Bigg Boss Kannada Love Stories: ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಕೆಲ ಜೋಡಿ ಇವರು ಲವ್ ಮಾಡ್ತಿದ್ದಾರೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದರು. ಕೆಲವರು ಪ್ರೀತಿಯನ್ನು ಹೇಳಿದರೂ ಅದು ಉಳಿಯಲಿಲ್ಲ.
ಬಿಗ್ ಬಾಸ್ ಮನೆಯಲ್ಲಿ ( Bigg Boss Kannada ) ಜಗಳ, ಲವ್ ಸ್ಟೋರಿಗಳು, ಗಾಸಿಪ್ ಸಹಜ. ಇಲ್ಲಿ ಸೌಂಡ್ ಮಾಡಿದ ಲವ್ ಗಾಸಿಪ್ ಕಥೆ ಸುಳ್ಳೇ? ಸತ್ಯವೇ?
ಶ್ವೇತಾ ಪಂಡಿತ್- ತಿಲಕ್ ( ಬಿಗ್ ಬಾಸ್ ಕನ್ನಡ ಸೀಸನ್ 1 )
ಬಿಗ್ ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಶ್ವೇತಾ ಪಂಡಿತ್, ತಿಲಕ್ ಕ್ಲೋಸ್ ಆಗಿದ್ದರು. ಇವರಿಬ್ಬರೂ ಮನೆಯಲ್ಲಿ ಒಟ್ಟಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ದೊಡ್ಮನೆಯಲ್ಲಿ ಈ ಬಗ್ಗೆ ಚರ್ಚೆ ಆದರೂ ಕೂಡ, ಇವರಿಬ್ಬರು ಈ ಬಗ್ಗೆ ಮಾತನಾಡಲಿಲ್ಲ, ಇವರ ಸ್ನೇಹ ಸಂಬಂಧವೂ ಹೊರಗಡೆ ಮುಂದುವರೆಯಲಿಲ್ಲ
ಅಯ್ಯಪ್ಪ ಮತ್ತು ಪೂಜಾ ಗಾಂಧಿ (ಸೀಸನ್ 3)
ಬಿಗ್ ಬಾಸ್ ಸೀಸನ್ 3ರಲ್ಲಿ ಕ್ರಿಕೆಟಿಗ ಅಯ್ಯಪ್ಪ, ನಟಿ ಪೂಜಾ ಗಾಂಧಿ ಆತ್ಮೀಯವಾಗಿದ್ದರು. ಇವರಿಬ್ಬರು ಲವ್ ಮಾಡ್ತಿರಬಹುದು ಎಂದು ವೀಕ್ಷಕರು, ಬಿಗ್ ಬಾಸ್ ಮನೆಯವರು ಅಂದುಕೊಂಡರೂ ಕೂಡ ಅದು ನಿಜವಾಗಲಿಲ್ಲ. ಪೂಜಾ ಅವರು ಅಯ್ಯಪ್ಪನನ್ನು "ವಿಶೇಷ ಸ್ನೇಹಿತ" ಎಂದು ಕರೆದಿದ್ದರು. ಈ ಸ್ನೇಹ ಸಂಬಂಧವು ಆಮೇಲೆ ಮುಂದುವರಿಯಲಿಲ್ಲ.
ಭುವನ್, ಸಂಜನಾ ಮತ್ತು ಪ್ರಥಮ್ (ಸೀಸನ್ 4)
ಸೀಸನ್ 4ರಲ್ಲಿ ಭುವನ್, ಸಂಜನಾ, ಪ್ರಥಮ್‌ರ ನಡುವಿನ ತ್ರಿಕೋನ ಪ್ರೇಮಕಥೆ ದೊಡ್ಡ ಚರ್ಚೆಗೆ ಕಾರಣವಾಯಿತು. ಇದು ಲವ್ ಅಲ್ಲ, ಸುಮ್ಮನೆ ತಮಾಷೆಗೆ ಮಾಡಿದ್ದಾಗಿತ್ತು. ಭುವನ್, ಸಂಜನಾ ಆತ್ಮೀಯವಾಗಿದ್ದರು. ಈ ತ್ರಿಕೋನ ಕಥೆಯು ತೆರೆಯ ಮೇಲೆ "ಸಂಜು ಮತ್ತು ನಾನು" ಎಂಬ ಧಾರಾವಾಹಿಯಾಗಿ ಮಾರ್ಪಾಡಾಯಿತು, ಇದರಲ್ಲಿ ಈ ಮೂವರು ನಟಿಸಿದ್ದರು.
ಚಂದನ್ ಶೆಟ್ಟಿ ಮತ್ತು ಶ್ರುತಿ ಪ್ರಕಾಶ್ (ಸೀಸನ್ 5)
ಸೀಸನ್ 5ರಲ್ಲಿ ಚಂದನ್ ಶೆಟ್ಟಿ, ಶ್ರುತಿ ಪ್ರಕಾಶ್‌ರ ಸಂಬಂಧವು ಅತ್ಯಂತ ಮುದ್ದಾದ ಪ್ರೇಮಕಥೆಯಾಗಿತ್ತು. ಚಂದನ್ ಅವರು ಶ್ರುತಿಗಾಗಿ ಒಂದು ಹಾಡು ಬರೆದಿದ್ದರು. ಇದು ಪ್ರೇಕ್ಷಕರ ಮನಗೆದ್ದಿತು. ಶ್ರುತಿ ನನಗೆ ಇಷ್ಟ ಎಂದು ಚಂದನ್ ಶೆಟ್ಟಿ ಮುಕ್ತವಾಗಿ ಹೇಳಿದ್ದರು. ಆದರೆ ಇವರ ಸ್ನೇಹ ಕೂಡ ಉಳಿಯಲಿಲ್ಲ.
ವಾಸುಕಿ ವೈಭವ್ ಮತ್ತು ಭೂಮಿ ಶೆಟ್ಟಿ (ಸೀಸನ್ 7)
ಬಿಗ್ ಬಾಸ್ ಸೀಸನ್ 7ರಲ್ಲಿ ವಾಸುಕಿ ವೈಭವ್, ಭೂಮಿ ಶೆಟ್ಟಿಯವರ ಜೋಡಿಯು ಗಮನ ಸೆಳೆಯಿತು. ಇವರಿಬ್ಬರು ಒಟ್ಟಿಗೆ ಸಮಯ ಕಳೆಯೋದು, ಸಣ್ಣ ಚಟುವಟಿಕೆಗಳಲ್ಲಿ ಒಟ್ಟಿಗೆ ಭಾಗವಹಿಸುವುದು, ಪರಸ್ಪರ ಪೂರಕವಾಗಿರುವುದು ಪ್ರೇಕ್ಷಕರಿಗೆ ಇಷ್ಟವಾಯಿತು. ಆದರೆ, ಈ ಸಂಬಂಧವು ಕೇವಲ ಸ್ನೇಹ ಆಗಿತ್ತು ಅಷ್ಟೇ.
ದೀಪಿಕಾ ದಾಸ್, ಶೈನ್ ಶೆಟ್ಟಿ (ಸೀಸನ್ 7)
ದೀಪಿಕಾ ದಾಸ್, ಶೈನ್ ಶೆಟ್ಟಿಯವರ ಸ್ನೇಹವು ಸೀಸನ್ 7ರಲ್ಲಿ ಚರ್ಚೆಯ ವಿಷಯವಾಗಿತ್ತು. ಇವರಿಬ್ಬರು ಪ್ರೀತಿ ಮಾಡ್ತಿದ್ದಾರಾ? ಮದುವೆ ಆಗ್ತಾರಾ ಎಂಬ ಪ್ರಶ್ನೆ ಬಂತು. ಇದನ್ನು ಈ ಜೋಡಿ ತಳ್ಳಿ ಹಾಕಿದ್ದು, ನಾವು ಫ್ರೆಂಡ್ಸ್ ಎಂದು ಹೇಳಿತ್ತು. ದೀಪಿಕಾ ದೀಪಕ್ ಎನ್ನುವವರ ಜೊತೆ ಮದುವೆ ಆಗಿದ್ದಾರೆ.
ಮೈಕಲ್ ಅಜಯ್, ಇಶಾನಿ (ಸೀಸನ್ 10)
ಸೀಸನ್ 10ರಲ್ಲಿ ಮೈಕಲ್ ಅಜಯ್, ಇಶಾನಿಯವರ ಲವ್ ಸ್ಟೋರಿ ಒಂದು ವಾರ ಕೂಡ ಉಳಿಯಲಿಲ್ಲ. ಅಕ್ಟೋಬರ್ 23, 2023ರಂದು ಮೈಕಲ್ ಅವರು, ಇಶಾನಿಯನ್ನು ತಮ್ಮ ಗೆಳತಿ ಎಂದು ಘೋಷಿಸಿದರು. ಆಮೇಲೆ ಇವರಿಬ್ಬರು ಶೋವೊಳಗಡೆ ದೂರ ಆದರು.
ಧರ್ಮ ಕೀರ್ತಿರಾಜ್, ಅನುಷಾ ರೈ, ಐಶ್ವರ್ಯಾ ಶಿಂಧೋಗಿ
ಸೀಸನ್ 11ರಲ್ಲಿ ಧರ್ಮ ಕೀರ್ತಿರಾಜ್, ಅನುಷಾ ರೈ, ಐಶ್ವರ್ಯಾ ಶಿಂಡೋಗಿ ನಡುವೆ ತ್ರಿಕೋನ ಪ್ರೇಮಕಥೆ ಇದೆ ಎಂದು ವೀಕ್ಷಕರು ಭಾವಿಸಿದ್ದರು. ಧರ್ಮ ತಾವು ಮತ್ತು ಅನುಷಾ 4-5 ವರ್ಷಗಳಿಂದ ಸ್ನೇಹಿತರು ಎಂದು ಹೇಳಿದ್ದರು. ಆದರೆ ಇವರ ಸ್ನೇಹ ಮುಂದುವರೆಯಲಿಲ್ಲ.
ದಿವ್ಯಾ ಉರುಡುಗ, ಕೆಪಿ ಅರವಿಂದ್
ದಿವ್ಯಾ ಉರುಡುಗ, ಕೆಪಿ ಅರವಿಂದ್ ಅವರು ಶೋನಲ್ಲಿ, ಶೋನಿಂದ ಆಚೆ ಬಂದಮೇಲೂ ಕೂಡ ಆತ್ಮೀಯತೆಯಿಂದ ಇದ್ದಾರೆ. ಇವರು ಶೀಘ್ರದಲ್ಲಿ ಮದುವೆ ಆಗಲಿದ್ದಾರಂತೆ.


