ವೈರಲ್ ಆಯ್ತು ನಾಗಾರ್ಜುನ ಟ್ಟೀಟ್. ಬೇಸರ ಮಾಡಿಕೊಂಡಿಲ್ವಾ ಸರ್ ಎಂದ ನೆಟ್ಟಿಗರು... 

ಟಾಲಿವುಡ್ ಕ್ಯೂಟ್ ಕಪಲ್ ಎಂದು ಹೆಸರು ಪಡೆದಿದ್ದ ಸಮಂತಾ ಮತ್ತು ನಾಗ ಚೈತನ್ಯ ಜೋಡಿ ವಿಚ್ಛೇದನ ಪಡೆದುಕೊಂಡ ನಂತರ ಹಲವರಿಗೆ ಪ್ರೀತಿ ಮೇಲೆಯೇ ನಂಬಿಕೆಯೇ ಹೋಗಿದೆ. ಒಬ್ಬರಿಗೊಬ್ಬರು ಸಾಥ್‌ ಕೊಟ್ಟು ಜೀವನ ನಡೆಸುತ್ತಿದ್ದವರೇ. ಹೀಗೆ ಮಾಡಿಕೊಂಡರೆ, ನಾವೇನು ಮಾಡಬೇಕು? ಎಂದು ಜನ ಸಾಮಾನ್ಯರು ಪ್ರಶ್ನೆ ಮಾಡುವ ಸಮಯವಿದು. ಇನ್ನೂ ವಿಚಾರವನ್ನು ಅರಗಿಸಿಕೊಳ್ಳಲು, ಆಗದಿರುವ ಜನರಿಗೆ ನಾಗಾರ್ಜುನ್ ಮಾಡಿರುವ ಕಾಮೆಂಟ್‌ನಿಂದ ಶಾಕ್ ಆಗಿದೆ. 

ಹೌದು! ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಸುದ್ದಿ ಇನ್ನೂ ತಣ್ಣಗಾಗಿಲ್ಲ. ಅಭಿಮಾನಿಗಳು ಏನೇ ಪರ, ವಿರೋಧ ಚರ್ಚೆ ಮಾಡುತ್ತಿದ್ದರೂ, ಅವೆಲ್ಲವೂ ಅವರ ಕುಟುಂಬಸ್ಥರ ಕಾಮೆಂಟ್ ನೋಡಿಯೇ ಮಾಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಈವರೆಗೂ ಸಮಂತಾ ತಮ್ಮ ಡಿವೋರ್ಸ್‌ಗೇನು ಕಾರಣ ಎಂಬುದನ್ನು ರಿವೀಲ್ ಮಾಡಿಲ್ಲ. ತಮ್ಮ ಜೀವನ ಇನ್ನೂ ಉತ್ತಮವಾಗಬೇಕು ಎಂದು ನೋವಿನಲ್ಲೂ ಸಮಾಜ ಸೇವೆ ಮಾಡಿಕೊಂಡು ಬ್ಯುಸಿಯಾಗಿದ್ದಾರೆ. 

'ಬಂಗಾರರಾಜು' ಸಿನಿಮಾ ಪ್ರಚಾರದ ವೇಳೆ ಅಪ್ಪ ಮಗ ಇಬ್ಬರು ಈ ಡಿವೋರ್ಸ್‌ ಬಗ್ಗೆ ಮಾತನಾಡಿದ್ದರು. ಅದರ ಬಗ್ಗೆಯೂ ಸಾಕಷ್ಟು ಸುದ್ದಿ ಹರಿದಾಡಿತ್ತು. ಆದರೆ ಕೆಲವು ದಿನಗಳ ಹಿಂದೆ ನಾಗಾರ್ಜುನ ಬೇಸರ ಮಾಡಿಕೊಂಡಿದ್ದಾರೆ, ಮಗ-ಸೊಸೆ ಒಟ್ಟಾಗಬೇಕು ಎನ್ನುತ್ತಿದ್ದಾರೆ ಎಂದು ಹರಿದಾಡುತ್ತಿತ್ತು. ನಾನು ಹೀಗೆ ಹೇಳೇ ಇಲ್ಲ, ಅಂಥ ಹೇಳಿಕೆ ಕೊಟ್ಟಿದ್ದು ನಾನಲ್ಲ, ಎಂದು ನಾಗಾರ್ಜುನ ಸ್ಪಷ್ಟನೆ ನೀಡಿದ್ದಾರೆ. 

'ಸೋಷಿಯಲ್ ಮೀಡಿಯಾ ಮತ್ತು ಎಲೆಕ್ಟ್ರಾನಿಕ್ ಮೀಡಿಯಾ ನಾನು ಒಂದು ಸ್ಟೇಟ್‌ಮೆಂಟ್ ನೀಡಿರುವುದಾಗಿ quote ಮಾಡುತ್ತಿವೆ. ಆದರೆ ಸಮಂತಾ ಮತ್ತು ನಾಗ ಚೈತನ್ಯ ಡಿವೋರ್ಸ್‌ ಬಗ್ಗೆ ನಾನು ಏನೂ ಹೇಳಿಲ್ಲ. ಇವೆಲ್ಲವೂ ಸುಳ್ಳು absolute nonsense.ನನ್ನ ಮಾಧ್ಯಮ ಸ್ನೇಹಿತರು ದಯವಿಟ್ಟು ಈ ರೀತಿ ಸುದ್ದಿ ಹಾಕುವುದನ್ನು ತಡೆಯಬೇಕು. #GiveNewsNotRumours' ಎಂದು ನಾಗಚೈತನ್ಯ ಬರೆದುಕೊಂಡಿದ್ದಾರೆ. 

Samantha Divorce: ನಾಗಚೈತನ್ಯನಿಂದ ಡಿವೋರ್ಸ್‌ ಕೇಳಿದ್ದೇ ಸಮಂತಾ, ನಾಗಾರ್ಜುನ ಹೇಳಿದ್ದಿಷ್ಟು

ಸ್ಯಾಮ್ ಮತ್ತು ಚೈ ಡಿವೋರ್ಸ್‌ ಪಡೆದು 4 ತಿಂಗಳು ಕಳೆದಿವೆ. 'ಸಮಂತಾ ವಿಚ್ಛೇದನವನ್ನು ಬಯಸಿದಾಗ ಮೊದಲು ಅರ್ಜಿ ಸಲ್ಲಿಸಿದ್ದರು, ಎಂದು ನಾಗಾರ್ಜುನ ಬಹಿರಂಗಪಡಿಸಿದ್ದಾರೆಂದು ಸುದ್ದಿ ಹರಿದಾಡಿತ್ತು. ನಾಗ ಚೈತನ್ಯ ಅವರ ನಿರ್ಧಾರವನ್ನು ತಂದೆ ಒಪ್ಪಿಕೊಂಡರು. ಆದರೆ ಅವರು ನನ್ನ ಬಗ್ಗೆ ತುಂಬಾ ಚಿಂತಿತರಾಗಿದ್ದರು, ನಾನು ಏನು ಯೋಚಿಸುತ್ತೇನೆ ಮತ್ತು ಕುಟುಂಬದ ಖ್ಯಾತಿಗೆ ಏನಾಗುತ್ತದೆ ಎಂಬುವುದು ಅವರ ಚಿಂತೆಯಾಗಿತ್ತು, ಎಂದು ನಾಗಾರ್ಜುನ ಹೇಳಿದ್ದಾರೆ ಎನ್ನಲಾಗಿದೆ,' ಎಂದು ಸಂದರ್ಶನದಲ್ಲಿ ಚೈತನ್ಯ ಅಪ್ಪ ಹೇಳಿದ್ದಾರೆಂಬ ಸುದ್ದಿ ಸಕತ್ತೂ ಸದ್ದು ಮಾಡಿತ್ತು.

ದಾಂಪತ್ಯ ಜೀವನದಲ್ಲಿ ಅವರಿಬ್ಬರೂ 4 ವರ್ಷಗಳಿಂದ ಒಟ್ಟಿಗೆ ಇದ್ದಾರೆ. ಆದರೆ ಅಂತಹ ಯಾವುದೇ ಸಮಸ್ಯೆ ಅವರ ನಡುವೆ ಬಂದಿಲ್ಲ. ಇಬ್ಬರೂ ತುಂಬಾ ಆತ್ಮೀಯರಾಗಿದ್ದರು. ಅದು ಹೇಗೆ ಈ ನಿರ್ಧಾರಕ್ಕೆ ಬಂದರು ಎಂದು ನನಗೂ ತಿಳಿದಿಲ್ಲ. ಅವರು 2021 ರ ಹೊಸ ವರ್ಷವನ್ನು ಒಟ್ಟಿಗೆ ಆಚರಿಸಿದರು, ಅದರ ನಂತರ ಸಮಸ್ಯೆಗಳು ಉದ್ಭವಿಸಿವೆ, ಎಂದು ತೋರುತ್ತದೆ ಎಂದು ನಾಗಾರ್ಜುನ ಹೇಳಿರುವುದಾಗಿ ತಿಳಿದು ಬಂದಿದೆ. ಆದರೀಗ ಸ್ವತಃ ನಾಗಾರ್ಜುನ ಅವರೇ ನಾನು ಹೇಳಿಲ್ಲ ಎನ್ನುತ್ತಿದ್ದಾರೆ.

ಕುಟುಂಬಸ್ಥರ ನಡುವೆಯೇ ಗೊಂದಲ ಇರುವ ಕಾರಣ ಅಭಿಮಾನಿಗಳು ನಾಗಾರ್ಜುನ ಕುಟುಂಬಕ್ಕೆ ಡಿವೋರ್ಸ್‌ ಅನ್ನೋ ಕಾನ್ಸೆಪ್ಟ್‌ ಹೊಸದಲ್ಲ, ಎಂದು ಕಾಲೆಳೆಯುತ್ತಿದ್ದಾರೆ. ಅಷ್ಟಲ್ಲದೇ ಅವರ ಮನೆ ಹೇಗೆ ಎಂದು ಗೊತ್ತಿದ್ದರೂ, ಮದುವೆ ಅಗಿದ್ಯಲಮ್ಮ ಎಂದು ಸಮಂತಾಗೇ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ನಾನು ಏನೂ ಹೇಳೇ ಇಲ್ಲ ಎಂದು ನಾಗಾರ್ಜುನ ಟ್ಟೀಟ್ ಮಾಡಿದ ನಂತರ ಅಭಿಮಾನಿಗಳು ಅವರನ್ನು ಹಲವು ರೀತಿಯಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಮಗ ವಿಚ್ಛೇದನ ಪಡೆದುಕೊಂಡು, ಜೀವನ ಹಾಳಾಯ್ತು ಎಂದು ಪೋಷಕರು ಬೇಸರ ಮಾಡಿಕೊಳ್ಳುತ್ತಾರೆ ಆದರೆ ನೀವು ಮಾತ್ರ ನಾನು ಏನೂ ಹೇಳೇ ಇಲ್ಲ ಎಂದಿದ್ದೀರಿ. ಹಾಗಿದ್ದರೆ ನಿಮಗೆ ಬೇಸರವೇ ಇಲ್ಲ ಎಂದರ್ಥವೇ, ಎಂದು ಕೇಳುತ್ತಿದ್ದಾರೆ. 

ನಾಲ್ಕು ತಿಂಗಳಲ್ಲಿ ವರ್ಷ ಕಳೆದರೂ ಇವರ ವಿಚ್ಛೇದನದ ಬಗ್ಗೆ ಮಾತು ನಿಲ್ಲುವುದಿಲ್ಲ ಎನ್ನುತ್ತಾರೆ ಸಿನಿ ರಂಗದವರು.

Scroll to load tweet…