ರಾಜಮೌಳಿ ಅವರು ವಿಡಿಯೋ ಮೂಲಕ, "ಕಾರ್ಯಕ್ರಮಕ್ಕೆ ಬರುವವರೆಲ್ಲರೂ ನಿಯಮಗಳನ್ನು ಪಾಲಿಸಬೇಕು" ಎಂದು ಎಚ್ಚರಿಕೆ ನೀಡಿದ್ದರು. ಅವರ ಬೆನ್ನಲ್ಲೇ ಈಗ ನಮ್ಮ ನಿಮ್ಮ ನೆಚ್ಚಿನ ನಟ ಮಹೇಶ್ ಬಾಬು ಕೂಡ ಅಖಾಡಕ್ಕಿಳಿದು ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ..

ಮಹೇಶ್ ಬಾಬು - ರಾಜಮೌಳಿ ಈವೆಂಟ್ 

ಟಾಲಿವುಡ್ ಸ್ಟಾರ್ ಮಹೇಶ್ ಬಾಬು (Mahesh Babu) ಮತ್ತು ಗ್ರೇಟ್ ನಿರ್ದೇಶಕ ಎಸ್‌ಎಸ್‌ ರಾಜಮೌಳಿ (SS Rajamouli) ಕಾಂಬಿನೇಶನ್‌ನ 'ಗ್ಲೋಬೆಟ್ರೋಟೆರ್' ಚಿತ್ರದ ಭವ್ಯ ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದೆ! ನವೆಂಬರ್ 15, 2025 ರಂದು ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿ ಬಳಿ ನಡೆಯಲಿರುವ ಈ ಅದ್ಧೂರಿ ಕಾರ್ಯಕ್ರಮಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಅಭಿಮಾನಿಗಳ ಅತಿಯಾದ ಉತ್ಸಾಹಕ್ಕೆ ಬ್ರೇಕ್ ಹಾಕಲು, ಪ್ರಿನ್ಸ್ ಮಹೇಶ್ ಬಾಬು ಮತ್ತು ಡೈರೆಕ್ಟರ್ ಎಸ್.ಎಸ್. ರಾಜಮೌಳಿ ಇಬ್ಬರೂ ಮಹತ್ವದ ಸಂದೇಶವನ್ನು ನೀಡಿದ್ದಾರೆ.

ಇತ್ತೀಚೆಗೆ ನಡೆದ ಕೆಲವು ಕಾರ್ಯಕ್ರಮಗಳಲ್ಲಿ ಉಂಟಾದ ಅಹಿತಕರ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ಈ ಕಾರ್ಯಕ್ರಮಕ್ಕೆ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಸ್ವತಃ ರಾಜಮೌಳಿ ಅವರು ವಿಡಿಯೋ ಮೂಲಕ, "ಕಾರ್ಯಕ್ರಮಕ್ಕೆ ಬರುವವರೆಲ್ಲರೂ ನಿಯಮಗಳನ್ನು ಪಾಲಿಸಬೇಕು" ಎಂದು ಎಚ್ಚರಿಕೆ ನೀಡಿದ್ದರು. ಅವರ ಬೆನ್ನಲ್ಲೇ ಈಗ ನಮ್ಮ ನಿಮ್ಮ ನೆಚ್ಚಿನ ನಟ ಮಹೇಶ್ ಬಾಬು ಕೂಡ ಅಖಾಡಕ್ಕಿಳಿದು ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ.

ಮಹೇಶ್ ಬಾಬು ಅವರ ವಿಡಿಯೋ ಸಂದೇಶದ ಹೈಲೈಟ್ಸ್ ಹೀಗಿವೆ:

ಪಾಸ್ ಇದ್ದವರಿಗೆ ಮಾತ್ರ ಪ್ರವೇಶ: "ಕಾರ್ಯಕ್ರಮಕ್ಕೆ ಪ್ರವೇಶ ಕೇವಲ ಇವೆಂಟ್ ಪಾಸ್ ಹೊಂದಿರುವ ಅಭಿಮಾನಿಗಳಿಗೆ ಮಾತ್ರ. ಪಾಸ್ ಇಲ್ಲದೆ ಯಾರೂ ಕಾರ್ಯಕ್ರಮದ ಸ್ಥಳಕ್ಕೆ ಬರಬೇಡಿ," ಎಂದು ಮಹೇಶ್ ಬಾಬು ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳ ಸುರಕ್ಷತೆ ಮತ್ತು ಸುವ್ಯವಸ್ಥೆ ಕಾಪಾಡುವುದು ಇದರ ಹಿಂದಿನ ಉದ್ದೇಶ.

ಆತಂಕ ಬೇಡ, ಇನ್ನಷ್ಟು ಕಾರ್ಯಕ್ರಮಗಳು ಬರಲಿವೆ: "ಅಭಿಮಾನಿಗಳು ಅನಗತ್ಯವಾಗಿ ಆತಂಕಕ್ಕೊಳಗಾಗಬೇಡಿ. ಈ ಕಾರ್ಯಕ್ರಮ ಹೊರತಾಗಿ ಇನ್ನೂ ಅನೇಕ ಮಹತ್ವದ ಕಾರ್ಯಕ್ರಮಗಳು ನಡೆಯಲಿವೆ," ಎಂದು ಭರವಸೆ ನೀಡಿದ್ದಾರೆ. ಇದು ಪಾಸ್ ಸಿಗದ ಅಥವಾ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದ ಅಭಿಮಾನಿಗಳಿಗೆ ಸಮಾಧಾನ ತಂದಿದೆ.

ನಿಯಂತ್ರಿತ ಪ್ರವೇಶ ದ್ವಾರಗಳು: "ಕಾರ್ಯಕ್ರಮದ ದಿನ ಆರ್‌ಎಫ್‌ಸಿ ಮುಖ್ಯ ದ್ವಾರ ಬಂದ್ ಆಗಿರುತ್ತದೆ. ನಿಮ್ಮ ಪಾಸ್ ಸ್ಕ್ಯಾನ್ ಮಾಡಿದಾಗ, ನೀವು ಯಾವ ದ್ವಾರದ ಮೂಲಕ ಪ್ರವೇಶಿಸಬೇಕು ಎಂಬ ಮಾಹಿತಿ ಲಭ್ಯವಾಗುತ್ತದೆ. ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸುವುದು ಅತ್ಯಗತ್ಯ," ಎಂದು ಮಹೇಶ್ ಬಾಬು ತಿಳಿಸಿದ್ದಾರೆ.

ಪಾಸ್ ಇಲ್ಲದೆ ಬರುವ ಬಗ್ಗೆ ಚಿಂತಿಸಬೇಡಿ

ಸಹಕಾರ ನೀಡುವಂತೆ ಮನವಿ: "ಅಭಿಮಾನಿಗಳು ಕಡಿಮೆ ವಾಹನಗಳಲ್ಲಿ ಬಂದರೆ ಭದ್ರತೆ ಮತ್ತು ಪ್ರವೇಶ ಸುಲಭವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಸ್ ಇಲ್ಲದೆ ಬರುವ ಬಗ್ಗೆ ಚಿಂತಿಸಬೇಡಿ. ಇನ್ನೂ ಹಲವು ಕಾರ್ಯಕ್ರಮಗಳು ನಿಮಗಾಗಿ ಕಾಯುತ್ತಿವೆ. ನಾಳೆ ಸಂಜೆ ಭೇಟಿಯಾಗೋಣ," ಎಂದು ಮಹೇಶ್ ಬಾಬು ಹೇಳಿದ್ದಾರೆ.

ಈ ಸರಳ ಆದರೆ ದೃಢವಾದ ಸೂಚನೆಗಳು ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಈ ಬೃಹತ್ ಸಮಾರಂಭದಲ್ಲಿ 'SSMB29' ಎಂದು ತಾತ್ಕಾಲಿಕವಾಗಿ ಹೆಸರಿಸಲಾದ ಈ ಪ್ಯಾನ್-ಇಂಡಿಯನ್ ಚಿತ್ರದ ಕುರಿತು ಹಲವು ರೋಚಕ ಸಂಗತಿಗಳು ಹೊರಬೀಳಲಿವೆ. ಈಗಾಗಲೇ ಪೃಥ್ವಿರಾಜ್ ಕುಮಾರ್ ಅವರ 'ಕುಂಭ' ಪಾತ್ರ ಮತ್ತು ಪ್ರಿಯಾಂಕಾ ಚೋಪ್ರಾ ಅವರ 'ಮಂದಾಕಿನಿ' ಪಾತ್ರದ ಮೊದಲ ನೋಟಗಳನ್ನು ಅನಾವರಣಗೊಳಿಸಲಾಗಿದೆ. ಈಗ ಎಲ್ಲರ ಕಣ್ಣು ಮಹೇಶ್ ಬಾಬು ಅವರ ಲುಕ್ ಅನಾವರಣ ಮತ್ತು ಚಿತ್ರದ ಮೊದಲ ಟೀಸರ್ ಪ್ರದರ್ಶನದ ಮೇಲಿದೆ!