ಬಿಸಿಸಿಐ ತವರಿನ ಸರಣಿಯ ವೇಳಾಪಟ್ಟಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯಗಳ ಸ್ಥಳಗಳನ್ನು ಬದಲಾಯಿಸಲಾಗಿದೆ. ಮಹಿಳಾ ಕ್ರಿಕೆಟ್ ಪಂದ್ಯಗಳ ಸ್ಥಳಗಳಲ್ಲೂ ಬದಲಾವಣೆಗಳಾಗಿವೆ.

ಮುಂಬೈ: ಬಿಸಿಸಿಐ ಇದೀಗ ತವರಿನ ಸರಣಿಯ ಕ್ರಿಕೆಟ್ ವೇಳಾಪಟ್ಟಿ ಪ್ರಕಟಿಸಿದ್ದು, ಎರಡು ಮಹತ್ವದ ಸರಣಿಯ ವೇಳಾಪಟ್ಟಿಯಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ವೆಸ್ಟ್ ಇಂಡೀಸ್ ಎದುರು ಅಕ್ಟೋಬರ್‌ನಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಬೇಕಿದ್ದ ಎರಡನೇ ಟೆಸ್ಟ್ ಪಂದ್ಯವು ಇದೀಗ ರಾಷ್ಟ್ರರಾಜಧಾನಿ ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ದ ನವೆಂಬರ್ 14ರಂದು ನಡೆಯಲಿರುವ ಮೊದಲ ಟೆಸ್ಟ್ ಪಂದ್ಯವು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಬದಲು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ.

ಭಾರತ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ಎದುರು ತವರಿನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಎದುರು ಟೀಂ ಇಂಡಿಯಾ, ಎರಡು ಟೆಸ್ಟ್, ಮೂರು ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.

ಈ ಮೊದಲು ಬಿಸಿಸಿಐ ಏಪ್ರಿಲ್‌ನಲ್ಲಿ ತವರಿನ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಆದರೆ ಇದೀಗ ಡೆಲ್ಲಿಯಲ್ಲಿ ನಡೆಯಬೇಕಿದ್ದ ಪಂದ್ಯ ಕೋಲ್ಕತಾಗೆ ಶಿಫ್ಟ್ ಆಗಿದೆ. ಆ ಸಂದರ್ಭದಲ್ಲಿ ವಾಯುಮಾಲಿನ್ಯ ಸಮಸ್ಯೆ ಎದುರಾಗುವ ಕಾರಣದಿಂದಲೇ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ, ದೇವಜಿತ್ ಸೈಕಿಯಾ, ಇದೆಲ್ಲಾ ಶುದ್ದ ಸುಳ್ಳು ಎಂದು ಹೇಳಿದ್ದಾರೆ. ಆದರೆ ಈ ಪಂದ್ಯಗಳ ವೇಳಾಪಟ್ಟಿ ಬದಲಾವಣೆ ಕುರಿತಂತೆ ಬಿಸಿಸಿಐ ಯಾವುದೇ ಸ್ಪಷ್ಟನೆ ನೀಡಿಲ್ಲ.

Scroll to load tweet…

ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಏಕದಿನ ಸರಣಿಯ ಮೂರು ಪಂದ್ಯಗಳನ್ನು ಈಗ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಆಡುವುದಿಲ್ಲ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೆಲಸದಿಂದಾಗಿ ಈ ಬದಲಾವಣೆಗಳಾಗಿವೆ. ಎರಡು ಪಂದ್ಯಗಳನ್ನು ಈಗ ಚಂಡೀಗಢದಲ್ಲಿ ಮತ್ತು ಒಂದು ಪಂದ್ಯವನ್ನು ದೆಹಲಿಯಲ್ಲಿ ಆಯೋಜಿಸಲಾಗುವುದು ಎಂದು ಬಿಸಿಸಿಐ ಖಚಿತಪಡಿಸಿದೆ

ಇಂಡಿಯಾ ಎ vs ಆಸ್ಟ್ರೇಲಿಯಾ ಎ

ಆಸ್ಟ್ರೇಲಿಯಾ ಎ ತಂಡವು ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಇಂಡಿಯಾ ಎ ತಂಡದ ವಿರುದ್ಧ ಪಂದ್ಯಗಳನ್ನು ಆಡಲಿದೆ. ಮೊದಲ ಬಹುದಿನ ಪಂದ್ಯವನ್ನು ಸೆಪ್ಟೆಂಬರ್ 16 ರಂದು ಲಕ್ನೋದಲ್ಲಿ ಆಡಲಾಗುವುದು. ನಂತರ ಆಸ್ಟ್ರೇಲಿಯಾ ಎ ತಂಡವು ಕಾನ್ಪುರದಲ್ಲಿ ಇಂಡಿಯಾ ಎ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

ಟೀಂ ಇಂಡಿಯಾದ ಮುಂಬರುವ ವೇಳಾಪಟ್ಟಿ

ವೆಸ್ಟ್‌ ಇಂಡೀಸ್‌ನಿಂದ ಭಾರತ ಪ್ರವಾಸ

ಭಾರತ vs ವೆಸ್ಟ್ ಇಂಡೀಸ್ (ಮೊದಲ ಟೆಸ್ಟ್): ಅಕ್ಟೋಬರ್ 2, ಅಹಮದಾಬಾದ್

ಭಾರತ vs ವೆಸ್ಟ್ ಇಂಡೀಸ್ (ಎರಡನೇ ಟೆಸ್ಟ್): ಅಕ್ಟೋಬರ್ 10, ನವದೆಹಲಿ

ದಕ್ಷಿಣ ಆಫ್ರಿಕಾದಿಂದ ಭಾರತ ಪ್ರವಾಸ

ಭಾರತ vs ದಕ್ಷಿಣ ಆಫ್ರಿಕಾ (ಮೊದಲ ಟೆಸ್ಟ್): ನವೆಂಬರ್ 14, ಕೋಲ್ಕತ್ತಾ

ಭಾರತ vs ದಕ್ಷಿಣ ಆಫ್ರಿಕಾ (ಎರಡನೇ ಟೆಸ್ಟ್): ನವೆಂಬರ್ 22, ಗುವಾಹಟಿ

ಏಕದಿನ ಸರಣಿ:

ಭಾರತ vs ದಕ್ಷಿಣ ಆಫ್ರಿಕಾ, ಮೊದಲ ಏಕದಿನ ಪಂದ್ಯ: ನವೆಂಬರ್ 30, ರಾಂಚಿ

ಭಾರತ vs ದಕ್ಷಿಣ ಆಫ್ರಿಕಾ, ಎರಡನೇ ಏಕದಿನ ಪಂದ್ಯ: ಡಿಸೆಂಬರ್ 03, ರಾಯ್ಪುರ

ಭಾರತ vs ದಕ್ಷಿಣ ಆಫ್ರಿಕಾ, ಮೂರನೇ ಏಕದಿನ ಪಂದ್ಯ: ಡಿಸೆಂಬರ್ 06, ವೈಜಾಗ್‌

ಟಿ20 ಸರಣಿ

ಭಾರತ vs ದಕ್ಷಿಣ ಆಫ್ರಿಕಾ, ಮೊದಲ ಟಿ20; ಡಿಸೆಂಬರ್ 09, ಕಟಕ್

ಭಾರತ vs ದಕ್ಷಿಣ ಆಫ್ರಿಕಾ, ಎರಡನೇ ಟಿ20; ಡಿಸೆಂಬರ್ 11, ನ್ಯೂ ಚಂಡೀಗಢ

ಭಾರತ vs ದಕ್ಷಿಣ ಆಫ್ರಿಕಾ, ಮೂರನೇ ಟಿ20; ಡಿಸೆಂಬರ್ 14, ಧರ್ಮಶಾಲಾ

ಭಾರತ vs ದಕ್ಷಿಣ ಆಫ್ರಿಕಾ, ನಾಲ್ಕನೇ ಟಿ20; ಡಿಸೆಂಬರ್ 17, ಲಖನೌ

ಭಾರತ vs ದಕ್ಷಿಣ ಆಫ್ರಿಕಾ, ಐದನೇ ಟಿ20; ಡಿಸೆಂಬರ್ 19, ಅಹಮದಾಬಾದ್