- Home
- Entertainment
- TV Talk
- ಕಿರಣ್ ರಾಜ್ ಅವರ ಸೆಲಿಬ್ರಿಟಿ ಕ್ರಶ್ ಯಾರು? ಕೊನೆಗೂ ಇಂಟ್ರೆಸ್ಟಿಂಗ್ ಡೀಟೈಲ್ಸ್ ಬಿಚ್ಚಿಟ್ಟ 'ಕರ್ಣ'
ಕಿರಣ್ ರಾಜ್ ಅವರ ಸೆಲಿಬ್ರಿಟಿ ಕ್ರಶ್ ಯಾರು? ಕೊನೆಗೂ ಇಂಟ್ರೆಸ್ಟಿಂಗ್ ಡೀಟೈಲ್ಸ್ ಬಿಚ್ಚಿಟ್ಟ 'ಕರ್ಣ'
ಬೆಂಗಳೂರು: ಕರ್ಣ ಸೀರಿಯಲ್ ಮೂಲಕ ಕನ್ನಡಿಗರ ಮನೆಮಗನಾಗಿ ಗುರುತಿಸಿಕೊಂಡಿರುವ ಕಿರಣ್ ರಾಜ್ ಅವರಿಗೆ ರಾಜ್ಯದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಇದೀಗ ಕಿರಣ್ ರಾಜ್ ತಮ್ಮ ಸೆಲಿಬ್ರಿಟಿ ಕ್ರಶ್ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ್ದಾರೆ. ಕಿರಣ್ ರಾಜ್ ಈ ಬಗ್ಗೆ ಹೇಳಿದ್ದೇನು?

ಕರ್ಣನಾಗಿ ಮಿಂಚುತ್ತಿರುವ ಕಿರಣ್ ರಾಜ್
ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕರ್ಣ ಸೀರಿಯಲ್ ಇದೀಗ ರೋಚಕ ಘಟ್ಟ ತಲುಪಿದ್ದು, ಕರ್ಣ ತನ್ನ ಆಸ್ತಿಯನ್ನು ನಿತ್ಯಾ ಹೆಸರಿಗೆ ರಿಜಿಸ್ಟರ್ ಮಾಡಲು ಮುಂದಾಗುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾನೆ. ಮುಂದೇನಾಗಲಿದ ಎನ್ನುವ ಕುತೂಹಲ ಜೋರಾಗಿದೆ.
ಸದಾ ಸುದ್ದಿಯಲ್ಲಿರುವ ಕಿರಣ್ ರಾಜ್
ಇನ್ನು ಇದೆಲ್ಲದರ ನಡುವೆ ಆನ್ ಸ್ಕ್ರೀನ್ ನಟನೆಯ ಜತೆಜತೆಗೆ ಆಫ್ ಸ್ಕ್ರೀನ್‌ನಲ್ಲಿ ಅವರ ಸಂದರ್ಶನಗಳು, ಆಡುವ ಮಾತುಗಳು, ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುವ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಕೇಳಲು ಅವರ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ.
ತಮ್ಮ ಸೆಲಿಬ್ರಿಟಿ ಕ್ರಶ್ ಬಗ್ಗೆ ತುಟಿಬಿಚ್ಚಿದ ಕಿರಣ್ ರಾಜ್
2025ರ ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕಿರಣ್ ರಾಜ್ ಅವರಿಗೆ, ಕನ್ನಡ ಚಿತ್ರರಂಗದಲ್ಲಿ ನಿಮ್ಮ ಸೆಲಿಬ್ರಿಟಿ ಕ್ರಶ್ ಯಾರು ಎಂದು ಕೇಳುತ್ತಾರೆ. ಆಗ ಕಿರಣ್ ರಾಜ್ ಮತ್ತೊಮ್ಮೆ ಸ್ಮಾರ್ಟ್ ಉತ್ತರದ ಮೂಲಕ ಗಮನ ಸೆಳೆದಿದ್ದಾರೆ.
ನನಗೆ ಕನ್ನಡ ಚಿತ್ರರಂಗವೇ ಕ್ರಶ್ ಎಂದ ಕಿರಣ್ ರಾಜ್
ಒಂದು ವೇಳೆ ನನಗೆ ಕ್ರಶ್ ಇದ್ದಿದ್ದರೇ ಬಹುಶಃ ಇಷ್ಟರೊಳಗೆ ಅವರಿಗೆ ಪ್ರಪೋಸ್ ಮಾಡಿ ಡೇಟಿಂಗ್ ಮಾಡುತ್ತಾ ಇರ್ತಿದ್ದೆ. ನನಗೆ ಕನ್ನಡ ಚಿತ್ರರಂಗವೇ ಕ್ರಶ್ ಎಂದು ಕಿರಣ್ ರಾಜ್ ಜಾಣ್ಮೆಯ ಉತ್ತರ ನೀಡಿದ್ದಾರೆ.
ಕಿರಣ್ ರಾಜ್ ರಿಲೇಷನ್‌ಶಿಪ್ ಹೇಗೆ ನಿಭಾಯಿಸುತ್ತಾರೆ?
ಇನ್ನು ಕಿರಣ್ ರಾಜ್ ಅವರಿಗೆ ಲೇಡಿಸ್ ಫ್ಯಾನ್ಸ್ ಸಿಕ್ಕಾಪಟ್ಟೆಯಿದ್ದಾರೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಂದರ್ಶನವೊಂದರಲ್ಲಿ ಕಿರಣ್ ರಾಜ್ ಅವರಿಗೆ ನೀವು ರಿಲೇಷನ್‌ಶಿಪ್ ಹೇಗೆ ಹ್ಯಾಂಡಲ್ ಮಾಡ್ತೀರಾ? ಎನ್ನುವ ಪ್ರಶ್ನೆಗೂ ಸ್ಮಾರ್ಟ್ ಉತ್ತರ ಕೊಟ್ಟಿದ್ದರು.
ಸ್ಮಾರ್ಟ್ ಉತ್ತರ ಕೊಟ್ಟ ಕಿರಣ್ ರಾಜ್
ಅದರಲ್ಲಿ ಹ್ಯಾಂಡಲ್ ಮಾಡುವಂತದ್ದು ಏನೂ ಇಲ್ಲ, ರೆಸ್ಪಾನ್ಸ್ ಮಾಡದೇ ಇದ್ರೆ ಮುಗೀತು. ಕೆಲವು ಮೆಸೇಜ್ ಪಾಪ್ ಅಪ್ ಆಗೋವನ್ನು ನೋಡ್ತೀನಿ, ಸ್ಮೈಲ್ ಮಾಡ್ತೀನಿ. ಸುಮ್ಮನಾಗುತ್ತೇನೆ ಎಂದು ಕಿರಣ್ ರಾಜ್ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

