ಏಕದಿನದಲ್ಲಿ ಅಬ್ಬರಿಸುತ್ತಿದ್ದ ರೋಹಿತ್ ಶರ್ಮಾ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗಲು ಬರೋಬ್ಬರಿ 6 ವರ್ಷ ಕಾದಿದ್ದರು, 108 ಏಕದಿನ ಪಂದ್ಯ ಆಡಿದ ಬಳಿಕ ರೋಹಿತ್ ಶರ್ಮಾಗೆ ಮೊದಲ ಟೆಸ್ಟ್ ಪಂದ್ಯಕ್ಕೆ ಅವಕಾಶ ಸಿಕ್ಕಿತ್ತು. ಆದರೆ ಟೆಸ್ಟ್ ವಿದಾಯ ನಿರ್ಧಾರವನ್ನು ಕೇವಲ 6 ನಿಮಿಷದಲ್ಲಿ ತೆಗೆದುಕೊಂಡ್ರಾ?
ಮುಂಬೈ(ಮೇ.07) ರೋಹಿತ್ ಶರ್ಮಾ ಅಧಿಕೃತವಾಗಿ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಎದ್ದಿದ್ದ ಊಹಾಪೋಹಗಳಿಗೆ ವಿದಾಯದ ಮೂಲಕ ಉತ್ತರ ನೀಡಿದ್ದಾರೆ. ಆದರೆ ರೋಹಿತ್ ಟೆಸ್ಟ್ ವಿದಾಯದ ಬಗ್ಗೆ ಆಲೋಚಿಸಿರಲಿಲ್ಲ. ಒಂದು ದಿನ ಟೆಸ್ಟ್ ಮಾದರಿಗೂ ವಿದಾಯ ಹೇಳಬೇಕು ಅನ್ನೋ ಜನರಲ್ ಆಲೋಚನೆ ಬಿಟ್ಟರೆ ಇಂಗ್ಲೆಂಡ್ ಸರಣಿಗೂ ಮುನ್ನ ವಿದಾಯ ಹೇಳಬೇಕು ಅನ್ನೋ ನಿರ್ಧಾರ ರೋಹಿತ್ ಶರ್ಮಾ ಮಾಡಿರಲಿಲ್ಲ. ಆದರೆ ಇದರ ನಡುವೆ ನಡೆದ ಬೆಳವಣಿಗೆ ರೋಹಿತ್ ಶರ್ಮಾರನ್ನು ಟೆಸ್ಟ್ ಮಾದರಿಗೆ ವಿದಾಯ ಹೇಳುವಂತೆ ಮಾಡಿದೆ. ಬರೋಬ್ಬರಿ 108 ಏಕದಿನ ಪಂದ್ಯ, 6 ವರ್ಷಗಳ ವರೆಗೆ ರೋಹಿತ್ ಶರ್ಮಾ ಟೆಸ್ಟ್ ತಂಡದಲ್ಲಿ ಅವಕಾಶ ಸಿಗಲು ಕಾದಿದ್ದರು. ಆದರೆ ವಿದಾಯ ಮಾತ್ರ ಆರೇ ನಿಮಿಷದಲ್ಲಿ ತೆಗೆದುಕೊಂಡು ವೈಟ್ ಜರ್ಸಿಯಿಂದ ದೂರ ಸರಿದಿದ್ದಾರೆ.
ಎಲ್ಲರಿಗೂ ನಮಸ್ಕಾರ, ನಾನು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೇಳುತ್ತಿದ್ದೇನೆ ಬಿಳಿ ಬಟ್ಟೆಯಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವುದು ನನಗೆ ಅತ್ಯಂತ ಗೌರವವಾಗಿದೆ. ಪ್ರೀತಿ, ಪ್ರೋತ್ಸಾಹಕ್ಕೆ ಧನ್ಯವಾದ ಎಂದು ಟೆಸ್ಟ್ ಕ್ಯಾಪ್ ಫೋಟೋ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ನೋವಿನಿಂದಲೇ ವಿದಾಯ ಹೇಳಿದ ರೋಹಿತ್ ಶರ್ಮಾ, ಭಾರತೀಯ ಕ್ರಿಕೆಟ್‌ನಲ್ಲಿ ಹೀಗ್ಯಾಕೆ?
38 ನೇ ವಯಸ್ಸಿನಲ್ಲಿ, ರೋಹಿತ್ 67 ಟೆಸ್ಟ್‌ಗಳಲ್ಲಿ 4,301ರನ್ ಗಳಿಸಿ, 40.57 ಸರಾಸರಿಯಲ್ಲಿ 12 ಶತಕಗಳು ಮತ್ತು 18 ಅರ್ಧಶತಕಗ ಸಿಡಿಸಿದ್ದಾರೆ.ಆದರೆ ಈ ಸಂಖ್ಯೆಗಳು ಕಥೆಯ ಅರ್ಧದಷ್ಟು ಮಾತ್ರ ಹೇಳುತ್ತವೆ. ರೋಹಿತ್ ಶರ್ಮಾ ಅವರ ಟೆಸ್ಟ್ ವೃತ್ತಿಜೀವನವು ರಾತ್ರೋರಾತ್ರಿ ಯಶಸ್ಸು ಕಂಡಿಲ್ಲ - ಇದು ವರ್ಷಗಳ ಕಾಲ ನಡೆದ ಅನ್ವೇಷಣೆಯಾಗಿದೆ, ಮತ್ತು ಬಹುಶಃ ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ವಿಳಂಬವಾದ ಆದರೆ ನಾಟಕೀಯ ಬೆಳಣಿಗೆಯಲ್ಲೂ ಒಂದಾಗಿದೆ.
ಸಚಿನ್ ವಿದಾಯ ಪಂದ್ಯದಲ್ಲಿ ಅವಕಾಶ ಪಡೆದ ರೋಹಿತ್
2007ರಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. ಏಕದಿನ ಹಾಗೂ ಟಿ20 ಮಾದರಿಯಲ್ಲಿ ಅಬ್ಬರಿಸುತ್ತಿದ್ದ ರೋಹಿತ್ ಶರ್ಮಾಗೆ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗಲೇ ಇಲ್ಲ. 2010ರಲ್ಲಿ ಟೆಸ್ಟ್ ತಂಡಕ್ಕೆ ಆಯ್ಕೆಯಾದರೂ ಗಾಯದ ಸಮಸ್ಯೆಯಿಂದ ಟೂರ್ನಿಯಿಂದಲೇ ಹೊರಬಿದ್ದಿದ್ದರು. 2007ರಲ್ಲಿ ಟೀಂ ಇಂಡಿಯಾ ಜರ್ಸಿ ತೊಟ್ಟ ರೋಹಿತ್ ಶರ್ಮಾ 2013ರಲ್ಲಿ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಸಚಿನ್ ತೆಂಡೂಲ್ಕರ್ ವಿದಾಯದ ಪಂದ್ಯದಲ್ಲಿ ರೋಹಿತ್ ಶರ್ಮಾ ಅವಕಾಶ ಪಡೆದಿದ್ದರು ಈ ಪಂದ್ಯದಲ್ಲಿ ರೋಹಿತ ಶರ್ಮಾ 177 ರನ್ ಸಿಡಿಸಿ ದಾಖಲೆ ಬರೆದಿದ್ದರು.
6 ವರ್ಷ ಕಾದಿದ್ದ ರೋಹಿತ್ ಟೆಸ್ಟ್ ಕರಿಯರ್ ಕೊನೆ ದಿನದಲ್ಲೂ ನೋವು
ಆರಂಭದಲ್ಲಿ ಅವಕಾಶ ಸಿಗುತ್ತಿಲ್ಲ ಎಂದು ಕೊರಗಿದ್ದ ರೋಹಿತ್ ಶರ್ಮಾ ಸತತ ಹೋರಾಟಗಳಿಂದ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ ನಾಯಕನಾಗಿ ಬಡ್ತಿ ಪಡೆದ ರೋಹಿತ್ ಶರ್ಮಾ ಟೆಸ್ಟ್ ಕರಿಯರ್ ಕೊನೆ ದಿನಗಳಲ್ಲೂ ನೋವು ಅನುಭವಿಸಿದ್ದಾರೆ. ರೋಹಿತ್ ಶರ್ಮಾ, ಇಂಗ್ಲೆಂಡ್ ಸರಣಿಯಲ್ಲಿ ನಾಯಕನಾಗಿ ತಂಡ ಮುನ್ನಡೆಸುತ್ತೇನೆ ಎಂದು ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಹೇಳಿದ್ದರು. ಆದರೆ ಆಯ್ಕೆ ಸಮಿತಿ ರೋಹಿತ್ ನಾಯಕತ್ವ ಬೇಡ ಎಂದಿತ್ತು. ಇದು ರೋಹಿತ್ ಶರ್ಮಾ ಕಿವಿಗೂ ಬಿದ್ದಿತ್ತು. ಆದರೂ ರೋಹಿತ್ ಶರ್ಮಾ ನಿವೃತ್ತಿ ನಿರ್ಧಾರ ಮಾಡಿರಲಿಲ್ಲ. ಯಾವಾಗ ಉದ್ದೇಶಪೂರ್ವಕವಾಗಿ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕಿತ್ತಸೆಯಲಾಗುತ್ತ ಅನ್ನೋ ಆಯ್ಕೆ ಸಮಿತಿ ವರದಿ ಮಾಧ್ಯಮಕ್ಕೆ ಸೋರಿಕೆಯಾಯಿತೋ ಇದರ ಬೆನ್ನಲ್ಲೇ ರೋಹಿತ್ ಶರ್ಮಾ ವಿದಾಯ ನಿರ್ಧಾರ ಮಾಡಿದ್ದಾರೆ. ಸಂಜೆ 6.30ರ ವೇಳೆಗೆ ವರದಿ ಹೊರಬ್ದಿತ್ತು. ಸೋಶಿಯಲ್ ಮಾಡಿಯಾ, ಮಾಧ್ಯಮ ವರದಿ ರೋಹಿತ್ ಶರ್ಮಾ ಕಿವಿಗೆ ಬೀಳುವಾಗ ಸರಿಸಮುಾರು 7 ಗಂಟೆ ಕಳೆದಿದೆ. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ವಿದಾಯ ಘೋಷಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ, ರೋಹಿತ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವೆ ಭಿನ್ನಾಭಿಪ್ರಾಯದ ಗುಸುಗುಸುಗಳು ಕೇಳಿಬಂದಿತ್ತು. ಗೌರವಯುತ ನಿರ್ಗಮನವು ಬಹುಶಃ ರೋಹಿತ್ ಅವರ ಘನತೆಯನ್ನು ಉಳಿಸಿಕೊಳ್ಳುವ ಮಾರ್ಗವಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.
ಭಾರಿ ಹೈಡ್ರಾಮದ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮಾ


