- Home
- Entertainment
- TV Talk
- Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್ ಆಯ್ತು ರಘು ದ್ವೇಷದ ಕಾರಣ
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್ ಆಯ್ತು ರಘು ದ್ವೇಷದ ಕಾರಣ
ಮ್ಯೂಟೆಂಟ್ ರಘು ಅವರು ಗಿಲ್ಲಿ ನಟನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ತನ್ನ ಎತ್ತರ ಮತ್ತು ದೇಹದ ಬಗ್ಗೆ ನಿರಂತರವಾಗಿ ಮಾತನಾಡಿ, ಕೋಟ್ಯಂತರ ಜನರ ಮುಂದೆ ತನ್ನ ವರ್ಚಸ್ಸನ್ನು ಹಾಳುಮಾಡುತ್ತಿದ್ದಾನೆ ಎಂದು ರಘು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಘು ವಿರುದ್ಧ ಆರೋಪ
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮ್ಯೂಟೆಂಟ್ ರಘು ಅವರು ಗಿಲ್ಲಿ ನಟನ ವಿರುದ್ಧ ನಡೆದುಕೊಂಡಿರುವ ರೀತಿಯ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಊಟದ ಸಮಯದಲ್ಲಿ ಗಿಲ್ಲಿ ನಟ ಕೋರಿಕೊಂಡರೂ ಅವರಿಗೆ ಆಹಾರ ನೀಡದೇ ಇರುವುದು ಈ ಕೋಪಕ್ಕೆ ಕಾರಣವಾಗಿದೆ.
ದುಷ್ಮನ್‌ಗೂ ಹೀಗೆ ಮಾಡಲ್ಲ
ಆಹಾರದ ವಿಷಯದಲ್ಲಿ ದುಷ್ಮನ್‌ಗೂ ಯಾರೂ ಹೀಗೆ ಮಾಡುವುದಿಲ್ಲ. ರಘು ಅವರು ಮಾಡಿರುವುದು ಸರಿಯಾದ ಕ್ರಮವಲ್ಲ. ಇದು ಉಚಿತವಲ್ಲ. ವೈಯಕ್ತಿಯ ದ್ವೇಷ ಇದ್ದರೂ ಆಹಾರದ ವಿಷಯದಲ್ಲಿ ಹೀಗೆಲ್ಲಾ ಮಾಡುವುದು ಸರಿಯಲ್ಲ ಎಂದು ಬಿಗ್‌ಬಾಸ್ ವೀಕ್ಷಕರು ಹೇಳುತ್ತಿದ್ದಾರೆ. ನಿಮ್ಮ ಮೀಮ್ಸ್ ಗುರುವಿನಲ್ಲಿ ಇದನ್ನು ಶೇರ್ ಮಾಡಲಾಗಿದೆ.
ಗಿಲ್ಲಿ ಕಳಪೆ
ಆದರೆ ಮ್ಯೂಟಂಟ್ ರಘು ಅವರಿಗೆ ಗಿಲ್ಲಿನಟನ ಬಗ್ಗೆ ಯಾಕಿಷ್ಟು ದ್ವೇಷ ಎನ್ನುವುದು ಹಲವರ ಪ್ರಶ್ನೆಯಾಗಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಕಳಪೆಯ ವಿಷಯ ಬಂದಾಗ ಕೆಲವರು ಗಿಲ್ಲಿ ನಟನನ್ನು ಕಳಪೆ ಎಂದಿದ್ದಾರೆ. ಅದರಲ್ಲಿ ಮ್ಯೂಟೆಂಟ್ ರಘು ಕೂಡ ಗಿಲ್ಲಿ ನಟ (Bigg Boss Gilli Nata) ಅವರನ್ನೇ ಕಳಪೆ ಎನ್ನುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಕಾಮಿಡಿ ಮಧ್ಯೆ ಗೆರೆ
ರಘು ಅವರು, ಗಿಲ್ಲಿ ನಟ ಯಾಕೆ ಕಳಪೆ ಎನ್ನುವ ಬಗ್ಗೆ ವಿವರಣೆ ನೀಡಿದ್ದಾರೆ. ಅದರಲ್ಲಿ ಅವರು, ಕಾಮಿಡಿ ಹಾಗೂ ವೈಯಕ್ತಿಕ ವಿಷಯದ ಮಧ್ಯೆ ಒಂದು ಗೆರೆ ಇರುತ್ತದೆ. ಆ ಗೆರೆಯನ್ನು ಮೀರಬಾರದು. ನಾನು ನೋಡಿರುವ ಗಿಲ್ಲಿ ಇವನಲ್ಲ. ಆಚೆಯೂ ಅವನು ನಮ್ಮ ಜೊತೆ ಹೀಗೆ ಇರ್ತಾನಾ? ಹೊರಗೆ ಹೀಗೆ ಹೇಳಿದ್ರೆ ಹೊಡೆದು ಹೋಗ್ತಾರೆ’ ಎಂದು ಮ್ಯೂಟಂಟ್ ರಘು ಆಕ್ರೋಶ ಹೊರಹಾಕಿದ್ದಾರೆ.
ವರ್ಚಸ್ಸು ಹಾಳು
ಯಾವಾಗ ನೋಡಿದ್ರೂ ನನ್ನ ಹೈಟ್ ಮತ್ತು ಬಾಡಿ ಬಗ್ಗೆ ಇವನು ಮಾತನಾಡುತ್ತಲೇ ಇರುತ್ತಾನೆ. ನಾಲ್ಕು ಜನರ ಮುಂದೆ ಮಾತನಾಡಿದರೆ ಒಪ್ಪಿಕೊಳ್ಳಬಹುದು. ಆದರೆ, ಈ ಶೋನ ಕೋಟಿ ಕೋಟಿ ಜನರು ನೋಡುತ್ತಾ ಇರುತ್ತಾರೆ. ನನ್ನ ವರ್ಚಸ್ಸನ್ನು ಹಾಳು ಮಾಡಿಕೊಳ್ಳಲು ನನಗೆ ಇಷ್ಟ ಇಲ್ಲ’ ಎಂದು ರಘು ಗಿಲ್ಲಿ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ.
ಸ್ನೇಹ ದ್ವೇಷಕ್ಕೆ ತಿರುಗಿದೆ
ಗಿಲ್ಲಿ ನಟ ಹಾಗೂ ರಘು ಮಧ್ಯೆ ಸ್ನೇಹ ಇತ್ತು. ಈ ಹಿಂದೆ ಇವರಿಬ್ಬರು ಒಂದು ಶೋನಲ್ಲಿ ಭಾಗವಹಿಸಿದ್ದರು. ಅದಾದ ಬಳಿಕ ರಘು ಜೊತೆ ಗಿಲ್ಲಿ ಅಂಟಿಕೊಂಡು ಇರುತ್ತಿದ್ದರು. ಕೆಲ ವಾರಗಳಿಂದ ಇಬ್ಬರ ಮಧ್ಯೆ ಮನಸ್ತಾಪ ಶುರು ಆಗಿದೆ.
ಈ ಹಿಂದೆಯೂ ಆರೋಪ
ಗಿಲ್ಲಿ ನಟ ಬೇರೆಯವರನ್ನು ಬಾಡಿ ಶೇಮಿಂಗ್ ಮಾಡಿ, ಕೆಳಗಡೆ ಹಾಕಿ ಕಾಮಿಡಿ ಮಾಡ್ತಾನೆ. ನನಗೆ ಇದು ಇಷ್ಟ ಆಗ್ತಿಲ್ಲ, ಸಾಕಷ್ಟು ಬಾರಿ ವಾರ್ನ್ ಮಾಡಿದ್ದೇನೆ. ಬಟ್ಟೆಯಿದ್ದರೂ ಕೂಡ ಹಾಕಿಕೊಳ್ಳೋದಿಲ್ಲ, ಬನಿಯನ್, ಚಡ್ಡಿಯಲ್ಲಿ ಇರುತ್ತಾನೆ ಎಂದು ರಘು ಆರೋಪ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

