Meghana Raj : ಉದಯ ಟಿವಿಯಲ್ಲಿ ಧ್ರುವ ದಸರಾ ಕಾರ್ಯಕ್ರಮ ಪ್ರಸಾರ ಆಗ್ತಿದೆ. ಕಾರ್ಯಕ್ರಮಕ್ಕೆ ಬಂದಿದ್ದ ಮೇಘನಾ ರಾಜ್ ಅಡುಗೆ ಗುಟ್ಟನ್ನು ಧ್ರುವ ಸರ್ಜಾ ರಟ್ಟು ಮಾಡಿದ್ದಾರೆ. ಮೇಘನಾ ಕಾಫಿ ಹೇಗೆ ಮಾಡ್ತಾರೆ ಎಂಬುದನ್ನು ಹೇಳಿದ್ದಾರೆ. 

ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ (Meghana Raj) ಅಡುಗೆ ಗುಟ್ಟು ರಿವೀಲ್ ಆಗಿದೆ. ಮೇಘನಾ ರಾಜ್ ಕಾಫಿ, ಟೀ ಹೇಗೆ ಮಾಡ್ತಾರೆ, ಅದನ್ನು ಕುಡಿದು ಚಿರಂಜೀವಿ ಸರ್ಜಾ (Chiranjeevi Sarja) ಹೇಗೆ ರಿಯಾಕ್ಟ್ ಮಾಡ್ತಿದ್ರು ಅನ್ನೋದನ್ನು ಧ್ರುವ ಸರ್ಜಾ ಎಲ್ಲರ ಮುಂದಿಟ್ಟಿದ್ದಾರೆ. ಧ್ರುವ ಸರ್ಜಾ (Dhruva Sarja), ಅತ್ತಿಗೆ ಮೇಘನಾ ರಾಜ್ ಯಾವ ಅಡುಗೆ ಚೆನ್ನಾಗಿ ಮಾಡ್ತಾರೆ ಎನ್ನುವ ಪ್ರಶ್ನೆಗೂ ಉತ್ತರ ನೀಡಿದ್ದಾರೆ.

ಮೇಘನಾ ರಾಜ್ ಮಾಡೋ ಕಾಫಿ – ಟೀ ಹೇಗಿರುತ್ತೆ? : 

ಉದಯ ಟಿವಿಯಲ್ಲಿ ಪ್ರಸಾರ ಆಗಲಿರುವ ಧ್ರುವ ದಸರಾ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ಜೊತೆ ಮೇಘನಾ ರಾಜ್ ಕಾಣಿಸಿಕೊಳ್ತಿದ್ದಾರೆ. ಮೇಘನಾ ರಾಜ್ ಮಾಡುವ ಯಾವ ಅಡುಗೆ ಇಷ್ಟ ಅಂತ, ಧ್ರುವ ಸರ್ಜಾ ಅವರನ್ನು ಕೇಳಿದ್ರೆ, ಅವರು ನೀಡಿದ ಉತ್ತರ ಮಜವಾಗಿದೆ. ಯಾವುದೇ ಕಾರಣಕ್ಕೂ ಮೇಘನಾ ರಾಜ್ ಕೈನಲ್ಲಿ ಟೀ, ಕಾಫಿ ಮಾಡಿಸ್ಬೇಡಿ ಎನ್ನುತ್ತಾರೆ ಧ್ರುವ ಸರ್ಜಾ. ಅದಕ್ಕೆ ಕಥೆ ಕೂಡ ಹೇಳಿದ್ದಾರೆ. ಚಿರಂಜೀವಿ ಸರ್ಜಾ, ಮೇಘನಾ ರಾಜ್ ಮಾಡುವ ಕಾಫಿ – ಟೀ ಅಂದ್ರೆ ಮುಖ ಪೆಚ್ಚು ಮಾಡಿಕೊಳ್ತಿದ್ದರಂತೆ. ಚಿರಂಜೀವಿ ಸರ್ಜಾ ಮುಖ ನೋಡಿ ಏನಾಯ್ತು ಅಂತ ಧ್ರುವ ಕೇಳಿದ್ರೆ, ನನ್ನ ಕಷ್ಟದಲ್ಲಿ ಭಾಗಿಯಾಗ್ತೀಯಾ ಅಂತ ಕೇಳಿದ್ದರಂತೆ. ಅದಕ್ಕೆ ಧ್ರುವ, ಏನೂ ಹೇಳು, ಮಾಡ್ತೇನೆ ಅಂತ ಜೋಶ್ ನಲ್ಲಿ ಹೇಳಿದ್ದರು. ಹಾಗಿದ್ರೆ ಬಂದು ಕುಳತ್ಕೋ ಅಂತ ಧ್ರುವ ಸರ್ಜಾರನ್ನು ಚಿರಂಜೀವಿ ಕರೆದಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಮೇಘನಾ ಕಾಫಿ ಹಿಡಿದು ಬಂದಿದ್ದಾರೆ. ಅದನ್ನು ಕುಡಿದ ಧ್ರುವ ಇದೇನು ಅಂತ ಚಿರು ಅವರನ್ನು ಕೇಳಿದ್ದಾರೆ. ನನ್ನ ಕಷ್ಟದಲ್ಲಿ ಭಾಗಿಯಾಗೋ ಅಂತ ಚಿರು ಹೇಳಿದ್ದರಂತೆ. ಅದಾದ್ಮೇಲೆ ನಾನು ಕಾಫಿ ಕುಡಿದಿಲ್ಲ ಅಂತ ಧ್ರುವ ಹೇಳಿದ್ದಾರೆ.

Bigg Bossಗೆ 2 ಕೋಟಿ ರೂ. ಭಾರಿ ದಂಡ! ರಿಯಾಲಿಟಿ ಷೋಗೆ ಕಾನೂನು ಸಂಕಷ್ಟ- ಅಷ್ಟಕ್ಕೂ ಆಗಿದ್ದೇನು ನೋಡಿ

ಮೇಘನಾ ರಾಜ್ ಮಾಡುವ ರುಚಿಯಾದ ಅಡುಗೆ ಯಾವ್ದು? : 

ಇನ್ನು ಧ್ರುವ ಸರ್ಜಾ, ಮೇಘನಾ ರಾಜ್ ಮಾಡುವ ಕ್ಯಾರೆಟ್ ಹಲ್ವಾ ಸೂಪರ್ ಆಗಿತ್ತು ಎಂದಿದ್ದಾರೆ. ಮೇಘನಾ ರಾಜ್ ಮಾಡಿದ ಚಿಕನ್ ಕರಿ, ಚಿಕನ್ ಕಡಿ, ಕ್ಯಾರೆಟ್ ಹಲ್ವಾವನ್ನು ಧ್ರುವ ಸರ್ಜಾ ತಿಂದಿದ್ದಾರೆ. ಅದ್ರಲ್ಲಿ ಕ್ಯಾರೆಟ್ ಹಲ್ವಾ ಚೆನ್ನಾಗಿತ್ತು ಎಂದ ಧ್ರುವ, ಚಿರಂಜೀವಿ ಸರ್ಜಾ, ಇವತ್ತು ಉಪ್ಪಿಟ್ಟು ಕಣೋ, ಇವತ್ತು ಚಿತ್ರಾಹ್ನ ಕಣೋ ಅಂತ ಗೋಳಾಡ್ತಿದ್ರು. ಮೋಸ್ಟ್ಲಿ ಅತ್ತಿಗೆ ಅದನ್ನೇ ಹೆಚ್ಚು ಮಾಡ್ತಾರೆ ಎಂದಿದ್ದಾರೆ.

ಧ್ರುವ ಸರ್ಜಾರಿಗೆ ತಮ್ಮನ ಸ್ಥಾನ ನೀಡಿರುವ ಮೇಘನಾ ರಾಜ್ :

 ಧ್ರುವ ಸರ್ಜಾ ಹಾಗೂ ಮೇಘನಾ ರಾಜ್ ತಮ್ಮ ಬಾಂಧವ್ಯದ ಬಗ್ಗೆ ವೇದಿಕೆ ಮೇಲೆ ಮಾತನಾಡಿದ್ದಾರೆ. ಧ್ರುವ ಸರ್ಜಾ ಅವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಮೇಘನಾ ರಾಜ್ ಹಂಚಿಕೊಂಡಿದ್ದಾರೆ. ನನಗೆ ತಮ್ಮನ ಅಗತ್ಯವಿತ್ತು. ಅದು ಧ್ರುವನಲ್ಲಿ ಸಿಕ್ಕಿದೆ. ಧ್ರುವ ದೇವರು ಕೊಟ್ಟ ತಮ್ಮ ಅಂತ ಮೇಘನಾ, ಧ್ರುವ ಸರ್ಜಾ ಅವರನ್ನು ಹೊಗಳಿದ್ದಾರೆ.

kwatle kitchen Show Finale: 'ಸೀರಿಯಲ್‌ನವ್ರು ನಾನು ಅಂದುಕೊಂಡ ಥರ ಇರಲಿಲ್ಲ'- ಪ್ರಶಾಂತ್‌ ಕಲಾವಿದ

ಚಿರಂಜೀವಿ ಸರ್ಜಾ, ಜೂನ್ 7, 2020ರಂದು ನಮ್ಮೆಲ್ಲರನ್ನು ಅಗಲಿದ್ದಾರೆ. ಆಗ ಗರ್ಭಿಣಿಯಾಗಿದ್ದ ಮೇಘನಾ ರಾಜ್, ಈಗ ಗಂಡು ಮಗುವಿನ ತಾಯಿ. ಚಿರು ಅವರನ್ನು ಮಗನಲ್ಲಿ ಕಾಣುವ ಮೇಘನಾ ರಾಜ್ ಗೆ ಧ್ರುವ ಸರ್ಜಾ ಸದಾ ಬೆಂಬಲವಾಗಿ ನಿಂತಿದ್ದಾರೆ. ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ಎಂದೂ ಅಣ್ಣ ತಮ್ಮನಂತಿರಲಿಲ್ಲ. ಸ್ನೇಹಿತರಂತಿದ್ದ ಅವರ ಮಧ್ಯೆ ಮೇಘನಾ ರಾಜ್ ಅವರಿಗೂ ಸ್ನೇಹಿತೆ, ಸಹೋದರಿ ಸ್ಥಾನ ಸಿಕ್ಕಿತ್ತು. ಈಗ್ಲೂ ಧ್ರುವ ಸರ್ಜಾ ತಮ್ಮ ಜವಾಬ್ದಾರಿಯನ್ನು ಚಾಚು ತಪ್ಪದೆ ನಿಭಾಯಿಸಿಕೊಂಡು ಹೋಗ್ತಿದ್ದಾರೆ.