Celebrities Love Breakup Stories: ಸಿನಿಮಾದಲ್ಲಿ ಪ್ರೀತಿ ಪಡೆಯಲು ಒದ್ದಾಡಿ ಗುದ್ದಾಡುವ ಕೆಲ ಹೀರೋ, ಹೀರೋಯಿನ್‌ಗಳು ನಿಜ ಜೀವನದಲ್ಲಿ ಪ್ರೀತಿ ಪಡೆಯದೆ, ಸಾರ್ವಜನಿಕವಾಗಿ ಮುಜುಗರಕ್ಕೀಡಾಗಿದ್ದುಂಟು. ಹಾಗಾದರೆ ಆ ಜೋಡಿಗಳು ಯಾರು? 

ಸಿನಿಮಾದಲ್ಲಿ ಕೆಲ ಜೋಡಿಗಳ ಲವ್‌ ಸ್ಟೋರಿ ನೋಡಿ ನಮ್ಮ ಲವ್‌ ಹೀಗೆ ಇದ್ದರೆ ಎಷ್ಟು ಚೆಂದ ಎಂದು ಕನಸು ಕಾಣುವವರಿದ್ದಾರೆ. ಆದರೆ ಸಿನಿಮಾದಲ್ಲಿ ಕೆಲ ಪ್ರೇಮಕಥೆಗಳು ಅರ್ಧಂಬರ್ಧ ಆಗಿರುವಂತೆ ಕೆಲ ಕಲಾವಿದರ ರಿಯಲ್‌ ಲವ್‌ ಸ್ಟೋರಿಗಳು ಕೂಡ ಅಪೂರ್ಣ ಆಗಿವೆ. ಅಷ್ಟೇ ಅಲ್ಲದೆ ಸಾರ್ವಜನಿಕವಾಗಿ ಮುಜುಗರಕ್ಕೀಡಾಗಿದ್ದುಂಟು. ಹಾಗಾದರೆ ಆ ಜೋಡಿಗಳು ಯಾರು? ಯಾರು?

ಪ್ರೀತಿ ಜಿಂಟಾ

2005ರಲ್ಲಿ ನಟಿ ಪ್ರೀತಿ ಜಿಂಟಾ ಅವರು ನೆಸ್‌ ವಾಡಿಯಾ ಜೊತೆಗೆ ಡೇಟ್‌ ಮಾಡಲು ಆರಂಭಿಸಿದ್ದರು. ಇವರ ಸಂಬಂಧ ಮಾಧ್ಯಮದ ಮುಂದೆ ಬಯಲಾಗಿತ್ತು. 2007ರಲ್ಲಿ ಈ ಜೋಡಿ ನಟಿ ಐಶ್ವರ್ಯಾ ರೈ, ಅಭಿಷೇಕ್‌ ಬಚ್ಚನ್‌ ಮದುವೆಯಲ್ಲಿ ಭಾಗಿಯಾಗಿತ್ತು. 2008ರಲ್ಲಿ ಐಪಿಎಲ್‌ ಟೀಂ ಕಿಂಗ್ಸ್‌ ಪಂಜಾಬ್‌ಗೆ ಸಹಸಂಸ್ಥಾಪಕರಾಗಿದ್ದರು. 2009ರಲ್ಲಿ ಈ ಜೋಡಿ ದೂರ ಆಗಿತ್ತು. 2014ರಲ್ಲಿ ಪ್ರೀತಿ ಜಿಂಟಾ ಅವರು ನೆಸ್‌ ವಾಡಿಯಾ ವಿರುದ್ಧ ದೂರು ದಾಖಲಿಸಿದ್ದರು. ಬೆದರಿಕೆ ಹಾಕಿದರು, ದೌರ್ಜನ್ಯ ಮಾಡಿದರು, ಮಾತಿನಿಂದ ನಿಂದಿಸಿದರು ಎಂದೆಲ್ಲ ಆರೋಪಿಸಿದರು. ನನಗೆ ಸಾರ್ವಜನಿಕವಾಗಿ ಅವಮಾನ ಮಾಡಿದರು, ಮುಖದ ಮೇಲೆ ಸಿಗರೇಟ್‌ ಸುಟ್ಟರು ಎಂದೆಲ್ಲ ಪ್ರೀತಿ ಆರೋಪ ಮಾಡಿದ್ದರು. ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್‌ ಅಲಿ ಜಿನ್ನಾ ಅವರ ಮರಿ ಮೊಮ್ಮಗ ನೆಸ್‌ ವಾಡಿಯಾ. ಆ ಬಳಿಕ ಪ್ರೀತಿ ಅವರು ಅಮೆರಿಕನ್‌ ಮೂಲದ Gene Goodenouph ಜೊತೆ ಮದುವೆಯಾದರು. ಈಗ ಈ ಜೋಡಿ ಅವಳಿ ಮಕ್ಕಳ ಪಾಲಕರಾಗಿದ್ದಾರೆ.

ಸಲ್ಮಾನ್‌ ಖಾನ್-‌ ಐಶ್ವರ್ಯಾ ರೈ

ನಟ ಸಲ್ಮಾನ್‌ ಖಾನ್‌ ಹಾಗೂ ಐಶ್ವರ್ಯಾ ರೈ ಅವರು ‘ಹಮ್‌ ದಿಲ್‌ ದೆ ಚುನಕೇ ಸನಂ’ ಸಿನಿಮಾ ಟೈಮ್‌ನಲ್ಲಿ ಪ್ರೀತಿಯಲ್ಲಿ ಬಿದ್ದರು. ಸಲ್ಮಾನ್‌ ಖಾನ್‌ ವಿರುದ್ಧ ಐಶ್ವರ್ಯಾ ರೈ ಅವರು ಗಂಭೀರ ಆರೋಪಗಳನ್ನು ಕೂಡ ಮಾಡಿದ್ದರು. ಪೊಸೆಸ್ಸಿವ್‌, ದೈಹಿಕವಾಗಿ ದೌರ್ಜನ್ಯ ಮಾಡಿದರು, ಸಿನಿಮಾ ಶೂಟಿಂಗ್‌ಗಳಿಗೆ ಸಮಸ್ಯೆ ತಂದರು, ಮನೆಯಲ್ಲಿ ಕೂಡ ಕಿರಿಕಿರಿ ಮಾಡಿದರು ಎಂದೆಲ್ಲ ಐಶ್ವರ್ಯಾ ಆರೋಪ ಮಾಡಿದ್ದರು. ಬ್ರೇಕಪ್‌ ಆದ ಬಳಿಕ ಕೂಡ ಪದೇ ಪದೇ ಫೋನ್‌ ಮಾಡೋದು, ಭಾವನಾತ್ಮಕವಾಗಿ ಮನಸ್ಸು ನೋಯಿಸಿದರು ಎಂದೆಲ್ಲ ಐಶ್‌ ಹೇಳಿದ್ದರು. ಆ ಬಳಿಕ ವಿವೇಕ್‌ ಒಬೆರಾಯ್‌ ಜೊತೆ ಐಶ್ವರ್ಯಾ ಪ್ರೀತಿಯಲ್ಲಿ ಬಿದ್ದಿದ್ದರು. ವಿವೇಕ್‌ಗೂ ಕೂಡ ಸಲ್ಮಾನ್‌ ಖಾನ್‌ ಫೋನ್‌ ಮಾಡಿ ನಿಂದಿಸಿದ್ದರಂತೆ. ವಿವೇಕ್‌ ಒಬೆರಾಯ್‌ ಅವರು ಸಾಕಷ್ಟು ಬಾರಿ ಸಾರ್ವಜನಿಕವಾಗಿ ಕ್ಷಮೆ ಕೇಳಿದರೂ ಕೂಡ ಸಲ್ಮಾನ್‌ ಎಂದಿಗೂ ಅವರ ಜೊತೆ ಸ್ನೇಹ ಸಂಬಂಧ ಬೆಳೆಸಲೇ ಇಲ್ಲ. 2007ರಲ್ಲಿ ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯಾ ರೈ ಅವರು ಮದುವೆಯಾದರು.

ದೀಪಿಕಾ ಪಡುಕೋಣೆ-ರಣಬೀರ್‌ ಕಪೂರ್

ನಟಿ ದೀಪಿಕಾ ಪಡುಕೋಣೆ ಹಾಗೂ ರಣಬೀರ್‌ ಕಪೂರ್‌ ಅವರು ಕೆಲ ವರ್ಷಗಳ ಕಾಲ ಡೇಟ್‌ ಮಾಡಿದ್ದರು. ಆದರೆ ಈ ಸಂಬಂಧ ಮದುವೆವರೆಗೂ ಹೋಗಲೇ ಇಲ್ಲ. “ನನಗೆ ರಣಬೀರ್‌ ಕಪೂರ್‌ ಎರಡು ಬಾರಿ ಮೋಸ ಮಾಡಿದ್ದಾನೆ. ಕಾಂಡೋಮ್‌ ಬ್ರ್ಯಾಂಡ್‌ಗೆ ಅವನು ರಾಯಭಾರಿ ಆಗಬೇಕಿತ್ತು” ಎಂದು ಹೇಳಿದ್ದರು. ಆಗ ರಣಬೀರ್‌ ಕಪೂರ್‌ ಅವರು ಇದು ನಿಜಕ್ಕೂ ಜವಾಬ್ದಾರಿಯುತ ಸಂದೇಶ ಎಂದು ಹೇಳಿದ್ದರು. 2018ರಲ್ಲಿ ದೀಪಿಕಾ ಪಡುಕೋಣೆ, ರಣ್‌ಬೀರ್‌ ಸಿಂಗ್‌ ಮದುವೆ ಆದರು. 2022ರಲ್ಲಿ ಆಲಿಯಾ ಭಟ್‌, ರಣಬೀರ್‌ ಕಪೂರ್‌ ಮದುವೆ ಆದರು.

ಕಂಗನಾ ರಣಾವತ್‌, ಹೃತಿಕ್‌ ರೋಶನ್

ಕಂಗನಾ ರಣಾವತ್‌ ಹಾಗೂ ಹೃತಿಕ್‌ ರೋಶನ್‌ ಸಂಬಂಧ ಕೂಡ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ನನ್ನನ್ನು ಮದುವೆ ಆಗ್ತೀನಿ ಅಂತ ಮಾತು ಕೊಟ್ಟಿದ್ದ ಹೃತಿಕ್‌ ರೋಶನ್‌ ಕ್ವೀನ್‌ ರಿಲೀಸ್‌ ಟೈಮ್‌ ವೇಳೆಗೆ ಬ್ರೇಕಪ್‌ ಮಾಡಿಕೊಂಡರು. ಕಂಗನಾ ಜೊತೆಗಿನ ಸಂಬಂಧದ ಬಗ್ಗೆ ಹೃತಿಕ್‌ ರೋಶನ್‌ ಎಂದಿಗೂ ಏನೂ ಹೇಳಿಲ್ಲ. ಸುಸ್ಸಾನೆ ಖಾನ್‌ ಅವರನ್ನು ಮದುವೆಯಾಗಿದ್ದ ಹೃತಿಕ್‌ ಆಮೇಲೆ ಡಿವೋರ್ಸ್‌ ಪಡೆದರು. ನನೆಗ 100 ಇಮೇಲ್‌ ಕಳಿಸಿದ್ದಾರೆ ಎಂದು ಹೃತಿಕ್‌ ಅವರು ಕಂಗನಾ ವಿರುದ್ಧ ಆರೋಪ ಮಾಡಿದ್ದರು. ಆದರೆ ಈ ಪ್ರಕರಣಕ್ಕೆ ಸರಿಯಾದ ಅಂತ್ಯ ಸಿಕ್ಕಿಲ್ಲ. ಈಗ ಹೃತಿಕ್‌ ಇನ್ನೋರ್ವ ಹುಡುಗಿ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ.

ಕರೀನಾ ಕಪೂರ್-ಶಾಹೀದ್‌ ಕಪೂರ್‌

ಕರೀನಾ ಕಪೂರ್‌ ಹಾಗೂ ಶಾಹೀದ್‌ ಕಪೂರ್‌ ಅವರು 2004ರಲ್ಲಿ ‘ಫಿದಾ’ ಸಿನಿಮಾ ಟೈಮ್‌ನಲ್ಲಿ ಡೇಟ್‌ ಮಾಡಲು ಆರಂಭಿಸಿದ್ದರು. ಕರೀನಾ ಕಪೂರ್‌ ಅವರೇ ಶಾಹೀದ್‌ಗೆ ಪ್ರೇಮ ನಿವೇದನೆ ಮಾಡಿದ್ದರು. 2007ರಲ್ಲಿ ‘ಜಬ್‌ ವಿ ಮೆಟ್’‌ ಸಿನಿಮಾ ರಿಲೀಸ್‌ ವೇಳೆಗೆ ಇವರಿಬ್ಬರು ದೂರ ದೂರ ಆಗಿದ್ದಾರೆ. ಆ ಬಳಿಕ ಸೈಫ್‌ ಅಲಿ ಖಾನ್‌, ಕರೀನಾ ಡೇಟ್‌ ಮಾಡಲು ಆರಂಭಿಸಿದ್ದರು. ಕರೀನಾ ಜೊತೆಗೆ ಮತ್ತೆ ಕೆಲಸ ಮಾಡ್ತೀರಾ ಎಂದು ಶಾಹೀದ್‌ಗೆ ಪ್ರಶ್ನೆ ಮಾಡಿದಾಗ, “ಡೈರೆಕ್ಟರ್‌ ಹೇಳಿದೆ ನಾನು ಹಸು, ಎಮ್ಮೆ ಜೊತೆಗೂ ಕೆಲಸ ಮಾಡುವೆ” ಎಂದು ಹೇಳಿದ್ದರು. 2012ರಲ್ಲಿ ಕರೀನಾ ಕಪೂರ್‌, ಸೈಫ್‌ ಅಲಿ ಖಾನ್‌ ಮದುವೆಯಾದರು. 2015ರಲ್ಲಿ ಶಾಹೀದ್‌ ಕಪೂರ್‌, ಮೀರಾ ರಜಪೂತ್‌ ಮದುವೆಯಾದರು. ಬ್ರೇಕಪ್‌ ಆದಬಳಿಕ ಎಂದಿಗೂ ಮಾತನಾಡದ ಈ ಜೋಡಿ ಕೆಲ ತಿಂಗಳುಗಳ ಹಿಂದೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು.