ಐಪಿಎಲ್ 2025ರಲ್ಲಿ ಅಂಪೈರ್‌ಗಳ ಹಲವು ತೀರ್ಪುಗಳು ವಿವಾದಕ್ಕೆ ಕಾರಣವಾಗಿವೆ. ಶುಭ್‌ಮನ್ ಗಿಲ್ ರನ್ ಔಟ್, ರೋಹಿತ್ ಶರ್ಮಾ ಡಿಆರ್‌ಎಸ್ ಬಳಕೆ, ಇಶಾನ್ ಕಿಶನ್ ಔಟ್ ಮತ್ತು ಡೆವಾಲ್ಡ್ ಬ್ರೆವಿಸ್ ರನೌಟ್ ಘಟನೆಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ.
ಕ್ರಿಕೆಟ್‌ನಲ್ಲಿ ಅಂಪೈರ್ ತೀರ್ಪೇ ಅಂತಿಮ. ಆದರೆ ಐಪಿಎಲ್‌ನ 18ನೇ ಆವೃತ್ತಿಯಲ್ಲಿ ಅಂಪೈರ್‌ಗಳು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ಹಲವು ತೀರ್ಪುಗಳು ಅಭಿಮಾನಿಗಳಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿವೆ. 51 ಪಂದ್ಯಗಳಲ್ಲಿ ಹಲವು ತಪ್ಪುಗಳನ್ನು ಕ್ಯಾಮೆರಾಗಳು ಸೆರೆಹಿಡಿದಿವೆ. ಕೆಲವು ತಂಡಗಳಿಗೆ ಇದರಿಂದ ಲಾಭವಾದರೆ, ಇನ್ನು ಕೆಲವು ತಂಡಗಳು ನಷ್ಟ ಅನುಭವಿಸಿವೆ.
ಐಪಿಎಲ್ 2025ರಲ್ಲಿ ಅಂಪೈರ್‌ಗಳ ಕೆಲವು ತೀರ್ಪುಗಳು ಅಭಿಮಾನಿಗಳಿಗೆ ಅಸಮಾಧಾನ ತಂದಿವೆ. ಲಾಭ ಪಡೆದ ತಂಡಗಳು ಖುಷಿಪಟ್ಟರೆ, ನಷ್ಟ ಅನುಭವಿಸಿದ ತಂಡಗಳು ಪ್ರಶ್ನೆಗಳನ್ನು ಎತ್ತಿವೆ. ಆದರೆ ಈಗ ಹೊಸ ತಂತ್ರಜ್ಞಾನಗಳಿಂದ ಎಲ್ಲವೂ ಸ್ಪಷ್ಟವಾಗುತ್ತದೆ. ಆದರೂ ಕೆಲವು ಘಟನೆಗಳು ಸುದ್ದಿಯಾಗುತ್ತವೆ. ಈ ಋತುವಿನ 3 ವಿವಾದಾತ್ಮಕ ತೀರ್ಪುಗಳನ್ನು ನೋಡೋಣ.
1. ಶುಭ್‌ಮನ್ ಗಿಲ್ ರನ್ ಔಟ್ ವಿವಾದ
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಶುಭ್‌ಮನ್ ಗಿಲ್ ಉತ್ತಮವಾಗಿ ಆಡುತ್ತಿದ್ದರು. 25 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಆದರೆ 13ನೇ ಓವರ್‌ನ ಕೊನೆಯ ಎಸೆತದಲ್ಲಿ ರನ್ ಔಟ್ ಆದರು. ವಿಕೆಟ್ ಕೀಪರ್ ಹೆನ್ರಿಕ್ ಕ್ಲಾಸೆನ್, ಶುಭ್‌ಮನ್ ಗಿಲ್ ಕ್ರೀಸ್ ತಲುಪುವ ಮೊದಲೇ ಸ್ಟಂಪ್‌ಗೆ ಚೆಂಡನ್ನು ತಾಗಿಸಿದರು. ಆದರೆ ಅದಕ್ಕೂ ಮೊದಲು ಅವರ ಗ್ಲೌಸ್ ಬಿದ್ದಿತ್ತು. ಹೀಗಾಗಿ ಚೆಂಡು ಸ್ಟಂಪ್‌ಗೆ ತಾಗಿದೆಯೋ ಅಥವಾ ಗ್ಲೌಸ್‌ಗೆ ತಾಗಿದೆಯೋ ಎಂದು ತಿಳಿಯುವುದು ಕಷ್ಟವಾಯಿತು. ಮೂರನೇ ಅಂಪೈರ್ ಔಟ್ ನೀಡಿದರು. ಗಿಲ್ ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ನಡೆಸಿದರು.
2. ರೋಹಿತ್ ಶರ್ಮಾ ಅವರ ತಡವಾಗಿ ಡಿಆರ್‌ಎಸ್ ಬಳಕೆ
ರೋಹಿತ್ ಶರ್ಮಾ ಅವರ ಮೇಲೂ ಅಂಪೈರ್‌ಗಳ ಸಹಾಯ ಪಡೆದ ಆರೋಪವಿದೆ. ಮುಂಬೈ ಮತ್ತು ರಾಜಸ್ಥಾನ ಪಂದ್ಯದಲ್ಲಿ 2ನೇ ಓವರ್‌ನಲ್ಲಿ ರೋಹಿತ್‌ರನ್ನು ಎಲ್‌ಬಿಡಬ್ಲ್ಯೂ ಔಟ್ ನೀಡಲಾಯಿತು. ರೋಹಿತ್ ಡಿಆರ್‌ಎಸ್ ಬಗ್ಗೆ ಚರ್ಚಿಸುತ್ತಾ ಸಮಯ ವ್ಯರ್ಥ ಮಾಡಿದರು. 15 ಸೆಕೆಂಡ್‌ಗಳು ಮುಗಿದ ನಂತರ ರಿವ್ಯೂ ಕೇಳಿದರು. ಚೆಂಡು ಸ್ಟಂಪ್‌ಗಳನ್ನು ತಪ್ಪಿಸುತ್ತಿತ್ತು ಎಂದು ಮೂರನೇ ಅಂಪೈರ್ ತೀರ್ಪು ನೀಡಿದರು. ರೋಹಿತ್‌ರನ್ನು ನಾಟ್ ಔಟ್ ಎಂದು ಘೋಷಿಸಲಾಯಿತು. ಅಂಪೈರ್ DRS ತೆಗೆದುಕೊಳ್ಳಲು ಸಮಯ ಮುಗಿದಿದೆ ಎಂದು ರೋಹಿತ್‌ರನ್ನು ತಡೆಯಲಿಲ್ಲ ಎಂದು ಅಭಿಮಾನಿಗಳು ಪ್ರಶ್ನಿಸಿದರು.
3. ಇಶಾನ್ ಕಿಶನ್ ಔಟ್ ಆಗದೆ ಪೆವಿಲಿಯನ್‌ಗೆ
ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಇಶಾನ್ ಕಿಶನ್ ಬ್ಯಾಟ್‌ಗೆ ಚೆಂಡು ತಾಗದಿದ್ದರೂ ಔಟ್ ನೀಡಲಾಯಿತು. ಇಶಾನ್ ಡಿಆರ್‌ಎಸ್ ತೆಗೆದುಕೊಳ್ಳಲಿಲ್ಲ. ಚೆಂಡು ಬ್ಯಾಟ್‌ಗೆ ತಾಗಲೇ ಇಲ್ಲ ಎಂದು ನಂತರ ತಿಳಿದುಬಂದಿತು. ಅಂಪೈರ್ ಮೊದಲು ವೈಡ್ ನೀಡಲು ಮುಂದಾದರು. ಆದರೆ ಆಟಗಾರರ ಮನವಿ ನಂತರ ಔಟ್ ನೀಡಿದರು. ಇದರಿಂದ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದರು.
ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈ ಇಂಡಿಯನ್ಸ್, ಅಂಪೈರ್‌ಗಳ ಜತೆ ಫಿಕ್ಸಿಂಗ್ ನಡೆಸಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
4. ಡೆವಾಲ್ಡ್ ಬ್ರೆವಿಸ್ ರನೌಟ್ ವಿವಾದ:
ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಲುಂಗಿ ಎಂಗಿಡಿ ಬೌಲಿಂಗ್‌ನಲ್ಲಿ ಚೆಂಡು ನೇರವಾಗಿ ಡೆವಾಲ್ಡ್ ಬ್ರೆವಿಸ್ ಪ್ಯಾಡ್‌ಗೆ ಬಡಿಯುತ್ತದೆ. ಆಗ ಅಂಪೈರ್ ನೀಡುತ್ತಾರೆ. ಹೀಗಿದ್ದೂ ಎರಡು ರನ್ ಕದಿಯಲು ಬ್ರೆವಿಸ್ ಮುಂದಾಗುತ್ತಾರೆ. ಆಮೇಲೆ ಡಿಆರ್‌ಎಸ್ ತೆಗೆದುಕೊಳ್ಳಲು ಮುಂದಾಗುತ್ತಾರೆ. ಆದರೆ ಅಷ್ಟರಲ್ಲಾಗಲೇ ಟೈಮ್ ಮುಗಿದಿದೆ ಎಂದು ಅಂಪೈರ್ ಹೇಳುತ್ತಾರೆ. ಇದು ಕೂಡಾ ಸಾಕಷ್ಟು ಪರ ವಿರೋದ ಚರ್ಚೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹುಟ್ಟುಹಾಕಿದೆ.


