'ನನಗೆ ಫ್ಯಾನ್ಸ್ 'ಲೇಡಿ ಸೂಪರ್ ಸ್ಟಾರ್' ಅಂತ ಬಿರುದು ಕೊಟ್ಟಾಗ ಅದನ್ನ ನಾನು ಸ್ವೀಕಾರ ಮಾಡ್ತೀನಿ. ಇನ್ಮುಂದೆ ನಾನು ಕಂಟೆಂಟ್ ಸಿನಿಮಾಗಳನ್ನು ಮಾಡಲು ನಿರ್ಧಾರ ಮಾಡಿದ್ದೇನೆ.. ಒಂದೇ ರೀತಿಯ ಪಾತ್ರಗಳನ್ನು ಮಾಡಿ ಮಾಡಿ ಬೋರ್ ಆಗಿದೆ. ನನ್ನನ್ನು ಸಿನಿಮಾಗೆ ಕರ್ಕೊಂಡು ಬಂದವರೇ ದರ್ಶನ್ ಸರ್..

ರಚಿತಾ ರಾಮ್ ಹುಟ್ಟುಹಬ್ಬ!

ಸ್ಯಾಂಡಲ್‌ವುಡ್ ಸ್ಟಾರ್ ನಟಿ ರಚಿತಾ ರಾಮ್ (Rachita Ram Birthday) ಅವರು ಹುಟ್ಟಹಬ್ಬ ಆಚರಣೆ ಸಂಭ್ರಮದಲ್ಲಿ ಇದ್ದಾರೆ. ತಮ್ಮ ಆರ್‌ಆರ್ ನಗರದ ನಿವಾಸದಲ್ಲಿ ಇದೇ ಮೊದಲ ಬಾರಿಗೆ ಗುಳಿಗೆನ್ನೆ ಚಲುವೆ ನಟಿ ರಚಿತಾ ರಾಮ್ ಅವರು ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಮಾಧ್ಯಮದ ಮುಂದೆ ನಟಿ ರಚಿತಾ ರಾಮ್ ಹೀಗೆ ಹೇಳಿದ್ದಾರೆ..

ನಟಿ ರಚಿತಾ ಹೇಳಿಕೆ... 'ತುಂಬಾ ಖುಷಿ ಆಗ್ತಾ ಇದೆ... ಎಲ್ಲರಿಗೂ ತುಂಬಾ ಧನ್ಯವಾದಗಳು. ತುಂಬಾ ತಾಳ್ಮೆಯಿಂದ ನನ್ನ ಸಂಭ್ರಮದಲ್ಲಿ ನೀವೆಲ್ಲರೂ ಭಾಗಿ ಆಗಿದ್ದಕ್ಕೆ ನನಗೆ ತುಂಬಾ ಖುಷಿಯಿದೆ. ಇದೇ ಮೊದಲ ಬಾರಿ ನನ್ನ ಮನೆ ಬಳಿ ಈ ರೀತಿ ಹುಟ್ಟುಹಬ್ಬ ಆಚರಿಸಿಕೊಳ್ತಾ ಇದೀನಿ...' ಎಂದು ಹೇಳುವ ನಟಿ ರಚಿತಾ ರಾಮ್ ಅವರು ತಮ್ಮಫ್ಯಾನ್, ಮೀಡಿಯಾ ಸೇರಿದಂತೆ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಇದೇ ವೇಳೆ ನಟಿ ರಚಿತಾ ರಾಮ್ ಅವರು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. 'ರಜನಿಕಾಂತ್ ಸರ್ ಕಾಲ್ ಮಾಡಿದ್ರು... ಅವರು ನನಗೆ ಹುಟ್ಟುಹಬ್ಬ ಶುಭಾಷಯಗಳು ತಿಳಿಸಿದ್ದಾರೆ. ರಜನಿ ಸರ್ ಜೊತೆಗಿನ 'ಕೂಲಿ'‌ ಸಿನಿಮಾ ಮೂಲಕ ನನ್ನ ಕ್ರೇಜ್ ಬೇರೆ ರಾಜ್ಯಗಳಲ್ಲೂ ಹೆಚ್ಚಾಯ್ತು.. ನಾನು 'ಲ್ಯಾಂಡ್ ಲಾರ್ಡ್' ಸಿನಿಮಾ ಒಪ್ಪಿಕೊಳ್ಳಲು ದರ್ಶನ್ (Darshan Thoogudeepa) ಕಾರಣ. ಅದೇ ರೀತಿ ಲ್ಯಾಂಡ್ ಲಾರ್ಡ್ ಸಿನಿಮಾ ಒಪ್ಪಿಕೊಳ್ಳಲು ಲೋಕೇಶ್ ಕನಕರಾಜು ಕೂಡ ಕಾರಣ.

ಅದೇ ರೀತಿ ಇಂದು ಲ್ಯಾಂಡ್ ಲಾರ್ಡ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಲ್ಯಾಂಡ್ ಲಾರ್ಡ್ ಸಿನಿಮಾ ಮೂಲಕ ನಾನು ಮತ್ತು ವಿಜಯ್ ಎರಡನೇ ಬಾರಿ ಕಾಣಿಸಿಕೊಂಡಿದ್ದೇನೆ.' ಎಂದು ನಟಿ ರಚಿತಾ ರಾಮ್ ಅವರು ತಮ್ಮ ಮುಂಬರುವ ವಿಜಯ್ ಜೊತೆಗಿನ ಲ್ಯಾಂಡ್‌ ಲಾರ್ಡ್ ಸಿನಿಮಾ ಬಗೆಗಿನ ಅಪ್‌ಡೇಟ್ ನೀಡಿದ್ದಾರೆ. ಅಷ್ಟೇ ಅಲ್ಲ, ಇದೇ ವೇಳೆ ತಮ್ಮ ಮದುವೆ ಬಗ್ಗೆಯೂ ನಟಿ ರಚಿತಾ ರಾಮ್ ಅವರು ಹೇಳಿಕೊಂಡಿದ್ದಾರೆ.

ಆದಷ್ಟು ಬೇಗ ಮದುವೆ ಆಗ್ತೇನೆ!

'ಆದಷ್ಟು ಬೇಗ ಮದುವೆ ಆಗ್ತೇನೆ.. ನಾನು ಡಿಸೈಡ್ ಆಗಾಯ್ತು ಆದಷ್ಟು ಬೇಗ ಮದುವೆ ಆಗೇ ಆಗ್ತೇನೆ. ದರ್ಶನ್ ಬಗ್ಗೆ ಬರೋ ನ್ಯೂಸ್ ಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಅವರು ಆರೋಗ್ಯವಾಗಿದ್ದಾರೆ.. ನನ್ನ ಮದುವೆ ಆಗೋ ಹುಡುಗನ ಬಗ್ಗೆ ನನಗೆ ಯಾವುದೇ ಕನಸಿಲ್ಲ... ಸಮಯ ಚೆನ್ನಾಗಿದ್ರೆ ದರ್ಶನ್ ಸರ್ ನನ್ನ ಮದುವೆಗೆ ಬಂದೇ ಬರ್ತಾರೆ.. ಅದು ದೇವರಿಗೆ ಬಿಟ್ಟದ್ದು..' ಎಂದಿದ್ದಾರೆ.

ಅರೆಂಜ್ಡ್ ಮ್ಯಾರೇಜ್ ಆಗ್ತೀನಿ. ಸದ್ಯಕ್ಕೆ ಮನೆಯಲ್ಲಿ ಹುಡುಗನ ಹುಡುಕುತ್ತಿದ್ದಾರೆ. ಡ್ರೀಮ್ ಬಾಯ್ ಅಂತೇನು ಆಸೆಗಳು ಇಲ್ಲ. ನೋಡೋಣ ಕಂಕಣ ಭಾಗ್ಯ ಇದ್ದಾಗ ಮದುವೆ ಆಗುತ್ತೇನೆ. ಮೂಗು ಚುಚ್ಚಿಸಿರೋದಕ್ಕೂ ಮದುವೆಗೂ ಲಿಂಕ್ ಇಲ್ಲ ಎಂದು ಸ್ಯಾಂಡಲ್ ವುಡ್ ಕ್ವೀನ್ ರಚಿತ್ ರಾಮ್ ಹೇಳಿದ್ದಾರೆ.

ಇನ್ನು ನಟಿ ರಮ್ಯಾ ವಿಚಾರಕ್ಕೆ ಸಂಬಂಧಪಟ್ಟ ಪ್ರಶ್ನೆಗೆ 'ರಮ್ಯಾ (Ramya) ವಿಚಾರದಲ್ಲಿ ನಾನು ಅವರ ಜೊತೆಗೆ ಇರ್ತೇನೆ.. ಕೆಟ್ಟ ಕಾಮೆಂಟ್ ಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ... ಯಾರು ಕೂಡ ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲ್ಲ.. ಟ್ರೋಲ್ ಹಾಗೂ ಮೀಮ್ಸ್ ಅವರನ್ನು ಮನವಿ ಮಾಡ್ತೇನೆ.. ಅವರಿಂದಾನೆ ಈ ಅಭಿಯಾನ ಮಾಡಿಸಬೇಕು, ಅವರೇ ಇದನ್ನು ಎಲ್ಲರಿಗೂ ರೀಚ್ ಮಾಡಿಸಬೇಕು' ಎಂದಿದ್ದಾರೆ.

ಇನ್ಮುಂದೆ ನಾನು ಕಂಟೆಂಟ್ ಸಿನಿಮಾಗಳನ್ನು ಮಾಡಲು ನಿರ್ಧಾರ ಮಾಡಿದ್ದೇನೆ!

ಮುಂದುವರೆದ ನಟಿ ರಚಿತಾ ರಾಮ್‌ ಅವರು, 'ನನಗೆ ಫ್ಯಾನ್ಸ್ 'ಲೇಡಿ ಸೂಪರ್ ಸ್ಟಾರ್' ಅಂತ ಬಿರುದು ಕೊಟ್ಟಾಗ ಅದನ್ನ ನಾನು ಸ್ವೀಕಾರ ಮಾಡ್ತೀನಿ. ಇನ್ಮುಂದೆ ನಾನು ಕಂಟೆಂಟ್ ಸಿನಿಮಾಗಳನ್ನು ಮಾಡಲು ನಿರ್ಧಾರ ಮಾಡಿದ್ದೇನೆ.. ಒಂದೇ ರೀತಿಯ ಪಾತ್ರಗಳನ್ನು ಮಾಡಿ ಮಾಡಿ ಬೋರ್ ಆಗಿದೆ. ನನ್ನನ್ನು ಸಿನಿಮಾಗೆ ಕರ್ಕೊಂಡು ಬಂದವರೇ ದರ್ಶನ್ ಸರ್.. ಹಾಗಾಗಿ ಅವರ ಅಭಿಮಾನಿಗಳು ನನ್ನ ಇಂದಿನ ಹುಟ್ಟುಹಬ್ಬಕ್ಕೆ ಹೆಚ್ಚಾಗಿ ಬಂದಿದ್ದಾರೆ.. ಎಂದಿರುವ ನಟಿ ರಚಿತಾ ರಾಮ್, 'ನನ್ನ ಗುರುಗಳಾದ ದರ್ಶನ್ ಅವರ ಡೆವಿಲ್ ಸಿನಿಮಾಗೆ ನನ್ನ ಸಪೋರ್ಟ್ ಇದೆ' ಎಂದಿದ್ದಾರೆ.