ಶಾರುಖ್ ಖಾನ್ ಪರಭಾಷೆಗಳಲ್ಲಿ ನಟಿಸುವುದು ಬಹಳ ಅಪರೂಪ. ಅದರಲ್ಲೂ ಬಾಲಿವುಡ್ ಬಿಟ್ಟು ಪರಭಾಷೆಯಲ್ಲಿ ಶಾರುಖ್ ಖಾನ್ ನಟಿಸುವುದೆಂದರೆ ಅದಕ್ಕೆ ಬಹಳಷ್ಟು ವಿಶೇಷ ಕಾರಣವೇ ಇರಬೇಕು. ಇದೀಗ ಶಾರುಖ್ ಖಾನ್, ತಮಿಳಿನ ಒಂದು ಸಿನಿಮಾದಲ್ಲಿ ನಟಿಸಲಿದ್ದಾರೆ. ಹಾಗಿದ್ದರೆ ಆ ವಿಶೇಷ ಕಾರಣವೇನು? ಈ ಸ್ಟೋರಿ ನೋಡಿ..
ತಮಿಳು ಸಿನಿಮಾದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್
ಬಾಲಿವುಡ್ ಸೂಪರ್ ಸ್ಟಾರ್ 'ಕಿಂಗ್ ಖಾನ್' ಖ್ಯಾತಿಯ ನಟ ಶಾರುಖ್ ಖಾನ್ (Shah Rukh Khan) ಇದೀಗ ತಮಿಳು ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಲೆವರಿಗೆ ಅಚ್ಚರಿ, ಹಲವರಿಗೆ ಶಾಕಿಂಗ್ ನೀಡಿಲಿರುವ ಈ ಸುದ್ದಿ ನಿಜವೇ? ಹೌದು, ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅವರು ತಮಿಳು ಸಿನಿಮಾದಲ್ಲಿ ನಟಿಸುತ್ತಿರುವುದು ನಿಜ ಎನ್ನುತ್ತಿವೆ ಸುದ್ದಿ ಮೂಲಗಳು. 'ಜವಾನ್', 'ಡಂಕಿ' ಮೂಲಕ ಸತತ ಮೂರು ಹಿಟ್ ಸಿನಿಮಾಗಳನ್ನು ನೀಡಿರುವ ಶಾರುಖ್ ಖಾನ್ ಇದೀಗ 'ಕಿಂಗ್' ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ಕೊಡಲು ತಯಾರಿ ನಡೆಸುತ್ತಿದ್ದಾರೆ. ಈ ವೇಳೆ ಈ ಸುದ್ದಿ ಅಪ್ಪಳಿಸಿದೆ.
ಶಾರುಖ್ ಖಾನ್ ಅತಿಥಿ ಪಾತ್ರಗಳಲ್ಲಿ ನಟಿಸುವುದು ಬಹಳ ಅಪರೂಪ. ಅದರಲ್ಲೂ ಬಾಲಿವುಡ್ ಬಿಟ್ಟು ಪರಭಾಷೆಯಲ್ಲಿ ಅತಿಥಿ ಪಾತ್ರಗಳಲ್ಲಿ ಶಾರುಖ್ ಖಾನ್ ನಟಿಸುವುದೆಂದರೆ ಅದಕ್ಕೆ ಬಹಳಷ್ಟು ವಿಶೇಷ ಕಾರಣವೇ ಇರಬೇಕು. ಇದೀಗ ಶಾರುಖ್ ಖಾನ್, ತಮಿಳಿನ ಒಂದು ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಇದಕ್ಕೆ ಕಾರಣ ಋಣಭಾರ ಎನ್ನಲಾಗುತ್ತಿದೆ. ಹೌದಾ? ಅದೇನು ಅಂತ ಕೇಳ್ತೀರಾ? ಇಲ್ಲಿ ನೋಡಿ..
ರಜನಿಕಾಂತ್ ಚಿತ್ರದಲ್ಲಿ ಶಾರುಖ್ ಖಾನ್?
ರಜನೀಕಾಂತ್ ನಟಿಸುತ್ತಿರುವ 'ಜೈಲರ್ 2' ಸಿನಿಮಾನಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಗಟ್ಟಿಯಾಗಿಯೇ ಹರಿದಾಡುತ್ತಿದೆ. 'ಜೈಲರ್' ಸಿನಿಮಾ ತನ್ನ ವಿಶೇಷ ಕ್ಯಾಮಿಯೋ ಪಾತ್ರಗಳಿಂದಲೇ ಸೂಪರ್ ಹಿಟ್ ಆಗಿತ್ತು. ಶಿವರಾಜ್ ಕುಮಾರ್, ಮೋಹನ್ ಲಾಲ್, ಜಾಕಿ ಶ್ರಾಫ್, ತಮನ್ನಾ, ಸುನಿಲ್ ಸೇರಿದಂತೆ ಹಲವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದ 'ಜೈಲರ್' ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ 'ಜೈಲರ್ 2' ನಿರ್ಮಾಣವಾಗುತ್ತಿದ್ದು, ಈ 'ಕ್ಯಾಮಿಯೋ ಗೇಮ್' ಅನ್ನು ಇನ್ನೂ ದೊಡ್ಡ ಹಂತಕ್ಕೆ ಕೊಂಡೊಯ್ಯುವುದು ನಿರ್ದೇಶಕ ನೆಲ್ಸನ್ ಯೋಜನೆ. ಹೀಗಾಗಿ 'ಜೈಲರ್ 2' ಸಿನಿಮಾಕ್ಕಾಗಿ ಶಾರುಖ್ ಖಾನ್ ಅವರನ್ನೇ ಕರೆತರಲು ನೆಲ್ಸನ್ ಸಜ್ಜಾಗಿದ್ದಾರೆ.
ಆದರೆ, ಶಾರುಖ್ ಖಾನ್ ಈ ಆಫರ್ ಒಪ್ಪಿಕೊಳ್ಳಲು ಕಾರಣ ಕೂಡ ಇದೆ. ಈ ಹಿಂದೆ 2011ರಲ್ಲಿ ಶಾರುಖ್ ಖಾನ್ 'ರಾ ಒನ್' ಹೆಸರಿನ ಬಿಗ್ ಬಜೆಟ್ ಸಿನಿಮಾ ಮಾಡಿದ್ದರು. ಅದ್ದೂರಿ ಪ್ರಚಾರ, ಅದ್ಧೂರಿ ಸೆಟ್‌ಗಳು, ಹಾಲಿವುಡ್ ಲೆವೆಲ್ ವಿಎಫ್ ಎಕ್ಸ್ ಬಳಸಿದ್ದರು. ಆ ಸಿನಿಮಾನಲ್ಲಿ ರಜನಿಕಾಂತ್ (Rajinikanth) ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಈಗ 'ಜೈಲರ್ 2' ಸಿನಿಮಾದ (Jailer 2) ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಆ ಋಣ ತೀರಿಸುತ್ತಿದ್ದಾರೆ ಶಾರುಖ್ ಖಾನ್ ಎನ್ನಲಾಗುತ್ತಿದೆ.
ಶಾರುಖ್ ಖಾನ್‌ಗೆ ತಮಿಳು ನಂಟು!
ಅಷ್ಟೇ ಅಲ್ಲ, ನಟ ಶಾರುಖ್ ಖಾನ್ ಅವರಿಗೆ ತಮಿಳು ಚಿತ್ರರಂಗದೊಂದಿಗೆ ಆಪ್ತ-ಸಂಬಂಧವಿದೆ. 2000 ರಲ್ಲಿ ಬಿಡುಗಡೆ ಆದ ತಮಿಳು ಸಿನಿಮಾ 'ಹೇ ರಾಮ್'ನಲ್ಲಿ ಕಮಲ್ ಹಾಸನ್ ಜೊತೆಗೆ ಅತಿಥಿ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದರು. ಅವರ 'ಚೆನ್ನೈ ಎಕ್ಸ್‌ಪ್ರೆಸ್' ಸಿನಿಮಾನಲ್ಲಿ ತಮಿಳು ಚಿತ್ರರಂಗಕ್ಕೆ ವಿಶೇಷ ಉಲ್ಲೇಖಗಳನ್ನು ಮಾಡಿದ್ದರು. ಸಾಕಷ್ಟು ತಮಿಳು ನಟರು ಅದರಲ್ಲಿ ನಟಿಸಿದ್ದರು. ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ನಿರ್ದೇಶಿಸಿದ್ದು ಸಹ ತಮಿಳು ನಿರ್ದೇಶಕ ಅಟ್ಲಿ. ಈಗ ಮತ್ತೊಮ್ಮೆ ತಮಿಳು ಸಿನಿಮಾನಲ್ಲಿ ನಟಿಸಲು ಬರುತ್ತಿದ್ದಾರೆ ಶಾರುಖ್ ಖಾನ್. ಒಟ್ಟಿನಲ್ಲಿ, ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ನಾರ್ತ್-ಸೌತ್ ಎಂಬ ಪ್ರತ್ಯೇಕತೆ ನಿಜವಾಗಿ ಮರೆಯಾಗುತ್ತಿದೆ.


