ಹೊಂಬಾಳೆ ಪ್ರೊಡಕ್ಷನ್ ನಿರ್ಮಾಣದ ಈ ಸಿನಿಮಾ ಭಾರೀ ಬಜೆಟ್ ಹೊಂದಿದೆ. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ನಾಯಕಿ ನಟಿ ರುಕ್ಮಿಣಿ ವಸಂತ್ ಅವರು ಕೂಡ ಕಾಂತಾರ ಪ್ರೀಕ್ವೆಲ್‌ನಲ್ಲಿ ನಟಿಸಿದ್ದಾರೆ. ಉಳಿದಂತೆ, ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ತಾರಾಗಣವೇ ಹೆಚ್ಚುಕಡಿಮೆ ಈ ಚಿತ್ರದಲ್ಲಿ ಕೂಡ ಇದೆ ಎನ್ನಲಾಗಿದೆ.
ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ಕಾಂತಾರ ಪ್ರೀಕ್ವೆಲ್ ಟ್ರೈಲರ್ ರಿಲೀಸ್!
ಕನ್ನಡದ ಖ್ಯಾತ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ (Rishab Shetty) 'ಕಾಂತರ ಕ್ಯಾಪ್ಟರ್' 1 ಟ್ರೈಲರ್ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ. ಇದೇ ತಿಂಗಳು, ಅಂದರೆ ಸೆಪ್ಟೆಂಬರ್ 22ನೇ ತಾರೀಖಿನಂದು ಕಾಂತಾರ ಪ್ರೀಕ್ವೆಲ್ (Kantara Chapter 1) ಟ್ರೈಲರ್ ಬಿಡುಗಡೆ ಆಗಲಿದೆ. ಕಾಂತಾರ ಚಿತ್ರತಂಡವು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಅಧೀಖರಥ್ವಾಗಿ ಇದನ್ನು ಘೋಷಿಸಿಕೊಂಡಿದೆ.
22 ನೇ ತಾರೀಕು ಹೊರಬರಲಿದೆ ಕಾಂತಾರ ಟ್ರೈಲರ್ !
ಹೌದು, ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರೋ ಸಿನಿಮಾ ಕಾಂತಾರ ಚಾಪ್ಟರ್ 1 ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿ ಜಗತ್ತಿನಾದ್ಯಂತೆ ಜನಮೆಚ್ಚುಗೆ ಗಳಿಸಿರುವ ಹಿನ್ನೆಲೆಯಲ್ಲಿ ಇದೀಗ ಕಾಂತಾರ ಪ್ರೀಕ್ವೆಲ್‌ಗೆ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿದೆ. ಅಕ್ಟೋಬರ್ 2 ರಂದು (2 October 2025) ಕಾಂತಾರ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆ ಆಗಿದೆ.
7 ಭಾಷೆಯಲ್ಲಿ ತೆರೆಗೆ ಬರುತ್ತಿದೆ ಕಾಂತರಾ ಚಾಪ್ಟರ್ 1
ಹೊಂಬಾಳೆ ಪ್ರೊಡಕ್ಷನ್ ನಿರ್ಮಾಣದ ಈ ಸಿನಿಮಾ ಭಾರೀ ಬಜೆಟ್ ಹೊಂದಿದೆ. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ನಾಯಕಿ ನಟಿ ರುಕ್ಮಿಣಿ ವಸಂತ್ ಅವರು ಕೂಡ ಕಾಂತಾರ ಪ್ರೀಕ್ವೆಲ್‌ನಲ್ಲಿ ನಟಿಸಿದ್ದಾರೆ ಎಂಬ ಮಾಹಿತಿಯಿದೆ. ಉಳಿದಂತೆ, ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ತಾರಾಗಣವೇ ಹೆಚ್ಚುಕಡಿಮೆ ಈ ಚಿತ್ರದಲ್ಲಿ ಕೂಡ ಇದೆ ಎನ್ನಲಾಗಿದೆ. ಆದರೆ, ತಾರಾಬಳಗ ಸೇರಿದಂತೆ ಹೆಚ್ಚಿನ ಯಾವುದೇ ಮಾಹಿತಿಯನ್ನು ರಿಷಬ್ ಶೆಟ್ಟಿ ಸಿನಿಮಾ ತಂಡ ಬಹಿರಂಗ ಪಡಿಸಿಲ್ಲ.
ಇನ್ನು ಕಾಂತಾರ ಸಿನಿಮಾ ಬಗ್ಗೆ ಕೆಲವು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ:-
ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ: ಅ.1ರಂದು ವಿಶ್ವಾದ್ಯಂತ ಭರ್ಜರಿ ಪ್ರೀಮಿಯರ್ ಶೋ
1. ಕಾಂತಾರ 1 ಬಿಡುಗಡೆಗೆ ಮೊದಲೇ 200 ಕೋಟಿಗೂ ಅಧಿಕ ಮೊತ್ತವನ್ನು ಗಳಿಸಿಕೊಂಡಿದೆ. ಓಟಿಟಿ ಹಕ್ಕನ್ನು ಅಮೆಜಾನ್ ಪ್ರೈಮ್ 120 ಕೋಟಿ ರೂಪಾಯಿ ನೀಡಿ ಪಡೆದುಕೊಂಡಿದ್ದು, ಜೀಟಿವಿಯವರು 80 ಕೋಟಿ ರೂಪಾಯಿ ನೀಡಿ ಎಲ್ಲಾ ಭಾರತೀಯ ಭಾಷೆಯ ಸ್ಯಾಟಲೈಟ್ ಹಕ್ಕನ್ನು ಪಡೆದುಕೊಂಡಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಕಾಂತಾರ ಸಿನಿಮಾವನ್ನು ಸುವರ್ಣ ವಾಹಿನಿಯವರು ಖರೀದಿಸಿದ್ದು, ಅವರಿಂದ ನಿರಾಕ್ಷೇಪಣಾ ಪತ್ರ ಪಡೆದು ಖರೀದಿ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ. ಹಾಗಾಗಿ ಓಟಿಟಿ ಮತ್ತು ಸ್ಯಾಟಲೈಟ್ ಹಕ್ಕು ಮಾರಾಟದಿಂದಲೇ ಚಿತ್ರತಂಡ ಬಜೆಟ್‌ನ ಬಹುಪಾಲು ಗಳಿಸಿಕೊಂಡಿದೆ ಎನ್ನಲಾಗಿದೆ.
2. ಜೊತೆಗೆ ಆಡಿಯೋ ಹಕ್ಕು ಕೂಡ ದೊಡ್ಡ ಸಂಸ್ಥೆಗೆ ಮಾರಾಟವಾಗಿದ್ದು, 30 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಆದರೆ ಅಧಿಕೃತ ಮಾಹಿತಿ ಲಭ್ಯವಿಲ್ಲ.
3. ಅಕ್ಟೋಬರ್ 1ರಂದು ಸಂಜೆ ವಿಶ್ವಾದ್ಯಂತ ಎಲ್ಲಾ ಕಡೆ ಪ್ರೀಮಿಯರ್ ಶೋ ಆಯೋಜಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
4. ಸಿನಿಮಾದ ಅಂತಿಮ ಹಂತದ ಕೆಲಸಗಳು ಭರದಿಂದ ಸಾಗುತ್ತಿದೆ. ಬಹುತೇಕ ಚಿತ್ರತಂಡ ಅಜನೀಶ್ ಲೋಕನಾಥ್ ಸ್ಟುಡಿಯೋದಲ್ಲಿಯೇ ಬೀಡುಬಿಟ್ಟಿದೆ ಎನ್ನಲಾಗುತ್ತಿದೆ. ಎಲ್ಲಾ ಭಾಷೆಯ ತಂತ್ರಜ್ಞರು ಬೆಂಗಳೂರಿನ ಸ್ಟುಡಿಯೋದಲ್ಲಿಯೇ ಕುಳಿತು ಆಯಾ ಭಾಷೆಯ ಆವೃತ್ತಿಗೆ ದುಡಿಯುತ್ತಿದ್ದಾರೆ.
5. ಈ ವಾರವಷ್ಟೇ ಸೆನ್ಸಾರ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು, ಕೆಲವೇ ದಿನಗಳಲ್ಲಿ ಸೆನ್ಸಾರ್ ಆಗುವ ಸಾಧ್ಯತೆ ಇದೆ.
6. ಮೊದಲ ವಾರದಲ್ಲಿ ಐದು ಪ್ರಮುಖ ಭಾರತೀಯ ಭಾಷೆಗಳು ಮತ್ತು ಇಂಗ್ಲಿಷಲ್ಲಿ ಮಾತ್ರವೇ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. ಮರುವಾರದಿಂದ ವಿದೇಶಿ ಭಾಷೆಗಳೂ ಸೇರಿದಂತೆ ಒಟ್ಟು ಸುಮಾರು 30 ಭಾಷೆಗಳಲ್ಲಿ ಸಿನಿಮಾ ಪ್ರದರ್ಶನವಾಗಲಿದೆ.
7. ಸಿನಿಮಾ ತಂಡ ಪ್ರಚಾರದ ಕುರಿತು ಅಷ್ಟೇನೂ ಆಸಕ್ತಿ ತೋರಿಸುತ್ತಿಲ್ಲ. ಪ್ರಚಾರಕ್ಕೆ ದೊಡ್ಡ ಮಟ್ಟದ ಖರ್ಚು ಮಾಡುವ ಇರಾದೆಯೂ ಇದ್ದಂತಿಲ್ಲ. ಬದಲಿಗೆ ಪೈರಸಿ ತಡೆಯಲು ತಂಡ ಆಸಕ್ತಿ ತೋರಿದೆ. ಎಲ್ಲಾ ದೊಡ್ಡ ದೊಡ್ಡ ಪೈರಸಿ ತಡೆ ತಂಡಗಳನ್ನೂ ಈ ನಿಟ್ಟಿನಲ್ಲಿ ಬಳಸಿಕೊಳ್ಳಲಾಗುತ್ತಿದೆ.
8. ರಿಷಬ್ ಶೆಟ್ಟಿ ಸಿನಿಮಾ ಬಿಡುಗಡೆಯಾದ ಬಳಿಕ ಎಲ್ಲಾ ಕಡೆ ಹೋಗಿ ಸಂದರ್ಶನ ಕೊಡುವ ಆಲೋಚನೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕಂತೂ ಅವರು ಅಂತಿಮ ಹಂತದ ಕೆಲಸಗಳಲ್ಲಿ ಭಾರಿ ಬ್ಯುಸಿ ಇದ್ದಾರೆ.
9. ಎಲ್ಲಾ ಕಡೆ ಈ ಸಿನಿಮಾ ಕುರಿತು ಮೆಚ್ಚುಗೆಯ ಮಾತುಗಳೇ ಕೇಳಿಬರುತ್ತಿವೆ. ಸಿನಿಮಾ ತುಣುಕು ವೀಕ್ಷಿಸಿದವರೆಲ್ಲಾ ಅದ್ದೂರಿಯಾಗಿ ಎನ್ನುತ್ತಿದ್ದಾರೆ. ಹಾಲಿವುಡ್‌ನ ಸಾಹಸ ನಿರ್ದೇಶಕ ಟೋಡರ್ ಲ್ಯಾಜರೋವ್ ಅವರಂತೂ, ‘ಈ ಸಿನಿಮಾದ ಒನ್‌ಲೈನ್ ಕೇಳಿದ ಕೂಡಲೇ ಇದಕ್ಕೆ ಸಾಹಸ ನಿರ್ದೇಶನ ಮಾಡಲು ಒಪ್ಪಿಕೊಂಡೆ. ಈ ಚಿತ್ರಕ್ಕಾಗಿ ಒಪ್ಪಿಕೊಂಡ ಎರಡು ಸಿನಿಮಾದಿಂದ ಹಿಂದೆ ಸರಿದಿದ್ದೇನೆ. ನನ್ನ ಪ್ರಕಾರ ರಿಲೀಸ್ ಆಗುವ ಮೊದಲೇ ಬ್ಲಾಕ್ ಬಸ್ಟರ್ ಹಿಟ್ ಆಗುತ್ತಿರುವ ಸಿನಿಮಾ ಕಾಂತಾರ ಚಾಪ್ಟರ್ 1’ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 09ರಿಂದ ಪ್ರಚಾರಕ್ಕೆ ಚಾಲನೆ!
10. ಈ ಕುರಿತು ಪ್ರತಿಕ್ರಿಯೆ ಕೇಳಿದ್ದಕ್ಕೆ, ಹೊಂಬಾಳೆ ಫಿಲಂಸ್‌ನ ಚಲುವೇ ಗೌಡ ಅವರು, ‘ಟ್ರೇಲರ್ ಬಿಡುಗಡೆ ಸೇರಿದಂತೆ ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದ ವಿವರ ಇಂದು ಹೊರಬೀಳುತ್ತಿದೆ. ಅಧಿಕೃತವಾದ ಪ್ರಚಾರ ಕೆಲಸಕ್ಕೆ ಇಂದಿನಿಂದ ಚಾಲನೆ ಸಿಗಲಿದೆ’ ಎಂದಿದ್ದಾರೆ.
ಇನ್ನು, ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ‘ಕಾಂತಾರ ಚಾಪ್ಟರ್ -1’ ವಿಶ್ವದಾದ್ಯಂತ 02 ಅಕ್ಟೋಬರ್ (02 October 2025) ರಂದು ಬಿಡುಗಡೆ ಆಗಲಿದೆ.


