಹಾಗಾಗಿ ಪರಿಚಯ. ಅವರ ಬಗ್ಗೆ ತಿಳಿಯುವ ಸಲುವಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದೆವು. ಮೂರು ವರ್ಷ ನಮ್ಮ ತಂದೆ ಮದುವೆ ಮಾಡಲ್ಲ ಅಂತ ಹೇಳಿದ್ದರು. ಆಗ ರೂಮಿಗೆ ಕರೆದೊಯ್ದು ಹೀಗೆ ಮಾಡಿದ್ದ. ಸಿನಿಮಾ ಮಾಡು ನೀನು ಯಾರ ಜೊತೆ ಬೇಕಾದ್ರೂ ಕಮಿಟ್ ಮೆಂಟ್ ಇಟ್ಕೋ ಅಂತಾನೆ. ನೋಡೋಕೆ ಚೆನ್ನಾಗಿದ್ದೀಯ ಅಂತಾನೆ ಎಂದು ಹೇಳಿದ್ದಾರೆ.
ಮಗು ನೋಡಿಕೊಳ್ಳೋಕೆ ಹಣ ಕೊಡಲಿ. ಇಲ್ಲ ಅಂದರೆ ನಾನು ಹೇಗೆ ನೋಡಿಕೊಳ್ಳಲಿ. ನಮ್ಮ ತಂದೆ ತಾಯಿ ಬಳಿ ಹಣ ಇಲ್ಲ. ರೌಡಿಗಳ ಜೊತೆ ಬ್ಯಾಗ್ರೌಂಡ್ ನಲ್ಲಿ ಕೆಲಸ ಮಾಡ್ತಾನೆ. ಅವನ ಬಳಿ ನೂರು ಇನ್ಸ್ಟಾಗ್ರಾಮ್ ಐಡಿ, ನೂರು ಫೇಸ್ ಬುಕ್ ಐಡಿ ಇದೆ. ನೂರು ಮೊಬೈಲ್ ನಂಬರ್ ಚೇಂಜ್ ಮಾಡ್ತಾನೆ. ನಮಗೆ ನ್ಯಾಯ ಕೊಡಿಸಿ ಎಂದು ಜೋಶಿತಾ ಹೇಳಿದ್ದಾರೆ.


