Homeowner harasses maid in Honnavar: ಹೊನ್ನಾವರದಲ್ಲಿ ಮನೆಗೆಲಸಕ್ಕೆ ಬಂದ ಮಹಿಳೆಗೆ ಮಾಲೀಕ ಪ್ರದೀಪ್ ನಾಯ್ಕ್ ಲೈ೧ಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆತನ ವಿಕೃತಿಗೆ ವಿರೋಧ, ಮಹಿಳೆಯ ಮೇಲೆ ಕಳ್ಳತನದ ಆರೋಪ ಹೊರಿಸಿದ್ದಾನೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕಾರವಾರ, ಉತ್ತರಕನ್ನಡ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಒಂದು ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮನೆ ಕೆಲಸಕ್ಕೆ ಕರೆದು ಮಾಲೀಕನೋರ್ವ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಮನೆ ಮಾಲೀಕ ಪ್ರದೀಪ್ ನಾಯ್ಕ್ ಎಂಬುವವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮನೆ ಕೆಲಸದಾಕೆ ಮುಂದೆಯೇ ಬೆತ್ತಲೆ ಓಡಾಟ!
ಆಗಸ್ಟ್ 13 ರಂದು ಏಜೆನ್ಸಿ ಮೂಲಕ ನೊಂದ ಮಹಿಳೆ ಪ್ರದೀಪ್ ನಾಯ್ಕ ಮನೆಗೆ ಕೆಲಸಕ್ಕೆ ಸೇರಿದ್ದರು. ಆದರೆ ಮನೆಯಲ್ಲಿ ಮಾಲೀಕನ ವರ್ತನೆ ಕಂಡು ನೊಂದ ಮಹಿಳೆ ಬೆಚ್ಚಿಬಿದ್ದಿದ್ದಾಳೆ. ಮನೆಯಲ್ಲಿ ನೊಂದ ಮಹಿಳೆಯ ಎದುರೇ ಬೆತ್ತಲಾಗಿ ಓಡಾಡುವುದು, ಮೈಮುಟ್ಟಿ ಶೋಷಣೆ ಮಾಡುವುದು, ಒತ್ತಾಯಿಸುವುದು ಮಾಡಿದ್ದಾನೆ. ಕಾಮುಕ ಪ್ರದೀಪ್ ನಾಯ್ಕ್ ವರ್ತನೆಗೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಘಟನೆ ಬಯಲಾಗುವ ಭಯದಲ್ಲಿ ವಿಕೃತ ಪಲ್ಲಂಗದಾಟಕ್ಕೆ ಒಪ್ಪದ ನೊಂದ ಮಹಿಳೆಯ ವಿರುದ್ಧ ಮಾಲೀಕ ಪ್ರದೀಪ್ ನಾಯ್ಕ್ ಮನೆಯಲ್ಲಿ ಕಳ್ಳತನ ಮಾಡಿದ ಆರೋಪ ಹೊರಿಸಿದ್ದಾನೆ.
ಶೋಷಣೆಯ ವಿಡಿಯೋ ರೆಕಾರ್ಡ್:
ಶೋಷಣೆಯ ಸಾಕ್ಷ್ಯವಾಗಿ ಮಹಿಳೆಯು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ವಿಡಿಯೋದಲ್ಲಿ ಕಾಮುಕ ಪ್ರದೀಪ್ ನಾಯ್ಕ್ ಬೆತ್ತಲಾಗಿ ಡೂರ್ ತೆಗೆದಿದ್ದಾನೆ. ಬಳಿಕ ನೊಂದ ಮಹಿಳೆಯ ಮುಂದೆಯೇ ನಡೆದುಹೋಗಿರುವುದು ವಿಡಿಯೋದಲ್ಲಿ ಕಾಣಿಸಿದೆ. ಸದ್ಯ ಮನೆ ಮಾಲೀಕನ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ತನಿಖೆ ಆರಂಭವಾಗಿದ್ದು, ಇದೇ ರೀತಿ ಇನ್ನೆಷ್ಟು ಮನೆಗೆಲಸಕ್ಕೆ ಬರುವ ಮಹಿಳೆಯರಿಗೆ ಶೋಷಣೆ ನೀಡಿದ್ದಾನೆ, ಯಾರಾರು ಬಲಿಪಶುವಾಗಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗವಾಗುವ ಸಾಧ್ಯತೆ ಇದೆ.


