ನಟ ಯಶ್ ಅವರು ಸದ್ಯ ಶೂಟಿಂಗ್ ವಿರಾಮದ ಮಧ್ಯೆ ಲಂಡನ್‌ ರೀಚ್ ಆಗಿದ್ದಾರೆ. ಇನ್ನೇನು ಕೆಲವೆ ದಿನಗಳಲ್ಲಿ ನಟ ಯಶ್ ಅವರು ಟಾಕ್ಸಿಕ್ ಸಿನಿಮಾದ ಬೆಂಗಳೂರು ಸೆಟ್‌ನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ, ರಾಮಾಯಣ ಶೂಟಿಂಗ್ ಬಗ್ಗೆ ಸದ್ಯಕ್ಕೆ ಅಪ್‌ಡೇಟ್ ಇಲ್ಲ.

ಪ್ಯಾನ್ ಇಂಡಿಯಾ ಸ್ಟಾರ್ ಯಶ್ & ಬಾಡಿಗಾರ್ಡ್ ಶ್ರೀನಿವಾಸ್ ಮ್ಯಾಟರ್!

ಕನ್ನಡದ ನಟ, ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಸದ್ಯ ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್' ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ, ಬಾಲಿವುಡ್‌ ಸಿನಿಮಾ 'ರಾಮಾಯಣ'ದಲ್ಲಿಯೂ ಅವರು ನಟಿಸುತ್ತಿದ್ದು, ಅದಕ್ಕೆ ನಿರ್ಮಾಪಕರಲ್ಲಿ ಒಬ್ಬರೂ ಆಗಿದ್ದಾರೆ. ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಏರಿದ ಎತ್ತರ ಎಲ್ಲರಿಗೂ ಗೊತ್ತು. ಅವರೀಗ ಪ್ಯಾನ್ ಇಂಡಿಯಾ ಸ್ಟಾರ್, ಜಗತ್ತೇ ಗುರುತಿಸುವ ನಟ!

ಈ ಮೊದಲೇ ಹೇಳಿದಂತೆ, ನಟ ಯಶ್ ಅವರು ಇತ್ತೀಚೆಗೆ ಬಹಳಷ್ಟು ಕಾಲದಿಂದ ಟಾಕ್ಸಿಕ್ ಸಿನಿಮಾ ಶೂಟಿಂಗ್‌ ಕಾರಣಕ್ಕೆ ಮುಂಬೈನಲ್ಲಿ ಇದ್ದರು. ನಿನ್ನೆ-ಮೊನ್ನೆಯಷ್ಟೇ ಅದರ ಶೂಟಿಂಗ್ ಮಗಿಸಿ ಯಶ್ ಲಂಡನ್‌ಗೆ ಹೋಗಿದ್ದಾರೆ ಎನ್ನಲಾಗಿದೆ. ಮುಂದಿನ ಶೂಟಿಂಗ್ ಶೆಡ್ಯೂಲ್ ಬೆಂಗಳೂರಿನಲ್ಲಿ ಇರೋದ್ರಿಂದ ಮಧ್ಯೆ ಯಶ್ ಅವರಿಗೆ ಸ್ವಲ್ಪ ದಿನದ ವಿರಾಮ ಸಿಕ್ಕಿದೆ ಎನ್ನಲಾಗಿದೆ. ಈಗವರು ಏನೋ ಕೆಲಸದ ನಿಮಿತ್ತ ಲಂಡನ್‌ಗೆ ಹೋಗಿದ್ದಾರೆ ಎಂಬ ಮಾಹಿತಿ ಇದೆ.

ಇಂಥ ನಟ ಯಶ್‌ಗೆ ಬಾಡಿ ಗಾರ್ಡ್ಸ್ ಇರೋದು ಇಂದಿನ ಕಾಲದಲ್ಲಿ ಸಹಜ. ಮೊದಲೆಲ್ಲಾ ಸಾಮಾನ್ಯ ಜನರಂತೆ ಸ್ಟಾರ್ ನಟರುಗಳೂ ಕೂಡ ಇರುತ್ತಿದ್ದರು, ಓಡಾಡುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಭಾರತದ ಎಲ್ಲಾ ಭಾಷೆಯ ಸ್ಟಾರ್ ನಟರುಗಳೂ ಹೆಚ್ಚೂ ಕಡಿಮೆ ಬಾಡಿ ಗಾರ್ಡ್ ಇಟ್ಟುಕೊಂಡೇ ಓಡಾಡುವುದು ಈಗ ಟ್ರೆಂಡ್. ಅದರಂತೆ, ನಟ ಯಶ್ ಅವರ ಬಾಡಿ ಗಾರ್ಡ್ ಅವರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.

ಯಶ್ ಕಾರಿನಿಂದ ಇಳಿಯುತ್ತಿದ್ದಂತೆ, ಬಾಡಿ ಗಾರ್ಡ್ ಅವರ ಹಿಂದೆ ಹೊರಟಿದ್ದಾರೆ. ಕೈನಲ್ಲಿ ಯಾವುದೇ ವೆಪನ್ ಇಲ್ಲ. ಸೂಟು-ಬೂಟು ಹಾಕಿಕೊಂಡು ಯಶ್ ಅವರ ಹಿಂದೆ ಸ್ಟೈಲಾಗಿ ಸ್ಮೈಲ್ ಕೊಡುತ್ತ ಅವರ ಬಾಡಿ ಗಾರ್ಡ್ ನಡೆದುಕೊಂಡು ಹೋಗಿದ್ದಾರೆ. ಅವರನ್ನು ನೋಡಿ ಅನೇಕ ನೆಟ್ಟಿಗರು ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಕೆಲವು ಕಾಮೆಂಟ್‌ಗಳು ನಿಜವಾಗಿಯೂ ನಗು ಉಕ್ಕಿಸುವಂತಿವೆ, ನೆಟ್ಟಗರ ಕ್ರಿಯೇಟಿವಿಟಿ ಕೆಲವೊಮ್ಮೆ ಊಹೆಗೂ ನಿಲುಕಲಾರದು ಎನ್ನಬಹುದು.

ಅವರ ಬಳಿ ಯಾವುದೇ ವೆಪನ್ ಇಲ್ಲ!

ಹಾಗಿದ್ದರೆ ನೆಟ್ಟಿಗರು ಮಾಡಿರುವ ಕಾಮೆಂಟ್ ಏನು? ಒಬ್ಬರು ಯಶ್ ಬಾಡಿಗಾರ್ಡ್ ಬಗ್ಗೆ 'ಅವರ ಬಳಿ ಯಾವುದೇ ವೆಪನ್ ಇಲ್ಲ, ಅಲ್ಲಿ ನಟ ಯಶ್ ಅವರಿಗೆ ತೊಂದರೆಯಾಗುವ ಯಾವುದೇ ಸಿಚ್ಯುವೇಶನ್ ಇಲ್ಲ. ಅಲ್ಲಿ ಅವರು ಯಶ್ ಅವರಿಗೆ ಬಾಡಿ ಗಾರ್ಡ್ ಅಲ್ಲ, ಬದಲಿಗೆ ಬಾಡಿ ಗಾರ್ಡ್ ತರಹ ನಟಿಸುತ್ತಿರುವ ಬಾಡಿ ಬಿಲ್ಡರ್‌ ಅಷ್ಟೇ..' ಎಂದಿದ್ದಾರೆ. ಆ ಕಾಮೆಂಟ್‌ಗೆ ಅಸಂಖ್ಯಾತ ಲೈಕ್ಸ್ ಬಂದಿವೆ. ವೈರಲ್ ಭಯಾನಿ (ViralBhayani) ಇನ್‌ಸ್ಟಾಗ್ರಾಂ ಖಾತೆಯಿಂದ ಈ ಪೋಸ್ಟ್ ಶೇರ್ ಆಗಿದ್ದು, ಅದೀಗ ಸಾಕಷ್ಟು ವೈರಲ್ ಆಗುತ್ತಿದೆ. ನೆಟ್ಟಿಗರ ತಮಾಷೆ ಕಾಮೆಂಟ್ಸ್ ಹಾಗೂ ಅಭಿಪ್ರಾಯಗಳು ಹಲವರ ಗಮನ ಸೆಳೆಯುತ್ತಿವೆ.

ಯಶ್ ಅವರ ಬಾಡಿಗಾರ್ಡ್ ಶ್ರೀನಿವಾಸ್ (ಅಲಿಯಾಸ್ ಸೀನಾ) ಅವರು ಹಲವು ವರ್ಷಗಳಿಂದ ಅವರೊಂದಿಗೆ ಇದ್ದಾರೆ. ರಾಕಿಂಗ್ ಸ್ಟಾರ್ ಯಶ್, ತಮ್ಮ ಅಂಗರಕ್ಷಕ ಶ್ರೀನಿವಾಸ್‌ ಅವರ ಜನ್ಮದಿನವನ್ನು ಆಚರಿಸಿದ್ದಲ್ಲದೆ, ತಮ್ಮ ಆತ್ಮೀಯ ಗೆಳೆಯನಿಗೆ ಕೇಕ್ ತಿನ್ನಿಸಿ ಶುಭ ಹಾರೈಸಿದ್ದರು. ಅವೆಲ್ಲವೂ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ.

ನಟ ಯಶ್ ಅವರು ಸದ್ಯ ಶೂಟಿಂಗ್ ವಿರಾಮದ ಮಧ್ಯೆ ಲಂಡನ್‌ ರೀಚ್ ಆಗಿದ್ದಾರೆ!

ಒಟ್ಟಿನಲ್ಲಿ, ನಟ ಯಶ್ ಅವರು ಸದ್ಯ ಶೂಟಿಂಗ್ ವಿರಾಮದ ಮಧ್ಯೆ ಲಂಡನ್‌ ರೀಚ್ ಆಗಿದ್ದಾರೆ. ಇನ್ನೇನು ಕೆಲವೆ ದಿನಗಳಲ್ಲಿ ನಟ ಯಶ್ ಅವರು ಟಾಕ್ಸಿಕ್ ಸಿನಿಮಾದ ಬೆಂಗಳೂರು ಸೆಟ್‌ನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ, ರಾಮಾಯಣ ಶೂಟಿಂಗ್ ಬಗ್ಗೆ ಸದ್ಯಕ್ಕೆ ಅಪ್‌ಡೇಟ್ ಇಲ್ಲ. ಮುಂದೇನೇನೆಲ್ಲಾ ಆಗಲಿದೆ ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲಿದೆ.

View post on Instagram