IND vs PAK Asia Cup 2025: ಏಷ್ಯಾಕಪ್ ಫೈನಲ್‌ನಲ್ಲಿ ಭಾರತದೆದುರು ಸೋತ ನಂತರ, ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ತಮ್ಮ ತಂಡದ ಪಂದ್ಯ ಶುಲ್ಕವನ್ನು 'ಆಪರೇಷನ್ ಸಿಂದೂರ್ ದಾಳಿ'ಯಲ್ಲಿ ಹತರಾದ ಭಯೋತ್ಪಾದಕರ ಕುಟುಂಬಗಳಿಗೆ ನೀಡುವುದಾಗಿ ಬಹಿರಂಗವಾಗಿ ಘೋಷಿಸಿ ಜಾಗತಿಕ ಚರ್ಚೆ ಹುಟ್ಟುಹಾಕಿದೆ.
IND vs PAK Asia Cup 2025: ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ಕ್ರಿಕೆಟ್ ತಂಡವನ್ನ ಭಾರತ ಹೀನಾಯವಾಗಿ ಸೋಲಿಸಿದೆ. ಈ ಸೋಲಿನ ಕೋಪದಲ್ಲಿ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಆಶ್ಚರ್ಯಕರವಾಗಿ, ಅದೇ ಪತ್ರಿಕಾಗೋಷ್ಠಿಯಲ್ಲಿ ಆಘಾ ತಮ್ಮ ತಂಡದ ಪಂದ್ಯ ಶುಲ್ಕವನ್ನು ಭಾರತದ ಆಪರೇಷನ್ ಸಿಂದೂರ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದ ಭಯೋತ್ಪಾದಕರ ಕುಟುಂಬಗಳಿಗೆ ದಾನ ಮಾಡುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ.
ಮೇ 7 ರಂದು ಭಾರತದ ಆಪರೇಷನ್ ಸಿಂಧೂರ್ ದಾಳಿಯಲ್ಲಿ ಜೈಶ್ ಮುಖ್ಯಸ್ಥ ಮಸೂದ್ ಅಜರ್‌ನ ಕುಟುಂಬದ 14 ಸದಸ್ಯರು, ಒಟ್ಟು 44 ಭಯೋತ್ಪಾದಕರು ಸಾವನ್ನಪ್ಪಿದ್ದರು. ಇವರಲ್ಲಿ ಕಂದಹಾರ್ ವಿಮಾನ ಅಪಹರಣಕಾರ ಯೂಸುಫ್ ಅಜರ್, ಜೈಶ್ ಕಾರ್ಯಾಚರಣೆ ನಿರ್ವಾಹಕ ಮೊಹಮ್ಮದ್ ಜಮೀಲ್ ಅಹ್ಮದ್, ಮತ್ತು ಕಾಶ್ಮೀರದ ಜೈಶ್ ಕಮಾಂಡರ್ ಹಮ್ಜಾ ಜಮೀಲ್ ಸೇರಿದ್ದಾರೆ. ಈ ದಾಳಿಯಲ್ಲಿ ಲಷ್ಕರ್-ಎ-ತೈಬಾದ ಭಯೋತ್ಪಾದಕರಾದ ಮುದಾಸೀರ್ ಮತ್ತು ಅಬು ಉಕ್ಷಾ ಕೂಡ ಕೊಲ್ಲಲ್ಪಟ್ಟಿದ್ದಾರೆ.
ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಸಾಮಾಜಿಕ ಮಾಧ್ಯಮ Xನಲ್ಲಿ ಭಾರತದ ಪ್ರಧಾನಿ ಮೋದಿಯವರನ್ನು ದೂಷಿಸಿದ್ದಾರೆ. ಆದರೆ, ಆಘಾ ಅವರ ಈ ಘೋಷಣೆಯಿಂದ ಪಾಕ್ ಕ್ರಿಕೆಟ್ ತಂಡದ ಭಯೋತ್ಪಾದಕರೊಂದಿಗಿನ ಸಂಬಂಧ ಸ್ಪಷ್ಟವಾಗಿದೆ. ಈ ಹಿಂದೆಯೂ ಪಾಕ್ ಮಾಜಿ ನಾಯಕ ಇಮ್ರಾನ್ ಖಾನ್ ತಾಲಿಬಾನ್‌ಗೆ ಬೆಂಬಲ ನೀಡಿದ್ದಕ್ಕೆ 'ತಾಲಿಬಾನ್ ಖಾನ್' ಎಂದೇ ಖ್ಯಾತರಾಗಿದ್ದರು. ಈ ಘಟನೆಯಿಂದ ಪಾಕ್ ಕ್ರಿಕೆಟ್ ತಂಡದ ಭಯೋತ್ಪಾದನೆಗೆ ಸಂಬಂಧಿತ ಚಟುವಟಿಕೆಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.


