ನಟಿ ರಶ್ಮಿಕಾ ಮಂದಣ್ಣ ಹಾಗೂ ಕನ್ನಡ ನಟ ರಕ್ಷಿತ್ ಶೆಟ್ಟಿ 2017ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಮದುವೆ ಆಗುವುದಕ್ಕೂ ಮೊದಲೇ ಆ ಎಂಗೇಜ್ಮೆಂಟ್ ಮುರಿದು ಬಿದ್ದು ದೂರ ಆಗಿಹೋದ್ರು! ಬಳಿಕ, ತೆಲುಗು ಚಿತ್ರರಂಗಕ್ಕೆ ಹೋದ ರಶ್ಮಿಕಾ ಮಂದಣ್ಣ, ತೆಲುಗು ಚಿತ್ರರಂಗದಲ್ಲೇ ಬೆಳೆದು ಸ್ಟಾರ್ ನಟಿಯಾದ್ರು.

ರಶ್ಮಿಕಾ ಮಂದಣ್ಣ-ರಕ್ಷಿತ್ ಶೆಟ್ಟಿ ಎಂಗೇಜ್‌ಮೆಂಟ್!

ಕನ್ನಡ ಮೂಲದ ಪ್ಯಾನ್ ಇಂಡಿಯಾ ಸ್ಟಾರ್ ನಟಿ 'ನ್ಯಾಷನಲ್ ಕ್ರಶ್' ಖ್ಯಾತಿಯ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ (Vijay Deverakonda) ಗುಟ್ಟಾಗಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಲವ್ ಮಾಡುತ್ತಿದ್ದರು ಎನ್ನಲಾದ ಈ ಜೋಡಿ ಅದೆಷ್ಟು ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎಂದರೆ, ಒಂದೇ ಒಂದು ಫೋಟೋ ಹೊರಗಡೆ ಹೋಗದಂತೆ ನೋಡಿಕೊಂಡಿದ್ದಾರೆ. ಹಾಗಿದ್ದರೂ ರಶ್ಮಿಕಾ-ವಿಜಯ್ ಜೋಡಿ ಎಂಗೇಜ್‌ಮೆಂಟ್ ಆಗಿರೋದು ನಿಜ ಎಂಬ ಮಾತಂತೂ ಇದೆ.

ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ರಶ್ಮಿಕಾ-ವಿಜಯ್? ಹೌದು ಎನ್ನುತ್ತಿವೆ ಮೂಲಗಳು. ಆದರೆ, ರಾಷ್ಟ್ರೀಯ ವಾಹಿನಿಗಳಲ್ಲಿ ಹರಿದಾಡುತ್ತಿದೆ ರಶ್ಮಿಕಾ ಎಂಗೇಜ್ಮೆಂಟ್ ಸುದ್ದಿ. ತೀರಾ ಖಾಸಗಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಈ 'ಗೀತ ಗೋವಿಂದ' ಜೋಡಿ ಎನ್ನಲಾಗ್ತಿದೆ. ಕನ್ನಡದಲ್ಲಿ 'ಕಿರಿಕ್ ಪಾರ್ಟಿ' ಸಿನಿಮಾದ ಬಳಿಕ ತೆಲುಗಿಗೆ ಹೋದ ರಶ್ಮಿಕಾ ಅಲ್ಲಿ ನಟಿಸಿದ ಮೊದಲ ಚಿತ್ರವೇ 'ಗೀತ ಗೋವಿಂದಂ'. ಈ ಸಿನಿಮಾ ಸೂಪರ್ ಹಿಟ್ ಆಗಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇಬ್ಬರಿಗೂ ಸ್ಟಾರ್ ವ್ಯಾಲ್ಯೂ ತಂದುಕೊಟ್ಟಿದೆ.

ಸಿಕ್ಕ ಮಾಹಿತಿ ಪ್ರಕಾರ, ರಶ್ಮಿಕಾ ಹಾಗೂ ವಿಜಯ್ ತಮ್ಮಿಬ್ಬರ ಎಂಗೇಜ್‌ಮೆಂಟ್‌ಗೆ ಕುಟುಂಬಸ್ಥರು ಮತ್ತು ಕೆಲವೇ ಕೆಲವೇ ಕೆಲವು ಆತ್ಮೀಯರಿಗಷ್ಟೇ ಕರೆದಿದ್ದರು. ಎಂಗೇಜ್ಮೆಂಟ್ ಫೋಟೋ ಎಲ್ಲೂ ರಿವೀಲ್ ಆಗದಂತೆ ನೋಡಿಕೊಂಡಿದೆ ರಶ್ಮಿಕಾ-ವಿಜಯ್ ಜೋಡಿ. ಈ ಪ್ರೇಮಿಗಳು ಮುಂದಿನ ವರ್ಷ (2026) ಫೆಬ್ರವರಿಯಲ್ಲಿ ಮದುವೆ ಆಗಲಿದ್ದಾರೆ ಎನ್ನಲಾಗಿದೆ. ಅದೂ ಕೂಡ ಡೆಸ್ಟಿನೇಷನ್ ಮ್ಯಾರೇಜ್. ಅಂದರೆ, ಇಬ್ಬರ ಊರೂ ಅಲ್ಲದೇ ಎಲ್ಲೋ ದೂರದಲ್ಲಿ ಅವರಿಗಿಷ್ಟವಾದ ಸ್ಥಳದಲ್ಲಿ!

ಫೆಬ್ರವರಿ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ 'ಲವ್ ಬರ್ಡ್ಸ್‌' ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ.

ಸ್ವತ: ರಶ್ಮಿಕಾ-ವಿಜಯ್ ಈ ಸಂಗತಿಯನ್ನು ಮಾಧ್ಯಮಗಳ ಮೂಲಕ ಜಗತ್ತಿಗೆ ಅನೌನ್ಸ್‌ಮೆಂಟ್ ಮಾಡಲಿದ್ದಾರಂತೆ. ಆದರೆ ಈಗ ಹೈದ್ರಾಬಾದ್‌ನಲ್ಲಿರುವ ನಟ ಹಾಗೂ ರಶ್ಮಿಕಾ ಪ್ರೇಮಿ ವಿಜಯ್ ದೇವರಕೊಂಡ ನಿವಾಸದಲ್ಲಿ ಸೀಕ್ರೆಟ್ ನಿಶ್ಚಿತಾರ್ಥ ಆಗಿದೆ ಎನ್ನಲಾಗ್ತಿದೆ. ಈ ಗುಟ್ಟು ರಟ್ಟಾಗೋದಂತೂ ಖಚಿತ, ಆದ್ರೆ ಯಾವಾಗ..? ಕಾದು ನೋಡಿಬೇಕು..!

ಅಂದಹಾಗೆ, ನಟಿ ರಶ್ಮಿಕಾ ಮಂದಣ್ಣ ಹಾಗೂ ಕನ್ನಡ ನಟ ರಕ್ಷಿತ್ ಶೆಟ್ಟಿ 2017ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಮದುವೆ ಆಗುವುದಕ್ಕೂ ಮೊದಲೇ ಇವರ ಎಂಗೇಜ್ಮೆಂಟ್ ಮುರಿದು ಬಿದ್ದು ದೂರ ಆಗಿಹೋದ್ರು! ಬಳಿಕ, ತೆಲುಗು ಚಿತ್ರರಂಗಕ್ಕೆ ಹೋದ ನಟಿ ರಶ್ಮಿಕಾ ಮಂದಣ್ಣ ಅವರು ತೆಲುಗು ಚಿತ್ರರಂಗದಲ್ಲೇ ಬೆಳೆದು, ಬಳಿಕ ತಮಿಳು ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತ ದೊಡ್ಡ ಸ್ಟಾರ್ ನಟಿಯಾಗಿ ಬೆಳೆದುಬಿಟ್ಟರು. ಬಳಿಕ ಅವರು ಕನ್ನಡ ಸಿನಿಮಾಗಳಲ್ಲಿ ನಟಿಸಲೇ ಇಲ್ಲ.

ಟಾಲಿವುಡ್ ನಟ ವಿಜಯ್ ದೇವರಕೊಂಡ ಜೊತೆ ಗೀತಾ ಗೋವಿಂದ ಸಿನಿಮಾದಲ್ಲಿ ನಟಿಸಿ ಆಗ ಭಾರಿ ಸುದ್ದಿ ಆಗಿದ್ರು ರಶ್ಮಿಕಾ. ಅದಕ್ಕೆ ಕಾರಣವಾಗಿದ್ದು 'ಗೀತ ಗೋವಿಂದಂ' ಸಿನಿಮಾದ ಅವರಿಬ್ಬರ ನಡುವಿನ 'ಕಿಸ್ ಸೀನ್'. ಇದೆ ಕಾರಣಕ್ಕೆ ರಕ್ಷಿತ್ ಶೆಟ್ಟಿ ಜೊತೆಗಿನ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದು ಬಿದ್ದಿದ್ದು ಅಂಥ ಹೇಳಲಾಗುತ್ತೆ. ಆದರೆ ಅದಕ್ಕೆ ಯಾವುದೇ ಸ್ಪಷ್ಟನೆ ಇಲ್ಲ. ಕಾರಣ, ರಶ್ಮಿಕಾ ಆಗಲೀ, ರಕ್ಷಿತ್ ಆಗಲೀ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆದರೆ, ಮತ್ತೊಂದು ಮೂಲದ ಪ್ರಕಾರ, ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರಿಬ್ಬರ ನಿಶ್ಚಿತಾರ್ಥ ಮುರಿದುಬೀಳಲು ಬೇರೆಯದ್ದೇ ಕಾರಣವಿದೆ. ಅದಕ್ಕೆ ಕಾರಣ, ನಟ ವಿಜಯ್ ದೇವರಕೊಂಡಗೆ ರಶ್ಮಿಕಾ 'ಲಿಪ್ ಕಿಸ್' ಕೊಟ್ಟಿದ್ದು ಅಲ್ಲವೇ ಅಲ್ಲ. ಏಕೆಂದರೆ, ಅಷ್ಟರಲ್ಲಾಗಲೇ ರಶ್ಮಿಕಾ-ರಕ್ಷಿತ್ ಜೋಡಿಯ ಎಂಗೇಜ್‌ಮೆಂಟ್‌ ಬ್ರೇಕ್‌ಅಪ್ ಆಗಿತ್ತು. ಆ ಕಾರಣಕ್ಕೇ ರಶ್ಮಿಕಾ ತೆಲುಗು ಚಿತ್ರರಂಗಕ್ಕೆ ಹೋಗಿ ಅಲ್ಲಿ ಹೋಗಿ ಸಿನಿಮಾಗೆ ಅಗತ್ಯವಿದ್ದ ಲಿಪ್ ಕಿಸ್‌ ದೃಶ್ಯದಲ್ಲಿ ಭಾಗಿಯಾಗಿದ್ದು. ಅಷ್ಟರಲ್ಲಾಗಲೇ ರಶ್ಮಿಕಾ ತಕ್ಷಣಕ್ಕೆ ಮದುವೆ ಆಗುವ ಬದಲು ಚಿತ್ರರಂಗದಲ್ಲೇ ಕಂಟಿನ್ಯೂ ಮಾಡುವ ನಿರ್ಧಾರ ಮಾಡಿ ಆಗಿತ್ತು!

ಒಟ್ಟಿನಲ್ಲಿ, ಸತ್ಯ ಕಥೆ ಅದೇನಿದೆಯೋ ಎನೋ..! ಆದರೆ, ತಮ್ಮಿಬ್ಬರ ಎಂಗೇಜ್‌ಮೆಂಟ್ ಮುರಿದುಬಿದ್ದ ಮೇಲೆ ಕೂಡ, ರಶ್ಮಿಕಾ ಹಾಗೂ ರಕ್ಷಿತ್ ಇಬ್ಬರೂ ಎಲ್ಲೂ ಕೂಡ ಇಬ್ಬರ ಮೇಲೆ ಇನ್ನೊಬ್ಬರು ದೋಷಾರೋಪಣೆ ಮಾಡಲಿಲ್ಲ. ಎಲ್ಲೂ ಕೆಸರೆರಚಾಟ ಮಾಡಿಕೊಳ್ಳಲಿಲ್ಲ. ಇಬ್ಬರೂ ಸೈಲೆಂಟ್‌ ಆಗಿ ತಮ್ಮ ಸಿನಿಮಾದ ವೃತ್ತಿಜೀವನದ ಕಡೆ ಸಾಗಿ ಬೆಳದರು. ರಶ್ಮಿಕಾ ಬೇರೆಬೇರೆ ಭಾಷೆಗಳಲ್ಲಿ ಬೆಳೆದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದರೆ ರಕ್ಷಿತ್ ಕನ್ನಡಕ್ಕೇ ಸ್ಟಿಕ್ ಆಗಿ ಬೆಳೆಯುತ್ತ ಹೋದರು.

ಹಾಗಿದ್ದರೆ ಯಾಕಿಷ್ಟು ಗುಟ್ಟಾಗಿ ನಿಶ್ಚಿತಾರ್ಥ ಆಗಿದ್ದು?

ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಕೆರಿಯರ್ ದೃಷ್ಟಿಯಿಂದ ಎನ್ನಲಾಗುತ್ತಿದೆ. ಕಾರಣ, ಇಬ್ಬರ ಕೈನಲ್ಲೂ ಸಾಕಷ್ಟು ಸಿನಿಮಾಗಳಿವೆ. ಸಿನಿಮಾ ರಿಲೀಸ್ ಆಗೋದಕ್ಕೆ ಇದು ತೊಂದರೆ ಆಗಬಾರ್ದು ಅಂತ ಎಂಗೇಜ್‌ಮೆಂಟ್ ಬಹಹಿರಂಗ ಮಾಡಿಲ್ಲ ಎನ್ನಲಾಗುತ್ತಿವೆ ಮೂಲಗಳು. ಅದೇನೇ ಇದ್ದರೂ ಸತ್ಯ ಒಂದಲ್ಲ ಮತ್ತೊಂದು ದಿನ ಹೊರಗೆ ಬರಲೇಬೇಕಲ್ಲವೇ?

ರಕ್ಷಿತ್ ಸಿಂಗಲ್, ರಶ್ಮಿಕಾ ಮಿಂಗಲ್..?

ಇದೀಗ ರಕ್ಷಿತ್ ಸಿಂಗಲ್ ಆಗಿಯೇ ಇದ್ದಾರೆ, ಆದರೆ ರಶ್ಮಿಕಾ ಮಿಂಗಲ್ ಆಗಲು ಹೊರಟಿದ್ದಾರೆ ಎನ್ನಬಹುದು. ಮುಂದೇನು ಎಂಬುದನ್ನು ಈಗಲೇ ಎಲ್ಲವನ್ನೂ ಹೇಳಲು ಅಸಾಧ್ಯ. ಆದರೆ, ರಶ್ಮಿಕಾ ಅವರು ಮುಂದಿನ ವರ್ಷ ಫೆಬ್ರವರಿಯಲ್ಲಿ ನಟ ವಿಜಯ್ ದೇವರಕೊಂಡ ಜೊತೆ 'ಸಪ್ತಪದಿ' ತುಳಿಯಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ರಕ್ಷಿತ್ ಶೆಟ್ಟಿ ಎಂಗೇಜ್‌ಮೆಂಟ್ ಅಥವಾ ಮದುವೆ ಬಗ್ಗೆ ಸದ್ಯಕ್ಕೆ ಯಾವುದೇ ಸುದ್ದಿಯಿಲ್ಲ. ಎಲ್ಲದಕ್ಕೂ ಟೈಮ್ ಬರಬೇಕು ಅಂತಾರೆ, ಕಾದು ನೋಡಬೇಕಷ್ಟೇ!