ಡಿ.25ಕ್ಕೆ ಸಾಲು ಸಾಲು ದುರಂತ, ಲಾರಿ ಬೈಕ್ ಭೀಕರ ಅಪಘಾತದಲ್ಲಿ ನಾಲ್ವರು ಸಾವು, ರಾಜ್ಯ ಸೇರದಂತೆ ದೇಶದಲ್ಲಿ ಇಂದು ಸರಣಿ ಅಪಘಾತಗಳು ನಡೆದಿದೆ. ಚಿತ್ರದುರ್ಗದ ಬಸ್ ದುರಂತ ಬಳಿಕ ಇದೀಗ ಲಾರಿ ಬೈಕ್ ಅಪಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 

ಚಿಕ್ಕಬಳ್ಳಾಪುರ (ಡಿ.25) ಡಿಸೆಂಬರ್ 25ರಂದು ಭಾರತದ ಹೆಲೆವೆಡೆ ಕ್ರಿಸ್ಮಸ್ ಸಂಭ್ರಮ ಮನೆ ಮಾಡಿದೆ. ಕರ್ನಾಟಕದಲ್ಲೂ ಅದ್ಧೂರಿಯಾಗಿ ಕ್ರಿಸ್ಮಸ್ ಹಬ್ಬ ಆಚರಿಸಲಾಗುತ್ತಿದೆ. ರಜಾ ದಿನವಾಗಿದ್ದ ಕಾರಣ ಹಾಗೂ ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಹಲವರು ಪ್ರವಾಸ ತೆರಳಿದ್ದಾರೆ. ಈ ವರ್ಷ ಡಿಸೆಂಬರ್ 25 ರಾಜ್ಯದ ಪಾಲಿಗೆ ಕರಾಳ ದಿನವಾಗಿದೆ. ಸಾಲು ಸಾಲು ಅವಘಡಗಳೇ ಸಂಭವಿಸಿದೆ. ಚಿತ್ರದುರ್ಗದ ಬಸ್ ಹೊತ್ತಿ ಉರಿದ ಘಟನೆ ಸೇರಿದಂತೆ ಹಲವು ಅಪಘಾತ ಸಂಭವಿಸಿದೆ. ಇದೀಗ ಚಿಕ್ಕಬಳ್ಳಾಪುರದಲ್ಲಿ ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಒಂದೇ ಬೈಕ್‌ನಲ್ಲಿ ನಾಲ್ವರು ತೆರಳಿದಾಗ ಘಟನೆ

ಒಂದೇ ಬೈಕ್‌ನಲ್ಲಿ ನಾಲ್ವರು ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿದ್ದ ನಾಲ್ವರು ಸ್ಥಳದಲ್ಲ ಮೃತಪಟ್ಟಿದ್ದಾರೆ. ಮೃತರನ್ನು ನರಸಿಂಹ, ಮನೋಜ್, ಅರುಣ್, ನಂದೀಶ್ ಎಂದು ಗುರುತಿಸಲಾಗಿದೆ. ಮೃತರನ್ನ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಸ್ಥಳಕ್ಕೆ ಚಿಕ್ಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಬೈಸ್ ಬೈಕ್ ನಡುವೆ ಅಪಘಾತ

ಶಿವಮೊಗ್ಗದ ಪೆಸಿಟ್ ಕಾಲೇಜಿನ ಬಳಿ KSRTC ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸಿರಿಗೆರೆ ಮೂಲದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪೆಸಿಟ್ ಕಾಲೇಜಿನ ಬಳಿ ಶಿವಮೊಗ್ಗದಿಂದ ಸಾಗರ ರಸ್ತೆಯ ಕಡೆ ಹೊರಟಿದ್ದ KSRTC ಬಸ್ ಗೆ ಬೈಕ್ ಡಿಕ್ಕಿಯಾಗಿದೆ. ಬೈಕ್ ಬಸ್ ಅಡಿ ಸಿಲುಕಿಕೊಂಡಿದೆ. ಬಸ್ ಸಹ ಡಿವೈಡರ್ ಗೆ ಡಿಕ್ಕಿ ಹೊಡೆದು ನಿಂತಿದೆ. ಬೈಕ್ ಸವಾರ ಬೈಕ್ ಬಿಟ್ಟು ಹಾರಿದ ಪರಿಣಾಮ ಪ್ರಾಣಾಪಾಯದಿಂದ ಆತ ಪಾರಾಗಿದ್ದಾನೆ. ಗಾಯಗೊಂಡಿರುವ ಸಿರಿಗೆರೆಯ ವ್ಯಕ್ತಿ ಮೆಗ್ಗಾನ್ ಆಸ್ಪತ್ರೆ ಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿಂದು ಸಾಲು ಸಾಲು ಅವಘಡ ಸಂಭವಿಸಿದೆ. ಮಧ್ಯ ರಾತ್ರಿ ಸಂಭವಿಸಿದ ಚಿತ್ರದುರ್ಗ ಬಸ್ ದುರಂತ ಅತ್ಯಂತ ಘನಘೋರವಾಗಿದೆ. ಅತೀ ವೇಗದ ಟ್ರಕ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪಕ್ಕ ಹೆದ್ದಾರಿಯಲ್ಲಿ ಸಾಗುತ್ತಿದ್ದ ಪ್ರಯಾಣಿಕರ ಸ್ಲೀಪರ್ ಬಸ್‌ಗೆ ಡಿಕ್ಕಿಯಾಗಿತ್ತು. ಬಸ್ ಹೊತ್ತಿ ಉರಿದು ಐದಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದರು. 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಬಳಿಕ ಶಾಲಾ ಬಸ್ ಅಪಘಾತ, ಪ್ರವಾಸಿಗರ ಜೀಪ್ ಪಲ್ಟಿ, ಮೈಸೂರು ಅರಮನೆ ದ್ವಾರದ ಬಳಿ ಹೀಲಿಯಂ ಸಿಲಿಂಡರ್ ಸ್ಪೋಟ ಪ್ರಕರಣ ಸೇರಿದಂತೆ ಹಲವು ದುರಂತ ಘಟನೆಗಳು ಇಂದು ನಡದಿದೆ.