ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 193 ರನ್ ಸುಲಭ ಟಾರ್ಗೆಟ್ ಪಡೆದಿದೆ. ಆದರೆ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿದೆ.
ಲಾರ್ಡ್ಸ್ (ಜು.13) ಇಂಗ್ಲೆಂಡ್ ಪ್ರವಾಸದಲ್ಲಿ ಕಮ್ ಬ್ಯಾಕ್ ಮಾಡಿರುವ ಟೀಂ ಇಂಡಿಯಾ 2ನೇ ಟೆಸ್ಟ್ ಪಂದ್ಯ ಗೆದ್ದುಕೊಂಡಿತ್ತು. ಇದೀಗ 3ನೇ ಟೆಸ್ಟ್ ಪಂದ್ಯದ ಗೆಲುವಿನ ವಿಶ್ವಾಸ ಹೆಚ್ಚಿಸದ ಬೆನ್ನಲ್ಲೇ ಆಘಾತ ಎದುರಾಗಿದೆ. ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ದ್ವಿತೀಯ ಇನ್ನಿಂಗ್ಸ್‌ನಲ್ಲಿ 192 ರನ್‌ಗ ಆಲೌಟ್ ಆಗಿದೆ. ಟೀಂ ಇಂಂಡಿಯಾ ಉತ್ತಮ ದಾಳಿ ಸಂಘಟಿಸಿ ಇಂಗ್ಲೆಂಡ್ ತಂಡವನ್ನು ಬಹು ಬೇಗನೆ ಆಲೌಟ್ ಮಾಡಿದೆ. ಆದರೆ ಸುಲಭ ಟಾರ್ಗೆಟ್ ಚೇಸಿಂಗ್ ಮಾಡಲು ಇಳಿದ ಟೀಂ ಇಂಡಿಯಾ ಮೊದಲ ವಿಕೆಟ್ ಕಳೆದುಕೊಂಡಿದೆ.
ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಪತನ
ಟೀಂ ಇಂಡಿಯಾ 2ನೇ ಇನ್ನಿಂಗ್ಸ್ ಆರಂಭಿಸಿದ 2ನೇ ಓವರ್‌ನಲ್ಲೇ ಮೊದಲ ವಿಕೆಟ್ ಕಳೆದುಕೊಂಡಿದೆ. ಯಶಸ್ವಿ ಜೈಸ್ವಾಲ್ ಡಕೌಟ್ ಆಗಿದ್ದಾರೆ. ಖಾತೆ ತೆರೆಯುವ ಮೊದಲೇ ಜೈಸ್ವಾಲ್, ವೇಗಿ ಜೋಫ್ರಾ ಆರ್ಚರ್ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದ್ದಾರೆ. ಭಾರತ 5 ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿದೆ.
ನಾಲ್ಕನೇ ದಿನದಾಟದ ಅಂತಿಮ ಸೆಶನ್
ನಾಲ್ಕನೇ ದಿನದಾಟದ ಅಂತಿಮ ಸೆಶನ‌್‌ನಲ್ಲಿ ಭಾರತ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಸುಲಭ ಟಾರ್ಗೆಟ್ ಸಿಕ್ಕಿದ್ದು, ಯಶಸ್ವಿಯಾಗಿ ಚೇಸ್ ಮಾಡಲು ಎಚ್ಚರಿಕೆ ಬ್ಯಾಟಿಂಗ್ ಬೇಕಿದೆ.
ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಿದ ಭಾರತದ ಬೌಲರ್ಸ್
ಇಂಗ್ಲೆಂಡ್ ತಂಡ ಲಾರ್ಡ್ಸ್ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡಲು ಮುಂದಾಗಿತ್ತು. ಈ ಮೂಲಕ ಈ ಪಂದ್ಯದಲ್ಲಿ ಹಿಡಿತ ಸಾಧಿಸುವುದು, ಅಥವಾ ಡ್ರಾ ಮಾಡಿಕೊಳ್ಳುವುದು ಇಂಗ್ಲೆಂಡ್ ಲೆಕ್ಕಾಚಾರವಾಗಿತ್ತು. ಆದರೆ ಭಾರತದ ದಾಳಿಗೆ ಬ್ಯಾಟಿಂಗ್ ಮಾಡಲು ಇಂಗ್ಲೆಂಡ್‌ಗೆ ಸಾಧ್ಯವಾಗಲಿಲ್ಲ. ಅದ್ಭುತ ದಾಳಿ ಸಂಘಟಿಸಿದ ಟೀಂ ಇಂಡಿಯಾ, ಇಂಗ್ಲೆಂಡ್ ಬ್ಯಾಟರ್‌ಗಳನ್ನು ಸೆಟ್ಲ್ ಆಗಲು ಬಿಡಲೇ ಇಲ್ಲ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಜೋ ರೂಟ್ ಸಿಡಿಸಿದ 40 ರನ್ ಗರಿಷ್ಠ ಮೊತ್ತವಾಗಿದೆ. ಇನ್ನುಳಿದ ಬ್ಯಾಟರ್ ಇದಕ್ಕಿಂತ ಕಡಿಮೆ ರನ್ ಗಳಿಸಿದ್ದಾರೆ. ವಾಶಿಂಗ್ಟನ್ ಸುಂದರ್ 4 ವಿಕೆಟ್ ಕಬಳಿಸಿದರು. ಇದರೊಂದಿಗೆ ಇಂಗ್ಲೆಂಡ್ 192 ರನ್‌ಗೆ ಆಲೌಟ್ ಆಯಿತು.
ಇಂಗ್ಲೆಂಡ್ ಭಾರತ ಮೊದಲ ಇನ್ನಿಂಗ್ಸ್
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್ ಸಿಡಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಕೂಡ 387 ರನ್‌ಗೆ ಆಲೌಟ್ ಆಗಿತ್ತು.
