ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಹಾಗೂ ಇಂಟೀರಿಯರ್ ಡಿಸೈನರ್ ಗೌರಿ ಖಾನ್, ತಮ್ಮ ಮನೆಯ ದುಬಾರಿ ಅಲಂಕಾರಿಕ ವಸ್ತುಗಳಿಂದಾಗಿ ಟ್ರೋಲ್ ಆಗಿದ್ದಾರೆ. ನೋಡಲು ಸಾಮಾನ್ಯ ಎನಿಸುವ ಡಸ್ಟ್​ಬಿನ್​ಗೆ 15 ಸಾವಿರ ರೂಪಾಯಿ ಬೆಲೆ ಇರುವುದೇ ಈ ಟ್ರೋಲ್‌ಗೆ ಕಾರಣವಾಗಿದೆ.

ಬಾಲಿವುಡ್‌ನ ಕಿಂಗ್ ಎಂದೇ ಫೇಮಸ್​ ಆಗಿರೋ ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅನೇಕ ಎ-ಲಿಸ್ಟ್ ತಾರೆಯರ ಮನೆಗಳನ್ನು ಅಲಂಕರಿಸಿದ್ದಾರೆ. ಬಾಂದ್ರಾದಲ್ಲಿರುವ ಮೆಕ್ಸಿಕನ್ ರೆಸ್ಟೋರೆಂಟ್, ಗೋವಾದ ಹೋಟೆಲ್ ಮತ್ತು ದೆಹಲಿಯ ಐಷಾರಾಮಿ ಬಾರ್‌ನಂತಹ ಸ್ಥಳಗಳಲ್ಲಿ ಗೌರಿ ತಮ್ಮ ಕೌಶಲಗಳನ್ನು ಪ್ರದರ್ಶಿಸಿದ್ದಾರೆ. ಗೌರಿ ಖಾನ್ ಈಗ ತಮ್ಮ ಪ್ರಮುಖ ಐಷಾರಾಮಿ ಜೀವನಶೈಲಿ ಬ್ರ್ಯಾಂಡ್ "ಗೌರಿ ಖಾನ್ ಡಿಸೈನ್ಸ್" ನೊಂದಿಗೆ ಇ-ಕಾಮರ್ಸ್ ಕ್ಷೇತ್ರವನ್ನು ಪ್ರವೇಶಿಸಿ, ವ್ಯಾಪಕ ಶ್ರೇಣಿಯ ಉನ್ನತ-ಮಟ್ಟದ ಕಚೇರಿ ಮತ್ತು ಗೃಹ ಉತ್ಪನ್ನಗಳನ್ನು ನೀಡುತ್ತಾರೆ.

ಆಘಾತಕಾರಿ ಬೆಲೆ

ತಮ್ಮ ಇ-ಕಾಮರ್ಸ್ ವೆಬ್‌ಸೈಟ್ ಮೂಲಕ, ಗೌರಿ ಖಾನ್ ಐಷಾರಾಮಿ ಪೀಠೋಪಕರಣಗಳಿಂದ ದಿಂಬಿನ ಕವರ್‌ಗಳವರೆಗೆ ಎಲ್ಲವನ್ನೂ ಲಭ್ಯವಾಗುವಂತೆ ಮಾಡಿ ಆಲಂಕಾರಿಕ ಮತ್ತು ಉನ್ನತ-ಮಟ್ಟದ ಸ್ಥಳವನ್ನು ಸೃಷ್ಟಿಸುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ. ಈ ವಿನ್ಯಾಸಗಳು ಕ್ರಮೇಣ ನೆಚ್ಚಿನದಾಗುತ್ತಿವೆ, ಆದರೆ ಅವುಗಳ ಬೆಲೆಗಳು ಎಲ್ಲರನ್ನೂ ಆಘಾತಗೊಳಿಸುತ್ತಿವೆ. ವಿಶೇಷವಾಗಿ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಉತ್ಪನ್ನಗಳು ಈ ಉತ್ಪನ್ನಗಳ ಬೆಲೆಗಳನ್ನು ಕೈಗೆಟುಕುವಂತಿಲ್ಲ.

ಗೌರಿ ಖಾನ್​ ಟ್ರೊಲ್​

ಇದು ನಡೆಯುತ್ತಿರುವ ನಡುವೆಯೇ ಈಗ ಗೌರಿ ಖಾನ್​ ಮತ್ತೊಮ್ಮೆ ಟ್ರೋಲ್​ಗೆ ಒಳಗಾಗಿದ್ದಾರೆ. ಅದೇನೆಂದರೆ ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ಖಾನ್ ಅವರ ಮನೆಯ ದುಬಾರಿ ಹೋಂ ಡೆಕೋರೇಷನ್​ ಕಂಡು ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ರೆಡ್ಡಿಟ್ ಪೇಜ್​ನಲ್ಲಿ ಫೋಟೋಗಳನ್ನು ಶೇರ್ ಮಾಡಲಾಗಿದ್ದು ಅದರಲ್ಲಿ ಶಾರುಖ್​ ಅವರ ಮನೆಯ ಡಸ್ಟ್​ಬಿನ್ ಬೆಲೆ 15 ಸಾವಿರ ರೂಪಾಯಿ ಎಂದು ತೋರಿಸುತ್ತಿದೆ. ಗೌರಿ ಖಾನ್ ಅವರು ತಮ್ಮ ಮನೆಯ ಅಲಂಕಾರವನ್ನು ತಾವೇ ಮಾಡಿದ್ದಾರೆ. ಹಾಗೆಯೇ ಬಾಲಿವುಡ್​ನ ಪ್ರಮುಖ ಸೆಲೆಬ್ರಿಟಿಗಳ ಮನೆಯನ್ನು ಕೂಡಾ ಅಲಂಕರಿಸಿದ್ದಾರೆ.

ಸೀದಾ ಸಾದಾ ಡಸ್ಟ್​ಬಿನ್​

ನೋಡಲು ಸೀದಾ ಸಾದಾ ಇರೋ ಈ ಡಸ್ಟ್​ಬಿನ್​ಗೆ ಇಷ್ಟೊಂದು ಬೆಲೆ ಕೊಟ್ಟಿದ್ದು ಏಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. 15 ಸಾವಿರ ರೂಪಾಯಿಯ ಡಸ್ಟ್​ಬಿನ್ ಬಳಸ್ತೀರಾ? ನೋಡಲು 100 ರೂಪಾಯಿ ಅಂತಿರೋ ಡಸ್ಟ್​ಬಿನ್​​ಗೆ ಇಷ್ಟೊಂದು ಕೊಡಬೇಕಾ ಎಂದು ಪ್ರಶ್ನಿಸುತ್ತಿದ್ದಾರೆ. ಅಂದಹಾಗೆ, ಶಾರುಖ್ ಖಾನ್ ಅವರ ದುಬಾರಿ ಬಂಗಲೆ ಇತ್ತೀಚೆಗೆ ಸುದ್ದಿಯಾಗಿತ್ತು. ಅವರು ಬರೋಬ್ಬರಿ 13 ಕೋಟಿಗೆ ಖರೀದಿಸಿದ ಅವರ ಮನೆಯ ಬಗ್ಗೆ ಸುದ್ದಿಯಾಗಿತ್ತು.