ಬೆಂಗಳೂರಿನ ಹಲವೆಡೆ ಡಿ.6, 8ಕ್ಕೆ ಪವರ್ ಕಟ್, ಯಾವ ಏರಿಯಾದಲ್ಲಿ 8 ಗಂಟೆ ವಿದ್ಯುತ್ ಕಡಿತ?, ನಿರ್ವಹಣಾ ಕಾಮಾಗಾರಿ ಹಿನ್ನಲೆಯಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಯಾವ ಏರಿಯಾದಲ್ಲಿ, ಎಷ್ಟುಗಂಟೆಯಿಂದ ವಿದ್ಯುತ್ ಕಡಿತಗೊಳ್ಳಲಿದೆ?

ಬೆಂಗಳೂರು (ಡಿ.06) ಬೆಂಗಳೂರಿನ ಹಲವೆಡ ಇಂದು (ಡಿ.06) ವಿದ್ಯುತ್ ವ್ಯತ್ಯಯವಾಗುತ್ತಿದೆ. ಇಂದು 8 ಗಂಟೆಗಳ ಕಾಲ ವಿದ್ಯುತ್ ಕಡಿತಗೊಳ್ಳುತ್ತಿದೆ ಎಂದು ಬೆಸ್ಕಾಂ ಹೇಳಿದೆ. ನಿರ್ವಹಣಾ ಕಾಮಾಗಾರಿ ಹಿನ್ನಲೆಯಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಡಿಸೆಂಬರ್ 6 ರಿಂದ ಡಿಸೆಂಬರ್ 8ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಹಲವು ಏರಿಯಾದಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. ಈ ಕುರಿತು ಸಾರ್ವಜನಿಕರು ಸಹಕರಿಸಬೇಕಾಗಿ ಬೆಸ್ಕಾಂ ವಿನಂತಿಸಿದೆ.

ಯಾವ ವಲಯದಲ್ಲಿ ಇಂದು ವಿದ್ಯುತ್ ಕಡಿತ

ಬೆಂಗಳೂರಿನ ಹಲವು ಏರಿಯಾದಲ್ಲಿ ಇಂದು ವಿದ್ಯುತ್ ಕಡಿತಗೊಳ್ಳುತ್ತಿದೆ. ಈ ಪೈಕಿ ಬೆಳತೂರು, ಅಯ್ಯಪ್ಪ ದೇವಸ್ಥಾನ, ಕುಂಬೇನ ಅಗ್ರಹಾರ, ಪಾಟಲಮ್ಮ ನಿವೇಶನ, ವಿ.ಎಸ್.ಆರ್. ನಿವೇಶನ, ಕಾಡುಗೋಡಿ, ಚನ್ನಸಂದ್ರ, ಎಫ್.ಸಿ.ಐ. ಧಾನ್ಯ ಸಂಗ್ರಹಾಗಾರ, ಸಫಲ್, ಶಂಕರಪುರ, ಸಿದ್ಧಾರ್ಥ ನಿವೇಶನ, ಸಾಯಿ ಆಶ್ರಮ, ಎಚ್.ಡಿ.ಎಫ್.ಡಿ. ಹಣಕಾಸು ಸಂಸ್ಥೆ, ಅಲೆಂಬಿಕ್ ವಸತಿ ಸಮುಚ್ಚಯ, ಮಾರ್ವೆಲ್ ವಸತಿ ಸಮುಚ್ಚಯ, ಇಮ್ಮಡಿಹಳ್ಳಿ, ಕೈತೋಟ, ದಿನ್ನೂರು, ಜಿ.ಕೆ. ನಿವೇಶನ, ದಿನ್ನೂರು ಆರಕ್ಷಕ ಠಾಣೆ, ಮೈತ್ರಿ ನಿವೇಶನ, ಸರ್ಕಾರಿ ಬಹುತಾಂತ್ರಿಕ ವಿದ್ಯಾಲಯ, ಚನ್ನಸಂದ್ರ ಮುಖ್ಯ ರಸ್ತೆ, ನಾಗೊಂಡನಹಳ್ಳಿ, ನಾಗರಾಜ್ ನಿವೇಶನ, ದೊಮ್ಮರಪಾಳ್ಯ, ಪ್ರಶಾಂತ್ ನಿವೇಶನ, ಉಪಕಾರ್ ನಿವೇಶನ, ಪೃಥ್ವಿ ನಿವೇಶನ, ಸ್ವಾಮಿ ವಿವೇಕಾನಂದ ರಸ್ತೆ, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಇ.ಸಿ.ಸಿ. ರಸ್ತೆ, ನಾಯ್ಡು ನಿವೇಶನ, ಒಳಗಿನ ವರ್ತುಳ, ಕರುಮಾರಿಯಪ್ಪ ದೇವಸ್ಥಾನ ರಸ್ತೆ, ಭುವನೇಶ್ವರಿ ರಸ್ತೆ, ಭೈರಪ್ಪ ನಿವೇಶನ, ವಿನಾಯಕ್ ನಿವೇಶನ, ರುಸ್ತುಂಜಿ ನಿವೇಶನ, ಪ್ರೆಸ್ಟೀಜ್ ಮೇಬೆರಿ ವಸತಿ ಸಮುಚ್ಚಯ, ಆದರ್ಶ್ ಕೃಷಿ ಬಯಲು, ಕೊಳವೆಬಾವಿ ರಸ್ತೆ, ಹೊರ ವರ್ತುಳ, ವಿನಾಯಕನಗರ, ಬ್ರಿಗೇಡ್ ಕಾಸ್ಮೊಪೊಲಿಸ್ ವಸತಿ ಸಮುಚ್ಚಯ, ಗೋಯಲ್ ಹರಿಯಾಣ ವಸತಿ ಸಮುಚ್ಚಯ, ವಿಜಯನಗರ, ಗಾಂಧಿಪುರ, ಇಮ್ಮಡಿಹಳ್ಳಿ ಮುಖ್ಯ ರಸ್ತೆ, ದೊಬರಪಾಳ್ಯ, ಸುಮಧುರ ವಸತಿ ಸಮುಚ್ಚಯ ಮತ್ತು ಸುತ್ತಮುತ್ತಲಿನ ಪ್ರದೇಶಗಲ್ಲಿ ಬೆಳಗ್ಗೆ 9 ಗಂಟೆಯಿಂ ಸಂಜೆ 5 ಗಂಟೆ ವರೆಗೆ ವಿದ್ಯುತ್ ಕಡಿತಗೊಳ್ಳಲಿದೆ.

66/11KV ವಲಯದಲ್ಲಿ ನಿರ್ವಹಣಾ ಕಾಮಗಾರಿ

ಬೆಂಗಳೂರಿನ 66/11KV ಕಾಡುಗೋಡಿ ಸಬ್ ಸ್ಟೇಶನ್ ವಲಯದಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿದೆ. ಹೀಗಾಗಿ ಕಾಡುಗೋಡಿ ಸಬ್ ಸ್ಟೇಶನ್‌ನಿಂದ ವಿದ್ಯುತ್ ಸಂಪರ್ಕಿತ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ರೂಟಿನ್ ನಿರ್ವಹಣೆ ಮಾಡಲಾಗುತ್ತಿದೆ ಎಂದು ಬೆಸ್ಕಾಂ ಹೇಳಿದೆ. ಡಿಸೆಂಬರ್ 8 ವರೆಗೆ ಬೆಂಗಳೂರಿನ ವಿವಿದ ಸ್ಟೇಶನ್ ಹಾಗೂ ಸಬ್ ಸ್ಟೇಶನ್‌ಗಳಲ್ಲಿ ಕಾಮಗಾರಿ ನಡೆಯಲಿದೆ. ಹೀಗಾಗಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಹೇಳಿದೆ.