ನಟಿ ರಮ್ಯಾರ ಈ ಪೋಸ್ಟ್‌ಗೆ ಉರಿದುಬಿದ್ದಿದ್ದ ದರ್ಶನ್ ಫ್ಯಾನ್ಸ್ ಸೋಷಿಯಲ್ ಮೀಡಿಯಾಗಳಲ್ಲಿ ನಟಿ ರಮ್ಯಾ ವಿರುದ್ಧ ಕೆಟ್ಟ, ಕೊಳಕು ಸಂದೇಶಗಳನ್ನು ಹರಿಯಬಿಟ್ಟಿದ್ದರು. ಈ ಬಗ್ಗೆ ರಮ್ಯಾ ಕಿಡಿಕಿಡಿಯಾಗಿದ್ದು, ಇದೀಗ ತಮ್ಮ ಅಕೌಂಟ್‌ ಮೂಲಕ 'ಡಿ ಬಾಸ್' ಫ್ಯಾನ್ಸ್‌ ವಿರುದ್ಧ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

ಸ್ಯಾಂಡಲ್‌ವುಡ್ ಕ್ವೀನ್ ಖ್ಯಾತಿ ನಟಿ ರಮ್ಯಾ ಇದೀಗ ನಟ ದರ್ಶನ್ ತೂಗುದೀಪ ಫ್ಯಾನ್ಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಾರಣ, ಇತ್ತೀಚೆಗೆ ನಟಿ ರಮ್ಯಾ ಅವರು 'ದರ್ಶನ್' ವಿರುದ್ಧ ಪೋಸ್ಟ್ ಹಾಕಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಚರ್ಚೆಯ ವೇಳೆ ನಟ ದರ್ಶನ್‌ ಕೇಸ್‌ ಬಗ್ಗೆ ಸುಪ್ರೀಂ ಕೋರ್ಟ್ ಕೆಲವು ಪ್ರಶ್ನೆಗಳನ್ನು ಕೇಳಿ ಹೈಕೋರ್ಟ್‌ ನಿರ್ಧಾರದ ಬಗ್ಗೆ ಅಪಸ್ವರ ಎತ್ತಿತ್ತು. ಇದನ್ನು ಎತ್ತಿ ಹೇಳಿದ್ದ ನಟಿ ರಮ್ಯಾ ಅವರು 'ಭಾರತದ ಶ್ರೀಸಾಮಾನ್ಯರಿಗೂ ನ್ಯಾಯ ಸಿಗುವ ಭರವಸೆ ಕಾಣಿಸುತ್ತಿದೆ. ಸುಪ್ರೀಂ ಕೋರ್ಟ್​ನಿಂದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಅನ್ನೋ ಭರವಸೆ ಇದೆ' ಎಂದು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದರು.

ನಟಿ ರಮ್ಯಾರ ಈ ಪೋಸ್ಟ್‌ಗೆ ಉರಿದುಬಿದ್ದಿದ್ದ ದರ್ಶನ್ ಫ್ಯಾನ್ಸ್ ಸೋಷಿಯಲ್ ಮೀಡಿಯಾಗಳಲ್ಲಿ ನಟಿ ರಮ್ಯಾ ವಿರುದ್ಧ ಕೆಟ್ಟ, ಕೊಳಕು ಸಂದೇಶಗಳನ್ನು ಹರಿಯಬಿಟ್ಟಿದ್ದರು. ಈ ಬಗ್ಗೆಡ ನಟಿ ರಮ್ಯಾ ಕಿಡಿಕಿಡಿಯಾಗಿದ್ದು, ಇದೀಗ ತಮ್ಮ ಅಕೌಂಟ್‌ ಮೂಲಕ 'ಡಿ ಬಾಸ್' ಫ್ಯಾನ್ಸ್‌ ವಿರುದ್ಧ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಮೊದಲ ಪೋಸ್ಟ್‌ನಲ್ಲಿ 'ನಿಮ್ಮ ಕಾಮೆಂಟ್​ಗಳೇ ನಿಮ್ಮ ಸಂಸ್ಕಾರ ಹೇಳುತ್ವೆ..' ಎಂದಿದ್ದರು. ಜೊತೆಗೆ, 'ಎಲ್ಲಾ ಡಿಬಾಸ್ ಅಭಿಮಾನಿಗಳಿಗೆ ನನ್ನ ಇನ್​ಸ್ಟಾಗ್ರಾಂಗೆ ಸ್ವಾಗತ. ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಅನ್ನೋದಕ್ಕೇ ನಿಮ್ಮ ಕಾಮೆಂಟ್ಸ್‌ಗಳೇ ಸಾಕ್ಷಿ' ಎಂದಿದ್ದಾರೆ ನಟಿ ರಮ್ಯಾ.

ಇದೀಗ ಮತ್ತೊಂದು ಪೋಸ್ಟ್ ಮಾಡಿರೋ ರಮ್ಯಾ 'ರೇಣುಕಾಸ್ವಾಮಿ ಮೆಸೇಜ್‌ಗಳಿಗೂ ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗಳಿಗೂ ಯಾವುದೇ ವ್ಯತ್ಯಾಸ ಇಲ್ಲ. ಸೋಷಿಯಲ್ ಮೀಡಿಯಾದಲ್ಲಿರುವ ಕೆಲವು ಇಂಥಹ ಮನಸ್ಥಿತಿಗಳಿಂದಲೇ ಮಹಿಳೆಯರು ಹಾಗೂ ಯುವತಿಯರು ದೌರ್ಜನ್ಯ, ರೇಪ್ ಹಾಗೂ ಕೊಲೆಗೆ ಯೋಗ್ಯರು' ಎಂಬಂತಾಗಿದೆ' ಎಂದಿದ್ದಾರೆ ನಟಿ ರಮ್ಯಾ.

ಇದೀಗ, ನಟಿ ರಮ್ಯಾ ಹಾಗೂ ಡಿ ಬಾಸ್ ಫ್ಯಾನ್ಸ್ ನಡುವಿನ ಸೋಷಿಯಲ್ ಮೀಡಿಯಾ ವಾರ್ ತಾರಕಕ್ಕೇರಿದ್ದು, ರಮ್ಯಾ ಕಡೆಯಿಂದ ಒಂದಾದ ಬಳಿಕ ಮತ್ತೊಂದು ಪೋಸ್ಟ್ ಬರುತ್ತಿದೆ. ಹಾಗೇ, ನಟ ದರ್ಶನ್ ಫ್ಯಾನ್ಸ್ ಕಡೆಯಿಂದ ರಮ್ಯಾ ವಿರುದ್ಧ ಪೋಸ್ಟ್‌ಗಳು, ಕೆಟ್ಟ ಕಾಮೆಂಟ್‌ಗಳು ಹರಿದುಬರುತ್ತಿವೆ. ಇದು ಇನ್ನೆಲ್ಲಿಗೆ ಹೋಗಿ ತಲುಪುತ್ತೋ ಏನೋ!

ಇನ್ನು, ಬಿಗ್ ಬಾಸ್ ಖ್ಯಾತಿಯ ಪ್ರಥಮ್​ಗೂ ದರ್ಶನ್ ಅಭಿಮಾನಿಗಳಿಂದ ಕೆಟ್ಟ ಅನುಭವ ಆಗಿದೆ. ಇತ್ತೀಚಿಗೆ ವೈರಲ್ ಆದ ಒಂದು ಆಡಿಯೋದಲ್ಲಿ ದರ್ಶನ್ ಫ್ಯಾನ್ಸ್ ತನಗೆ ಜೀವಬೆದರಿಕೆ ಒಡ್ಡಿದ್ರು ಅಂತ ಪ್ರಥಮ್ ಹೇಳಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಆ ಆಡಿಯೋ ನಿಜ ಅಂತ ಒಪ್ಪಿಕೊಂಡಿರೋ ಪ್ರಥಮ್, ದರ್ಶನ್‌ ಫ್ಯಾನ್ಸ್​ನಿಂದ ತಮಗಾದ ಕಿರುಕುಳವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಪ್ರಥಮ್ ಹೇಳಿದ್ದೇನು?

'ನಿಮ್ಮ ಅಭಿಮಾನಿಗಳಿಗೆ ಬುದ್ದಿ ಹೇಳಿ, ರೌಡಿಗಳನ್ನ ಸಾಕಬೇಡಿ ಅಂತ ದರ್ಶನ್​ಗೆ ಕಿವಿಮಾತು ಹೇಳಿರೋ ಪ್ರಥಮ್, ಇದೇ ರೀತಿ ಪುಂಡಾಟ ಆಡುವವರ ವಿರುದ್ದ ಕಾನೂನು ರೀತ್ಯಾ ಕ್ರಮಕ್ಕೆ ಮುಂದಾಗ್ತೀನಿ' ಅಂತ ಹೇಳಿದ್ದಾರೆ. ಒಟ್ಟಾರೆ ದರ್ಶನ್ ಕುರಿತ ಅಭಿಮಾನ ಓಕೆ.. ಆದ್ರೆ ಆ ನಟನ ಕುಕೃತ್ಯಗಳನ್ನ ಸಮರ್ಥನೆ ಮಾಡಿಕೊಳ್ತಾ ಇದೇ ರೀತಿ ಹುಚ್ಚಾಟವಾಡಿದ್ರೆ, ಅದಕ್ಕೆ ತಕ್ಕ ಬೆಲೆತೆರಬೇಕಾಗುತ್ತೆ ಡಿ ಬಾಸ್ ಫ್ಯಾನ್ಸ್ ಎನ್ನಲಾಗ್ತಿದೆ.