Kamal Haasan Kannada Language controversy becomes more crucial day by day. ಕನ್ನಡ ಭಾಷೆ ಅವಹೇಳನ ಮಾಡಿರುವ ನಟ ಕಮಲ್ ಹಾಸನ್ ವಿವಾದಕ್ಕೆ ಹೆಚ್ಚಳವಾಗಿದೆ.
ಸದ್ಯ ಭಾರೀ ವಿವಾದವಾಗಿರುವ ಕಮಲ್ ಹಾಸನ್ ಮ್ಯಾಟರ್ ಬಗ್ಗೆ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹೇಳಿಕೆ ನೀಡಿದ್ದಾರೆ.
'ಕ್ಷಮೆ ಕೇಳದೇ ದುಬೈ, ಸಿಂಗಾಪುರ್ನಲ್ಲಿ ಕಮಲ್ ಹಾಸನ್ ಪ್ರಮೋಷನ್ ಮಾಡ್ತಿದ್ದಾರೆ. 'ಥಗ್ ಲೈಫ್' ಬಿಡುಗಡೆಗೆ ನಾಲ್ಕು ದಿನಗಳಷ್ಟೇ ಬಾಕಿ ಇದೆ. ಇನ್ನೂ ಕ್ಷಮೆ ಕೇಳದ ಕಮಲ್ ಮೊಂಡಾಟ ಮಾಡುತ್ತಿದ್ದಾರೆ. ತಮ್ಮ 'ಥಗ್ ಲೈಫ್' ಸಿನಿಮಾವನ್ನು ದುಬೈ, ಸಿಂಗಾಪುರ್ ಗಳಲ್ಲಿ ಕಮಲ್ ಹಾಸನ್ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಕೇಳಬೇಕಾದ ಕ್ಷಮೆ ಮಾತ್ರ ಕೇಳುತ್ತಿಲ್ಲ.
ನಾಳೆ ಸೌತ್ ಚೇಂಬರ್ ಆಫ್ ಕಾಮರ್ಸ್ ಸಮ್ಮುಖದಲ್ಲಿ ಸಭೆ ನಡೆಯಲಿದೆ.. ಸಭೆ ನಂತರ 'ಥಗ್ ಲೈಫ್' ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಾ ಇಲ್ವಾ ಅನ್ನೋದರ ನಿರ್ಧಾರ ಆಗಲಿದೆ. ಇತ್ತ ನಮ್ಮ ಸರ್ಕಾರ ಹಾಗೂ ನಮ್ಮ ಇಂಡಸ್ಟ್ರಿ ಕಡೆಯಿಂದ ಥಗ್ ಲೈಫ್ ಬಿಡುಗಡೆಗೆ ವಿರೋಧವಿದೆ.
ಈಗಾಗಲೇ ಹಲವು ಡಿಸ್ಟ್ರಿಬ್ಯೂಟರ್ಗಳು ಸಿನಿಮಾನಾ ನಾವೇ ಪ್ರದರ್ಶನ ಮಾಡಲ್ಲ ಅಂತಾ ತಿಳಿಸಿದ್ದಾರೆ..
ಸಚಿವ ಶಿವರಾಜ್ ತಂಗಡಗಿ ಖುದ್ದಾಗಿ ಕರೆ ಮಾಡಿದ್ದು, ಸಿನಿಮಾನಾ ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಅಂತಾ ತಿಳಿಸಿದ್ದಾರೆ..
ಅಷ್ಟೇ ಅಲ್ಲ, ಫಿಲಂ ಚೇಬರ್ ನಲ್ಲಿ ಶಿವರಾಮೇಗೌಡ ಬಣದ ಕಾರ್ಯಕರ್ತರ ಆಕ್ರೋಶ ಕೂಡ ವ್ಯಕ್ತವಾಗಿದೆ. 'ಕ್ಷಮೆ ಕೇಳಿ ಅಂತ ಭಿಕ್ಷೆ ಬೇಡೋದು ಬೇಡ. ಯಾವ ಆಧಾರದಲ್ಲಿ ಹೇಳಿದ್ದೀಯಾ ಅಂತ ಕಮಲ್ ಹಾಸನ್ಗೆ ಪ್ರಶ್ನೆ ಮಾಡಿದ್ರೆ ಸಾಕು.. ಕನ್ನಡ ತಮಿಳಿನಿಂದ ಹುಟ್ಟಿದ್ದು ಅಂದ್ರೆ ಕನ್ನಡಿಗರು ತಮಿಳು ಅವರಿಗೆ ಹುಟ್ಟಿದ್ದು ಅನ್ನೋ ಅರ್ಥನಾ. .?
ಕನ್ನಡಿಗರ ಸ್ವಾಭಿಮಾನ ಅಡ ಇಡೋದ್ ಬೇಡ. ಸಮಸ್ತ ಕನ್ನಡಿಗರು ತಮಿಳರಿಗೆ ಹುಟ್ಟಿದ್ದಿವಿ ಅಂತ ಹೇಳಿದಂಗಿದೆ. ಗೋಗರೆಯೋದು ..ಬಿಕ್ಷೆ ಬೇಡೋದ್ ಬೇಡ. ಫಿಲಂ ಚೇಂಬರ ಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ ಶಿವರಾಮೇ ಗೌಡರ ಬಣ. ಕರ್ನಾಟಕ ರಕ್ಷಣ ವೇದಿಕೆಯಿಂದ ಕಮಲ್ ಸಿನಿಮಾ ನಿಲ್ಲಿಸುವಂತೆ ಮನವಿ ಮಾಡಲಾಗಿದೆ.
'ಇಲ್ಲೊಂದಿಷ್ಟು ಜನ ತ್ಯಾಪೇ ಹಾಕೋಕೆಲಸ ಮಾಡ್ತಿದ್ದಾರೆ. ಅವರನ್ನು ಪಕ್ಕಕ್ಕಿಟ್ಟು ನಿರ್ಧಾರ ತಗೆದುಕೊಳ್ಳಿ. ಕ್ಷಮಾಪಣೆ ಕೇಳದೇ ಹೋದ್ರೆ ನಮ್ಮದೊಂದು ಕೂದಲು ಹೋಯ್ತು..' ಎಂದು ನಿರ್ಮಾಪಕ ಸಾ ರಾ ಗೋವಿಂದು ಹೇಳಿಕೆ ನೀಡಿದ್ದಾರೆ. ಜೊತೆಗೆ, ಕಮಲ್ ಹಾಸನ್ ಪರವಾಗಿ ತಮಿಳುನಾಡಿನಲ್ಲಿ ಬೆಂಬಲವಿದೆ. ಆದರೆ ನಮ್ಮಲ್ಲಿ ಒಬ್ಬ ಕಲಾವಿದರು ಕೂಡ ಮಾತನಾಡುತ್ತಿಲ್ಲ ಯಾಕೆ. .?' ಎಂದು ನಿರ್ಮಾಪಕ ಸಾರಾ ಗೋವಿಂದ್ ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ, ಕಮಲ್ ಹಾಸನ್ ಕನ್ನಡ ವಿವಾದ ದಿನದಿನಕ್ಕೂ ಕಾವೇರುತ್ತಿದೆ.


