'ಕಾಂತಾರ' ಚಿತ್ರದ ದೈವದ ಸೀನ್‌ಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅಪಮಾನ ಮಾಡಿದ್ದಾರೆ ಎನ್ನಲಾದ ವಿವಾದಕ್ಕೆ ನಟಿ ಸಪ್ತಮಿ ಗೌಡ ಪ್ರತಿಕ್ರಿಯಿಸಿದ್ದಾರೆ. ದೈವಾರಾಧನೆ ಅಥವಾ ಸಂಸ್ಕೃತಿಗೆ ನೋವಾಗಬಾರದು ಎಂದರು. ಜೊತೆಗೆ ತಮ್ಮ ಮುಂಬರುವ 'ರೈಸ್ ಆಫ್ ಅಶೋಕ' ಚಿತ್ರದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.

ಕೂಡಲಸಂಗಮ (ಡಿ.6): ಕನ್ನಡದ ಸೂಪರ್‌ ಹಿಟ್ ಚಲನಚಿತ್ರ 'ಕಾಂತಾರ 2' ರಲ್ಲಿನ ದೈವದ ಸೀನ್‌ಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಅಪಮಾನ ಮಾಡಿದ್ದಾರೆ ಎನ್ನಲಾದ ವಿಚಾರದ ಬಗ್ಗೆ 'ಕಾಂತಾರ' ನಟಿ ಸಪ್ತಮಿ ಗೌಡ ಅವರು ಕೂಡಲಸಂಗಮದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

'ಯಾವಾಗಲೂ ಅಷ್ಟೇ, ದೈವಾರಾಧನೆ ಅಥವಾ ಸಂಸ್ಕೃತಿ (Culture) ಅಂತ ಬಂದಾಗ ಅದಕ್ಕೇ ಆದ ರೀತಿ ನಿಯಮಗಳು ಇರುತ್ತದೆ. ದಕ್ಷಿಣ ಕರ್ನಾಟಕ ಅಂತಲ್ಲ, ಉತ್ತರ ಕರ್ನಾಟಕ ಅಂತಲ್ಲ, ಎಲ್ಲೇ ಆಗಲಿ, ಅದನ್ನು ಪಾಲಿಸುವವರಿಗೆ ಧಾರ್ಮಿಕವಾಗಿ (Religiously) ನೋವಾಗಬಾರದು. ಯಾವುದೇ ಒಬ್ಬ ವ್ಯಕ್ತಿಗಾಗಲಿ, ಒಂದು ಸಂಘಕ್ಕಾಗಲಿ ಅಥವಾ ಒಂದು ಧಾರ್ಮಿಕ ಸಮೂಹಕ್ಕಾಗಲಿ ನೋವಾಗಬಾರದು, ಎಂದು ಸಪ್ತಮಿ ಗೌಡ ಹೇಳಿದರು.

ರಣವೀರ್ ಸಿಂಗ್ ಕ್ಷಮೆ ಕೇಳಿದ್ದಾರೆ:

ದೈವಾರಾಧಕರಿಗೆ ನೋವಾಗಿದೆ. ಅದಕ್ಕೆ ರಣವೀರ್ ಸಿಂಗ್ ಅವರು ಕ್ಷಮೆ (Apology) ಕೂಡ ಕೇಳಿದ್ದಾರೆ. ತಪ್ಪು ಮಾಡಿದೆ ಅಂತ ಹೇಳಿದ್ದಾರೆ. ದೊಡ್ಡ ನಟರು ಇನ್ನು ಮುಂದೆ ಈ ತರಹ ಆಗದ ಹಾಗೆ ನೋಡಿಕೊಳ್ಳಬೇಕು ಎಂದು ನಟಿ ಸಪ್ತಮಿ ಗೌಡ ಸಲಹೆ ನೀಡಿದ್ದಾರೆ.

ಏಳು ಮಾದೇವ ಹಾಡಿಗೆ ಮೆಚ್ಚುಗೆ:

ಮುಂದಿನ ಸಿನಿ ಪ್ರಾಜೆಕ್ಟ್‌ಗಳ ಕುರಿತು ಮಾತನಾಡಿದ ಸಪ್ತಮಿ ಗೌಡ, 'ಇವಾಗ 'ರೈಸ್ ಆಫ್ ಅಶೋಕ' ಎಂಬ ನನ್ನ ಸಿನಿಮಾ ಫೆಬ್ರುವರಿಗೆ ರಿಲೀಸ್ ಆಗಲಿದೆ. 'ಏಳು ಮಾದೇವ' ಅಂತ ಹಾಡು ಕೂಡ ಈಗಾಗಲೇ ರಿಲೀಸ್ ಆಗಿದೆ,. ಇವತ್ತು ಆ ಮಾದೇವನ ಆಶೀರ್ವಾದ ಪಡೆದುಕೊಂಡಿದ್ದೇವೆ. 'ಏಳು ಮಾದೇವ' ಎಂಬ ಹಾಡನ್ನು ಜನರು ಬಹಳ ಚೆನ್ನಾಗಿ ರಿಸೀವ್ ಮಾಡಿಕೊಂಡಿದ್ದಾರೆ. ಜನ ಬಹಳ ಖುಷಿಪಟ್ಟಿದ್ದಾರೆ. ಇನ್ನೊಂದು ಹಾಡು ಇನ್ನೊಂದು ವಾರದಲ್ಲಿ ಬಿಡುಗಡೆಯಾಗಲಿದೆ ಬೇರೆ ಭಾಷೆಗಳಲ್ಲಿಯೂ ಅವಕಾಶಗಳು ಬರುತ್ತಿವೆ. ಕನ್ನಡದಲ್ಲಿ ಕೂಡ ಇನ್ನೊಂದು ಸಿನಿಮಾ ನಡೆಯುತ್ತಿದೆ ಎಂದು ನಟಿ ಸಪ್ತಮಿ ಗೌಡ ಮುಂಬರುವ ಸಿನಿಮಾಗಳ ಬಗ್ಗೆ ಮಾಹಿತಿ ನೀಡಿದರು.

Kantara Actress Sapthami Gowda on Ranveer Singh Row Culture Should Not Be Hurt