Asia Cup Final ಪಾಕ್ ವಿರುದ್ಧ ಚೇಸಿಂಗ್ ಆರಂಭದಲ್ಲೇ ಶಾಕ್, ಸತತ ವಿಕೆಟ್ ಪತನ ಗೊಂಡಿದೆ. ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಕಠಿಣ ಸವಾಲು ಎದುರಾಗಿದೆ. ಸುಲಭ ಗುರಿ ಇದೀಗ ಬೆಟ್ಟಕ್ಕಿಂತ ಎತ್ತರವಾಗಿದೆ.

ದುಬೈ (ಸೆ.28) ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಫೈನಲ್ ಪಂದ್ಯದ ಆರಂಭದಲ್ಲೇ ಭಾರತೀಯ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಪಾಕಿಸ್ತಾನ ತಂಡವನ್ನು 146 ರನ್‌ಗೆ ಕಟ್ಟಿ ಹಾಕಿ ಕಣಕ್ಕಿಳಿದ ಟೀಂ ಇಂಡಿಯಾ ಆರಂಭದಲ್ಲೇ ವಿಕೆಟ್ ಕೈಚೆಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ರನ್ ಚೇಸ್ ಇದೀಗ ಕಠಿಣವಾಗುತ್ತಿದೆ. ಲೀಗ್ ಹಂತ, ಸೂಪರ್ 4 ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ಕುಂಟುತ್ತಾ ಸಾಗಿದೆ. ಅಭಿಶೇಖ್ ಶರ್ಮಾ, ನಾಯಕ ಸೂರ್ಯಕುಮಾರ್ ಯಾದವ್, ಶುಬಮನ್ ಗಿಲ್ ವಿಕೆಟ್ ಪತನಗೊಂಡಿದೆ.

ಪಾಕ್ ವೇಗಿಗಳಿಗೆ 3 ವಿಕೆಟ್

ಸುಲಭ ರನ್ ಚೇಸ್ ಮಾಡಲು ಕಣಕ್ಕಿಳಿದ ಭಾರತ, ಪಾಕಿಸ್ತಾನದ ವೇಗದ ದಾಳಿಗೆ ತತ್ತರಿಸಿದೆ. ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡಿದೆ. ಅಭಿಶೇಕ್ ಶರ್ಮಾ ಕೇವಲ 5 ರನ್ ಸಿಡಿಸಿ ನಿರ್ಗಮಿಸಿದರು. ನಾಯಕ ಸೂರ್ಯಕುಮಾರ್ ಯಾದವ್ ಕೇವಲ 1 ರನ್ ಸಿಡಿಸಿ ಔಟಾದರು.ಇತ್ತ ಶುಬಮನ್ ಗಿಲ್ 12 ರನ್ ಸಿಡಿಸಿ ನಿರ್ಗಮಿಸಿದರು. ಫಾಹೀಮ್ ಅಶ್ರಫ್ 2, ಶಾಹೀನ್ ಆಫ್ರಿದಿ 1 ವಿಕೆಟ್ ಕಬಳಿಸಿದ್ದಾರೆ.

9ರ ರನ್‌ರೇಟ್ ಅವಶ್ಯಕತೆ ಇದೆ. ಆದರೆ ಭಾರತ ಸದ್ಯ 4ರ ರನ್‌ರೇಟ್‌ನಲ್ಲಿದೆ. ಫೈನಲ್ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಕುಸಿತ ಅಭಿಮಾನಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಪ್ರತಿ ಪಂದ್ಯದಲ್ಲಿ ಅಬ್ಬರಿಸಿದ್ದ ಅಭಿಶೇಕ್ ಶರ್ಮಾ ಮಹತ್ವದ ಫೈನಲ್ ಪಂದ್ಯದಲ್ಲಿ ಉತ್ತಮ ಆರಂಭ ನೀಡಲು ಸಾಧ್ಯವಾಗಲಿಲ್ಲ. ಅಭಿಶೇಕ್ ಶರ್ಮಾ ವಿಕೆಟ್ ಪತನ ಟೀಂ ಇಂಡಿಯಾದ ಆರಂಭಿಕ ಹಿನ್ನಡೆ ಕಾರಣವಾಗಿದೆ.

ಆರಂಭದಲ್ಲಿ ಅಬ್ಬರಿಸಿ ಕುಸಿತ ಕಂಡಿದ್ದ ಪಾಕಿಸ್ತಾನ

ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಆರಂಭದಲ್ಲಿ ಅಬ್ಬರಿಸಿ ಬಳಿಕ ಕುಸಿತ ಕಂಡಿತ್ತು. ಆರಂಭಿಕರಾಗ ಪರ್ಹಾನ್ ಹಾಗೂ ಫಕರ್ ಜಮಾನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಬಳಿಕ ಟೀಂಇಂಡಿಯಾ ಸ್ಪಿನ್ ದಾಳಿಗೆ ಪಾಕಿಸ್ತಾನ ಕುಸಿತ ಕಂಡಿತ್ತು. ಕುಲ್ದೀಪ್ ಯಾದವ್ 4 ವಿಕೆಟ್ ಕಬಳಿಸಿದ್ದರು. ವರುಣ್ ಚ್ರಕರ್ತಿ 2 ಹಾಗೂ ಅಕ್ಸರ್ ಪಟೇಲ್ 2 ವಿಕೆಟ್ ಕಬಳಿಸಿದ್ದರು. ಇತ್ತ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಕಬಳಿಸಿ ಪಾಕಿಸ್ತಾನ ತಂಡವನ್ನು ಆಲೌಟ್ ಮಾಡಿದ್ದರು.