ನಟ ನಾಗಶೌರ್ಯ ಅಭಿನಯದ 'ಬ್ಯಾಡ್ ಬಾಯ್ ಕಾರ್ತಿಕ್' ಸಿನಿಮಾ ಈ ಶುಕ್ರವಾರ ತೆರೆಕಂಡಿದೆ. ಸುಮಾರು 30 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಟೀ ಕುಡಿದ ಖರ್ಚು ಕೂಡ ಬಂದಿಲ್ಲ ಎನ್ನಲಾಗುತ್ತಿದೆ.
ನಾಗಶೌರ್ಯ ಒಂದು ಕಾಲದಲ್ಲಿ ಟಾಲಿವುಡ್ನ ಭರವಸೆಯ ನಟರಾಗಿದ್ದರು. 'ಊಹಲು ಗುಸಗುಸಲಾಡೆ', 'ಚಲೋ' ದಂತಹ ಹಿಟ್ ಚಿತ್ರಗಳನ್ನು ನೀಡಿದ್ದರು. ಆದರೆ ಇತ್ತೀಚೆಗೆ ಅವರಿಗೆ ಸತತ ಸೋಲುಗಳು ಎದುರಾಗುತ್ತಿವೆ. ಇದರಿಂದಾಗಿ ಅವರ ವೃತ್ತಿಜೀವನದ ಗ್ರಾಫ್ ಕುಸಿಯುತ್ತಿದೆ. ಪ್ರಚಾರದ ಕೊರತೆಯಿಂದಾಗಿ ಅವರ ಹೊಸ ಸಿನಿಮಾ ಬಂದಿದ್ದೇ ಜನರಿಗೆ ತಿಳಿದಿಲ್ಲ. ಹೊಸ ನಟರ ಸಿನಿಮಾಗಳಿಗಿಂತಲೂ ಈ ಚಿತ್ರದ ಕಲೆಕ್ಷನ್ ದಾರುಣವಾಗಿದೆ.
ನಾಗಶೌರ್ಯ 'ಬ್ಯಾಡ್ ಬಾಯ್ ಕಾರ್ತಿಕ್' ಚಿತ್ರದ ಮೂಲಕ ಈ ಶುಕ್ರವಾರ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ರಾಮ್ ದೇಸಿನಾ ಈ ಚಿತ್ರವನ್ನು ನಿರ್ದೇಶಿಸಿದ್ದು, ಶ್ರೀದೇವಿ ವಿಜಯ್ ಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವಿಧಿ ಯಾದವ್ ನಾಯಕಿಯಾಗಿ ನಟಿಸಿದ್ದಾರೆ. ಸಮುದ್ರಖನಿ, ಮೈಮ್ ಗೋಪಿ, ನರೇಶ್, ವೆನ್ನೆಲ ಕಿಶೋರ್, ಪೂರ್ಣ ಮುಂತಾದವರು ತಾರಾಗಣದಲ್ಲಿದ್ದಾರೆ. ಶ್ರೀನಿವಾಸರಾವ್ ಚಿಂತಲಪೂಡಿ ಚಿತ್ರವನ್ನು ನಿರ್ಮಿಸಿದ್ದಾರೆ. ಶುಕ್ರವಾರ ಬಿಡುಗಡೆಯಾದ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದ್ದು, ಡಿಸಾಸ್ಟರ್ ಎಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ, ಈ ಸಿನಿಮಾವನ್ನು ಸುಮಾರು 30 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗಿದೆ. ಆದರೆ ಕಲೆಕ್ಷನ್ ನೋಡಿದರೆ, 50 ಲಕ್ಷ ರೂಪಾಯಿ ಕೂಡ ಬಂದಿಲ್ಲ ಎನ್ನುತ್ತವೆ ಟ್ರೇಡ್ ಮೂಲಗಳು. ಸಿನಿಮಾದ ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳು ಮಾರಾಟವಾಗಿಲ್ಲ. ಹೀಗಾಗಿ ನಿರ್ಮಾಪಕರೇ ಸ್ವತಃ ಸಿನಿಮಾ ಬಿಡುಗಡೆ ಮಾಡಿದ್ದಾರೆ. ಆದರೆ ಚಿತ್ರಮಂದಿರದ ಬಾಡಿಗೆ ಹಣ ಕೂಡ ಬಂದಿಲ್ಲವಂತೆ. ಇದರಿಂದ ನಿರ್ಮಾಪಕರಿಗೆ ಟೀ ಕುಡಿದಷ್ಟು ಹಣವೂ ಸಿಕ್ಕಿಲ್ಲ ಎನ್ನಬಹುದು.
ಕಥೆ ಆಯ್ಕೆಯಲ್ಲಿ ಎಡವುತ್ತಿರುವ ನಾಗಶೌರ್ಯ
ಒಂದು ಕಾಲದಲ್ಲಿ ಉತ್ತಮ ಯುವ ನಟನಾಗಿ ಬೆಳೆದಿದ್ದ ನಾಗಶೌರ್ಯ ಅವರ ಸಿನಿಮಾಗೆ ಇಂತಹ ಸ್ಥಿತಿ ಬಂದಿರುವುದು ಅಚ್ಚರಿ ಮೂಡಿಸಿದೆ. ನಾಗಶೌರ್ಯ ಯಾವುದೇ ವಿವಾದಗಳಿಲ್ಲದ ಸೌಮ್ಯ ಸ್ವಭಾವದ ನಟ. ಆದರೆ, ಸರಿಯಾದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಅವರು ವಿಫಲರಾಗುತ್ತಿದ್ದಾರೆ. 'ಬ್ಯಾಡ್ ಬಾಯ್ ಕಾರ್ತಿಕ್' ಕೂಡ ಅಕ್ಕ-ತಮ್ಮನ ನಡುವಿನ ಒಂದು ರೊಟೀನ್ ಕಥೆಯಾಗಿದೆ. ಮುಂದಿನ ದಿನಗಳಲ್ಲಾದರೂ ನಾಗಶೌರ್ಯ ಅವರು ಇಂದಿನ ಟ್ರೆಂಡ್ಗೆ ತಕ್ಕಂತೆ ಕಥೆಗಳನ್ನು ಆಯ್ಕೆ ಮಾಡಿಕೊಂಡು ಮತ್ತೆ ಕಮ್ಬ್ಯಾಕ್ ಮಾಡಲಿ ಎಂದು ಹಾರೈಸೋಣ.


