ಕೆಲವರು ನನ್ನನ್ನು ಪದೇ ಪದೇ 'ನೀನೊಬ್ಬ ನಟ, ನೀನೊಬ್ಬ ನಟ' ಎಂದು ಹೇಳುತ್ತಿದ್ದಾರೆ. ಹೌದು, ನಾನು ನಟನೇ. ಅದನ್ನು ಅವರು ಹೊಸದಾಗಿ ಕಂಡುಹಿಡಿದಂತಿದೆ. ಆದರೆ ಒಂದು ವಿಷಯ ನೆನಪಿರಲಿ, ನಾನು ರಾಜಕೀಯಕ್ಕೆ ಬಂದ ಮೇಲೆ ನಟಿಸುತ್ತಿಲ್ಲ. ನೀವು ಮಾಡುತ್ತಿರುವುದು ಬೃಹನ್ನಾಟಕ. ನಾನು ಇಲ್ಲಿಗೆ ಬಂದಿರುವುದು ಅಧಿಕಾರಕ್ಕಾಗಿ ಅಲ್ಲ, ಜನರ ಸೇವೆ ಮಾಡಲು..
ನಟ ಅಲ್ಲ ನಾಯಕ.. ಎದುರಾಳಿಗಳಿಗೆ ವಿಜಯ್ ಟಾಂಗ್..!
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೀತಾ ಇದ್ದು, ಇಂದೇ ಅಲ್ಲಿನ 234 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ಬಾರಿ ಟಿವಿಕೆ ಅನ್ನೋ ಪಾರ್ಟಿ ಕಟ್ಟಿ ಕಣದಲ್ಲಿರೋ ವಿಜಯ್, ಗೇಮ್ ಚೇಂಜರ್ ಆಗೋ ಸೂಚನೆ ನೀಡಿದ್ದಾರೆ. ಪ್ರಚಾರದ ಕೊನೆ ದಿನ ಅಬ್ಬರದ ಭಾಷಣ ಮಾಡಿರೋ ವಿಜಯ್ , ಎದುರಾಳಿಗಳಿಗೆ ಖಡಕ್ ಸಂದೇಶ ಕೊಟ್ಟಿದ್ದಾರೆ.
ಇವತ್ತು ತಮಿಳುನಾಡಿನಲ್ಲಿ ಮತದಾನ ನಡೀತಾ ಇದೆ. ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ವೋಟಿಂಗ್ ನಡೀತಾ ಇದೆ. ಇಷ್ಟು ವರ್ಷ ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿ ಕೂಟ ಮತ್ತು ಎಐಎಡಿಎಂಕೆ ಮೈತ್ರಿಕೂಟದ ನಡುವೆ ಹಣಾಹಣಿ ಇರ್ತಾ ಇದ್ರು. ಆಧ್ರೆ ಈ ಸಾರಿ ಇಬ್ಬರ ನಡುವೆ ಎಂಟ್ರಿ ಕೊಟ್ಟಿರೋದು ದಳಪತಿ ವಿಜಯ್.
ಟಿವಿಕೆ ಪಾರ್ಟಿ ಕಟ್ಟಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ದಳಪತಿ ವಿಜಯ್
ಎರಡು ವರ್ಷಗಳ ಹಿಂದೆ ಟಿವಿಕೆ ಅನ್ನೋ ಪಾರ್ಟಿ ಕಟ್ಟಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ದಳಪತಿ, ಮೊದಲ ಚುನಾವಣೆಯಲ್ಲೇ ಮೋಡಿ ಮಾಡೋ ಸೂಚನೆ ನೀಡಿದ್ದಾರೆ. ವಿಜಯ್ಗಿರೋ ಫ್ಯಾನ್ ಫಾಲೊವಿಂಗ್ ತುಂಬಾ ದೊಡ್ಡದು. ಅವರಿಗಿರೋ ಅಭಿಮಾನಿ ಬಲ ವೋಟ್ ಆಗಿ ಕನ್ವರ್ಟ್ ಆಧ್ರೆ ವಿಜಯ್ ಸಿಎಂ ಆದ್ರೂ ಅಚ್ಚರಿಯಿಲ್ಲ ಅಂದಿದ್ರು ರಾಜಕೀಯ ಪಂಡಿತರು.
ಒಂದು ಹಂತದಲ್ಲಿ ವಿಜಯ್ ಪ್ರಚಾರದ ಅಬ್ಬರ ನೋಡಿ ರಾಜಕೀಯ ವಿರೋಧಿಗಳು ಇನ್ನಿಲ್ಲದ ಕಾಟ ಕೊಟ್ಟರು. ಕರೂರಿನಲ್ಲಿ ವಿಜಯ್ ಪಾರ್ಟಿ ಪ್ರಚಾರದ ವೇಲೆ ಕಾಲ್ತುಳಿತ ಸಂಭವಿಸಿ 40 ಜನರು ಮೃತರಾದ್ರು.
ವಿಜಯ್ ಕೌಟುಂಬಿಕ ಕದನ ಬೀದಿಗೆ ಬಂತು, ಜನನಾಯಗನ್ ಸಿನಿಮಾ ಸೆನ್ಸಾರ್ ಆಗದೇ ಡಬ್ಬದಲ್ಲೇ ಉಳಿದು ಹೋಯಿತು. ಇದಕ್ಕೆಲ್ಲಾ ರಾಜಕೀಯ ವಿರೋಧಿಗಳ ಷಡ್ಯಂತ್ರವೇ ಕಾರಣ ಅನ್ನೋದು ವಿಜಯ್ ಅಭಿಮಾನಿಗಳ ಆರೋಪ.
ಸದ್ಯ ವಿಜಯ್, ಈ ಎಲ್ಲದರ ಬಗ್ಗೆ ಕೊನೆ ಹಂತದ ಪ್ರಚಾರದಲ್ಲಿ ಆಕ್ರೋಶದಿಂದ ಮಾತನಾಡಿದ್ದಾರೆ. ತನ್ನ ಕೇವಲ ಒಬ್ಬ ನಟ ಅಂತ ಟೀಕಿಸುವವರಿಗೆ ಚೆನ್ನೈನಲ್ಲಿ ನಡೆದ ರಾಲಿಯಲ್ಲಿ ಟಾಂಗ್ ಕೊಟ್ಟಿದ್ದಾರೆ.
ಹೌದು, ನಾನು ನಟನೇ!
'ಕೆಲವರು ನನ್ನನ್ನು ಪದೇ ಪದೇ 'ನೀನೊಬ್ಬ ನಟ, ನೀನೊಬ್ಬ ನಟ' ಎಂದು ಹೇಳುತ್ತಿದ್ದಾರೆ. ಹೌದು, ನಾನು ನಟನೇ. ಅದನ್ನು ಅವರು ಹೊಸದಾಗಿ ಕಂಡುಹಿಡಿದಂತಿದೆ. ಆದರೆ ಒಂದು ವಿಷಯ ನೆನಪಿರಲಿ, ನಾನು ರಾಜಕೀಯಕ್ಕೆ ಬಂದ ಮೇಲೆ ನಟಿಸುತ್ತಿಲ್ಲ. ನೀವು ಮಾಡುತ್ತಿರುವುದು ಬೃಹನ್ನಾಟಕ. ನಾನು ಇಲ್ಲಿಗೆ ಬಂದಿರುವುದು ಅಧಿಕಾರಕ್ಕಾಗಿ ಅಲ್ಲ, ಜನರ ಸೇವೆ ಮಾಡಲು.
ಸಿನಿಮಾ ರಂಗದಲ್ಲಿ ನಾನು ಗಳಿಸಿದ ಪ್ರೀತಿ ಮತ್ತು ಗೌರವವನ್ನು ಈಗ ಜನರ ಹಿತಕ್ಕಾಗಿ ಬಳಸಲು ಬಯಸುತ್ತೇನೆ. ತಮಿಳುನಾಡಿನ ರಾಜಕೀಯದಲ್ಲಿ ಒಂದು ಬದಲಾವಣೆಯ ಅಗತ್ಯವಿದೆ. ಆ ಬದಲಾವಣೆಯನ್ನು ತರುವುದು ನನ್ನ ಗುರಿ. ನಾನು ಜನರ ಪರವಾಗಿ ನಿಲ್ಲುತ್ತೇನೆ ಮತ್ತು ಅವರ ಸಮಸ್ಯೆಗಳಿಗೆ ಧ್ವನಿಯಾಗುತ್ತೇನೆ. ಯಾರು ನನ್ನನ್ನು ಟೀಕಿಸುತ್ತಾರೋ ಅವರಿಗೆ ನನ್ನ ಕೆಲಸಗಳೇ ಉತ್ತರ ನೀಡುತ್ತವೆ. ನಾನು ಮೌನವಾಗಿದ್ದೇನೆ ಎಂದರೆ ಅದರ ಅರ್ಥ ನಾನು ಹೆದರಿದ್ದೇನೆ ಎಂದಲ್ಲ, ನಾನು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೇನೆ ಎಂದರ್ಥ' ಎಂದಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..


