Puttur Youth Found Dead in Bengaluru Lodge After 8 Days with Girlfriend ಬೆಂಗಳೂರಿನ ಮಡಿವಾಳದ ಲಾಡ್ಜ್‌ ಒಂದರಲ್ಲಿ ಪ್ರೇಯಸಿ ಜೊತೆ 8 ದಿನ ತಂಗಿದ್ದ ಪುತ್ತೂರು ಮೂಲದ ಯುವಕ ತಕ್ಷಿತ್ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಯುವತಿ ಲಾಡ್ಜ್‌ನಿಂದ ತೆರಳಿದ ಬಳಿಕ ಯುವಕ ಶವವಾಗಿ ಪತ್ತೆಯಾಗಿದೆ.

ಬೆಂಗಳೂರು(ಅ.18): ರಾಜಧಾನಿ ಬೆಂಗಳೂರಿನಲ್ಲಿ ಪತ್ತೂರು ಮೂಲದ ಯುವಕ ನಿಗೂಢವಾಗಿ ಸಾವು ಕಂಡಿದ್ದಾರೆ. ಲಾಡ್ಜ್‌ ಒಂದರಲ್ಲಿ 20 ವರ್ಷದ ತಕ್ಷಿತ್‌ ಎನ್ನುವ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಡಿವಾಳದ ಗ್ರ್ಯಾಂಡ್ ಚಾಯ್ಸ್ ಲಾಡ್ಜ್‌ನಲ್ಲಿ ತಕ್ಷಿತ್‌ ಶವ ಶುಕ್ರವಾರ ರಾತ್ರಿ ಪತ್ತೆಯಾಗಿದೆ. 8 ದಿನದ ಹಿಂದೆ ತಕ್ಷಿತ್‌ ತನ್ನ ಪ್ರೇಯಸಿಯ ಜೊತೆ ಬೆಂಗಳೂರಿಗೆ ಬಂದಿದ್ದ ಎಂದು ವರದಿಯಾಗಿದೆ.

8 ದಿನಗಳ ಕಾಲ ಲಾಡ್ಜ್‌ನಲ್ಲಿ ಲವ್ವರ್ಸ್‌ಗಳು ವಾಸವಿದ್ದರು. 9ನೇ ದಿನ ನಿಗೂಢವಾಗಿ ಹುಡುಗ ಸಾವು ಕಂಡಿದ್ದಾರೆ. ಯುವಕ ಸಾವು ಕಾಣುವ ಮುಂಚೆಯೇ ಯುವತಿ ಬೆಂಗಳೂರನ್ನು ತೊರೆದಿದ್ದಳು ಎನ್ನಲಾಗಿದೆ. ಇದರಿಂದಾಗಿ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದೆ.

ತಕ್ಷಿತ್ ಅಕ್ಟೋಬರ್ 9 ರಂದು ಗ್ರ್ಯಾಂಡ್‌ ಚಾಯ್ಸ್‌ನಲ್ಲಿ ರೂಮ್‌ ಮಾಡಿದ್ದ. ಮಡಿಕೇರಿಯ ವಿರಾಜಪೇಟೆಯ ತನ್ನ ಪ್ರೇಯಸಿ ಪ್ರಿಯಾಂಕಾ ಜೊತೆ ತಕ್ಷಿತ್‌ ರೂಮ್‌ ಮಾಡಿಕೊಂಡಿದ್ದ. ತಕ್ಷಿತ್ ಹಾಗೂ ಆತನ ಲವ್ವರ್ ಪಣಂಬೂರಿನಲ್ಲಿ ಈ ಹಿಂದೆ ಬಿಬಿಎ ಓದುತ್ತಿದ್ದರು. ಬ್ಯಾಕ್ ಲಾಗ್ಸ್ ಇದ್ದ ಕಾರಣಕ್ಕೆ ಇಬ್ಬರೂ ಕಾಲೇಜಿಂದ ಡ್ರಾಪೌಟ್ ಆಗಿದ್ದರು. ಈ ವೇಳೆ ತಕ್ಷಿತ್‌, ತನ್ನ ಮನೆಯವರಿಗೆ ಮೈಸೂರಿಗೆ ಓದೋಕೆ ಹೋಗ್ತೀನಿ ಅಂತಾ ಸುಳ್ಳು ಹೇಳಿ ಪ್ರೇಯಸಿ ಜೊತೆ ಮಡಿವಾಳದ ಲಾಡ್ಜ್‌ನಲ್ಲಿ ರೂಮ್‌ ಮಾಡಿಕೊಂಡಿದ್ದ.

ಕಳೆದ ಎಂಟು ದಿನವೂ ತಿಂಡಿ, ಊಟ ಪಾರ್ಸೆಲ್‌ ತರಿಸಿಕೊಂಡೇ ರೂಮ್‌ನಲ್ಲಿ ಕಾಲ ಕಳೆಯುತ್ತಿದ್ದರು. ನಿನ್ನೆ ಸ್ವಿಗ್ಗಿಯಲ್ಲಿ ತಕ್ಷಿತ್ ಹಾಗೂ ಆಕೆ ಊಟ ತರಿಸಿಕೊಂಡಿದ್ದಾರೆ. ಊಟ ಮಾಡಿದ ಬಳಿಕ ಫುಟ್‌ ಪಾಯ್ಸನ್‌ ಆಗಿತ್ತು. ಬಳಿಕ ಇಬ್ಬರೂ ಮೆಡಿಕಲ್‌ಗೆ ಹೋಗಿ ಮಾತ್ರೆ ತಂದು ತಿಂದಿದ್ದರು. ಸ್ವಲ್ಪ ಸುಧಾರಿಸಿಕೊಂಡ ಪ್ರಿಯಾಂಕಾ ರೂಮ್‌ ಚೆಕ್‌ಔಟ್‌ ಮಾಡಿ ಊರಿಗೆ ವಾಪಸಾಗಿದ್ದಳು. ಆದರೆ, ರೂಮ್‌ನಲ್ಲಿತೇ ಇದ್ದ ತಕ್ಷಿತ್‌ ಮಲಗಿದ್ದಲ್ಲಿಯೇ ಹೆಣವಾಗಿ ಹೋಗಿದ್ದಾನೆ.

ಹೃದಯಾಘಾತದಿಂದ ತಕ್ಷಿತ್‌ ಸಾವು?

ಶುಕ್ರವಾರ ರಾತ್ರಿ ಲಾಡ್ಜ್‌ನ ಸಿಬ್ಬಂದಿ ರೂಮ್‌ನ ಬಾಗಿಲು ತಟ್ಟಿದ್ದಾರೆ. ಆದರೆ, ತಕ್ಷಿತ್ ನ ರೂಮ್‌ನಿಮದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಮಾಸ್ಟರ್ ಕೀ ಬಳಸಿ ರೂಮ್ ತೆರೆದಿರುವ ಲಾಡ್ಜ್ ಸಿಬ್ಬಂದಿಗೆ ತಕ್ಷಿತ್ ನ ಮೃತದೇಹ ಕಾಣಿಸಿದೆ. ತಕ್ಷಣ ಮಡಿವಾಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಕೋನಗಳಲ್ಲಿಯೂ ತನಿಖೆ ಆರಂಭಿಸಿದ್ದಾರೆ. ಮೇಲ್ನೋಟಕ್ಕೆ ತಕ್ಷಿತ್ ಗೆ ಹೃದಯಾಘಾತ ಆಗಿರೋ ಶಂಕೆ ವ್ಯಕ್ತವಾಗಿದ್ದು, ಯುಡಿಆರ್ ದಾಖಲಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.

ಪೊಲೀಸರಿಗೆ ಹಲವು ಅನುಮಾನ

ಪ್ರಕರಣದಲ್ಲಿ ಪೊಲೀಸರಿಗೆ ಹಲವು ಅನುಮಾನ ವ್ಯಕ್ತವಾಗಿದೆ. ಸ್ವಿಗ್ಗಿಯಲ್ಲಿ ತಂದ ಆಹಾರದಿಂದ ಫುಡ್‌ ಪಾಯ್ಸನ್‌ ಆಗಿರಬಹುದು ಎನ್ನುವ ಅನುಮಾನವಿದೆ. ಯುವತಿ ರೂಮ್‌ನಿಂದ ಹೋಗೋವರೆಗೂ ಜೀವಂತವಾಗಿದ್ದ ತಕ್ಷಿತ್‌ ನಂತರ ಸಾವು ಕಂಡಿದ್ದು ಹೇಗೆ? ತಕ್ಷಿತ್ ಯುವತಿ ಜೊತೆ 8 ದಿನ ರೂಮ್‌ನಲ್ಲಿ ಇದ್ದಿದ್ದು ಏಕೆ? ತಕ್ಷಿತ್ ಸೇವಿಸಿದ್ದ ಆಹಾರದಲ್ಲಿ ವಿಷದ ಅಂಶ ಇತ್ತಾ..? ವಿಷದ ಅಂಶ ಇದ್ದರೆ ಯಾರು ವಿಷವನ್ನ ಆಹಾರದೊಂದಿಗೆ ಬೆರೆಸಿದ್ದವರು ಯಾರು? ಯುವತಿ ಲವ್ ಬ್ರೇಕಪ್ ಮಾಡಿ ಹೋಗಿದ್ದಕ್ಕೆ ವಿಷ ಕುಡಿದು ತಕ್ಷಿತ್ ಆತ್ಮಹತ್ಯೆ ಮಾಡಿಕೊಂಡನೇ? ಇಲ್ಲಾ ವಿಷ ಸೇವಿಸೋ ತರಹ ಯುವತಿ‌ ನಾಟಕವಾಡಿ ತಕ್ಷಿತ್ ಗೆ ವಿಷ ಉಣಿಸಿದಳೇ? ಅಥವಾ ಹೃದಯಾಘಾತ ಆಯ್ತಾ? ಈ ಎಲ್ಲಾ ಅನುಮಾನಕ್ಕೆ ಮಡಿವಾಳ ಪೊಲೀಸರು ಉತ್ತರ ಹುಡುಕುವ ಪ್ರಯತ್ನದಲ್ಲಿದ್ದಾರೆ.