MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಕನ್ನಡ ಸೀರಿಯಲ್​ಗಳಲ್ಲಿ ಈಗ ಫಸ್ಟ್​ನೈಟ್​ ಸಮಯ: Shravani-Subramanya ಕೊಟ್ರು ಚಾಲನೆ!

ಕನ್ನಡ ಸೀರಿಯಲ್​ಗಳಲ್ಲಿ ಈಗ ಫಸ್ಟ್​ನೈಟ್​ ಸಮಯ: Shravani-Subramanya ಕೊಟ್ರು ಚಾಲನೆ!

ಹಲವು ಕನ್ನಡ ಧಾರಾವಾಹಿಗಳು ಕ್ಲೈಮ್ಯಾಕ್ಸ್ ಹಂತ ತಲುಪುತ್ತಿವೆ. ಶ್ರಾವಣಿ-ಸುಬ್ರಹ್ಮಣ್ಯ, ಬ್ರಹ್ಮಗಂಟು ಸೀರಿಯಲ್​ನ ಜೋಡಿಗಳು ಅಡೆತಡೆಗಳನ್ನು ಮೀರಿ ಒಂದಾಗುತ್ತಿದ್ದು, ಅವರ ಮೊದಲ ರಾತ್ರಿಗೆ ಮುಹೂರ್ತ ನಿಗದಿಯಾಗಿದೆ. ಇದು ಧಾರಾವಾಹಿಗಳ ಅಂತ್ಯದ ಮುನ್ಸೂಚನೆಯೇ ಎಂಬ ಕುತೂಹಲ ಮೂಡಿಸಿದೆ.

2 Min read
Author : Suchethana D
Published : Feb 10 2026, 05:39 PM IST
Share this Photo Gallery
  • FB
  • TW
  • Linkdin
  • Whatsapp
16
ಸೀರಿಯಲ್​ ಕ್ಲೈಮ್ಯಾಕ್ಸ್​
Image Credit : Instagram

ಸೀರಿಯಲ್​ ಕ್ಲೈಮ್ಯಾಕ್ಸ್​

ಕನ್ನಡದ ಕೆಲವು ಸೀರಿಯಲ್​ಗಳು ಇನ್ನೇನು ಮುಗಿಯುವ ಹಂತಕ್ಕೆ ಬಂದಂತೆ ಕಾಣಿಸುತ್ತಿದೆ. ಈಗಿನ ಹಲವು ಸೀರಿಯಲ್​ಗಳಲ್ಲಿ ಮದುವೆಯಾದರೂ ದೈಹಿಕ ಸಂಪರ್ಕ ಇಲ್ಲದೇ ಇರುವವರ ಸ್ಟೋರಿನೇ ಹೆಚ್ಚು. ಆದ್ದರಿಂದ ಅವರಿಬ್ಬರನ್ನೂ ಒಂದು ಮಾಡಿದರೆ ಅಲ್ಲಿ ಕೆಲವು ಸೀರಿಯಲ್​ಗಳು ಮುಗಿದಂತೆ.

26
ಮೊದಲ ರಾತ್ರಿ ಮುಹೂರ್ತ
Image Credit : Instagram

ಮೊದಲ ರಾತ್ರಿ ಮುಹೂರ್ತ

ಆದರೆ, ಅದನ್ನು ಟಿಆರ್​ಪಿ ಆಧಾರದ ಮೇಲೆ ಇನ್ನಷ್ಟು ಎಳೆಯುವುದು ಮಾಮೂಲಾದರೂ ಸದ್ಯ ಕೆಲವು ಸೀರಿಯಲ್​​ಗಳು ಕ್ಲೈಮ್ಯಾಕ್ಸ್​ ತಲುಪಿವೆ. ಅವುಗಳಲ್ಲಿ ಒಂದು ಶ್ರಾವಣಿ- ಸುಬ್ರಹ್ಮಣ್ಯ (Shravani-Subramanya). ಈ ಸೀರಿಯಲ್​ನಲ್ಲಿ ಶ್ರಾವಣಿ ಮತ್ತು ಸುಬ್ರಹ್ಮಣ್ಯ ಹಲವಾರು ಅಡೆತಡೆಗಳನ್ನು ಮೀರಿ ಒಂದಾಗಿದ್ದಾರೆ. ಕಾಂತಮ್ಮನ ಕಿತಾಪತಿಯಿಂದ ಇಬ್ಬರೂ ಬೇರೆಬೇರೆಯಾಗಿದ್ದರೂ ಶ್ರಾವಣಿಯ ಅಮ್ಮ ಮಾರುವೇಷದಲ್ಲಿ ಮನೆಯನ್ನು ಪ್ರವೇಶಿಸಿ, ಮುಹೂರ್ತ ಫಿಕ್ಸ್ ಮಾಡಿದ್ದಾಳೆ.

Related Articles

Related image1
Bigg Boss ನಮ್ರತಾ ಗೌಡ- ಕಾರ್ತಿಕ್​ ಮಹೇಶ್​ ಮದ್ವೆಗೆ ಸಂಗೀತಾ ಶೃಂಗೇರಿ ಗ್ರೀನ್ ಸಿಗ್ನಲ್​: ನಟಿ ಹೇಳಿದ್ದೇನು?
Related image2
ನೀವೆಲ್ಲಾ ಒಂಟಿಯಾದ್ರೆ ಎಲ್ಲಿ ಹೋಗ್ತೀರಿ? ಬೆಂಗಳೂರಲ್ಲಿ ಸಮುದ್ರಕ್ಕಾಗಿ Rakshita Shetty ಹುಡುಕಾಟ!
36
ಫಸ್ಟ್​ನೈಟ್​ ಕೋಣೆ
Image Credit : Zee Kannada FB

ಫಸ್ಟ್​ನೈಟ್​ ಕೋಣೆ

ಇಬ್ಬರೂ ಬೆವರುತ್ತಲೇ ಫಸ್ಟ್​ನೈಟ್​ ಕೋಣೆ ಪ್ರವೇಶಿಸಿದ್ದಾರೆ. ನನಗೆ ಸಿಕ್ಕಾಪಟ್ಟೆ ಟೆನ್ಷನ್​ ಆಗ್ತಿದೆ ಸುಬ್ಬು ಎಂದು ಶ್ರಾವಣಿ ಹೇಳಿದ್ರೆ, ಆಗಲೇ ಬೆವರಿದ ಸುಬ್ಬು, ನನಗೂ ಅಷ್ಟೇ ಮೇಡಂ ಅಂದಿದ್ದಾನೆ. ಒಟ್ಟಿನಲ್ಲಿ ಟೆನ್ಷನ್​ ಟೆನ್ಷನ್​ ಎನ್ನುತ್ತಲೇ ಈ ಜೋಡಿ ಮೊದಲ ರಾತ್ರಿಗೆ ಮುಹೂರ್ತ ಫಿಕ್ಸ್ ಮಾಡಿದೆ.

46
ಚಿರು-ದೀಪಾ ಒಂದಾದ್ರು
Image Credit : Instagram

ಚಿರು-ದೀಪಾ ಒಂದಾದ್ರು

ಇನ್ನು, ಬ್ರಹ್ಮಗಂಟು ಸೀರಿಯಲ್​​ (Brahmagantu Serial)ನಲ್ಲಿ ಚಿರು ಮತ್ತು ದೀಪಾ ಒಂದಾಗಿ ಆಗಿದೆ. ಸೌಂದರ್ಯಳ ಕಪಟತನವೂ ಬಹಿರಂಗಗೊಂಡಿದೆ. ಚಿರು ಮತ್ತು ದೀಪಾ ಮೊದಲ ರಾತ್ರಿ ಫಿಕ್ಸ್​ ಆಗೋದೊಂದೇ ಬಾಕಿ ಇದೆ. ಆದ್ದರಿಂದ ಸದ್ಯ ಮದುವೆಯಾದ ಮೇಲೂ ದೂರವೇ ಇದ್ದ ಎರಡನೆಯ ಜೋಡಿ ದೀಪಾ ಮತ್ತು ಚಿರು ಶೀಘ್ರದಲ್ಲಿಯೇ ಒಂದಾಗಲಿದ್ದಾರೆ.

56
ಎರಡನೆಯ ಇನ್ನಿಂಗ್ಸ್​
Image Credit : Zee Kannada

ಎರಡನೆಯ ಇನ್ನಿಂಗ್ಸ್​

ಇನ್ನು ಅಮೃತಧಾರೆ (Amruthadhaare). ಇಲ್ಲಿ ಇದಾಗಲೇ ಗೌತಮ್​ ಮತ್ತು ಭೂಮಿಕಾಗೆ ಇಬ್ಬರು ಮಕ್ಕಳು ಇದ್ದಾರೆ. ಆದರೆ ಐದು ವರ್ಷಗಳ ಬಳಿಕ ಇಬ್ಬರೂ ಒಂದಾಗಿರುವ ಕಾರಣ, ಎರಡನೆಯ ಇನ್ನಿಂಗ್ಸ್​ ಶುರುವಾಗಿದೆ. ಅಲ್ಲಿಯೂ ಜೋಡಿಯ ಪ್ರೇಮಗೀತೆ ಶುರುವಾಗಿದೆ.

66
ಆದಿಲಕ್ಷ್ಮಿ ಪುರಾಣ- ಕರ್ಣ ಸೀರಿಯಲ್​
Image Credit : Instagram

ಆದಿಲಕ್ಷ್ಮಿ ಪುರಾಣ- ಕರ್ಣ ಸೀರಿಯಲ್​

ಇನ್ನು ಆದಿಲಕ್ಷ್ಮಿ ಪುರಾಣ (Adi Lakshmi Purana) ಸೀರಿಯಲ್​ನಲ್ಲಿ ಆದಿ ಮತ್ತು ಲಕ್ಷ್ಮಿಯ ಮದುವೆ ವಿಚಿತ್ರವಾಗಿ ನಡೆದಿದೆ. ಮದುವೆಯಾದರೂ ಒಟ್ಟಿಗೇ ಇರದ ಜೋಡಿಯಲ್ಲಿ, ಈಗ ಈ ಜೋಡಿ ಹೊಸ ಸೇರ್ಪಡೆಯಾಗಿದೆ. ಇವರು ಒಂದಾಗಲು ಇನ್ನು ಕೆಲವು ವರ್ಷಗಳೇ ಬೇಕಾಗಬಹುದು ಅನ್ನಿ. ಇನ್ನು ಕರ್ಣ ಸೀರಿಯಲ್​ (Karna Serial)ನಲ್ಲಿ ಕೂಡ ಸದ್ಯ ಕರ್ಣ ಮತ್ತು ನಿಧಿ ಮದುವೆಯಾಗುವುದೇ ಕಷ್ಟ ಎನ್ನುವ ಸ್ಥಿತಿ ಇದ್ದು, ಅವರ ಮೊದಲರಾತ್ರಿಗೆ ಇನ್ನೂ ವೀಕ್ಷಕರು ತುಂಬಾ ಕಾಯಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕನ್ನಡ ಧಾರಾವಾಹಿ
ಶ್ರಾವಣಿ ಸುಬ್ರಮಣ್ಯ
ಕರ್ಣ ಧಾರಾವಾಹಿ
ಬ್ರಹ್ಮಗಂಟು ಧಾರಾವಾಹಿ
ಅಮೃತಧಾರೆ
ಟಿವಿ ಶೋ
ಮನರಂಜನಾ ಸುದ್ದಿ
ಸಂಬಂಧಗಳು

Latest Videos
Recommended Stories
Recommended image1
ಯಾರಿಗೆ 3 ಗಂಡಂದಿರು ಇದ್ದಾರೆ? Bigg Boss Kannada ಮಹಿಳಾ ಸ್ಪರ್ಧಿ ಬಗ್ಗೆ ಬಾಂಬ್‌ ಹಾಕಿದ ಚೈತ್ರಾ ಕುಂದಾಪುರ
Recommended image2
ನೀವೆಲ್ಲಾ ಒಂಟಿಯಾದ್ರೆ ಎಲ್ಲಿ ಹೋಗ್ತೀರಿ? ಬೆಂಗಳೂರಲ್ಲಿ ಸಮುದ್ರಕ್ಕಾಗಿ Rakshita Shetty ಹುಡುಕಾಟ!
Recommended image3
Bigg Boss ಮುಗಿದ್ಮೇಲೂ ಕಾವ್ಯ ಹಿಂದೆ ಬಿದ್ದ ಗಿಲ್ಲಿ ನಟ; ಮೆಸೇಜ್‌ ಮೇಲೆ ಮೆಸೇಜ್‌; ಉರ್ಕೊಂಡ ರಕ್ಷಿತಾ!
Related Stories
Recommended image1
Bigg Boss ನಮ್ರತಾ ಗೌಡ- ಕಾರ್ತಿಕ್​ ಮಹೇಶ್​ ಮದ್ವೆಗೆ ಸಂಗೀತಾ ಶೃಂಗೇರಿ ಗ್ರೀನ್ ಸಿಗ್ನಲ್​: ನಟಿ ಹೇಳಿದ್ದೇನು?
Recommended image2
ನೀವೆಲ್ಲಾ ಒಂಟಿಯಾದ್ರೆ ಎಲ್ಲಿ ಹೋಗ್ತೀರಿ? ಬೆಂಗಳೂರಲ್ಲಿ ಸಮುದ್ರಕ್ಕಾಗಿ Rakshita Shetty ಹುಡುಕಾಟ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved